For Quick Alerts
  ALLOW NOTIFICATIONS  
  For Daily Alerts

  ಸಿನಿಮಾದಿಂದ ಬರುವ ಸಂಪೂರ್ಣ ಹಣ ಕ್ಯಾನ್ಸರ್ ರೋಗಿಗಳಿಗೆ ದೇಣಿಗೆ

  |

  ತಮ್ಮ ಸಿನಿಮಾದಿಂದ ಬರುವ ಸಂಪೂರ್ಣ ಮೊತ್ತವನ್ನು ಕ್ಯಾನ್ಸರ್ ಆಸ್ಪತ್ರೆಯ ರೋಗಿಗಳಿಗೆ ದೇಣಿಗೆ ನೀಡುವೆ ಎಂದು 'ಬೆಂಕಿಯ ಬಲೆ ಪ್ರೀತಿಯ ಕೊಲೆ' ಚಿತ್ರದ ನಿರ್ಮಾಪಕ ಹಾಗೂ ನಟ ಶಿವಾಜಿ ತಿಳಿಸಿದ್ದಾರೆ.

  ಬುಧವಾರ ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ, 'ಬೆಂಕಿಯ ಬಲೆ ಪ್ರೀತಿಯ ಕೊಲೆ' ನೈಜ ಕಥೆಯಾಧಾರಿತ ಚಿತ್ರವಾಗಿದೆ. 2003 ರಲ್ಲಿ ತನ್ನ ತಾಯಿ ಕ್ಯಾನ್ಸರ್ ನಿಂದ ಬಳಲುತ್ತಿದ್ದಾಗ ಕಿದ್ವಾಯಿ ಆಸ್ಪತ್ರೆಯಲ್ಲಿದ್ದರು. ಅಲ್ಲಿದ್ದ ರೋಗಿ ಸಂಬಂಧಿ ಉಮಾಳ ಪಾತ್ರವೇ ಈ ಕಥೆಯ ಮುಖ್ಯಪಾತ್ರವಾಗಿದ್ದು, ಅವಳ ಕಷ್ಟ ಪಾಡುಗಳೇ ಕಥೆಯ ಜೀವಾಳಾ. ಮಹಿಳಾ ಪ್ರಧಾನ ಚಿತ್ರವಾಗಿದ್ದು, ಉತ್ತಮ ಸಾಮಾಜಿಕ ಸಂದೇಶ ಇದೆ' ಎಂದು ತಿಳಿಸಿದರು.

  ಪ್ರೀತಿ, ಪ್ರೋತ್ಸಾಹದಿಂದ 'ಗಂಟುಮೂಟೆ' ತುಂಬಿಸಿದ ಕನ್ನಡ ಜನಪ್ರೀತಿ, ಪ್ರೋತ್ಸಾಹದಿಂದ 'ಗಂಟುಮೂಟೆ' ತುಂಬಿಸಿದ ಕನ್ನಡ ಜನ

  ಚಿತ್ರವು ನವೆಂಬರ್ 17ರಂದು ಪ್ರೀಮಿಯರ್ ಶೋ ಇರಲಿದ್ದು, ನವೆಂಬರ್ ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದರು. ಸುಮಾರು 10 ಲಕ್ಷ ರೂಗಳ ವೆಚ್ಚದಲ್ಲಿ ಚಿತ್ರ ನಿರ್ಮಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ದಾಮೋದರ್ ಪ್ರಹ್ಲಾದ್ ಮೋದಿಯವರು ಫೇಸ್ ಬುಕ್ ಲೈವ್ ನಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ ಎಂದರು.

  ನೇರವಾಗಿ ರೋಗಿಗಳ ಕೈಗೆ ಹಣ ನೀಡುವುದರಿಂದ ಬಂದ ಹಣ ಸದುಪಯೋಗವಾಗಲಿದೆ ಎಂದು ಶಿವಾಜಿ ತಿಳಿಸಿದ್ದಾರೆ.

  ಸಿಂಪಲ್ ಹುಡುಗಿ ಶ್ವೇತಾ ಶ್ರೀವಾತ್ಸವ್ ನ ಹುಡುಕಿಕೊಂಡು ಬಂದಿತ್ತು ಒಂಬತ್ತು ಆಫರ್ಸ್.!ಸಿಂಪಲ್ ಹುಡುಗಿ ಶ್ವೇತಾ ಶ್ರೀವಾತ್ಸವ್ ನ ಹುಡುಕಿಕೊಂಡು ಬಂದಿತ್ತು ಒಂಬತ್ತು ಆಫರ್ಸ್.!

  ಯುವ ಉತ್ಸಾಹಿ ಹೊಸಬರ ತಂಡವೇ ಚಿತ್ರದಲ್ಲಿದ್ದು 2.26 ಗಂಟೆಯ ಚಿತ್ರದಲ್ಲಿ 6 ಹಾಡುಗಳು, 3 ಪೈಟ್ ಇದೆ. ನಾಯಕಿಯಾಗಿ ಪ್ರೀತಿ ಯಶೂ, ನಾಯಕನಾಗಿ ಧನುಷ್,ಖಳ ನಾಯಕನಾಗಿ ಸ್ನೇಹ ಜೀವಿ ಮಂಜೇಶ್, ಲೋಕೇಶ್ ರಾವ್, ಕೊತ್ತಿ ಸೀನಾ,ನಿರಂಜನ್ ಹಾಗೂ ಇತರರು ಇದ್ದಾರೆ ಎಂದರು.

  ನಾಯಕಿ ಪ್ರೀತಿಯಶೂ, ನಿರಂಜನ್, ಮೈಸೂರು ಮಂಜು, ವಿರ್ಲೆ ಮಂಜು, ಮಹದೇವ ಮೂರ್ತಿ ಹಾಗೂ ಇತರರು ಗೋಷ್ಠಿಯಲ್ಲಿ ಇದ್ದರು.

  English summary
  Benkiya Bale Preethiya Kole movie proudcer and actor shivaji decided to help cancer patients.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X