twitter
    For Quick Alerts
    ALLOW NOTIFICATIONS  
    For Daily Alerts

    2016ರಲ್ಲಿ ಜನ ಮೆಚ್ಚಿದ ಕನ್ನಡದ ಚಿತ್ರಗಳು

    By Bharath Kumar
    |

    ಕನ್ನಡದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಅಬ್ಬರದ ಸಿನಿಮಾಗಳು ಬಿಡುಗಡೆಯಾಗಿದ್ದು, ಈ ಬಾರಿ ದಾಖಲೆಯ 160ಕ್ಕೂ ಅಧಿಕ ಚಿತ್ರಗಳು ತೆರೆಕಂಡಿವೆ. ಕೆಲವು ಜನರ ಮೆಚ್ಚುಗೆ ಪಡೆದು, ಯಶಸ್ಸು ಗಳಿಸಿದ್ರೆ, ಮತ್ತೆ ಕೆಲವು ಚಿತ್ರಗಳು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮಕಾಡೆ ಮಲಗಿದವು.

    ಸ್ಟಾರ್ ನಟರ ಪಾಲಿಗೆ ಈ ವರ್ಷ ಅಷ್ಟೇನೂ ಖುಷಿಯಾಗಿರಲಿಲ್ಲ ಅಂದ್ರೆ ನಂಬಲೇಬೇಕು. ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಬಿಸ್ ನೆಸ್ ಮಾಡಿದ್ರು, ಜನರ ಮೆಚ್ಚುಗೆ ಗಳಿಸುವಲ್ಲಿ ಕೆಲ ಚಿತ್ರಗಳು ಹಿನ್ನೆಡೆ ಅನುಭವಿಸದವು. ಇನ್ನೂ ನಿರೀಕ್ಷೆನೇ ಇಲ್ಲದೆ ಬಂದ ಕೆಲ ಚಿತ್ರಗಳು ಅಚ್ಚರಿ ಫಲಿತಾಂಶವನ್ನ ನೀಡಿ ಜನರ ಮನಸ್ಸಿನಲ್ಲಿ ಜಾಗ ಪಡೆದುಕೊಂಡಿವೆ.[2016ರ ಅತ್ಯುತ್ತಮ ಚಿತ್ರ-ನಟ-ನಟಿ-ನಿರ್ದೇಶಕರನ್ನ ಆಯ್ಕೆ ಮಾಡಿ!]

    ಶಿವಣ್ಣನ 'ಶಿವಲಿಂಗ', ಪುನೀತ್ ರಾಜ್ ಕುಮಾರ್ ಅವರ 'ಚಕ್ರವ್ಯೂಹ', ದರ್ಶನ್ ಅಭಿನಯದ 'ಜಗ್ಗುದಾದ', ಕಿಚ್ಚನ 'ಕೋಟಿಗೊಬ್ಬ-2', ಉಪ್ಪಿಯ 'ಮುಕುಂದ ಮುರಾರಿ' ಚಿತ್ರಗಳು ಚಂದನವನ್ನ ಈ ವರ್ಷ ಬೆಳಗಿದವು. 'ತಿಥಿ', 'ಯು ಟರ್ನ್', 'ಗೋಧಿಬಣ್ಣ ಸಾಧರಣ ಮೈಕಟ್ಟು' ಅಂತಹ ಪ್ರಯೋಗಾತ್ಮಕ ಚಿತ್ರಗಳು ಗಮನ ಸೆಳೆದವು.

    ಹಾಗಾದ್ರೆ, ಈ ವರ್ಷ ಯಾವ ಸಿನಿಮಾ ಬೆಸ್ಟ್? ಯಾವ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿತು ಅನ್ನೋದರ ಡೀಟೈಲ್ ರಿಪೋರ್ಟ್ ಇಲ್ಲಿದೆ ನೋಡಿ....

    ಶಿವಣ್ಣನ 'ಕಿಲ್ಲಿಂಗ್ ವೀರಪ್ಪನ್'

    ಶಿವಣ್ಣನ 'ಕಿಲ್ಲಿಂಗ್ ವೀರಪ್ಪನ್'

    ರಾಮ್ ಗೋಪಾಲ್ ವರ್ಮ ಮೊದಲ ಬಾರಿಗೆ ಕನ್ನಡದಲ್ಲಿ ನಿರ್ದೇಶನ ಮಾಡಿದ ಚಿತ್ರ 'ಕಿಲ್ಲಿಂಗ್ ವೀರಪ್ಪನ್'. 'ಕಾಡುಗಳ್ಳ ವೀರಪ್ಪನ್ ಹತ್ಯೆ'ಯ ಕುರಿತ ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಪೊಲೀಸ್ ಕಾಪ್ ಆಗಿ ಕಾಣಿಸಿಕೊಂಡಿದ್ದರು. ವರ್ಷದ ಮೊದಲ ದಿನವೇ ತೆರೆಗೆ ಬಂದ 'ಕಿಲ್ಲಿಂಗ್ ವೀರಪ್ಪನ್' ಸ್ಯಾಂಡಲ್ ವುಡ್ ಪ್ರೇಕ್ಷಕರನ್ನ ಮೆಚ್ಚಿಸಿತ್ತು. ಅಷ್ಟೇ ಅಲ್ಲದೇ ಬಾಕ್ಸ್ ಆಫೀಸ್ ನಲ್ಲೂ ಅಬ್ಬರಿಸಿ, ಯಶಸ್ವಿ 50ದಿನಗಳನ್ನ ಪೂರೈಸಿತ್ತು.[2016ರ 'ಅತ್ಯುತ್ತಮ ಪ್ರಯೋಗಾತ್ಮಕ' ಚಿತ್ರದ ಕಿರೀಟ ಯಾರಿಗೆ?]

    ಥ್ರಿಲ್ಲಿಂಗ್ 'ಶಿವಲಿಂಗ'

    ಥ್ರಿಲ್ಲಿಂಗ್ 'ಶಿವಲಿಂಗ'

    ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಮತ್ತೊಂದು ಚಿತ್ರ 'ಶಿವಲಿಂಗ' ಇದೇ ವರ್ಷ ರಿಲೀಸ್ ಆಗಿತ್ತು. ಪಿ.ವಾಸು ನಿರ್ದೇಶನದ ಈ ಚಿತ್ರ ಸಸ್ಪೆನ್ಸ್ ಥ್ರಿಲ್ಲಿಂಗ್ ಕಥೆಯನ್ನ ಹೊಂದಿತ್ತು. ಬಾಕ್ಸ್ ಆಫೀಸ್ ನಲ್ಲಿ ಒಳ್ಳೆ ಕಲೆಕ್ಷನ್ ಮಾಡಿ, ಪ್ರೇಕ್ಷಕರನ್ನ ರಂಜಿಸುವಲ್ಲಿ ಸಕ್ಸಸ್ ಕಂಡಿತು. ಇದರ ಪರಿಣಾಮ, 'ಶಿವಲಿಂಗ' ಶತದಿನ ಪೂರೈಸಿದಲ್ಲದೇ, ತೆಲುಗು ಹಾಗೂ ತಮಿಳಿನಲ್ಲಿ ರೀಮೇಕ್ ಆಗುತ್ತಿದೆ. ಶಿವಣ್ಣ ಜತೆಗೆ ವೇದಿಕಾ, ಸಾಧುಕೋಕಿಲಾ, ಶಕ್ತಿ ವಾಸುದೇವನ್, ಊರ್ವಶಿ ಸೇರಿದಂತೆ ಹಲವರು ಅಭಿನಯಿಸಿದ್ದರು.[2016ರ ರಿಮೇಕ್ ಚಿತ್ರಗಳಲ್ಲಿ ನಿಮ್ಮ ಆಯ್ಕೆ ಯಾವುದು?]

    'ಕಿರಗೂರಿನ ಗಯ್ಯಾಳಿಗಳು'

    'ಕಿರಗೂರಿನ ಗಯ್ಯಾಳಿಗಳು'

    ಸುಮನ ಕಿತ್ತೂರ್ ನಿರ್ದೇಶನದ 'ಕಿರಗೂರಿನ ಗಯ್ಯಾಳಿಗಳು' ಈ ವರ್ಷದ ಯಶಸ್ವಿ ಚಿತ್ರಗಳಲ್ಲಿ ಒಂದು. ಪೂರ್ಣಚಂದ್ರ ತೇಜಸ್ವಿ ಅವರ ಕಾಧಂಬರಿ ಆಧರಿತ ಚಿತ್ರದಲ್ಲಿ ಶ್ವೇತಾ ಶ್ರೀವಸ್ತವ್, ಕಾರುಣ್ಯ ರಾಮ್, ಸುಕೃತಾ ವಾಗ್ಲೆ, ಸೇರಿದಂತೆ ಹಲವರು ಕಲಾವಿದರು ಕಾಣಿಸಿಕೊಂಡಿದ್ದರು. ಹಳ್ಳಿ ಹೆಂಗಸರ ಸುತ್ತ ನಡೆಯುವ ಈ ಕಥೆಯಲ್ಲಿ ಜಾತಿ, ಲಿಂಗ ತಾರತಮ್ಯತೆ ಅಂತಹ ಸಾಮಾಜಿಕ ಸಮಸ್ಯೆಗಳ ಬಗ್ಗೆ ಬಿತ್ತರಿಸಲಾಗಿತ್ತು.[ಈ ವರ್ಷ ಸೌಂಡ್ ಮಾಡಿ ಮಕಾಡೆ ಮಲಗಿದ ಸಿನಿಮಾಗಳಿವು..]

    ರೊಮ್ಯಾಂಟಿಕ್ 'ಜೆಸ್ಸಿ'

    ರೊಮ್ಯಾಂಟಿಕ್ 'ಜೆಸ್ಸಿ'

    ಪವನ್ ಒಡೆಯರ್ ನಿರ್ದೇಶನದ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ 'ಜೆಸ್ಸಿ'. 'ರಣವಿಕ್ರಮ' ಅಂತಹ ಮಾಸ್ ಚಿತ್ರದ ನಂತರ ಪವನ್ ಒಡೆಯರ್ ಆಕ್ಷನ್ ಕಟ್ ಹೇಳಿದ 'ಜೆಸ್ಸಿ' ಮ್ಯೂಸಿಕಲ್ ಹಿಟ್ ಸಿನಿಮಾ. 'ಜೆಸ್ಸಿ' ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಿದೆ ಹೋದರು, ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಸಕ್ಸಸ್ ಆಗಿತ್ತು. ಧನಂಜಯ್, ರಘುಮುಖರ್ಜಿ, ಪಾರುಲ್ ಯಾದವ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

    'ಯು-ಟರ್ನ್'

    'ಯು-ಟರ್ನ್'

    'ಲೂಸಿಯಾ' ಖ್ಯಾತಿಯ ಪವನ್ ಕುಮಾರ್ ನಿರ್ದೇಶನ ಮಾಡಿದ್ದ 'ಯು-ಟರ್ನ್' ಈ ವರ್ಷ ವಿಭಿನ್ನ ವಿಷಯಕ್ಕಾಗಿ ಗಮನ ಸೆಳೆದ ಚಿತ್ರ. ಸರಳವಾದ ಕಥಾವಸ್ತುನ್ನಿಟ್ಟು ಚಿತ್ರಕಥೆ ಎಣೆದಿದ್ದ ಪವನ್ ಕುಮಾರ್, ಅದ್ಬುತವಾದ ಸಂದೇಶದ ಮೂಲಕ ಹೊಸ ಕ್ರಾಂತಿ ಉಂಟು ಮಾಡಿದರು. ಟ್ರಾಫಿಕ್ಸ್ ನಿಯಮಗಳನ್ನ ಉಲ್ಲಂಘನೆ ಬಗ್ಗೆ ಅರಿವು ಮೂಡಿಸಿದ್ದರು. ಶ್ರದ್ಧಾ ಶ್ರೀನಾಥ್, ರೋಜರ್ ನಾರಾಯಣ್, ರಾಧಿಕಾ ಚೇತನ್ ಸೇರಿದಂತೆ ಹಲವರು 'ಯು-ಟರ್ನ್' ನಲ್ಲಿ ಅಭಿನಯಿಸಿದ್ದರು.[2016: ಈ ವರ್ಷದ ಅತ್ಯುತ್ತಮ ನಾಯಕಿ ಯಾರು?]

    ಅಪ್ಪು 'ಚಕ್ರವ್ಯೂಹ'

    ಅಪ್ಪು 'ಚಕ್ರವ್ಯೂಹ'

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಚಿತಾ ರಾಮ್ ಅಭಿನಯದ 'ಚಕ್ರವ್ಯೂಹ', ಈ ವರ್ಷ ಬಾಕ್ಸ್ ಆಫೀಸ್ ನಲ್ಲಿ ಗಲ್ಲಾ ಪೆಟ್ಟಿಗೆ ಯಲ್ಲಿ ಸದ್ದು ಮಾಡಿದ ಚಿತ್ರ. ಅಪ್ಪು ಅಭಿಮಾನಿಗಳಿಗೆ ಫುಲ್ ಎಂಟರ್ ಟೈನ್ ಮೆಂಟ್ ನೀಡಿದ್ದ 'ಚಕ್ರವ್ಯೂಹ' ವರ್ಷದ ಯಶಸ್ವಿ ಚಿತ್ರವೂ ಹೌದು. ಸರವಣನ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಎಸ್ ತಮನ್ ಸಂಗೀತ ನೀಡಿದ್ದರು.[ಗೂಗಲ್ ನಲ್ಲಿ ವರ್ಷವಿಡೀ 'ಸೌಂಡ್' ಮಾಡಿದ ನಟ ಯಾರು.?]

    ಜನ ಮೆಚ್ಚಿದ 'ತಿಥಿ'

    ಜನ ಮೆಚ್ಚಿದ 'ತಿಥಿ'

    ಈ ವರ್ಷ ಕನ್ನಡದಲ್ಲಿ ಹೊಸ ಅಲೆಯನ್ನ ಸೃಷ್ಠಿಸಿದ ಚಿತ್ರ 'ತಿಥಿ'. ವೃತ್ತಿ ಕಲಾವಿದರಲ್ಲದ ವ್ಯಕ್ತಿಗಳಿಂದ ಅಭಿನಯ ಮಾಡಿಸಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಗಳಿಸಿದ ಈ ಚಿತ್ರ, 2016 ಬಹುದೊಡ್ಡ ಪ್ರಯೋಗ. ಸಾವುಗೀಡಾದ ವ್ಯಕ್ತಿಯ ತಿಥಿ ಮಾಡುವ ಸಂಪ್ರದಾಯ ಸುತ್ತಾ ನಡೆಯುತ್ತ ಕಥೆ ನೈಜವಾಗಿ ತೋರಿಸಲಾಗಿತ್ತು. ಟೈಟಲ್ ನಿಂದ ಹಿಡಿದು, ಕಥೆ, ಸಂಗೀತ, ಸಂಭಾಷಣೆ, ಕಲಾವಿದರು, ಹೀಗೆ ಎಲ್ಲವೂ ನಿರೀಕ್ಷೆಗೂ ಮೀರಿದ್ದು. ಇದೆಲ್ಲದರ ಪರಿಣಾಮ ವರ್ಷದ ಅತ್ಯುತ್ತಮ ಚಿತ್ರ ಎಂಬ ರಾಷ್ಟ್ರ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿಯ ಹಿರಿಮೆ. ರಾಮ್ ರೆಡ್ಡಿ ನಿರ್ದೇಶನ ಮಾಡಿದ್ದ, ಈ ಚಿತ್ರಕ್ಕೆ ಈರೇಗೌಡ ಸಂಭಾಷಣೆ ಬರೆದಿದ್ದರು. ಗಡ್ಡಪ್ಪ, ಸೆಂಚುರಿ ಗೌಡ, ತಮ್ಮಣ್ಣ, ಅಭಿ ಹಾಗೂ ಪೂಜಾ ಎಂಬ ನೂತನ ಕಲಾವಿದರ ಪರಿಚಯಕ್ಕೆ 'ತಿಥಿ' ವೇದಿಕೆಯಾಯಿತು.[2016ರ ಅತ್ಯುತ್ತಮ ಕನ್ನಡದ ನವ ನಟಿ ಯಾರು?]

    'ಗೋಧಿಬಣ್ಣ ಸಾಧರಣ ಮೈಕಟ್ಟು'

    'ಗೋಧಿಬಣ್ಣ ಸಾಧರಣ ಮೈಕಟ್ಟು'

    ಕಮರ್ಷಿಯಲ್ ಚಿತ್ರಗಳ ಅಬ್ಬರದಲ್ಲಿ ಮುಳುಗಿ ಹೋಗಿರುವ ಪ್ರೇಕ್ಷಕರಿಗೆ ಒಂದು ಸಧುಭಿರುಚಿಯ ಮನರಂಜನೆ ನೀಡಿದ್ದು 'ಗೋಧಿಬಣ್ಣ ಸಾಧರಣ ಮೈಕಟ್ಟು'. ಹೇಮಂತ್ ರಾವ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಅನಂತ್ ನಾಗ್, ರಕ್ಷಿತ್ ಶೆಟ್ಟಿ, ಶೃತಿ ಹರಿಹರನ್ ಅಭಿನಯಿಸಿದ್ದರು. ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದ ಹೇಮಂತ್ ರಾವ್, ತಂದೆ-ಮಗನ ಸಂಬಂಧವನ್ನಿಟ್ಟು, ಒಂದು ಭಾವಾನತ್ಮಕ ಚಿತ್ರವನ್ನ ನೀಡಿದ್ದರು.[2016ರ ಗಾಂಧಿನಗರದ ಗಲಾಟೆ ಗಲ್ಲಿಯಲ್ಲಿ ಒಂದು ಸುತ್ತು]

    ದಾಸನ 'ಜಗ್ಗುದಾದ'

    ದಾಸನ 'ಜಗ್ಗುದಾದ'

    ಈ ವರ್ಷ ದರ್ಶನ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿದ ಚಿತ್ರ 'ಜಗ್ಗುದಾದ'. ರಾಘವೇಂದ್ರ ಹೆಗಡೆ ಆಕ್ಷನ್ ಕಟ್ ಹೇಳಿದ್ದ ಈ ಚಿತ್ರ ಔಟ್ ಅಂಡ್ ಔಟ್ ಫ್ಯಾಮಿಲಿ ಪ್ಯಾಕೇಜ್ ಆಗಿತ್ತು. ಡಾನ್ ಪಾತ್ರದಲ್ಲಿ ಅಬ್ಬರಿಸಿದ್ದ ದರ್ಶನ್, ಎಂದಿನಂತೆ ಬಾಕ್ಸ್ ಆಫೀಸ್ ನಲ್ಲಿ ದರ್ಬಾರ್ ಮಾಡಿದ್ದರು. ದರ್ಶನ್ ಗೆ ಚಿತ್ರದಲ್ಲಿ ದೀಕ್ಷಾ ಸೇಠ್, ಸೃಜನ್ ಲೋಕೇಶ್, ರವಿಶಂಕರ್ ಸೇರಿದಂತೆ ಹಲವರು ಸಾಥ್ ಕೊಟ್ಟಿದ್ದರು.[2016ರ ಗಾಂಧಿನಗರದ ಗಲಾಟೆ ಗಲ್ಲಿಯಲ್ಲಿ ಒಂದು ಸುತ್ತು]

    'ಕಲ್ಪನಾ-2'

    'ಕಲ್ಪನಾ-2'

    ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿದ್ದ 'ಕಲ್ಪನಾ-2' ಕನ್ನಡ ಪ್ರೇಕ್ಷಕರಿಗೆ ಅಷ್ಟಾಗಿ ಇಷ್ಟವಾಗದಿದ್ದರೂ, ಉಪ್ಪಿಯ ಅಭಿನಯಕ್ಕೆ ಬೋಲ್ಡ್ ಆಗಿದ್ದರು. ತಮಿಳಿನ 'ಕಾಂಚನ-2' ಚಿತ್ರದ ರೀಮೇಕ್ ಆಗಿದ್ದ ಈ ಚಿತ್ರದಲ್ಲಿ ಉಪ್ಪಿ ತಮ್ಮ ರಿಯಲ್ ಆಕ್ಟಿಂಗ್ ಮೂಲಕ ಪ್ರೇಕ್ಷಕರನ್ನ ರಂಜಿಸಿದ್ದರು. ಅನಂತ್ ರಾಜು ನಿರ್ದೇಶನದ ಈ ಚಿತ್ರದಲ್ಲಿ ಉಪೇಂದ್ರಗೆ ಪ್ರಿಯಾಮಣಿ, ಮತ್ತು ಆವಂತಿಕಾ ಶೆಟ್ಟಿ ನಾಯಕಿಯರಾಗಿ ಸಾಥ್ ಕೊಟ್ಟಿದ್ದರು.

    'ಕೋಟಿಗೊಬ್ಬ-2'

    'ಕೋಟಿಗೊಬ್ಬ-2'

    ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ-2' ವರ್ಷದ ಬಿಗ್ಗೇಸ್ಟ್ ಹಿಟ್ ಸಿನಿಮಾ. ಕಿಚ್ಚನ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದ್ದ 'ಕೋಟಿಗೊಬ್ಬ-2', ಸೂಪರ್ ಸೆಂಚುರಿ ಬಾರಿಸಿತ್ತು. ಕೆ ಎಸ್ ರವಿಕುಮಾರ್ ಆಕ್ಷನ್ ಕಟ್ ಹೇಳಿದ್ದ ಈ ಚಿತ್ರ, ಕನ್ನಡದಲ್ಲಿ ಮಾತ್ರವಲ್ಲದೇ, ತೆಲುಗು ಹಾಗೂ ತಮಿಳಿನಲ್ಲೂ ತೆರೆಕಂಡಿತ್ತು. ಸುದೀಪ್ ಜೊತೆಯಲ್ಲಿ ನಿತ್ಯಾ ಮೆನನ್, ಚಿಕ್ಕಣ್ಣ, ರವಿಶಂಕರ್ ಸೇರಿದಂತೆ ಹಲವರು ಅಭಿನಯಿಸಿದ್ದರು.

    'ನೀರ್ ದೋಸೆ'

    'ನೀರ್ ದೋಸೆ'

    ನವರಸ ನಾಯಕ ಜಗ್ಗೇಶ್, ದತ್ತಣ್ಣ, ಹರಿಪ್ರಿಯಾ, ಸುಮನ ರಂಗನಾಥ್ ಅಭಿನಯಸಿದ್ದ 'ನೀರ್ ದೋಸೆ' ಈ ವರ್ಷದ ಸೂಪರ್ ಹಿಟ್ ಸಿನಿಮಾ. ವಿಜಯ ಪ್ರಸಾದ್ ನಿರ್ದೇಶನ ಮಾಡಿದ್ದ ಈ ಚಿತ್ರ ಕನ್ನಡ ಕಲಾರಸಿಕರ ಮನಮುಟ್ಟಿತ್ತು. ಜಗ್ಗೇಶ್, ಹರಿಪ್ರಿಯಾ ಅವರ ಅಭಿನಯಕ್ಕೆ ಪ್ರೇಕ್ಷಕರು ಚಪ್ಪಾಳೆ ಹೊಡೆದಿದ್ದರು.

    'ದೊಡ್ಮನೆ ಹುಡ್ಗ'

    'ದೊಡ್ಮನೆ ಹುಡ್ಗ'

    ಪುನೀತ್ ರಾಜ್ ಕುಮಾರ್ ಈ ವರ್ಷ ಅಭಿನಯದ ಮತ್ತೊಂದು ಚಿತ್ರ 'ದೊಡ್ಮನೆ ಹುಡ್ಗ'. ಸ್ಯಾಂಡಲ್ ವುಡ್ ನ ಸ್ಟಾರ್ ಕಲಾವಿದರನ್ನ ಹೊಂದಿದ್ದ ಈ ಚಿತ್ರ, ಒಂದೊಳ್ಳೆ ಎಂಟರ್ ಟೈನ್ ಮೆಂಟ್ ಸಿನಿಮಾ. ದುನಿಯಾ ಸೂರಿ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಅಂಬರೀಶ್, ರಾಧಿಕಾ ಪಂಡಿತ್, ರವಿಶಂಕರ್, ಸುಮಲತಾ, ಭಾರತಿ ವಿಷ್ಣುವರ್ಧನ್ ಸೇರಿದಂತೆ ಹಲವರು ತೆರೆ ಹಂಚಿಕೊಂಡಿದ್ದರು

    ಸ್ಟಾರ್ ಗಳ 'ಮುಕುಂದ ಮುರಾರಿ'

    ಸ್ಟಾರ್ ಗಳ 'ಮುಕುಂದ ಮುರಾರಿ'

    ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿದ್ದ 'ಮುಕುಂದ ಮುರಾರಿ' ಈ ವರ್ಷದ ಸರ್ಪ್ರೈಸ್ ಸಿನಿಮಾ. ಇಬ್ಬರು ಸೂಪರ್ ಸ್ಟಾರ್ ಗಳು ಒಟ್ಟಾಗಿ ಕಾಣಿಸಿಕೊಂಡು, ಇಡೀ ಸ್ಯಾಂಡಲ್ ವುಡ್ ಗೆ ಮಸ್ತ್ ಮನರಂಜನೆ ನೀಡಿದ್ದರು.ಹಿಂದಿಯ 'ಓ ಮೈ ಗಾಡ್' ಚಿತ್ರದ ರೀಮೇಕ್ ಆಗಿದ್ದ 'ಮುಕುಂದ ಮುರಾರಿ' ಉಪೇಂದ್ರ ಹಾಗೂ ಸುದೀಪ್ ಮೋಡಿ ಮಾಡಿದ್ದರು. ಈ ಚಿತ್ರವನ್ನ ನಂದಕಿಶೋರ್ ನಿರ್ದೇಶನ ಮಾಡಿದ್ದರು.

    'ಸಂತು ಸ್ಟ್ರೈಟ್ ಫಾರ್ವಾರ್ಡ್'

    'ಸಂತು ಸ್ಟ್ರೈಟ್ ಫಾರ್ವಾರ್ಡ್'

    ರಾಕಿಂಗ್ ಸ್ಟಾರ್ ಯಶ್, ಈ ವರ್ಷ ಮಾಡಿದ್ದು ಒಂದೆ ಚಿತ್ರ 'ಸಂತು ಸ್ಟ್ರೈಟ್ ಫಾರ್ವಾರ್ಡ್'. ಲವರ್ ಬಾಯ್ ಇಮೇಜ್ ಜೊತೆ ಮಾಸ್ ಎಂಟರ್ ಟೈನ್ ಮೆಂಟ್ ನೀಡಿದ್ದ ಯಶ್ ಬಾಕ್ಸ್ ಆಫೀಸ್ ನಲ್ಲಿ ತಮ್ಮ ಖದರ್ ತೋರಿಸಿದ್ರು. ಮಹೇಶ್ ರಾವ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ನಿರೀಕ್ಷೆಯಂತೆ ರಾಧಿಕಾ ಪಂಡಿತ್ ಹಾಗೂ ಯಶ್ ಜುಗಲ್ ಬಂದಿ ಗೆದ್ದು ಬೀಗಿತ್ತು.

    ಭಟ್ಟರ 'ದನಕಾಯೋನು'

    ಭಟ್ಟರ 'ದನಕಾಯೋನು'

    ದುನಿಯಾ ವಿಜಯ್ ಅಭಿನಯದ 'ದನಕಾಯೋನು' ಈ ವರ್ಷ ವಿಭಿನ್ನ ಸಿನಿಮಾ. ಹಳ್ಳಿ ಸೊಗಡಿನ ಕಥಾ ಹಂದರವನ್ನ ಹೊಂದಿದ್ದ 'ದನಕಾಯೋನು' ಭಟ್ಟರ ಶೈಲಿಯಲ್ಲಿ ತೆರೆಮೇಲೆ ಮೂಡಿತ್ತು. ಯೋಗರಾಜ್ ಭಟ್ಟರು ಆಕ್ಷನ್ ಕಟ್ ಹೇಳಿದ್ದ ಈ ಚಿತ್ರದಲ್ಲಿ ಪ್ರಿಯಾಮಣಿ, ರಂಗಾಯಣ ರಘು ಸೇರಿದಂತೆ ಹಲವರು ಕಾಣಿಸಿಕೊಂಡಿದ್ದರು.

    ಜಬರ್ ದಸ್ತ್ 'ಜಾಗ್ವಾರ್'

    ಜಬರ್ ದಸ್ತ್ 'ಜಾಗ್ವಾರ್'

    ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ್ ಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಈ ವರ್ಷ ಚಂದನವನಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟರು. 'ಜಾಗ್ವಾರ್' ಚಿತ್ರದ ಮೂಲಕ ಜಬರ್ ದಸ್ತ್ ಒಪನಿಂಗ್ ಮಾಡಿದ ನಿಖಿಲ್, ಚೊಚ್ಚಲ ಚಿತ್ರದಲ್ಲೇ ಡ್ಯಾನ್ಸ್, ಫೈಟ್, ಆಕ್ಟಿಂಗ್ ಮೂಲಕ ಭರವಸೆ ಮೂಡಿಸಿದರು.

    ಭಯಾನಕ 'ಮಮ್ಮಿ ಸೇವ್ ಮಿ'

    ಭಯಾನಕ 'ಮಮ್ಮಿ ಸೇವ್ ಮಿ'

    ವರ್ಷದ ಕೊನೆಯಲ್ಲಿ ಗಮನ ಸೆಳೆದ ಚಿತ್ರ 'ಮಮ್ಮಿ ಸೇವ್ ಮಿ'. ಪ್ರಿಯಾಂಕಾ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಹಾರರ್ ಚಿತ್ರ, ನೋಡುಗರನ್ನ ಭಯಪಡಿಸಿದ್ದರು. ಯುವ ನಿರ್ದೇಶಕ ಲೋಹಿತ್ ಎಚ್ ಚೊಚ್ಚಲ ಚಿತ್ರದಲ್ಲೇ ಗಾಂಧಿನಗರದಲ್ಲಿ ಮೋಡಿ ಮಾಡಿದರು. ಈ ಮೂಲಕ ವರ್ಷಾಂತ್ಯಕ್ಕೆ 'ಮಮ್ಮಿ ಸೇವ್ ಮಿ' ಅತ್ಯಂತ ಅದ್ಭುತ ಸಿನಿಮಾವಾಯಿತು.

    ಇವುಗಳಲ್ಲಿ ನಿಮ್ಮ ಆಯ್ಕೆ ಯಾವುದು?

    ಇವುಗಳಲ್ಲಿ ನಿಮ್ಮ ಆಯ್ಕೆ ಯಾವುದು?

    ಈ ಎಲ್ಲ ಚಿತ್ರಗಳು ಈ ವರ್ಷ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿ, ಪ್ರೇಕ್ಷಕರಿಂದಲೂ ಶಬ್ಬಾಶ್ ಎನಿಸಿಕೊಂಡಿತ್ತು. ಹಾಗಾದ್ರೆ, ಈ ಎಲ್ಲ ಸಿನಿಮಾಗಳಲ್ಲಿ ನಿಮ್ಮ ಆಯ್ಕೆ ಯಾವುದು ಅಂತ ಕಾಮೆಂಟ್ ಮಾಡಿ ತಿಳಿಸಿ...[2016 ರಲ್ಲಿ ಭರವಸೆ ಮೂಡಿಸಿದ ಯುವನಟ ಯಾರು?]

    English summary
    Kannada Movies 2016 yearly report includes Box Office Success and popularity meter rate. Here is the Top best movies of 2016.
    Thursday, December 29, 2016, 9:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X