1983ರ ಹಿಟ್ ಚಿತ್ರದ ಹೆಸರಲ್ಲಿ ಮತ್ತೆ ಸಿನಿಮಾ ಬಂತು
1983ರಲ್ಲಿ ಬಿಡುಗಡೆಯಾಗಿದ್ದ ಹಿಟ್ ಸಿನಿಮಾದ ಹೆಸರಲ್ಲಿ ಈಗ ಸಿನಿಮಾವೊಂದು ಬರ್ತಿದೆ. ದೊರೈ ಭಗವಾನ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಅನಂತ್ ನಾಗ್ ಮತ್ತು ಲಕ್ಷ್ಮಿ ನಟಿಸಿದ್ದರು. ಬಾಲಕೃಷ್ಣ, ತೂಗುದೀಪ ಶ್ರೀನಿವಾಸ್ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆ ಚಿತ್ರದ ಹೆಸರು 'ಬೆಂಕಿಯ ಬಲೆ'.
ಅಂದಿನ ಹಿಟ್ ಸಿನಿಮಾದ ಟೈಟಲ್ ಮತ್ತೆ ಮರುಬಳಕೆಯಾಗಿದೆ. 'ಬೆಂಕಿಯ ಬಲೆ' ಚಿತ್ರಕ್ಕೆ ಪ್ರೀತಿಯ ಕೊಲೆ ಎಂಬ ಅಡಿಬರಹವಿದೆ. ಅಂದ್ಹಾಗೆ, ಈ ಚಿತ್ರವನ್ನ ತಯಾರಿಸಿರುವುದು ಶಿವಾಜಿ ಪಿಕ್ಚರ್ಸ್ ಲಾಂಛನದಲ್ಲಿ ಶಿವಾಜಿ ಎಂಬುವರು.
ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಆಗಸ್ಟ್ 4ರ ಶನಿವಾರ ಬೆ.10.30ಕ್ಕೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಚಿತ್ರದ ಆಡಿಯೋ ಹಾಗೂ ವಿಡಿಯೋ ಬಿಡುಗಡೆ ಸಮಾರಂಭ ನಡೆಯಲಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಶ್ರೀಚಿನ್ನೇಗೌಡ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜೇಂದ್ರಸಿಂಗ್ ಬಾಬು, ಲೂಸ್ ಮಾದ ಯೋಗಿ, ಪ್ರಥಮ್ ಸೇರಿದಂತೆ ಕನ್ನಡ ಚಿತ್ರರಂಗದ ಸಾಕಷ್ಟು ಗಣ್ಯರು ಸಮಾರಂಭಕ್ಕೆ ಮುಖ್ಯಅತಿಥಿಗಳಾಗಿ ಆಗಮಿಸುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಶಿವಾಜಿ ಪಿಕ್ಚರ್ಸ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ 'ಮಂಡ್ಯ ಟು ಸಿಂಗಾಪುರ' ಹಾಗೂ 'ಕ್ರೈಂ' ಚಿತ್ರಗಳ ಅನಾವರಣವಿದ್ದು, ನೂತನ ಪ್ರತಿಭೆಗಳಿಗೆ ಅವಕಾಶ ನೀಡಲು ಶಿವಾಜಿ ಅವರು ನಿರ್ಧರಿಸಿದ್ದಾರೆ.
ಇನ್ನುಳಿದಂತೆ ಶಿವಾಜಿ ಅವರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವನ್ನು ಮಾಡುತ್ತಿರುವ ಈ ಚಿತ್ರಕ್ಕೆ ಮನುರಾವ್, ಅತಿಶಯ್ ಜೈನ್, ಮಂಜುಕವಿ ಸಂಗೀತ ನೀಡಿದ್ದಾರೆ. ನರಹಳ್ಳಿ ರಾಮು, ರಾಜ್ ಕಡೂರು ಅವರ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ. ಶಿವಾಜಿ, ಪ್ರೀತಿ ಮಡಿಕೇರಿ, ನಿರಂಜನ್, ಸುಮ ದೇಶಪ್ರೇಮಿ, ಪವಿತ್ರ ಸಲ್ಮಾನ್, ಲೋಕೇಶ್ ರಾವ್ ಮುಂತಾದವರಿದ್ದಾರೆ.


Click it and Unblock the Notifications











