»   » ಓದುಗರ ತೀರ್ಮಾನ: 2016ರ 'ಅತ್ಯುತ್ತಮ ನಟಿ' ಬುಲ್ ಬುಲ್ ಬೆಡಗಿ ರಚಿತಾ.!

ಓದುಗರ ತೀರ್ಮಾನ: 2016ರ 'ಅತ್ಯುತ್ತಮ ನಟಿ' ಬುಲ್ ಬುಲ್ ಬೆಡಗಿ ರಚಿತಾ.!

Posted By:
Subscribe to Filmibeat Kannada

2016ನೇ ಸಾಲಿನ 'ಅತ್ಯುತ್ತಮ ನಟಿ' ಸೇರಿದಂತೆ ಒಟ್ಟು ಒಂಬತ್ತು ವಿಭಾಗಗಳಲ್ಲಿ ನಿಮ್ಮ ಫಿಲ್ಮಿಬೀಟ್ ಕನ್ನಡ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ಆಯೋಜಿಸಿತ್ತು. ಆ ಮೂಲಕ ಆನ್ ಲೈನ್ ಮತಗಟ್ಟೆಯಲ್ಲಿ ತಮ್ಮ ನೆಚ್ಚಿನ ತಾರೆಯರಿಗೆ ಮತ ಹಾಕುವಂತೆ ಓದುಗರಲ್ಲಿ 'ಫಿಲ್ಮಿಬೀಟ್ ಕನ್ನಡ' ಕೋರಿತ್ತು.

ತಮ್ಮ ನೆಚ್ಚಿನ ನಟ-ನಟಿಯರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ತನ್ನ ಕೋಟ್ಯಾಂತರ ಓದುಗ ದೊರೆಗಳಿಗೆ 'ಫಿಲ್ಮಿಬೀಟ್ ಕನ್ನಡ' ನೀಡಿದ್ದರಿಂದ, ಬಹಳ ಬಿರುಸಿನಿಂದ ಈ ಮತದಾನ ಪ್ರಕ್ರಿಯೆ ನಡೆಯಿತು. ಸಾಮಾಜಿಕ ಜಾಲತಾಣಗಳಲ್ಲಿ ತಾರೆಯರು ಹಾಗೂ ತಾರೆಯರ ಫ್ಯಾನ್ ಕ್ಲಬ್ ಸ್ವಯಂ ಪ್ರೇರಿತವಾಗಿ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ಪೇಜ್ ನ ಶೇರ್ ಮಾಡಿಕೊಂಡು ವೋಟಿಂಗ್ ಪ್ರಕ್ರಿಯೆಗೆ ಉತ್ಸಾಹ ತುಂಬಿದರು.[ಓದುಗ ಪ್ರಭುಗಳ ತೀರ್ಪು: 2016ರ 'ಅತ್ಯುತ್ತಮ ನಿರ್ದೇಶಕ' ವಿ.ರವಿಚಂದ್ರನ್.!]

ಸುಮಾರು ಒಂದು ತಿಂಗಳ ಕಾಲ ಈ ಮತದಾನ ಪ್ರಕ್ರಿಯೆ ನಡೆದು, ಈಗ ಅಂತಿಮ ಫಲಿತಾಂಶ ಹೊರ ಹಾಕುವ ಸಮಯ ಬಂದಿದೆ. ಓದುಗ ಪ್ರಭುಗಳ ಇಚ್ಛೆ ಪ್ರಕಾರ, 2016ರ 'ಅತ್ಯುತ್ತಮ ನಟಿ' ಆಗಿ ಹೊರಹೊಮ್ಮಿರುವುದು 'ಡಿಂಪಲ್ ಕ್ವೀನ್' ರಚಿತಾ ರಾಮ್.!

2016ರ ಬೆಸ್ಟ್ ಆಕ್ಟ್ರೆಸ್ ರಚಿತಾ ರಾಮ್.!

'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಓದುಗರ ಆಯ್ಕೆ ಪ್ರಕಾರ, 2016ರ ಅತ್ಯುತ್ತಮ ನಟಿ 'ಬುಲ್ ಬುಲ್' ಬೆಡಗಿ ರಚಿತಾ ರಾಮ್.[ಸಿನಿಪ್ರಿಯರ ಜಡ್ಜ್ ಮೆಂಟ್: 2016ರ ಅತ್ಯುತ್ತಮ ಕಮರ್ಶಿಯಲ್ ಚಿತ್ರ 'ಜಗ್ಗುದಾದಾ'.!]

ರಚಿತಾ ರಾಮ್ ಗೆ ಅತಿ ಹೆಚ್ಚು ವೋಟ್ಸ್.!

ನಾಮ ನಿರ್ದೇಶನಗೊಂಡಿದ್ದ 12 ನಟಿಯರ ಪೈಕಿ 'ಚಕ್ರವ್ಯೂಹ' ಚಿತ್ರದ ಅಭಿನಯಕ್ಕಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು 39% ರಷ್ಟು ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.[ಓದುಗರ ಆಯ್ಕೆ: 2016 ರ 'ಅತ್ಯುತ್ತಮ ಹಾಸ್ಯನಟ' ಗರಿ ಸಾಧು ಕೋಕಿಲ ಮುಡಿಗೆ]

ರಚಿತಾ ರಾಮ್ ರವರಿಗೆ ಸಿಕ್ಕ ಮತಗಳು ಎಷ್ಟು.?

ಬರೋಬ್ಬರಿ 30,840 ಜನರು 'ಅತ್ಯುತ್ತಮ ನಟಿ-2016' ಆಯ್ಕೆ ಮಾಡಲು ಮತ ಚಲಾಯಿಸಿದ್ದಾರೆ. ಇವರ ಪೈಕಿ ಒಟ್ಟು 11,886 ಜನರು ರಚಿತಾ ರಾಮ್ ಪರ ವೋಟ್ ಮಾಡಿದ್ದಾರೆ.[ಓದುಗರ ನೆಚ್ಚಿನ ಶ್ರದ್ಧಾ ಶ್ರೀನಾಥ್ ಗೆ 'ಉದಯೋನ್ಮುಖ ನಟಿ-2016' ಪ್ರಶಸ್ತಿ]

ತೀವ್ರ ಪೈಪೋಟಿ ನೀಡಿದ ರಾಧಿಕಾ ಪಂಡಿತ್

ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ 19% ರಷ್ಟು ಮತಗಳನ್ನು ತಮ್ಮದಾಗಿಸಿಕೊಂಡು ಎರಡನೇ ಸ್ಥಾನ ಪಡೆದಿದ್ದಾರೆ. ಒಟ್ಟು 5814 ಜನರು ರಾಧಿಕಾ ಪಂಡಿತ್ ಗಾಗಿ ಮತ ಚಲಾವಣೆ ಮಾಡಿದ್ದಾರೆ.[ಓದುಗರ ಅಭಿಮತ: 2016ರ ಉದಯೋನ್ಮುಖ ನಟ 'ಗಡ್ಡಪ್ಪ']

ಮೂರನೇ ಸ್ಥಾನದಲ್ಲಿ ಪ್ರಿಯಾಂಕಾ ಉಪೇಂದ್ರ, ನಾಲ್ಕರಲ್ಲಿ ಹರಿಪ್ರಿಯಾ

3178 ಮತಗಳನ್ನು ಪಡೆದು ಪ್ರಿಯಾಂಕಾ ಉಪೇಂದ್ರ ಮೂರನೇ ಸ್ಥಾನ ಪಡೆದಿದ್ದರೆ, ನಟಿ ಹರಿಪ್ರಿಯಾ 2825 ಮತಗಳನ್ನು ಪಡೆದು ನಾಲ್ಕನೇ ಸ್ಥಾನ ಕಾಯ್ದುಕೊಂಡಿದ್ದಾರೆ.[ಓದುಗರು ಮೆಚ್ಚಿದ ಅರ್ಜುನ್ ಜನ್ಯಗೆ 'ಅತ್ಯುತ್ತಮ ಸಂಗೀತ ನಿರ್ದೇಶಕ' ಪ್ರಶಸ್ತಿ.!]

ಐದನೇ ಸ್ಥಾನದಲ್ಲಿ ನಟಿ ರಮ್ಯಾ.!

2163 ಮತಗಳನ್ನು ಪಡೆದು ನಟಿ ರಮ್ಯಾ ಐದನೇ ಸ್ಥಾನದಲ್ಲಿ ಇದ್ದಾರೆ.

ನಂತರದ ಸ್ಥಾನಗಳು....

ಆರನೇ ಸ್ಥಾನ - ಪ್ರಿಯಾಮಣಿ - 1373 ಮತಗಳು
ಏಳನೇ ಸ್ಥಾನ - ಅಮೂಲ್ಯ - 1191 ಮತಗಳು
ಎಂಟನೇ ಸ್ಥಾನ - ವೇದಿಕಾ - 964 ಮತಗಳು
ಒಂಬತ್ತನೇ ಸ್ಥಾನ - ಶ್ರುತಿ ಹರಿಹರನ್ - 751 ಮತಗಳು
ಹತ್ತನೇ ಸ್ಥಾನ - ಶ್ವೇತಾ ಶ್ರೀವಾತ್ಸವ್ - 252 ಮತಗಳು
ಹನ್ನೊಂದನೇ ಸ್ಥಾನ - ಪಾರುಲ್ ಯಾದವ್ - 231 ಮತಗಳು
ಹನ್ನೆರಡನೇ ಸ್ಥಾನ - ಸುಕೃತಾ ವಾಗ್ಲೆ - 212 ಮತಗಳು

ಮತದಾನ ನಡೆದಿದ್ದು ಯಾವಾಗ?

'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ನಡೆಸಿದ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ಡಿಸೆಂಬರ್ ತಿಂಗಳಿನಲ್ಲಿ ಪ್ರಾರಂಭಗೊಂಡು ಜನವರಿ 15ಕ್ಕೆ ಮುಕ್ತಾಯವಾಗಿದೆ ಎಂಬುದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ.

ಎಲ್ಲರಿಗೂ ಧನ್ಯವಾದಗಳು

ಈ ಆನ್ ಲೈನ್ ಮತದಾನದಲ್ಲಿ ಪಾಲ್ಗೊಂಡ ಎಲ್ಲಾ ಮತದಾರ ಬಂಧುಗಳಿಗೂ 'ಫಿಲ್ಮಿಬೀಟ್ ಕನ್ನಡ' ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತದೆ. ಇವರು ಗೆಲ್ಲಬೇಕಿತ್ತು, ಅವರು ಗೆಲ್ಲಬೇಕಿತ್ತು ಎಂದು ಬೇಸರಗೊಳ್ಳಬೇಡಿ... ಮುಂದೆ ಇದೇ ರೀತಿಯ ಸಾಕಷ್ಟು ಆನ್ ಲೈನ್ ಮತದಾನಗಳನ್ನು ಆಯೋಜಿಸಲಾಗುತ್ತದೆ. ಇದು ಮತದಾರರ ಅಂತಿಮ ತೀರ್ಮಾನವೇ ಹೊರತು 'ಫಿಲ್ಮಿಬೀಟ್ ಕನ್ನಡ'ದ ತೀರ್ಪಲ್ಲ ಎಂಬುದನ್ನು ಗಮನಿಸತಕ್ಕದ್ದು. ಮತದಾರರ ತೀರ್ಪನ್ನು 'ಫಿಲ್ಮಿಬೀಟ್ ಕನ್ನಡ' ಗೌರವಿಸುತ್ತದೆ.

English summary
'Best of Sandalwood-2016' Poll Results are out. Kannada Actress Rachita Ram is selected as 'Best Actress-2016'
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada