»   » ಎರಡು ಚಿತ್ರಗಳ ನಡುವೆ ಈ ವಾರ ಬೆಂಕಿ ಬಿರುಗಾಳಿ

ಎರಡು ಚಿತ್ರಗಳ ನಡುವೆ ಈ ವಾರ ಬೆಂಕಿ ಬಿರುಗಾಳಿ

Posted By:
Subscribe to Filmibeat Kannada

ವಾರಕ್ಕೆ ಎರಡು ಮೂರು ಚಿತ್ರಗಳು ತೆರೆಗೆ ಅಪ್ಪಳಿಸುವ ಸಂಪ್ರದಾಯ ಸ್ಯಾಂಡಲ್ ವುಡ್ ನಲ್ಲಿ ಮುಂದುವರಿದಿದೆ. ಈ ವಾರ ಮೂರು ಚಿತ್ರಗಳ ನಡುವೆ ಸೆಣಸಾಟ ಆರಂಭವಾಗಿದೆ. ಮೂರು ಚಿತ್ರಗಳಲ್ಲೂ ಸ್ಟಾರ್ ನಟರಿಲ್ಲದಿರುವುದು ವಿಶೇಷ. ಜನ್ಮ, ಜಟಾಯು ಹಾಗೂ ಬೆಂಕಿ ಬಿರುಗಾಳಿ ಚಿತ್ರಗಳು ಈ ವಾರ (ಏ.26) ತೆರೆಗೆ ಅಪ್ಪಳಿಸಿವೆ.

'ಜಟಾಯು' ಚಿತ್ರದ ನಾಯಕ ನಟ ರಾಜ್. ಈ ಹಿಂದೆ ಇವರು ಸಂಚಾರಿ ಎಂಬ ಚಿತ್ರವನ್ನು ಮಾಡಿದ್ದರು. ಜಟಾಯು ಚಿತ್ರದ ಮೂಲಕ ನಿರ್ದೇಶಕನಾಗಿಯೂ ಪರಿಚಯವಾಗುತ್ತಿದ್ದಾರೆ. ಈ ಚಿತ್ರದ ನಿರ್ಮಾಪಕರು ಪ್ರಭಾಕರ್. ತೆಲುಗಿನಲ್ಲೂ ಬಿಡುಗಡೆಯಾಗುತ್ತಿದೆ.

ಗ್ರಾಮೀಣ ನೇಪಥ್ಯದ ಹಿನ್ನೆಲೆಯಲ್ಲಿ ಸಾಗುವ ಕಥೆಯಲ್ಲಿ ಸಾಹಸ ಸನ್ನಿವೇಶಗಳಿಗೂ ಒತ್ತು ನೀಡಲಾಗಿದೆ. ವಿನಯ್ ಚಂದ್ರ ಅವರ ಸಂಗೀತ, ಎಂ.ಯು.ನಂದಕುಮಾರ್ ಅವರ ಛಾಯಾಗ್ರಹಣ, ಹರ್ಷ ಮುರಳಿ ಹಾಗೂ ರಾಮು ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ.

ರೂಪಶ್ರೀ, ಸುರಭಿ ಚಿತ್ರದ ನಾಯಕಿಯರು

ಥ್ರಿಲ್ಲರ್ ಮಂಜು ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಪಾತ್ರವರ್ತದಲ್ಲಿ ಸುರಭಿ, ರೂಪಶ್ರೀ, ಅವಿನಾಶ್, ನಟರಾಜ್, ಬುಲೆಟ್ ಪ್ರಕಾಶ್, ಪೆಟ್ರೋಲ್ ಪ್ರಸನ್ನ, ಕಿಲ್ಲರ್ ವೆಂಕಟೇಶ್, ಡ್ಯಾನಿ, ಸತೀಶ್, ಸಿದ್ಧರಾಜು, ಕುರುಪ್ ರಮೇಶ್ ಮುಂತಾದವರಿದ್ದಾರೆ.

ತ್ರಿಕೋನ ಪ್ರೇಮಕಥಾ ಹಂದರ ಬೆಂಕಿ ಬಿರುಗಾಳಿ

ಈ ವಾರ ಬಿಡುಗಡೆಯಾಗುತ್ತಿರುವ ಮತ್ತೊಂದು ಚಿತ್ರ 'ಬೆಂಕಿ ಬಿರುಗಾಳಿ'. ಈ ಚಿತ್ರದ ನಾಯಕ ನಟ, ನಿರ್ದೇಶಕ, ಕಥೆ, ಚಿತ್ರಕಥೆ, ಸಂಭಾಷಣೆ ಕರ್ತೃ ಎಸ್.ಕೆ.ಬಷೀರ್. ಇವರು ಚಿತ್ರದ ನಿರ್ಮಾಪಕರೂ ಹೌದು. ತ್ರಿಕೋನ ಪ್ರೇಮಕಥೆಯಾಗಿರುವ ಈ ಚಿತ್ರದಲ್ಲಿ ಮೂವರು ನಾಯಕಿಯರು. ಕಾದಲ್ ಸಂಧ್ಯಾ, ರಿಶಿಕಾ ಸಿಂಗ್, ರೇಖಾ.

ಎಂ.ಎಂ.ಶ್ರೀಲೇಖ ಸಂಗೀತ ನಿರ್ದೇಶನ

ಎಂ.ಎಂ.ಶ್ರೀಲೇಖ ಅವರ ಸಂಗೀತ ಚಿತ್ರಕ್ಕಿದ್ದು ಕೆ.ಎಸ್.ಚೆಲುವರಾಜ್ ಅವರ ಛಾಯಾಗ್ರಹಣವಿದೆ. ಅರವಿಂದ್ ನೃತ್ಯ ನಿರ್ದೇಶನ, ಡಿಫರೆಂಟ್ ಡ್ಯಾನಿ ಹಾಗೂ ದಳಪತಿ ದಿನೇಶ್ ಅವರ ಸಾಹಸ ಚಿತ್ರಕ್ಕಿದೆ. ಮೋನಿಕಾ, ಬಾನು ಮೆಹ್ರಾ, ಬುಲೆಟ್ ಪ್ರಕಾಶ್, ಲಯೇಂದ್ರ, ಬ್ಯಾಂಕ್ ಜನಾರ್ದನ್ ಚಿತ್ರದ ಪಾತ್ರವರ್ಗದಲ್ಲಿದ್ದಾರೆ.

ಮೂರು ವರ್ಷಗಳ ಬಳಿಕ ತೆರೆಕಾಣುತ್ತಿರುವ ಜನ್ಮ

ಚಕ್ರವರ್ತಿ ನಿರ್ದೇಶನದ 'ಜನ್ಮ' ಚಿತ್ರ ಈ ವಾರ ತೆರೆಕಾಣುತ್ತಿದೆ. ಚಿತ್ರ ಸೆಟ್ಟೇರಿ ಮೂರು ವರ್ಷಗಳ ಬಳಿ ಬಿಡುಗಡೆ ಭಾಗ್ಯ ಕಾಣುತ್ತಿರುವುದು ಈ ಚಿತ್ರದ ವಿಶೇಷ. ಚಕ್ರವರ್ತಿ ಈ ಚಿತ್ರದ ನಿರ್ದೇಶಕರು. ಆನೇಕಲ್ ಬಾಲರಾಜ್ ಚಿತ್ರದ ನಿರ್ಮಾಪಕರು.

ಜನ್ಮ ಚಿತ್ರದ ಪ್ರಮುಖ ಪಾತ್ರದಲ್ಲಿ ಸಿತಾರಾ

ಚಿತ್ರದ ನಿರ್ಮಾಪಕ ಬಾಲರಾಜ್ ಅವರ ಪುತ್ರ ಸಂತೋಷ್ ಚಿತ್ರದ ನಾಯಕನಟ. ಮೀನಾಕ್ಷಿ ಚಿತ್ರದ ನಾಯಕಿ. ಬುಲೆಟ್ ಪ್ರಕಾಶ್, ತಲೈವಾಸಲ್ ವಿಜಯ್, ಅನುರಾಧ ಪಾತ್ರವರ್ಗದ ಚಿತ್ರದಲ್ಲಿ ಸಿತಾರಾ ಅವರು ಪ್ರಮುಖ ಪಾತ್ರ ಪೋಷಿಸಿದ್ದಾರೆ.

Read more about: kannda movies, namitha, roopashri
English summary
Theree Kannada films Jatayu, Janma and Benki Birugali released on 26th April. Jatayu is action based movie and Benki Birugali crime bases while is also a action cum family drama film.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada