ಎಲ್ರೂ IMAXಗೆ ಸಿನಿಮಾ ಅಂತಾರೆ; ದೇಶದಲ್ಲಿ ಎಷ್ಟು ಇಂತಹ ಸ್ಕ್ರೀನ್ಸ್ ಇದೆ ಗೊತ್ತಾ?

ಒಂದ್ಕಾಲದಲ್ಲಿ 3D ಸಿನಿಮಾ ದೊಡ್ಡದು ಎನ್ನುತ್ತಿದ್ದರು. ಆರಂಭದಲ್ಲಿ 2D ಕ್ಯಾಮರಾದಲ್ಲೇ ಶೂಟ್ ಮಾಡಿ ಬಳಿಕ ಅದನ್ನು 3Dಗೆ ಬದಲಿಸಿ ಬಿಡುಗಡೆ ಮಾಡುತ್ತಿದ್ದರು. ನಂತರ 3D ಕ್ಯಾಮರಾ ಬಳಸಿ ಶೂಟ್ ಮಾಡುವುದೇ ದೊಡ್ಡದು ಎನ್ನುವಂತಾಯಿತು. ಈಗ ಫಿಲ್ಮ್ ಮೇಕರ್ಸ್ ಐಮ್ಯಾಕ್ಸ್ ಜಪ ಶುರು ಮಾಡಿದ್ದಾರೆ.

ಮೊನ್ನೆ ಮೊನ್ನೆ ರಾಜಮೌಳಿ ತಮ್ಮ 'ವಾರಣಾಸಿ' ಚಿತ್ರವನ್ನು ಐಮ್ಯಾಕ್ಸ್ ಫಾರ್ಮೆಟ್‌ನಲ್ಲಿ ತೆರೆಗೆ ತರುವುದಾಗಿ ಹೇಳಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾಗಳು ಐಮ್ಯಾಕ್ಸ್ ಸ್ಕ್ರೀನ್‌ಗಳಲ್ಲಿ ಪ್ರದರ್ಶನವಾಗುತ್ತಿದೆ. ಮೊನ್ನೆ ಮೊನ್ನೆ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ 'ಕಾಂತಾರ-1' ಸಿನಿಮಾ ಕೂಡ ಕೆಲ ಐಮ್ಯಾಕ್ಸ್ ಸ್ಕ್ರೀನ್‌ಗಳ ಮೇಲೆ ಅಪ್ಪಳಿಸಿತ್ತು. ಐಮ್ಯಾಕ್ಸ್‌ಗೆ ಅಂತ್ಲೇ ಮಾಡುತ್ತಿರುವ ಸಿನಿಮಾ 'ವಾರಣಾಸಿ' ಎಂದು ಮೌಳಿ ಹೇಳಿದ್ದಾರೆ.

Bengaluru to Mumbai- These Major Cities Now Offer the Ultimate Imax Big-Screen Experience

ಹೆಚ್ಚು ರೆಸಲ್ಯೂಷನ್ ಇರುವ, ಒಳ್ಳೆ ಸೌಂಡ್ ವ್ಯವಸ್ಥೆ ಇರುವ ದೊಡ್ಡ ದೊಡ್ಡ ಐಮ್ಯಾಕ್ಸ್ ಪರದೆಗಳು ಸಿನಿಮಾ ನೋಡಲು ಹೊಸ ಅನುಭವ ನೀಡುತ್ತದೆ. ಟಿಕೆಟ್ ದರ ಕೂಡ ಬಹಳ ದುಬಾರಿಯಾಗಿರುತ್ತದೆ. ವಿದೇಶಗಳಲ್ಲಿ ಇಂತಹ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಿದೆ. ಆದರೆ ಭಾರತದಲ್ಲಿ ಕೆಲವೇ ನಗರಗಳಲ್ಲಿ ಮಾತ್ರ ಇಂತಹ ಐಮ್ಯಾಕ್ಸ್ ಸ್ಕ್ರೀನ್‌ಗಳಿದೆ. ರಾಜಮೌಳಿ ಐಮ್ಯಾಕ್ಸ್ ಬಗ್ಗೆ ಮಾತನಾಡುತ್ತಿದ್ದಾರೆ. ಅಚ್ಚರಿ ಸಂಗತಿ ಅಂದ್ರೆ ಆಂಧ್ರ, ತೆಲಂಗಾಣದಲ್ಲಿ ಒಂದೇ ಒಂದು ಐಮ್ಯಾಕ್ಸ್ ಸ್ಕ್ರೀನ್ ಇಲ್ಲ.

ಇನ್ನು ಸಾಮಾನ್ಯವಾಗಿ 2D ಸ್ಕ್ರೀನ್‌ಗಳಿಗೆ ಶೂಟ್ ಮಾಡುವ ಚಿತ್ರವನ್ನೇ ಐಮ್ಯಾಕ್ಸ್‌ ಸ್ಕ್ರೀನ್‌ಗಳಲ್ಲಿ ಪ್ರದರ್ಶಿಸಲಾಗುತ್ತದೆ. ಒಳ್ಳೆ ಅನುಭವ ನೀಡುತ್ತದೆ. ಆದರೆ ಐಮ್ಯಾಕ್ಸ್‌ ಸ್ಕ್ರೀನ್‌ಗೆ ಅಂತ್ಲೇ ವಿಶೇಷ ಕ್ಯಾಮರಾಗಳಲ್ಲಿ ಚಿತ್ರೀಕರಿಸಿದರೆ ಆ ಅದ್ಭುತ ಅನುಭವ ಮತ್ತಷ್ಟು ಹೆಚ್ಚಾಗಲಿದೆ. ಇದೇ ಕಾರಣಕ್ಕೆ 'ರಾಮಾಯಣ' ಹಾಗೂ 'ವಾರಣಾಸಿ' ಚಿತ್ರಗಳನ್ನು ಐಮ್ಯಾಕ್ಸ್‌ಗಾಗಿ ಮಾಡುತ್ತಿರುವುದಾಗಿ ಹೇಳಲಾಗ್ತಿದೆ. ಅಂದಹಾಗೆ ವಾರಣಾಸಿಗೂ ಮುನ್ನ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಈ ರೂಪದಲ್ಲಿ ಬರ್ತಿದೆ. ಮುಂದಿನ ವರ್ಷ ದೀಪಾವಳಿಗೆ ಮೊದಲ ಭಾಗ ತೆರೆಗಪ್ಪಳಿಸಲಿದೆ.

Bengaluru to Mumbai- These Major Cities Now Offer the Ultimate Imax Big-Screen Experience

ಭಾರತದ ಯಾವ ಯಾವ ನಗರಗಳಲ್ಲಿ ಐಮ್ಯಾಕ್ಸ್ ಸ್ಕ್ರೀನ್‌ಗಳಿವೆ ಗೊತ್ತಾ?

1. ಬೆಂಗಳೂರು: ವಿಶ್ವದ ಗಮನ ಸೆಳೆದಿರುವ ಮೆಟ್ರೊಪಾಲಿಟಿನ್ ಸಿಟಿ ಬೆಂಗಳೂರು. ಇಲ್ಲಿ ಹಲವು ಮಾಲ್‌ಗಳಿವೆ. ಹಲವೆಡೆ ಐಮ್ಯಾಕ್ಸ್ ಸ್ಕ್ರೀನ್‌ಗಳಿವೆ. ವೈಟ್‌ಫೀಲ್ಡ್‌ನಲ್ಲಿರುವ ಸಿನೆಪೊಲಿಸ್ ನೆಕ್ಸಸ್ ಶಾಂತಿನಿಕೇತನ ಮಾಲ್, ಮಲ್ಲೇಶ್ವರಂ ಮಂತ್ರಿ ಮಾಲ್, ಯಲಹಂಕ ಗೆಲೆರಿಯಾ ಮಾಲ್, ಕೋರಮಂಗಲ ನೆಕ್ಸಸ್ ಮಾಲ್, ಜೆಪಿ ನಗರದ ವೇಗಾ ಸಿಟಿ ಮಾಲ್ ಹಾಗೂ ಮಹಾದೇವಪುರದ ವಿಆರ್‌ ಮಾಲ್‌ನಲ್ಲಿ ಕೂಡ ಐಮ್ಯಾಕ್ಸ್ ಸ್ಕ್ರೀನ್ ಇದೆ.

2. ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಐಮ್ಯಾಕ್ಸ್ ಸ್ಕ್ರೀನ್‌ ಥಿಯೇಟರ್‌ಗಳಿವೆ. ಪಿವಿಆರ್ ಸೆಲೆಕ್ಟ್ ಸಿಟಿ ವಾಕ್ ಮತ್ತು ಪಿವಿಆರ್ ವೇಗಾಸ್ ಮಾಲ್‌ನಲ್ಲಿ ಇಂತಹ ಸ್ಕ್ರೀನ್‌ಗಳಿವೆ. ಇನ್ನು ನೋಯ್ಡಾ ಮತ್ತು ಗುರುಗ್ರಾಮ್‌ಗಳಲ್ಲಿಯೂ ಐಮ್ಯಾಕ್ಸ್ ಚಿತ್ರಮಂದಿರಗಳಿವೆ. ನೋಯ್ಡಾದಲ್ಲಿರುವ ಪಿವಿಆರ್ ಸೂಪರ್‌ಪ್ಲೆಕ್ಸ್ ಲಾಜಿಕ್ಸ್ ಮಾಲ್‌ನಲ್ಲಿ ಲಭ್ಯವಿದೆ.

3. ಮುಂಬೈ: ವಡಾಲದ ಮಿರಾಜ್ ಸಿನಿಮಾಸ್, ಒಬೆರಾಯ್ ಮಾಲ್, ಕೆಬಿಸಿಯಲ್ಲಿರುವ ಜಿಯೋ ವರ್ಲ್ಡ್ ಪ್ಲಾಜಾ, ಚರ್ಚ್‌ಗೇಟ್‌ನಲ್ಲಿರುವ ಇರೋಸ್ ಐನಾಕ್ಸ್, ಲೋವರ್ ಪ್ಯಾರೆಲ್‌ನಲ್ಲಿರುವ ಪಿವಿಆರ್ ಫೀನಿಕ್ಸ್ ಪಲ್ಲಾಡಿಯಮ್, ಘಾಟ್‌ಕೋಪರ್‌ನ ಐನಾಕ್ಸ್ ಆರ್ ಸಿಟಿ ಮಾಲ್, ನವಿ ಮುಂಬೈನ ಸಿನೆಪೊಲಿಸ್ ನೆಕ್ಸಸ್ ಹಾಗೂ ಥಾಣೆಯ ಸಿನೆಪೊಲಿಸ್ ವಿವಿಯಾನಾ ಮಾಲ್‌ಗಳಲ್ಲಿ ಐಮ್ಯಾಕ್ಸ್ ಸ್ಕ್ರೀನ್‌ಗಳಿವೆ.

ಇನ್ನುಳಿದಂತೆ ಚೆನ್ನೈನಲ್ಲಿ 2, ಕೋಯಂಬತ್ತೂರಿನಲ್ಲಿ 1, ಲಖ್ನೋ, ಪುಣೆ, ಅಹಮದಾಬಾದ್, ತ್ರಿವೇಡ್ರಂ, ಪುಣೆಯಲ್ಲಿ ತಲಾ ಒಂದೊಂದು ಐಮ್ಯಾಕ್ಸ್ ಸ್ಕ್ರೀನ್ ಚಿತ್ರಮಂದಿರಗಳಿವೆ. ಮತ್ತಷ್ಟು ಕಡೆಗಳಲ್ಲಿ ಹೀಗೆ ಅದ್ಭುತ ಅನುಭವ ನೀಡುವ ಸ್ಕ್ರೀನ್‌ಗಳನ್ನು ಹಾಕಲಾಗ್ತಿದೆ. ದೊಡ್ಡ ಸಿನಿಮಾಗಳನ್ನು ಮಾತ್ರ ಜನ ಹೆಚ್ಚು ಹಣ ಕೊಟ್ಟು ಐಮ್ಯಾಕ್ಸ್ ಸ್ಕ್ರೀನ್‌ಗಳಲ್ಲಿ ನೋಡಲು ಬಯಸುತ್ತಾರೆ.

More from Filmibeat

Read more about: theater rajamouli ramayana
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X