twitter
    For Quick Alerts
    ALLOW NOTIFICATIONS  
    For Daily Alerts

    ಓದುಗರ ಆಯ್ಕೆ: 2016 ರ 'ಅತ್ಯುತ್ತಮ ಹಾಸ್ಯನಟ' ಗರಿ ಸಾಧು ಕೋಕಿಲ ಮುಡಿಗೆ

    By Harshitha
    |

    2016ನೇ ಸಾಲಿನ 'ಅತ್ಯುತ್ತಮ ಹಾಸ್ಯ ನಟ' ಸೇರಿದಂತೆ ಒಟ್ಟು ಒಂಬತ್ತು ವಿಭಾಗಗಳಲ್ಲಿ ನಿಮ್ಮ ಫಿಲ್ಮಿಬೀಟ್ ಕನ್ನಡ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ಆಯೋಜಿಸಿತ್ತು. ಆ ಮೂಲಕ ಆನ್ ಲೈನ್ ಮತಗಟ್ಟೆಯಲ್ಲಿ ತಮ್ಮ ನೆಚ್ಚಿನ ತಾರೆಯರಿಗೆ ಮತ ಹಾಕುವಂತೆ ಓದುಗರಲ್ಲಿ 'ಫಿಲ್ಮಿಬೀಟ್ ಕನ್ನಡ' ಕೋರಿತ್ತು.

    ತಮ್ಮ ನೆಚ್ಚಿನ ನಟ-ನಟಿಯರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ತನ್ನ ಕೋಟ್ಯಾಂತರ ಓದುಗ ದೊರೆಗಳಿಗೆ 'ಫಿಲ್ಮಿಬೀಟ್ ಕನ್ನಡ' ನೀಡಿದ್ದರಿಂದ, ಬಹಳ ಬಿರುಸಿನಿಂದ ಈ ಮತದಾನ ಪ್ರಕ್ರಿಯೆ ನಡೆಯಿತು. ಸಾಮಾಜಿಕ ಜಾಲತಾಣಗಳಲ್ಲಿ ತಾರೆಯರು ಹಾಗೂ ತಾರೆಯರ ಫ್ಯಾನ್ ಕ್ಲಬ್ ಸ್ವಯಂ ಪ್ರೇರಿತವಾಗಿ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ಪೇಜ್ ನ ಶೇರ್ ಮಾಡಿಕೊಂಡು ವೋಟಿಂಗ್ ಪ್ರಕ್ರಿಯೆಗೆ ಉತ್ಸಾಹ ತುಂಬಿದರು.[ಸಿನಿಪ್ರಿಯರ ಜಡ್ಜ್ ಮೆಂಟ್: 2016ರ ಅತ್ಯುತ್ತಮ ಕಮರ್ಶಿಯಲ್ ಚಿತ್ರ 'ಜಗ್ಗುದಾದಾ'.!]

    ಸುಮಾರು ಒಂದು ತಿಂಗಳ ಕಾಲ ಈ ಮತದಾನ ಪ್ರಕ್ರಿಯೆ ನಡೆದು, ಈಗ ಅಂತಿಮ ಫಲಿತಾಂಶ ಹೊರ ಹಾಕುವ ಸಮಯ ಬಂದಿದೆ. ಓದುಗ ಪ್ರಭುಗಳ ಇಚ್ಛೆ ಅನುಸಾರ, 2016ರ 'ಅತ್ಯುತ್ತಮ ಹಾಸ್ಯ ನಟ' ಆಗಿ ಹೊರಹೊಮ್ಮಿರುವುದು ಕಾಮಿಡಿ ಕಿಲಾಡಿ ಸಾಧು ಕೋಕಿಲ.!

    ಅತ್ಯುತ್ತಮ ಹಾಸ್ಯ ನಟ ಸಾಧು ಕೋಕಿಲ

    ಅತ್ಯುತ್ತಮ ಹಾಸ್ಯ ನಟ ಸಾಧು ಕೋಕಿಲ

    'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಓದುಗರ ಆಯ್ಕೆ ಪ್ರಕಾರ, 2016ರ ಅತ್ಯುತ್ತಮ ಹಾಸ್ಯ ನಟ ಸಾಧು ಕೋಕಿಲ.

    ಸಾಧು ಕೋಕಿಲ ರವರಿಗೆ ಅತಿ ಹೆಚ್ಚು ವೋಟ್ಸ್ ಪ್ರಾಪ್ತಿ.!

    ಸಾಧು ಕೋಕಿಲ ರವರಿಗೆ ಅತಿ ಹೆಚ್ಚು ವೋಟ್ಸ್ ಪ್ರಾಪ್ತಿ.!

    ನಾಮ ನಿರ್ದೇಶನಗೊಂಡಿದ್ದ 6 ಹಾಸ್ಯ ಕಲಾವಿದರ ಪೈಕಿ 'ಶಿವಲಿಂಗ' ಚಿತ್ರದ ಕಾಮಿಡಿ ಪಾತ್ರದ ಅಭಿನಯಕ್ಕಾಗಿ ನಟ ಸಾಧು ಕೋಕಿಲ 53% ರಷ್ಟು ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಸಾಧು ಕೋಕಿಲಗೆ ಸಿಕ್ಕ ಮತಗಳು ಎಷ್ಟು.?

    ಸಾಧು ಕೋಕಿಲಗೆ ಸಿಕ್ಕ ಮತಗಳು ಎಷ್ಟು.?

    ಬರೋಬ್ಬರಿ 19,406 ಜನರು 'ಅತ್ಯುತ್ತಮ ಹಾಸ್ಯ ನಟ-2016' ಆಯ್ಕೆ ಮಾಡಲು ಮತ ಚಲಾಯಿಸಿದ್ದಾರೆ. ಇವರ ಪೈಕಿ ಒಟ್ಟು 10,197 ಜನರು ನಟ ಸಾಧು ಕೋಕಿಲ ಪರ ವೋಟ್ ಮಾಡಿದ್ದಾರೆ.

    ತೀವ್ರ ಪೈಪೋಟಿ ನೀಡಿದ ಚಿಕ್ಕಣ್ಣ

    ತೀವ್ರ ಪೈಪೋಟಿ ನೀಡಿದ ಚಿಕ್ಕಣ್ಣ

    'ಕೋಟಿಗೊಬ್ಬ-2' ಚಿತ್ರದ ಅಭಿನಯಕ್ಕಾಗಿ ನಟ ಚಿಕ್ಕಣ್ಣ 37% ರಷ್ಟು ಮತಗಳನ್ನು ತಮ್ಮದಾಗಿಸಿಕೊಂಡು, ಎರಡನೇ ಸ್ಥಾನ ಪಡೆದಿದ್ದಾರೆ. ಒಟ್ಟು 7176 ಜನರು ಚಿಕ್ಕಣ್ಣ ಪರ ಮತ ಚಲಾವಣೆ ಮಾಡಿದ್ದಾರೆ.

    ಮೂರನೇ ಸ್ಥಾನದಲ್ಲಿ ಬುಲೆಟ್ ಪ್ರಕಾಶ್

    ಮೂರನೇ ಸ್ಥಾನದಲ್ಲಿ ಬುಲೆಟ್ ಪ್ರಕಾಶ್

    818 ಮತಗಳನ್ನು ಪಡೆದು ನಟ ಬುಲೆಟ್ ಪ್ರಕಾಶ್ ಮೂರನೇ ಸ್ಥಾನ ಪಡೆದಿದ್ದಾರೆ.

    ನಂತರದ ಸ್ಥಾನಗಳು....

    ನಂತರದ ಸ್ಥಾನಗಳು....

    ನಾಲ್ಕನೇ ಸ್ಥಾನ - ರಂಗಾಯಣ ರಘು - 682 ಮತಗಳು
    ಐದನೇ ಸ್ಥಾನ - ವಿಜಯ್ ಚೆಂಡೂರ್ - 277 ಮತಗಳು
    ಆರನೇ ಸ್ಥಾನ - ಅರುಣ್ ಸಾಗರ್ - 256 ಮತಗಳು

    ಮತದಾನ ನಡೆದಿದ್ದು ಯಾವಾಗ?

    ಮತದಾನ ನಡೆದಿದ್ದು ಯಾವಾಗ?

    'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ನಡೆಸಿದ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ಡಿಸೆಂಬರ್ ತಿಂಗಳಿನಲ್ಲಿ ಪ್ರಾರಂಭಗೊಂಡು ಜನವರಿ 15ಕ್ಕೆ ಮುಕ್ತಾಯವಾಗಿದೆ ಎಂಬುದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ.

    ಎಲ್ಲರಿಗೂ ಧನ್ಯವಾದಗಳು

    ಎಲ್ಲರಿಗೂ ಧನ್ಯವಾದಗಳು

    ಈ ಆನ್ ಲೈನ್ ಮತದಾನದಲ್ಲಿ ಪಾಲ್ಗೊಂಡ ಎಲ್ಲಾ ಮತದಾರ ಬಂಧುಗಳಿಗೂ 'ಫಿಲ್ಮಿಬೀಟ್ ಕನ್ನಡ' ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತದೆ. ಇವರು ಗೆಲ್ಲಬೇಕಿತ್ತು, ಅವರು ಗೆಲ್ಲಬೇಕಿತ್ತು ಎಂದು ಬೇಸರಗೊಳ್ಳಬೇಡಿ... ಮುಂದೆ ಇದೇ ರೀತಿಯ ಸಾಕಷ್ಟು ಆನ್ ಲೈನ್ ಮತದಾನಗಳನ್ನು ಆಯೋಜಿಸಲಾಗುತ್ತದೆ. ಇದು ಮತದಾರರ ಅಂತಿಮ ತೀರ್ಮಾನವೇ ಹೊರತು 'ಫಿಲ್ಮಿಬೀಟ್ ಕನ್ನಡ'ದ ತೀರ್ಪಲ್ಲ ಎಂಬುದನ್ನು ಗಮನಿಸತಕ್ಕದ್ದು. ಮತದಾರರ ತೀರ್ಪನ್ನು 'ಫಿಲ್ಮಿಬೀಟ್ ಕನ್ನಡ' ಗೌರವಿಸುತ್ತದೆ.

    English summary
    'Best of Sandalwood-2016' Poll Results are out. Kannada Actor Sadhu Kokila is selected as 'Best Comedian-2016'
    Monday, February 6, 2017, 14:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X