twitter
    For Quick Alerts
    ALLOW NOTIFICATIONS  
    For Daily Alerts

    ಬರಗೂರು ರಾಮಚಂದ್ರಪ್ಪ ಹಿರಿಮೆಗೆ ಮತ್ತೊಂದು ಗರಿ

    By Harshitha
    |

    'ಜನುಮದ ಜೋಡಿ', 'ಹಗಲುವೇಷ' ಸೇರಿದಂತೆ ಅನೇಕ ಕನ್ನಡ ಸಿನಿಮಾಗಳಿಗೆ 'ಅತ್ತ್ಯುತ್ತಮ ಗೀತ ಸಾಹಿತಿ', 'ಅತ್ತ್ಯುತ್ತಮ ಸಂಭಾಷಣೆಕಾರ' ಪ್ರಶಸ್ತಿಗಳನ್ನ ಪಡೆದಿರುವ ಖ್ಯಾತ ಸಾಹಿತಿ, ನಿರ್ದೇಶಕ ಬರಗೂರು ರಾಮಚಂದ್ರಪ್ಪ ರವರ ಹಿರಿಮೆಗೆ ಮತ್ತೊಂದು ಗರಿ ಸಿಕ್ಕಿದೆ.

    ಇತ್ತೀಚೆಗಷ್ಟೆ ರಾಜಸ್ಥಾನದ ಜೈಪುರದಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಿತು. ಅದರಲ್ಲಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ 'ಮರಣದಂಡನೆ' ಚಿತ್ರ ಸ್ಪರ್ಧಾವಿಭಾಗಕ್ಕೆ ಆಯ್ಕೆ ಆಯ್ತು. ಇದೇ ಚಿತ್ರದ ನಿರ್ದೇಶನಕ್ಕಾಗಿ ಬರಗೂರು ರಾಮಚಂದ್ರಪ್ಪ 'ಪ್ರಾದೇಶಿಕ ಚಿತ್ರಗಳ ಅತ್ತ್ಯುತ್ತಮ ನಿರ್ದೇಶಕ' ಪ್ರಶಸ್ತಿಯನ್ನ ಪಡೆದಿದ್ದಾರೆ.

    best-director-regional-films-baraguru-ramachandrappa-felicitated

    'ಮರಣದಂಡನೆ' ಚಿತ್ರದ ಕುರಿತು - ಸಹಿ‍ಷ್ಣುತೆ ಮತ್ತು ಸಾವಿನ ಸಮಸ್ಯೆಯನ್ನು ಶೋಧಿಸುವ ಸಿನಿಮಾ 'ಮರಣದಂಡನೆ'. ಕಾರಾಗೃಹದಲ್ಲಿ ಗಲ್ಲಿಗೇರಿಸುವ ಕೆಲಸ ಮಾಡುತ್ತಿದ್ದ ಹುಸೇನ್, ತಾನೇ ಗಲ್ಲಿಗೇರಬೇಕಾದ ಸಂದರ್ಭ ಒದಗಿ ಬಂದಾಗ ಎದುರಿಸುವ ತಲ್ಲಣ ಚಿತ್ರದ ಹೂರಣ.

    'ಮರಣದಂಡನೆ' ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ ಮಾಡಿದವರು ಬರಗೂರು ರಾಮಚಂದ್ರಪ್ಪ. ಚಿತ್ರಕ್ಕೆ ಮುರುಳೀಧರ ಹಾಲಪ್ಪ ಬಂಡವಾಳ ಹಾಕಿದ್ರೆ, ಹಂಸಲೇಖ ಸಂಗೀತ ಸಂಯೋಜಿಸಿದ್ದಾರೆ.

    English summary
    Writer, Kannada Film Director Baraguru Ramachandrappa is felicitated as Best Director for Regional Films for the movie 'Maranadhandane' in Rajasthan (Jaipur) International Film Festival.
    Tuesday, February 2, 2016, 15:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X