2018ರ ಅತ್ಯುತ್ತಮ ಕನ್ನಡ ಸಿನಿಮಾ ಯಾವುದು?

Recommended Video

2018 ರ ಸೂಪರ್ ಹಿಟ್ ಕನ್ನಡ ಸಿನಿಮಾಗಳು | FILMIBEAT KANNADA

ಈ ವರ್ಷ ಮುಗಿಯುತ್ತಿದೆ. 17 ದಿನಗಳನ್ನ ಕಳೆದರೆ ಗೋಡೆಯ ಮೇಲೆ ಹೊಸ ಕ್ಯಾಲೆಂಡರ್ ಬರುತ್ತದೆ. ಹೊಸ ದಿನಗಳು ಶುರು ಆಗುತ್ತದೆ. ಹಾಗೆಯೇ, ಕನ್ನಡ ಚಿತ್ರರಂಗಕ್ಕೆ ಹೊಸ ಹೊಸ ಸಿನಿಮಾಗಳು ಬರುತ್ತವೆ.

ಮುಂದಿನ ವರ್ಷಕ್ಕೆ ಹೋಗುವ ಮುನ್ನ ಈ ವರ್ಷದ ಸಿನಿಮಾಗಳ ಬಗ್ಗೆ ಒಂದು ಸುತ್ತು ನೋಡಿಕೊಂಡು ಬರೋಣ. ಈ ವರ್ಷ ಕನ್ನಡದಲ್ಲಿ ಎಷ್ಟು ಹಿಟ್, ಎಷ್ಟು ಫ್ಲಾಪ್ ಏನೇ ಆಗಿರಬಹುದು ಆದರೆ, ಈ ಬಾರಿ ಸ್ಯಾಂಡಲ್ ವುಡ್ ಹೊಸ ದಾಖಲೆ ಬರೆದಿದೆ. ಈ ವರ್ಷ 230 + ಸಿನಿಮಾಗಳು ಬಿಡುಗಡೆಯಾಗಿವೆ. ವಿಶೇಷ ಅಂದರೆ, 80 ವರ್ಷದ ಕನ್ನಡ ಚಿತ್ರರಂಗದಲ್ಲಿ ಇತಿಹಾಸಲ್ಲಿ ಇಷ್ಟು ಸಂಖ್ಯೆಯ ಸಿನಿಮಾ ರಿಲೀಸ್ ಆಗಿದ್ದು, ಇದೇ ಮೊದಲ ಬಾರಿಗೆ.

ಕಳೆದ ವರ್ಷ 190+ ಸಿನಿಮಾಗಳು ಬಿಡುಗಡೆಯಾಗಿದ್ದು, ಈ ವರ್ಷ ಆ ಸಂಖ್ಯೆ ಮೀರಿದೆ. ಸ್ವಮೇಕ್ - ರಿಮೇಕ್, ಕಮರ್ಶಿಯಲ್ - ಕಲಾತ್ಮಕ, ಹಿಟ್ - ಫ್ಲಾಪ್, ಸ್ಟಾರ್ - ಹೊಸಬರು ಹೀಗೆ ಎಲ್ಲ ರೀತಿಯ ಸಿನಿಮಾಗಳು ಈ ವರ್ಷ ಬಂದು ಹೋಗಿವೆ.

ಇವುಗಳಲ್ಲಿ 'ಟಗರು' ಹಾಗೂ 'ಅಯೋಗ್ಯ' ಸಿನಿಮಾ ನೂರು ದಿನ ಪೂರೈಸಿ ವರ್ಷದ ಸೂಪರ್ ಹಿಟ್ ಸಿನಿಮಾಗಳಾಗಿವೆ. ಅಂದಹಾಗೆ, ಈ ವರ್ಷದ ಸಿನಿಮಾಗಳ ವಿಶೇಷ ವರದಿ ಮುಂದಿದೆ ಓದಿ...

'ಟಗರು' ವರ್ಷದ ಬಿಗ್ ಹಿಟ್

'ಟಗರು' ವರ್ಷದ ಬಿಗ್ ಹಿಟ್

ನಟ ಶಿವರಾಜ್ ಕುಮಾರ್ ತಾವು ಸೆಂಚುರಿ ಸ್ಟಾರ್ ಎನ್ನುವುದನ್ನ ಮತ್ತೆ ಸಾಬೀತು ಮಾಡಿದ್ದಾರೆ. ಅವರ 'ಟಗರು' ಈ ವರ್ಷದ ಬಿಗ್ ಹಿಟ್ ಸಿನಿಮಾವಾಗಿದೆ. ಬೆಂಗಳೂರಿನ ಮುಖ್ಯ ಚಿತ್ರಮಂದಿರದಲ್ಲಿ ಸಿನಿಮಾ 25 ವಾರ ಭದ್ರವಾಗಿ ಈ ಚಿತ್ರ ನಿಂತಿತ್ತು. ನಿರ್ದೇಶಕ ಸೂರಿ ಮತ್ತೆ ತಮ್ಮ 'ರಾ' ಸಿನಿಮಾ ಮೂಲಕ ರಾರಾಜಿಸಿದ್ದರು. ಮೇಕಿಂಗ್, ಸ್ಕ್ರೀನ್ ಪ್ಲೇ ಹಾಗೂ ಧನಂಜಯ್ ನಟನೆ ಸಿನಿಮಾದ ಗೆಲುವಿನಲ್ಲಿ ದೊಡ್ಡ ಪಾಲು ಹೊಂದಿತ್ತು.

ಶತಕ ಬಾರಿಸಿದ 'ಅಯೋಗ್ಯ'

ಶತಕ ಬಾರಿಸಿದ 'ಅಯೋಗ್ಯ'

ಸತೀಶ್ ನೀನಾಸಂ ಕೆರಿಯರ್ ನಲ್ಲಿ ಬಂದ ಹಿಟ್ ಸಿನಿಮಾಗಳ ಸಾಲಿಗೆ 'ಅಯೋಗ್ಯ' ಕೂಡ ಸೇರಿಕೊಂಡಿದೆ. ಈ ಸಿನಿಮಾ ನೂರು ದಿನ ಯಶಸ್ವಿ ಪ್ರದರ್ಶನ ಕಂಡಿದೆ. ನಿರ್ದೇಶಕ ಮಹೇಶ್ ಕುಮಾರ್ ಹೇಳಿದ ಮಂಡ್ಯ ಕಥೆಗೆ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ ಹೊಡೆದರು. 'ಅಯೋಗ್ಯ' ಒಳ್ಳೆಯ ಮನರಂಜನೆಯ ಸಿನಿಮಾವಾಯ್ತು.

ನಕ್ಕು ನಗಿಸಿದ 'ರಾಂಬೋ 2'

ನಕ್ಕು ನಗಿಸಿದ 'ರಾಂಬೋ 2'

ಈ ವರ್ಷದ ಬೆಸ್ಟ್ ಎಂಟರ್ಟೈನಮೆಂಟ್ ಸಿನಿಮಾ 'ರಾಂಬೋ 2' ಎಂದು ಹೇಳಬಹುದು. ಯಾಕಂದ್ರೆ, ಟಿಕೆಟ್ ತೆಗೆದುಕೊಂಡು ಹೋದ ಪ್ರೇಕ್ಷಕರಿಗೆ ಈ ಸಿನಿಮಾ ಮೋಸ ಮಾಡಲಿಲ್ಲ. ಪ್ರತಿ ದೃಶ್ಯ ಕೂಡ ನಗಿಸಿತ್ತು. ಶರಣ್, ಚಿಕ್ಕಣ್ಣ ಕಾಮಿಡಿ, ಆಶಿಕಾ ವೈಯಾರ ಅರ್ಜುನ್ ಜನ್ಯ ಸಂಗೀತ ಸಿನಿಮಾಗೆ ದೊಡ್ಡ ಪ್ಲಾಸ್ ಆಗಿತ್ತು.

'ದಿ ವಿಲನ್' : ದೊಡ್ಡ ಸಿನಿಮಾ, ದೊಡ್ಡ ವೈಪಲ್ಯ

'ದಿ ವಿಲನ್' : ದೊಡ್ಡ ಸಿನಿಮಾ, ದೊಡ್ಡ ವೈಪಲ್ಯ

'ದಿ ವಿಲನ್' ಸಿನಿಮಾ ಈ ವರ್ಷ ದೊಡ್ಡ ನಿರೀಕ್ಷೆ ಹುಟ್ಟಿಸಿದ ಸಿನಿಮಾಗಳಲ್ಲಿ ನಂಬರ್ 1 ಸ್ಥಾನದಲ್ಲಿ ಇತ್ತು. ಆದರೆ, ಸಿನಿಮಾ ರಿಲೀಸ್ ಆದ ಬಳಿಕ ಬಂದ ಪ್ರತಿಕ್ರಿಯೆ ನೆಗೆಟಿವ್ ಆಗಿತ್ತು. ಪ್ರೇಕ್ಷಕರು ಹಿಂದೆ ಮುಂದೆ ನೋಡದೆ ಸಿನಿಮಾವನ್ನ ಪಕ್ಕಕ್ಕೆ ಇಟ್ಟರು. ಶಿವರಾಜ್ ಕುಮಾರ್ ಹಾಗೂ ಸುದೀಪ್ ಒಟ್ಟಿಗೆ ನಟಿಸಿದ್ದರೂ, ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಕರೆದುಕೊಂಡು ಬರುವುದು ಕಷ್ಟವಾಗಿ ಹೋಗ್ತು.

'ಗುಳ್ಟು' ಪ್ರಯೋಗ

'ಗುಳ್ಟು' ಪ್ರಯೋಗ

ಈ ವರ್ಷ ಬಂದ ಒಂದೊಳ್ಳೆ ಪ್ರಯೋಗದ ಸಿನಿಮಾ 'ಗುಳ್ಟು'. ಕನ್ನಡದ ಮಟ್ಟಿಗೆ ತೀರ ಹೊಸದಾದ ಪ್ರಯತ್ನ ಚಿತ್ರದಲ್ಲಿ ಇತ್ತು. ಪ್ರೇಕ್ಷಕರು ಸಹ ಸಿನಿಮಾದ ಶ್ರಮಕ್ಕೆ ಬೆಲೆ ಕೊಟ್ಟರು. ಸಿನಿಮಾ ಕೆಲವು ಸೆಂಟರ್ ಗಳಲ್ಲಿ ನೂರು ದಿನಕ್ಕೂ ಹೆಚ್ಚು ಕಾಲ ಓಡಿತು. ಹೊಸತನವನ್ನ ಕನ್ನಡದ ಸಿನಿಮಾಭಿಮಾನಿಗಳು ಮೆಚ್ಚಿದರು.

ನೆನಪಿನಲ್ಲಿ ಉಳಿಯುವ 'ಅಂಬಿ ನಿಂಗ್ ವಯಸ್ಸಾಯ್ತೋ'

ನೆನಪಿನಲ್ಲಿ ಉಳಿಯುವ 'ಅಂಬಿ ನಿಂಗ್ ವಯಸ್ಸಾಯ್ತೋ'

'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ದೊಡ್ಡ ಹಿಟ್ ಆಗದೆ ಇದ್ದರೂ, ಈ ಸಿನಿಮಾ ಸದಾ ಕನ್ನಡಿಗರ ಮನಸ್ಸಿನಲ್ಲಿ ಉಳಿಯುವ ಹಾಗಾಯ್ತು. ಕಾರಣ, ರೆಬಲ್ ಸ್ಟಾರ್ ಅಂಬರೀಶ್ ನಟನೆಯ ಕೊನೆಯ ಸಿನಿಮಾ ಇದಾಗಿತ್ತು. ಒಳ್ಳೆಯ ಕಥೆ, ಒಳ್ಳೆಯ ಸಿನಿಮಾ ಆದರೂ ಯಾಕೆ ಚಿತ್ರ ದೊಡ್ಡ ಮಟ್ಟದಲ್ಲಿ ಗೆಲ್ಲಲಿಲ್ಲ ಎನ್ನುವುದಕ್ಕೆ ಉತ್ತರವಿಲ್ಲ.

ಒಳ್ಳೆಯ ಪ್ರಯತ್ನಕ್ಕೆ ದೊಡ್ಡ ಚಪ್ಪಾಳೆ

ಒಳ್ಳೆಯ ಪ್ರಯತ್ನಕ್ಕೆ ದೊಡ್ಡ ಚಪ್ಪಾಳೆ

'ಇರುವುದೆಲ್ಲವ ಬಿಟ್ಟು', 'ಅಮ್ಮ ಐ ಲವ್ ಯು', 'ಕಥೆಯೊಂದು ಶುರುವಾಗಿದೆ', 'ಕನ್ನಡಕ್ಕಾಗಿ ಒಂದನ್ನು ಒತ್ತಿ', 'ಆ ಕರಾಳ ರಾತ್ರಿ', 'ಕೃಷ್ಣ ತುಳಸಿ', 'ದಿ ಟೆರರಿಸ್ಟ್' ಚಿತ್ರಗಳು ಈ ವರ್ಷದ ಒಳ್ಳೆಯ ಪ್ರಯತ್ನಗಳು. ಅದರಲ್ಲಿ ಕೆಲ ಸಿನಿಮಾಗಳು ಹಿಟ್ ಆಗಿರಬಹುದು, ಕೆಲವು ಫ್ಲಾಪ್ ಆಗಿರಬಹುದು ಆದರೆ, ಈ ಚಿತ್ರಗಳ ಪ್ರಯತ್ನಕ್ಕೆ ದೊಡ್ಡ ಚಪ್ಪಾಳೆ ಬರಬೇಕು.

ಇದ್ದಿದ್ದು ನಿರೀಕ್ಷೆ, ಆಗಿದ್ದು ನಿರಾಸೆ

ಇದ್ದಿದ್ದು ನಿರೀಕ್ಷೆ, ಆಗಿದ್ದು ನಿರಾಸೆ

'ತಾಯಿಗೆ ತಕ್ಕ ಮಗ', 'ಕನಕ', 'ಪ್ರೇಮ ಬರಹ', 'ಲೈಫ್ ಜೊತೆಗೆ ಒಂದ್ ಸೆಲ್ಫಿ', 'ಬಕಾಸುರ', 'ವಿಕ್ಟರಿ 2', 'ರಾಜರಥ', 'ಬೃಹಸ್ಪತಿ', 'ರಾಜು ಕನ್ನಡ ಮೀಡಿಯಂ', 'ಭೈರವಗೀತ', 'ಹಂಬಲ್ ಪೊಲಿಟೀಷಿಯನ್ ನೊಗರಾಜ್' ಈ ಸಿನಿಮಾಗಳ ಬಗ್ಗೆ ಒಂದು ಮಟ್ಟಿಗೆ ನಂಬಿಕೆ ಇತ್ತು. ಆದರೆ, ರಿಲೀಸ್ ಆದ ಮೇಲೆ ನಿರಾಸೆ ಮಾಡಿ ಬಿಟ್ಟವು.

'ಕೆಜಿಎಫ್' ಕ್ರೇಜ್

'ಕೆಜಿಎಫ್' ಕ್ರೇಜ್

ಈ ಎಲ್ಲ ಸಿನಿಮಾಗಳ ಜೊತೆಗೆ ಯಶ್ ಕನಸಿನ 'ಕೆಜಿಎಫ್' ಕೂಡ ಈ ವರ್ಷ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಕನ್ನಡ ಚಿತ್ರರಂಗವನ್ನು ಮತ್ತೊಂದು ಲೆವೆಲ್ ಗೆ ಕರೆದುಕೊಂಡು ಹೋಗಿದೆ. 'ಕೆಜಿಎಫ್' ಸೃಷ್ಟಿಸಿರುವ ಕ್ರೇಜ್ ನೋಡುತ್ತಿದ್ದರೆ, ದೊಡ್ಡ ಮಟ್ಟದ ಸಕ್ಸಸ್ ಆಗುವ ಲಕ್ಷಣ ಕಾಣುತ್ತಿದೆ.

More from Filmibeat

English summary
Kannada Movies 2018 yearly report includes Box Office Success and popularity meter rate. Here is the Top best movies of 2018.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X