For Quick Alerts
  ALLOW NOTIFICATIONS  
  For Daily Alerts

  ದೀಪಿಕಾ, ಸಿದ್ಧಾರ್ಥ್, ಸುಮಲತಾ ಭೇಟಿಯಾಗಿ ದೋಸೆ ತಿನ್ನಲು ವಿದ್ಯಾರ್ಥಿ ಭವನಕ್ಕೆ ಬಂದ ಬರ್ನಿ ಸ್ಯಾಂಡರ್ಸ್

  |

  ವಿಂಟರ್ ಜಾಕೆಟ್, ಉಲಾನ್ ಗ್ಲೌಸ್, ಮಾಸ್ಕ್ ಧರಿಸಿ ಕುಳಿತಿರುವ ವ್ಯಕ್ತಿಯ ಫೋಟೋ ಕಳೆದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇವರು ಅಮೆರಿಕದ ರಾಜಕಾರಣಿ ಬರ್ನಿ ಸ್ಯಾಂಡರ್ಸ್. ಈಗ ಎಲ್ಲಿ ನೋಡಿದ್ರು, ಯಾವ ಕ್ಷೇತ್ರದಲ್ಲಿ ನೋಡಿದ್ರು ಬರ್ನಿ ಸ್ಯಾಂಡರ್ಸ್ ಅವರೆ ಕಾಣಿಸುತ್ತಾರೆ.

  ಸಿನಿಮಾ ತಾರೆಯರ ಜೊತೆ, ರಾಜಕಾರಣಿಗಳ ಜೊತೆ, ಪಾರ್ಕ್ ನಲ್ಲಿ, ಮೀಟಿಂಗ್ ನಲ್ಲಿ, ಕಾಶ್ಮೀರದಲ್ಲಿ, ಟಿವಿ ಚಾನೆಲ್, ಕಾಲೇಜು, ಕ್ರೀಡಾಂಗಣ ಹೀಗೆ ಎಲ್ಲಿ ನೋಡಿದ್ರು ಈಗ ಬರ್ನಿ ಸ್ಯಾಂಡರ್ಸ್ ಕುಳಿತಿದ್ದಾರೆ. ಯಾರ ಜೊತೆ ನೋಡಿದ್ರು ಬರ್ನಿ ಸ್ಯಾಂಡರ್ಸ್ ಕಾಣಿಸಿಕೊಳ್ಳುತ್ತಿದ್ದಾರೆ.

  ಅಮೆರಿಕಾದಿಂದ ಹೊರಟ ಬರ್ನಿ ಸ್ಯಾಂಡರ್ಸ್ ಎಲ್ಲಾ ಕಡೆ ಸುತ್ತಾಡಿ ಬಾಲಿವುಡ್ ನ ಸ್ಟಾರ್ ಕಲಾವಿದರನ್ನು ಭೇಟಿಯಾಗಿದ್ದಾರೆ. ಇದೀಗ ಸ್ಯಾಂಡಲ್ ವುಡ್ ಗೂ ಎಂಟ್ರಿ ಕೊಟ್ಟಿರುವುದು ಅಚ್ಚರಿ ಮೂಡಿಸಿದೆ. ಸುಮಲತಾ ಅಂಬರೀಶ್, ಮೇಘನಾ ಗಾಂವಕರ್ ಸೇರಿದಂತೆ ಅನೇಕರ ಮನೆಗೆ ಹೋಗಿದ್ದ ಬರ್ನಿ ಇದೀಗ ಬಸವನಗುಡಿಯ ಪ್ರಸಿದ್ಧ ಹೋಟೆಲ್ ವಿದ್ಯಾರ್ಥಿ ಭವನಕ್ಕೆ ತೆರಳಿದ್ದಾರೆ.

  ದೀಪಿಕಾ ಪಡುಕೋಣೆ ಭೇಟಿಯಾದ ಬರ್ನಿ ಸ್ಯಾಂಡರ್ಸ್

  ದೀಪಿಕಾ ಪಡುಕೋಣೆ ಭೇಟಿಯಾದ ಬರ್ನಿ ಸ್ಯಾಂಡರ್ಸ್

  ಅಮೆರಿಕ ಮಾತ್ರವಲ್ಲದೆ ಬಾಲಿವುಡ್ ಸುತ್ತಾಡಿ, ಸ್ಯಾಂಡಲ್ ವುಡ್ ನಲ್ಲೂ ರೌಂಡ್ ಹಾಕುತ್ತಿದ್ದಾರೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೊತೆ ಕುಳಿತಿದ್ದ ಬರ್ನಿ ಫೋಟೋ ಇತ್ತೀಚಿಗೆ ವೈರಲ್ ಆಗಿತ್ತು. ದೀಪಿಕಾ ಫೋಟೋವನ್ನು ಶೇರ್ ಮಾಡಿ, ಕ್ಯಾಪ್ಷನ್ ನೀಡಿ ಎಂದು ಬರೆದುಕೊಂಡಿದ್ದರು.

  ಸಿದ್ಧಾರ್ಥ್ ಮಲ್ಹೋತ್ರ ಫೋಟೋಶೂಟ್ ನಲ್ಲಿ ಭಾಗಿ

  ಸಿದ್ಧಾರ್ಥ್ ಮಲ್ಹೋತ್ರ ಫೋಟೋಶೂಟ್ ನಲ್ಲಿ ಭಾಗಿ

  ದೀಪಿಕಾ ಬಳಿಕ ನಟ ಸಿದ್ಧಾರ್ಥ್ ಮಲ್ಹೋತ್ರ ಅವರನ್ನು ಭೇಟಿಯಾಗಿದ್ದಾರೆ. ಸಿದ್ಧಾರ್ಥ್ ಫೋಟೋಶೂಟ್ ನಲ್ಲಿ ಬರ್ನಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಕೇವಲ ಸಿನಿಮಾದವರನ್ನು ಮಾತ್ರ ಭೇಟಿಯಾಗುತ್ತಿಲ್ಲ. ಕ್ರೀಡಾ ಗಣ್ಯರನ್ನು ಭೇಟಿಯಾಗಿ ಅಚ್ಚರಿ ಮೂಡಿಸುತ್ತಿದ್ದಾರೆ.

  ಸುಮಲತಾ ಅಂಬರೀಶ್ ಮನೆಯಲ್ಲಿ ಬರ್ನಿ ಸ್ಯಾಂಡರ್ಸ್

  ಸುಮಲತಾ ಅಂಬರೀಶ್ ಮನೆಯಲ್ಲಿ ಬರ್ನಿ ಸ್ಯಾಂಡರ್ಸ್

  ಬಾಲಿವುಡ್ ಬಳಿಕ ಇತ್ತೀಚಿಗೆ ನಟಿ ಮತ್ತು ಸಂಸದೆ ಸುಮಲತಾ ಅಂಬರೀಶ್ ಮನೆಗೂ ಬರ್ನಿ ಎಂಟ್ರಿ ಕೊಟ್ಟಿದ್ದಾರೆ. ಸುಮಲತಾ ಪಕ್ಕದಲ್ಲಿ ಕುರ್ಚಿಯ ಮೇಲೆ ಕುಳಿತಿರುವ ಬರ್ನಿ ಫೋಟೋವನ್ನು ಸ್ವತಃ ಸುಮಲತಾ ಅವರೇ ಹಂಚಿಕೊಂಡಿದ್ದಾರೆ. ಜೊತೆಗೆ ಸರ್ಪ್ರೈಸ್ ವಿಸಿಟರ್ ಎಂದು ಬರೆದುಕೊಂಡಿದ್ದಾರೆ.

  ವಿದ್ಯಾರ್ಥಿ ಭವನದಲ್ಲಿ ಕುಳಿತಿರುವ ಬರ್ನಿ ಸ್ಯಾಂಡರ್ಸ್

  ವಿದ್ಯಾರ್ಥಿ ಭವನದಲ್ಲಿ ಕುಳಿತಿರುವ ಬರ್ನಿ ಸ್ಯಾಂಡರ್ಸ್

  ಬಳಿಕ ಸ್ಯಾಡಂಲ್ ವುಡ್ ನ ಮತ್ತೋರ್ವ ನಟಿ ಮೇಘನಾ ಗಾವಂಕರ್ ಅವರನ್ನು ಭೇಟಿಯಾಗಿದ್ದಾರೆ. ಎಲ್ಲರನ್ನು ಭೇಟಿಯಾಗಿರುವ ಬರ್ನಿ ಇದೀಗ ಬಸವನಗುಡಿಯ ದೋಸೆ ಹೋಟೆಲ್ ವಿದ್ಯಾರ್ಥಿ ಭವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ವಿದ್ಯಾರ್ಥಿ ಭವನದಲ್ಲಿ ಕುಳಿತಿರುವ ಬರ್ನಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಟೈಟಾನಿಕ್ ನಲ್ಲಿ ಬರ್ನಿ ಸ್ಯಾಂಡರ್ಸ್

  ಟೈಟಾನಿಕ್ ನಲ್ಲಿ ಬರ್ನಿ ಸ್ಯಾಂಡರ್ಸ್

  ಟೈಟಾನಿಕ್ ಸಿನಿಮಾದಲ್ಲೂ ಬರ್ನಿ ಸ್ಯಾಂಡರ್ಸ್ ಕಾಣಿಸಿಕೊಂಡಿದ್ದಾರೆ. ಟೈಟಾನಿಕ್ ಸಿನಿಮಾದ ನಟಿ ಕೇಟ್ ವಿನ್ಸ್ಲೆಟ್ ಅವರನ್ನು ತಬ್ಬಿಕೊಂಡು ನಿಂತಿದ್ದಾರೆ. ಈ ಫೋಟೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಮಕ್ಕಳ ಜೊತೆ ಗಿರಿಗಿಟ್ಲೆಯಲ್ಲಿ ಕುಳಿತಿರುವ ಬರ್ನಿ ಸ್ಯಾಂಡರ್ಸ್

  ಮಕ್ಕಳ ಜೊತೆ ಗಿರಿಗಿಟ್ಲೆಯಲ್ಲಿ ಕುಳಿತಿರುವ ಬರ್ನಿ ಸ್ಯಾಂಡರ್ಸ್

  ಬರ್ನಿ ಸ್ಯಾಂಡರ್ಸ್ ಮಕ್ಕಳ ಜೊತೆ ಗಿರಿಗಿಟ್ಲೆಯಲ್ಲೂ ಕುಳಿತು ಎಂಜಾಯ್ ಮಾಡಿದ್ದಾರೆ. ಹೀಗೆ ಸಾಕಷ್ಟು ಕಡೆ ಬರ್ನಿ ಸ್ಯಾಂಡರ್ಸ್ ಕಾಣಿಸಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಬರ್ನಿ ಸಿಕ್ಕಾಪಟ್ಟೆ ಸುತ್ತಾಡುತ್ತಿದ್ದಾರೆ.

  ಬರ್ನಿ ಸ್ಯಾಂಡರ್ಸ್ ಬೊಂಬೆ

  ಬರ್ನಿ ಸ್ಯಾಂಡರ್ಸ್ ಬೊಂಬೆ

  ಬರ್ನಿ ಸ್ಯಾಂಡರ್ಸ್ ಅವರ ಬೊಂಬೆ ಸಹ ಸಖತ್ ವೈರಲ್ ಆಗುತ್ತಿದೆ. ಉಲಾನ್ ನಿಂದ ಬರ್ನಿ ಸ್ಯಾಂಡರ್ಸ್ ಹಾಗೆ ಕುಳಿತಿರುವ ಬೊಂಬೆಯನ್ನು ತಯಾರಿಸಿದ್ದು, ಬೊಂಬೆ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

  ಅದ್ದೂರಿಯಾಗಿತ್ತು Dubai ನಲ್ಲಿ Kiccha ನಿಗೆ ನೀಡಿದ ಸ್ವಾಗತ | Filmibeat Kannada
  ಯಾರು ಈ ಬರ್ನಿ ಸ್ಯಾಂಡರ್ಸ್?

  ಯಾರು ಈ ಬರ್ನಿ ಸ್ಯಾಂಡರ್ಸ್?

  ಬರ್ನಿ ಸ್ಯಾಂಡರ್ಸ್ ಅಮೆರಿಕದ ರಾಜಕಾರಣಿ. ಇತ್ತೀಚಿಗಷ್ಟೆ ಅಮೆರಿಕದ ಅಧ್ಯಕ್ಷರಾಗಿ ಜೊ ಬೈಡನ್ ಪ್ರಮಾಣ ವಚನ ಸ್ವೀಕರಿಸಿದ ಕಾರ್ಯಕ್ರಮದಲ್ಲಿ ಬರ್ನಿ ಸ್ಯಾಂಡರ್ಸ್ ಹಾಜರಾಗಿದ್ದರು. ಅಮೆರಿಕದಲ್ಲಿ ವಿಪರೀತ ಚಳಿ ಇರುವ ಕಾರಣ ಬರ್ನಿ ಉದ್ದನೆಯ ಜಾಕೆಟ್, ಉಲಾನ್ ಗ್ಲೌಸ್ ಧರಿಸಿ ಸಂಪೂರ್ಣ ದೇಹ ಮುಚ್ಚಿಕೊಂಡು ಬೆಚ್ಚಗೆ ಕುಳಿತ್ತಿದ್ದರು. ಬರ್ನಿ ಕಾರ್ಯಕ್ರಮದಲ್ಲಿ ಕುಳಿತ ಫೋಟೋವನ್ನು ಎಡಿಟ್ ಮಾಡಿ, ವೈರಲ್ ಮಾಡಲಾಗುತ್ತಿದೆ. ಅವರ ಎಡಿಟ್ ಫೋಟೋವನ್ನು ಎಲ್ಲೆಲ್ಲೋ ಕೂರಿಸುತ್ತಿದ್ದಾರೆ. ಎಡಿಟ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

  English summary
  Bernie Sanders photo used to trolled. He meets Bollywood and Sandalwood starts meme goes viral on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X