For Quick Alerts
ALLOW NOTIFICATIONS  
For Daily Alerts

  2016ರ ಅತ್ಯುತ್ತಮ ನಟ-ನಟಿ ಯಾರು? ನೀವೇ ಆಯ್ಕೆ ಮಾಡಿ

  By Bharath Kumar
  |

  ಪ್ರತಿವರ್ಷದಂತೆ ಈ ವರ್ಷವೂ ನಿಮ್ಮ ಫಿಲ್ಮಿ ಬೀಟ್ ಕನ್ನಡದಲ್ಲಿ ವರ್ಷಾಂತ್ಯದ ವಿಶೇಷವಾಗಿ ವಿಶೇಷ ವರದಿಗಳನ್ನ ಪ್ರಕಟ ಮಾಡಲಾಗುತ್ತಿದೆ. ಹೀಗಾಗಿ 2016ರಲ್ಲಿ ನಡೆದ ಸ್ಯಾಂಡಲ್ ವುಡ್ ಸಮಾಚಾರಗಳ ಹಿನ್ನೋಟದ ಜೊತೆಗೆ, ಈ ವರ್ಷದ ಅತ್ಯುತ್ತಮ ನಟ ? ಅತ್ಯುತ್ತಮ ನಟಿ? ಅತ್ಯುತ್ತಮ ಚಿತ್ರ ಸೇರಿದಂತೆ ಹಲವು ವಿಭಾಗಗಳಲ್ಲಿ ಪೋಲ್ ಅಯೋಜಿಸಲಾಗಿದೆ.

  ಈ ವರ್ಷದ ಅತ್ಯುತ್ತಮ ಕಲಾವಿದರನ್ನ, ಚಿತ್ರಗಳನ್ನ, ನಿರ್ದೇಶಕರನ್ನ ಆಯ್ಕೆ ಮಾಡುವ ಅವಕಾಶ ನಿಮಗಿದೆ. ನಿಮ್ಮ ಪ್ರಕಾರ ಈ ವರ್ಷದಲ್ಲಿ ಯಾವ ನಟ ಅತ್ಯುತ್ತಮ ಪರ್ಫಾಮೆನ್ಸ್ ನೀಡಿದ್ದಾರೆ? ಯಾವ ಸಿನಿಮಾ ಈ ವರ್ಷದ ಬೆಸ್ಟ್ ಆಗಿತ್ತು? ಯಾವ ನಾಯಕಿ ಈ ವರ್ಷ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ ಎಂದು ನಿರ್ಧರಿಸಿ ನಮಗೆ ತಿಳಿಸಿ.[2016ರ ಅತ್ಯುತ್ತಮ ಚಿತ್ರ-ನಟ-ನಟಿ-ನಿರ್ದೇಶಕರನ್ನ ಆಯ್ಕೆ ಮಾಡಿ!]

  ನೀವು ನೀಡಿದ ಮತಗಳ ಆಧಾರದ ಮೇಲೆ 2016ರ ಬೆಸ್ಟ್ ಯಾರು ಎಂದು ತೀರ್ಮಾನಿಸಲಾಗುತ್ತದೆ. ಈ ಪೋಲ್ ನ ಫಲಿತಾಂಶವನ್ನ ಜನವರಿ ತಿಂಗಳಲ್ಲಿ ಪ್ರಕಟಿಸಲಾಗುವುದು.

  ಈ ವರ್ಷದಲ್ಲಿ ಯಾವ್ಯಾವ ವಿಭಾಗಳಿವೆ, ಯಾವೆಲ್ಲಾ ಕಲಾವಿದರು ರೇಸ್ ನಲ್ಲಿದ್ದಾರೆ ಎಂದು ಕೆಳಗೆ ನೀಡಿರುವ ಸ್ಲೈಡ್ ಗಳಲ್ಲಿ ತೋರಿಸಲಾಗಿದೆ. ನೋಡಿ ವೋಟ್ ಮಾಡಿ.

  ಅತ್ಯುತ್ತಮ ನಟನ ಆಯ್ಕೆ ಹೇಗೆ?

  2016ರ ಅತ್ಯುತ್ತಮ ನಟರ ಪಟ್ಟಿಯಲ್ಲಿ ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಗಣೇಶ್, ಉಪೇಂದ್ರ, ರಕ್ಷಿತ್ ಶೆಟ್ಟಿ, ವಿಜಯ ರಾಘವೇಂದ್ರ, ಶರಣ್, ಅಜಯ್ ರಾವ್, ದುನಿಯಾ ವಿಜಯ್, ಜಗ್ಗೇಶ್ ಸೇರಿದಂತೆ ಇತರೆ ನಟರು ಇದ್ದಾರೆ.[ಈ ಲಿಂಕ್ ಕ್ಲಿಂಕ್ ಮಾಡಿ ಅತ್ಯುತ್ತಮ ನಟನ ಆಯ್ಕೆ ಮಾಡಿ]

  ಅತ್ಯುತ್ತಮ ನಟಿ ಯಾರು?

  ಈ ವರ್ಷದ ಉತ್ತಮ ನಾಯಕಿರಲ್ಲಿ ಪ್ರಿಯಾಮಣಿ, ಅಮೂಲ್ಯ, ಹರಿಪ್ರಿಯಾ, ಪ್ರಿಯಾಂಕಾ ಉಪೇಂದ್ರ, ರಾಧಿಕಾ ಪಂಡಿತ್, ಶೃತಿ ಹರಿಹರನ್, ರಚಿತಾ ರಾಮ್, ರಮ್ಯಾ, ಪಾರುಲ್ ಯಾದವ್, ವೇದಿಕಾ, ಶ್ವೇತಾ ಶ್ರೀವಾತ್ಸವ್ ಸೇರಿದಂತೆ ಹಲವು ನಟಿಯರಿದ್ದಾರೆ.[ಈ ಲಿಂಕ್ ಕ್ಲಿಂಕ್ ಮಾಡಿ ಅತ್ಯುತ್ತಮ ನಟಿಯ ಆಯ್ಕೆ ಮಾಡಿ]

  ಉತ್ತಮ ಚಿತ್ರವನ್ನ ಆಯ್ಕೆ ಮಾಡಿ?

  ಈ ವರ್ಷದ ಬೆಸ್ಟ್ ಸಿನಿಮಾ ವಿಭಾಗದಲ್ಲಿ ಕಿಲ್ಲಿಂಗ್ ವೀರಪ್ಪನ್, ಶಿವಲಿಂಗ, ಯುಟರ್ನ್, ಚಕ್ರವ್ಯೂಹ, ಜಗ್ಗುದಾದ, ತಿಥಿ, ಕೋಟಿಗೊಬ್ಬ-2, ನೀರ್ ದೋಸೆ, ದೊಡ್ಮನೆ ಹುಡ್ಗ, ಜಾಗ್ವಾರ್, ಜೆಸ್ಸಿ, ದನಕಾಯೋನು, ಮಮ್ಮಿ ಸೇವ್ ಮಿ ಚಿತ್ರಗಳು ಸೇರಿದಂತೆ ಹಲವು ಚಿತ್ರಗಳಿವೆ.[ಈ ಲಿಂಕ್ ಕ್ಲಿಂಕ್ ಮಾಡಿ ಅತ್ಯುತ್ತಮ ಚಿತ್ರವನ್ನ ಆಯ್ಕೆ ಮಾಡಿ]

  ಈ ವರ್ಷದ ನಿರ್ದೇಶಕ ಯಾರು?

  2016 ಅತ್ಯುತ್ತಮ ನಿರ್ದೇಶಕರ ಸಾಲಿನಲ್ಲಿ ಪಿ.ವಾಸು, ಹರ್ಷ.ಎ, ಲೋಹಿತ್ ಹೆಚ್, ಸುಮನ ಕಿತ್ತೂರ್, ಪವನ್ ಒಡೆಯರ್, ಪವನ್ ಕುಮಾರ್, ಆರ್ ಚಂದ್ರು. ನಂದಕಿಶೋರ್, ಶಶಾಂಕ್, ರವಿಚಂದ್ರನ್, ಯೋಗರಾಜ್ ಭಟ್, ದುನಿಯಾ ಸೂರಿ ಸೇರಿದಂತೆ ಹಲವು ನಿರ್ದೇಶಕರು ಇದ್ದಾರೆ.[ಈ ಲಿಂಕ್ ಕ್ಲಿಂಕ್ ಮಾಡಿ ಅತ್ಯುತ್ತಮ ನಿರ್ದೇಶಕರನ್ನ ಆಯ್ಕೆ ಮಾಡಿ]

  ಸಂಗೀತ ನಿರ್ದೇಶಕರನ್ನ ಆಯ್ಕೆ ಮಾಡಿ!

  ಈ ವರ್ಷದ ಉತ್ತಮ ಸಂಗೀತ ನಿರ್ದೇಶಕರಲ್ಲಿ ಅಜನೀಶ್ ಲೋಕನಾಥ್, ಅರ್ಜುನ್ ಜನ್ಯ, ಹರಿಕೃಷ್ಣ, ಅನೂಪ್ ಸಿಳೀನ್, ಮಣಿಕಾಂತ್ ಕದ್ರಿ ಸ್ಥಾನ ಪಡೆದುಕೊಂಡಿದ್ದಾರೆ.[ಈ ಲಿಂಕ್ ಕ್ಲಿಂಕ್ ಮಾಡಿ ಅತ್ಯುತ್ತಮ ಸಂಗೀತ ನಿರ್ದೇಶಕರನ್ನ ಆಯ್ಕೆ ಮಾಡಿ]

  ನವ ನಟರನ್ನ ಆಯ್ಕೆ ಮಾಡಿ

  2016ರ ಸ್ಯಾಂಡಲ್ ವುಡ್ ಗೆ ಪರಿಚಯವಾದ ನಟ ನಟರಲ್ಲಿ ನಿಖಿಲ್ ಕುಮಾರ್, ಸಚಿನ್, ದಿಲೀಪ್ ಪ್ರಕಾಶ್, ಅನೂಪ್ ರೇವಣ್ಣ, ಸೂರಜ್ ಗೌಡ, ಪ್ರವೀಣ್ ಹಾಗೂ ಗಡ್ಡಪ್ಪ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.[ಈ ಲಿಂಕ್ ಕ್ಲಿಂಕ್ ಮಾಡಿ ಅತ್ಯುತ್ತಮ ನವನಟನ ಆಯ್ಕೆ ಮಾಡಿ]

  ನಿಮ್ಮ ಪ್ರಕಾರ ನವ ನಟಿ ಯಾರು?

  ಈ ವರ್ಷ ಚಂದನವನದಲ್ಲಿ ನೂತನ ತಾರೆಯರಾಗಿ ಮಿಂಚಿದ ನಟಿರಲ್ಲಿ ಶ್ರದ್ಧಾ ಶ್ರೀನಾಥ್, ಪೂಜಾ, ಅಪೂರ್ವ, ನೇಹಾ ಶೆಟ್ಟಿ, ಕಾವ್ಯ ಶೆಟ್ಟಿ, ಸನುಷ ಸೇರಿದಂತೆ ಹಲವರು ನಟಿಯರಿದ್ದಾರೆ.[ಈ ಲಿಂಕ್ ಕ್ಲಿಂಕ್ ಮಾಡಿ ಅತ್ಯುತ್ತಮ ನವನಟಿ ಆಯ್ಕೆ ಮಾಡಿ]

  ಈ ವರ್ಷದ ಅತ್ಯುತ್ತಮ ಹಾಸ್ಯ ನಟ ಯಾರು?

  ಈ ವರ್ಷದ ಹಾಸ್ಯ ನಟ ವಿಭಾಗದಲ್ಲಿ ಚಿಕ್ಕಣ್ಣ, ಸಾಧುಕೋಕಿಲಾ, ರಂಗಾಯಣ ರಘು, ಬುಲೆಟ್ ಪ್ರಕಾಶ್ ಇದ್ದಾರೆ. ನಿಮ್ಮ ಆಯ್ಕೆ ಯಾರು?[ಈ ಲಿಂಕ್ ಕ್ಲಿಂಕ್ ಮಾಡಿ ಅತ್ಯುತ್ತಮ ಹಾಸ್ಯ ನಟನ ಆಯ್ಕೆ ಮಾಡಿ]

  English summary
  For every year filmbeat kannada conducts the yearly poll for Sandalwood's Best Actor, Best Actress, Best Comedian, Best Director, Best Best Hero, Best Heroine, Best Debutant Male, Best Debutant Female, and it now time to select your favourite category for 2016 poll for above mentioned categories.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more