ಮೊದಲು ತೊಲಗಿ, ಕನ್ನಡಿಗರನ್ನು ಕೆಣಕಿದವಳಿಗೆ ಉಗಿದು ಉಪ್ಪಿನಕಾಯಿ ಹಾಕಿದ ಕನ್ನಡದ ತಾರೆಯರು...!

ಕರುನಾಡಿನಲ್ಲಿ ಕನ್ನಡಿಗನೇ ಸಾರ್ವಭೌಮ. ಸಾರ್ವಭೌಮರು ಯಾವಾಗಲೂ ಕೊಡುಗೈ ದಾನಿಗಳಾಗಿರುತ್ತಾರೆಯೇ ಹೊರತು ಎಂದೂ ಯಾರ ಬಳಿಯಲ್ಲಿಯೂ ದೈನೇಸಿಯಾಗಿ ಕೈಚಾಚುವುದಿಲ್ಲ.

ಆದರೆ ಇದನ್ನು ಅರಿಯದ ಕೆಲವು ಉತ್ತರ ಭಾರತದ ಕ್ರೀಮಿಗಳು ಕನ್ನಡಿಗರನ್ನು ಕೆಣುಕುತ್ತಾನೇ ಬರುತ್ತಿದ್ದಾರೆ. ತುತ್ತು ಅನ್ನದ ಹುಡುಕಾಟದಲ್ಲಿ ಅದೆಲ್ಲಿಂದಲೋ ಇಲ್ಲಿ ಬಂದು ಕನ್ನಡ ಮತ್ತು ಕರುನಾಡನ್ನು ಜರಿಯುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ನಿಯತ್ತು ಎಂತಹದ್ದು ಎನ್ನುವುದನ್ನೂ ತೋರಿಸುತ್ತಿದ್ದಾರೆ.ಅದರಲ್ಲಿಯೂ ಈ ಸಾಮಾಜಿಕ ಜಾಲತಾಣ ಹೆಚ್ಚೆಚ್ಚು ಪ್ರವರ್ಧಮಾನಕ್ಕೆ ಬಂದ ನಂತರ ನಮ್ಮ ನೆಲಕ್ಕೆ ವಲಸೆ ಬರುವವರ ಆಟಾಟೋಪ ಹೆಚ್ಚಾಗಿದೆ. ಇದಕ್ಕೆ ಸುಗಂಧಿ ಶರ್ಮಾ ಅತ್ಯುತ್ತಮ ಉದಾಹರಣೆ.

ಹೌದು, ಕನ್ನಡದ ವಾತಾವರಣದಲ್ಲಿ ಅದೆಲ್ಲಿಂದನೋ ಬಂದು ಬದುಕುತ್ತಿರುವ ಸುಗಂಧ್ ಶರ್ಮಾ ಎಂಬ ಮಹಿಳೆ ಮೊನ್ನೆಯಷ್ಟೇ ಕನ್ನಡಿಗರ ಬಗ್ಗೆ ಬೆಂಗಳೂರಿನ ಬಗ್ಗೆ ಲಘುವಾಗಿ ಮಾತನಾಡಿದ್ದರು. ನೀವು ಯಾವಾಗಲೂ ಉತ್ತರ ಭಾರತೀಯರು ವಾಪಸು ಹೋಗುವಂತೆ ಹೇಳುತ್ತೀರುತ್ತೀರಾ, ಒಂದು ವೇಳೆ ನಾವು ನಿಜಕ್ಕೂ ಬೆಂಗಳೂರಿನಿಂದ ಎದ್ದು ಹೊರಗೆ ಹೋದರೆ ನಿಮ್ಮ ಊರು ಪೂರ್ತಿ ಖಾಲಿಯಾಗುತ್ತೆ ಎಂದು ಹೇಳಿದ್ದ ಸುಗಂಧ್ ನಾವೆಲ್ಲ ಮರಳಿ ನಮ್ಮ ಮನೆ ಸೇರಿದರೆ ನಿಮ್ಮ ಪಿಜಿಗಳು ಖಾಲಿಯಾಗುತ್ತವೆ ಎಂದು ವ್ಯಂಗ್ಯವಾಡಿದ್ದರು. ಕೋರಮಂಗಲದ ಎಲ್ಲ ಕ್ಲಬ್‌ ಗಳು ಖಾಲಿ ಹೊಡಿಯೋಕೆ ಶುರು ಮಾಡುತ್ತವೆ, ನಮ್ಮಂಥ ಚೆಂದ ಹುಡುಗಿಯರು ಡ್ಯಾನ್ಸ್ ಮಾಡುವುದನ್ನೂ ಕೂಡ ನಿಮಗೆ ನೋಡಲು ಸಿಗುವುದಿಲ್ಲ ಎಂದು ಹೇಳಿದ್ದರು. ಯೋಚನೆ ಮಾಡಿ ಪ್ರಾರ್ಥನೆ ಸಲ್ಲಿಸಿ ಒಂದು ವೇಳೆ ನಿಮ್ಮ ಪ್ರಾರ್ಥನೆಗೆ ಫಲ ಸಿಕ್ಕಿದರೆ ನಿಮ್ಮೆಲ್ಲ ಖುಷಿ ಕಳೆದುಹೋಗುತ್ತೆ ಎಂದು ತನ್ನ ಮೊಂಡುತನದ ಪ್ರದರ್ಶನವನ್ನು ಮಾಡಿದ್ದರು ಸುಗಂಧಿ ಶರ್ಮಾ.

ಸುಗಂಧ್ ಶರ್ಮಾ ಅವರ ಈ ಮಾತುಗಳಿಗೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಅನೇಕರು ಈಗ್ಲೇ ಜಾಗ ಖಾಲಿ ಮಾಡಿಕೊಂಡು ಹೋಗುವಂತೆ ಸುಗಂಧ್ ಶರ್ಮಾಗೆ ಹೇಳಿದ್ದಾರೆ. ತರಾಟೆ ತೆಗೆದುಕೊಂಡಿದ್ದಾರೆ. ಕೇವಲ ಜನಸಾಮಾನ್ಯರಷ್ಟೇ ಅಲ್ಲ ಈ ವಿಡಿಯೋ ಕನ್ನಡ ಚಿತ್ರರಂಗದವರೆಗೆ ಕೂಡ ತಲುಪಿದ್ದು ಅನೇಕರು ಈ ಸುಗಂಧ್ ಶರ್ಮಾ ಮುಖಕ್ಕೆ ಉಗಿದು ಉಪ್ಪಿನ ಕಾಯಿಯನ್ನೂ ಹಾಕಿದ್ದಾರೆ. ಆ ಪೈಕಿ ಚಂದನ್ ಶೆಟ್ಟಿ, ಅನುಪಮಾ ಗೌಡ, ಚೈತ್ರಾ ಆಚಾರ್ ಪ್ರಮುಖರು

Bengaluru would be empty without North Indians says an influencer sparking responses from celebs

''ನೀವು ಇದನ್ನು ಕೂಲ್‌ ಅಂತಾ ಅಂದುಕೊಂಡರೆ, ಅದು ಖಂಡಿತ ತಪ್ಪು. ಇದು ಕೂಲ್‌ ಅಲ್ಲ. ನಿಮಗೆ ಎಲ್ಲಕ್ಕಿಂತ ಮುಖ್ಯವಾಗಿ ಬೇಕಾಗಿರೋದೇ ಬೆಂಗಳೂರು. ಹಾಗೇನಾದರೂ ನೀವು ಬೆಂಗಳೂರನ್ನು ಬಿಟ್ಟರೆ ನಮ್ಮ ಊರಿಗೆ ಏನೂ ವ್ಯತ್ಯಾಸ ಆಗೋದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಮಗೆ ಗೊತ್ತಿರೋದು ಏನೆಂದರೆ, ನೀವು ಬೆಂಗಳೂರನ್ನು ಬಿಟ್ಟು ಹೋಗೋದಿಲ್ಲ. ಯಾಕೆ ಅನ್ನೋದು ನಿಮಗೆ ಗೊತ್ತು'' ಎಂದು ನಿರೂಪಕಿ ಅನುಪಮಾ ಗೌಡ ಕೆಂಡ ಕಾರಿದ್ದರೆ, ಸಂಗೀತ ನಿರ್ದೇಶಕ ಹಾಗೂ ರ್ಯಾಪರ್ ಚಂದನ್‌ ಶೆಟ್ಟಿ, ''ಪ್ಲೀಸ್‌ ನೀವು ಹೊರಡಿ'' ಎಂದು ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ. ಇನ್ನೂ ಗಾಯಕಿ ಐಶ್ವರ್ಯ ರಂಗರಾಜನ್‌ 'ಅಕ್ಕಂಗೆ ಡೀಲು ಆಗಿದೆ.. ನಡಿ ನಡಿ..' ಎಂದು ಕಾಮೆಂಟ್‌ ಮಾಡಿದ್ದಾರೆ.

ಇವರಷ್ಟೇ ಅಲ್ಲ ನಾವು ಆ ಖಾಲಿತನ ಮತ್ತು ಕಡಿಮೆ ಡ್ಯಾನ್ಸರ್‌ಗಳನ್ನೊಳಗೊಂಡ ಪಬ್‌ಗಳ ಜೊತೆ ಬದುಕಲು ಸಿದ್ಧರಿದ್ದೇವೆ, ಉತ್ತರ ಭಾರತೀಯರನ್ನು ಮರೆತು ಬಿಡಿ, ಸದ್ಯಕ್ಕೆ ನೀವು ಜಾಗ ಖಾಲಿ ಮಾಡಿ ಎಂದು ಚೈತ್ರಾ ಆಚಾರ್ ಹೇಳಿದ್ದರೆ, 'ಯಾಕೋ ನಿಮ್ಮ ಆಫರ್‌ ಸಖತ್‌ ಆಗಿ ಕಾಣುವಂತಿದೆ. ಆದಷ್ಟು ಬೇಗ ಬೆಂಗಳೂರನ್ನು ಬಿಡಿ' ಎಂದು ತಮಿಳು ಸಿನಿಮಾರಂಗದ ಖ್ಯಾತ ನಟಿ ಕರ್ನಾಟಕದ ಮೂಲದ ವರ್ಷ ಬೊಲ್ಲಮ ಕಾಮೆಂಟ್‌ ಮಾಡಿದ್ದಾರೆ. ಉಳಿದಂತೆ 'ಕೋರಮಂಗಲ ಕ್ಲಬ್‌ನಲ್ಲಿ ರಾ ಎಣ್ಣೆ ಕುಡಿದಿರುವ ಸೈಡ್‌ ಎಫೆಕ್ಟ್‌ ಇದು' ಎಂದು ಡಿಜಿಟಲ್‌ ಕ್ರಿಯೇಟರ್‌ ಹಾಗೂ ಜೋಡಿ ನಂ.1 ರಿಯಾಲಿಟಿ ಶೋನಲ್ಲಿ ಸ್ಪರ್ಧೆ ಮಾಡಿದ್ದ ಗಣೇಶ್‌ ಕಾರಂತ್‌ ಕಾಮೆಂಟ್‌ ಮಾಡಿದ್ದಾರೆ. 'ಹ್ಹ.ಹ್ಹ.ಹ್ಹ. ಈ ರೀಲ್‌ಗೆ ನೀವು ವೀವ್ಸ್‌ ಪಡೆದುಕೊಳ್ಳುತ್ತಿರುವ ನಡುವೆಯೂ ಇಂಥ ಸ್ಟೇಟ್‌ಮೆಂಟ್‌ಗಳು ಮಾಡುತ್ತಿರುವುದೇ ವಿಪರ್ಯಾಸ. ನನ್ನ ನಂಬಿ ನಿಮಗೆ ನಿಜಕ್ಕೂ ಸಹಾಯ ಬೇಕಾಗಿದೆ. ಈಗ ನೀವು ಏನು ಹೇಳಿದ್ದೀರಿ ಅಲ್ಲವೇ ಅದನ್ನು ಗಂಭೀರವಾಗು ಪರಿಗಣಿಸಿ, ನಮ್ಮ ನಗರವನ್ನು ತೊರೆಯಿಸಿ. ನಾವೆಲ್ಲರೂ ತುಂಬಾ ಖುಷಿಯಾಗಿರುತ್ತೇವೆ ಎಂದು ಆರ್‌ಜೆ ಮಯೂರ್‌ ರಾಘವೇಂದ್ರ ಕಾಮೆಂಟ್‌ ಮಾಡಿದ್ದಾರೆ.

More from Filmibeat

Read more about: kannada bengaluru sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X