ಓದುಗ ದೊರೆಗಳ ಅಂತಿಮ ತೀರ್ಪು: 2016ರ 'ಅತ್ಯುತ್ತಮ ನಟ' ದರ್ಶನ್.!

By Harshitha

2016ನೇ ಸಾಲಿನ ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಹಾಸ್ಯ ನಟ ಸೇರಿದಂತೆ ಒಟ್ಟು ಒಂಬತ್ತು ವಿಭಾಗಗಳಲ್ಲಿ ನಿಮ್ಮ ಫಿಲ್ಮಿಬೀಟ್ ಕನ್ನಡ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ಆಯೋಜಿಸಿತ್ತು. ಆ ಮೂಲಕ ಆನ್ ಲೈನ್ ಮತಗಟ್ಟೆಯಲ್ಲಿ ತಮ್ಮ ನೆಚ್ಚಿನ ತಾರೆಯರಿಗೆ ಮತ ಹಾಕುವಂತೆ ಓದುಗರಲ್ಲಿ 'ಫಿಲ್ಮಿಬೀಟ್ ಕನ್ನಡ' ಕೋರಿತ್ತು.

ತಮ್ಮ ನೆಚ್ಚಿನ ನಟ-ನಟಿಯರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ತನ್ನ ಕೋಟ್ಯಾಂತರ ಓದುಗ ದೊರೆಗಳಿಗೆ 'ಫಿಲ್ಮಿಬೀಟ್ ಕನ್ನಡ' ನೀಡಿದ್ದರಿಂದ, ಬಹಳ ಬಿರುಸಿನಿಂದ ಈ ಮತದಾನ ಪ್ರಕ್ರಿಯೆ ನಡೆಯಿತು. ಸಾಮಾಜಿಕ ಜಾಲತಾಣಗಳಲ್ಲಿ ತಾರೆಯರು ಹಾಗೂ ತಾರೆಯರ ಫ್ಯಾನ್ ಕ್ಲಬ್ ಸ್ವಯಂ ಪ್ರೇರಿತವಾಗಿ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ಪೇಜ್ ನ ಶೇರ್ ಮಾಡಿಕೊಂಡು ವೋಟಿಂಗ್ ಪ್ರಕ್ರಿಯೆಗೆ ಉತ್ಸಾಹ ತುಂಬಿದರು.[ಓದುಗರ ತೀರ್ಮಾನ: 2016ರ 'ಅತ್ಯುತ್ತಮ ನಟಿ' ಬುಲ್ ಬುಲ್ ಬೆಡಗಿ ರಚಿತಾ.!]

ಸುಮಾರು ಒಂದು ತಿಂಗಳ ಕಾಲ ಈ ಮತದಾನ ಪ್ರಕ್ರಿಯೆ ನಡೆದು, ಈಗ ಅಂತಿಮ ಫಲಿತಾಂಶ ಹೊರ ಹಾಕುವ ಸಮಯ ಬಂದಿದೆ. ಓದುಗ ಪ್ರಭುಗಳ ಇಚ್ಛೆ ಪ್ರಕಾರ, 2016ರ 'ಅತ್ಯುತ್ತಮ ನಟ' ಆಗಿ ಹೊರಹೊಮ್ಮಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್.!

2016ರ ಬೆಸ್ಟ್ ಆಕ್ಟರ್ ದರ್ಶನ್.!

2016ರ ಬೆಸ್ಟ್ ಆಕ್ಟರ್ ದರ್ಶನ್.!

'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಓದುಗರ ಆಯ್ಕೆ ಪ್ರಕಾರ, 2016ರ ಅತ್ಯುತ್ತಮ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್.[ಓದುಗ ಪ್ರಭುಗಳ ತೀರ್ಪು: 2016ರ 'ಅತ್ಯುತ್ತಮ ನಿರ್ದೇಶಕ' ವಿ.ರವಿಚಂದ್ರನ್.!]

ದರ್ಶನ್ ಗೆ ಅತಿ ಹೆಚ್ಚು ವೋಟ್ಸ್ ಪ್ರಾಪ್ತಿ.!

ದರ್ಶನ್ ಗೆ ಅತಿ ಹೆಚ್ಚು ವೋಟ್ಸ್ ಪ್ರಾಪ್ತಿ.!

ನಾಮ ನಿರ್ದೇಶನಗೊಂಡಿದ್ದ 16 ನಟರ ಪೈಕಿ 'ಜಗ್ಗುದಾದಾ' ಚಿತ್ರದ ಅಭಿನಯಕ್ಕಾಗಿ ನಿಮ್ಮೆಲ್ಲರ ಪ್ರೀತಿಯ 'ದಾಸ' ದರ್ಶನ್ ರವರು 38% ರಷ್ಟು ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.[ಸಿನಿಪ್ರಿಯರ ಜಡ್ಜ್ ಮೆಂಟ್: 2016ರ ಅತ್ಯುತ್ತಮ ಕಮರ್ಶಿಯಲ್ ಚಿತ್ರ 'ಜಗ್ಗುದಾದಾ'.!]

ದರ್ಶನ್ ಗೆ ಸಿಕ್ಕ ಮತಗಳು ಎಷ್ಟು.?

ದರ್ಶನ್ ಗೆ ಸಿಕ್ಕ ಮತಗಳು ಎಷ್ಟು.?

ಬರೋಬ್ಬರಿ 1,55,535 ಜನರು 'ಅತ್ಯುತ್ತಮ ನಟ-2016' ಆಯ್ಕೆ ಮಾಡಲು ಮತ ಚಲಾಯಿಸಿದ್ದಾರೆ. ಇವರ ಪೈಕಿ ಒಟ್ಟು 59,388 ಜನರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರ ವೋಟ್ ಮಾಡಿದ್ದಾರೆ.[ಓದುಗರ ಆಯ್ಕೆ: 2016 ರ 'ಅತ್ಯುತ್ತಮ ಹಾಸ್ಯನಟ' ಗರಿ ಸಾಧು ಕೋಕಿಲ ಮುಡಿಗೆ]

ತೀವ್ರ ಪೈಪೋಟಿ ನೀಡಿದ ಪವರ್ ಸ್ಟಾರ್

ತೀವ್ರ ಪೈಪೋಟಿ ನೀಡಿದ ಪವರ್ ಸ್ಟಾರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 29% ರಷ್ಟು ಮತಗಳನ್ನು ತಮ್ಮದಾಗಿಸಿಕೊಂಡು ಎರಡನೇ ಸ್ಥಾನ ಪಡೆದಿದ್ದಾರೆ. ಒಟ್ಟು 44,472 ಜನರು ಪುನೀತ್ ರಾಜ್ ಕುಮಾರ್ ಗಾಗಿ ಮತ ಚಲಾವಣೆ ಮಾಡಿದ್ದಾರೆ.[ಓದುಗರ ನೆಚ್ಚಿನ ಶ್ರದ್ಧಾ ಶ್ರೀನಾಥ್ ಗೆ 'ಉದಯೋನ್ಮುಖ ನಟಿ-2016' ಪ್ರಶಸ್ತಿ]

ಮೂರನೇ ಸ್ಥಾನದಲ್ಲಿ ಉಪ್ಪಿ, ನಾಲ್ಕರಲ್ಲಿ ಸುದೀಪ್

ಮೂರನೇ ಸ್ಥಾನದಲ್ಲಿ ಉಪ್ಪಿ, ನಾಲ್ಕರಲ್ಲಿ ಸುದೀಪ್

17,866 ಮತಗಳನ್ನು ಪಡೆದು ಉಪೇಂದ್ರ ಮೂರನೇ ಸ್ಥಾನ ಪಡೆದಿದ್ದರೆ, ಕಿಚ್ಚ ಸುದೀಪ್ 14,555 ಮತಗಳನ್ನು ಪಡೆದು ನಾಲ್ಕನೇ ಸ್ಥಾನ ಕಾಯ್ದುಕೊಂಡಿದ್ದಾರೆ.[ಓದುಗರ ಅಭಿಮತ: 2016ರ ಉದಯೋನ್ಮುಖ ನಟ 'ಗಡ್ಡಪ್ಪ']

ಐದರಲ್ಲಿ ಯಶ್, ಆರರಲ್ಲಿ ಶಿವಣ್ಣ.!

ಐದರಲ್ಲಿ ಯಶ್, ಆರರಲ್ಲಿ ಶಿವಣ್ಣ.!

8096 ಮತಗಳನ್ನು ಪಡೆದು ಯಶ್ ಐದನೇ ಸ್ಥಾನದಲ್ಲಿ ಇದ್ದರೆ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 3748 ಮತಗಳನ್ನು ಪಡೆದು ಆರನೇ ಸ್ಥಾನದಲ್ಲಿ ಇದ್ದಾರೆ.[ಓದುಗರು ಮೆಚ್ಚಿದ ಅರ್ಜುನ್ ಜನ್ಯಗೆ 'ಅತ್ಯುತ್ತಮ ಸಂಗೀತ ನಿರ್ದೇಶಕ' ಪ್ರಶಸ್ತಿ.!]

ನಂತರದ ಸ್ಥಾನಗಳು....

ನಂತರದ ಸ್ಥಾನಗಳು....

ಏಳನೇ ಸ್ಥಾನ - ಧನಂಜಯ್ - 2101 ಮತಗಳು
ಎಂಟನೇ ಸ್ಥಾನ - ರಕ್ಷಿತ್ ಶೆಟ್ಟಿ - 1960 ಮತಗಳು
ಒಂಬತ್ತನೇ ಸ್ಥಾನ - ಗಣೇಶ್ - 1201 ಮತಗಳು
ಹತ್ತನೇ ಸ್ಥಾನ - ಜಗ್ಗೇಶ್ - 532 ಮತಗಳು
ಹನ್ನೊಂದನೇ ಸ್ಥಾನ - ದುನಿಯಾ ವಿಜಯ್ - 419 ಮತಗಳು
ಹನ್ನೆರಡನೇ ಸ್ಥಾನ - ವಿಜಯ್ ರಾಘವೇಂದ್ರ - 357 ಮತಗಳು
ಹದಿಮೂರನೇ ಸ್ಥಾನ - ಅರ್ಜುನ್ ಸರ್ಜಾ - 311 ಮತಗಳು
ಹದಿನಾಲ್ಕನೇ ಸ್ಥಾನ - ಶರಣ್ - 251 ಮತಗಳು
ಹದಿನೈದನೇ ಸ್ಥಾನ - ಅಜಯ್ ರಾವ್ - 167 ಮತಗಳು
ಹದಿನಾರನೇ ಸ್ಥಾನ - ಅವಿನಾಶ್ ನರಸಿಂಹರಾಜು - 111 ಮತಗಳು

ಮತದಾನ ನಡೆದಿದ್ದು ಯಾವಾಗ?

ಮತದಾನ ನಡೆದಿದ್ದು ಯಾವಾಗ?

'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ನಡೆಸಿದ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ಡಿಸೆಂಬರ್ ತಿಂಗಳಿನಲ್ಲಿ ಪ್ರಾರಂಭಗೊಂಡು ಜನವರಿ 15ಕ್ಕೆ ಮುಕ್ತಾಯವಾಗಿದೆ ಎಂಬುದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ.

ಎಲ್ಲರಿಗೂ ಧನ್ಯವಾದಗಳು

ಎಲ್ಲರಿಗೂ ಧನ್ಯವಾದಗಳು

ಈ ಆನ್ ಲೈನ್ ಮತದಾನದಲ್ಲಿ ಪಾಲ್ಗೊಂಡ ಎಲ್ಲಾ ಮತದಾರ ಬಂಧುಗಳಿಗೂ 'ಫಿಲ್ಮಿಬೀಟ್ ಕನ್ನಡ' ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತದೆ. ಇವರು ಗೆಲ್ಲಬೇಕಿತ್ತು, ಅವರು ಗೆಲ್ಲಬೇಕಿತ್ತು ಎಂದು ಬೇಸರಗೊಳ್ಳಬೇಡಿ... ಮುಂದೆ ಇದೇ ರೀತಿಯ ಸಾಕಷ್ಟು ಆನ್ ಲೈನ್ ಮತದಾನಗಳನ್ನು ಆಯೋಜಿಸಲಾಗುತ್ತದೆ. ಇದು ಮತದಾರರ ಅಂತಿಮ ತೀರ್ಮಾನವೇ ಹೊರತು 'ಫಿಲ್ಮಿಬೀಟ್ ಕನ್ನಡ'ದ ತೀರ್ಪಲ್ಲ ಎಂಬುದನ್ನು ಗಮನಿಸತಕ್ಕದ್ದು. ಮತದಾರರ ತೀರ್ಪನ್ನು 'ಫಿಲ್ಮಿಬೀಟ್ ಕನ್ನಡ' ಗೌರವಿಸುತ್ತದೆ.

More from Filmibeat

English summary
'Best of Sandalwood-2016' Poll Results are out. Kannada Actor Darshan is selected as 'Best Actor-2016'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X