ಓದುಗರ ನೆಚ್ಚಿನ ಶ್ರದ್ಧಾ ಶ್ರೀನಾಥ್ ಗೆ 'ಉದಯೋನ್ಮುಖ ನಟಿ-2016' ಪ್ರಶಸ್ತಿ

By Harshitha

2016ನೇ ಸಾಲಿನ 'ಅತ್ಯುತ್ತಮ ಉದಯೋನ್ಮುಖ ನಟಿ' ಸೇರಿದಂತೆ ಒಟ್ಟು ಒಂಬತ್ತು ವಿಭಾಗಗಳಲ್ಲಿ ನಿಮ್ಮ ಫಿಲ್ಮಿಬೀಟ್ ಕನ್ನಡ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ಆಯೋಜಿಸಿತ್ತು. ಆ ಮೂಲಕ ಆನ್ ಲೈನ್ ಮತಗಟ್ಟೆಯಲ್ಲಿ ತಮ್ಮ ನೆಚ್ಚಿನ ತಾರೆಯರಿಗೆ ಹಾಗೂ ಚಿತ್ರಗಳಿಗೆ ಮತ ಹಾಕುವಂತೆ ಓದುಗರಲ್ಲಿ 'ಫಿಲ್ಮಿಬೀಟ್ ಕನ್ನಡ' ಕೋರಿತ್ತು.

ತಮ್ಮ ನೆಚ್ಚಿನ ನಟ-ನಟಿ, ಚಿತ್ರವನ್ನ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ತನ್ನ ಕೋಟ್ಯಾಂತರ ಓದುಗ ದೊರೆಗಳಿಗೆ 'ಫಿಲ್ಮಿಬೀಟ್ ಕನ್ನಡ' ನೀಡಿದ್ದರಿಂದ, ಬಹಳ ಬಿರುಸಿನಿಂದ ಈ ಮತದಾನ ಪ್ರಕ್ರಿಯೆ ನಡೆಯಿತು. ಸಾಮಾಜಿಕ ಜಾಲತಾಣಗಳಲ್ಲಿ ತಾರೆಯರು ಹಾಗೂ ತಾರೆಯರ ಫ್ಯಾನ್ ಕ್ಲಬ್ ಸ್ವಯಂ ಪ್ರೇರಿತವಾಗಿ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ಪೇಜ್ ನ ಶೇರ್ ಮಾಡಿಕೊಂಡು ವೋಟಿಂಗ್ ಪ್ರಕ್ರಿಯೆಗೆ ಉತ್ಸಾಹ ತುಂಬಿದರು.[ಓದುಗರ ಆಯ್ಕೆ: 2016 ರ 'ಅತ್ಯುತ್ತಮ ಹಾಸ್ಯನಟ' ಗರಿ ಸಾಧು ಕೋಕಿಲ ಮುಡಿಗೆ]

ಸುಮಾರು ಒಂದು ತಿಂಗಳ ಕಾಲ ಈ ಮತದಾನ ಪ್ರಕ್ರಿಯೆ ನಡೆದು, ಈಗ ಅಂತಿಮ ಫಲಿತಾಂಶ ಹೊರ ಹಾಕುವ ಸಮಯ ಬಂದಿದೆ. ಓದುಗ ಪ್ರಭುಗಳ ಇಷ್ಟದ ಅನುಸಾರ, 2016ರ 'ಅತ್ಯುತ್ತಮ ಉದಯೋನ್ಮುಖ ನಟಿ' ಆಗಿ ಹೊರಹೊಮ್ಮಿರುವುದು 'ಯು ಟರ್ನ್' ಬೆಡಗಿ ಶ್ರದ್ಧಾ ಶ್ರೀನಾಥ್.!

ಅತ್ಯುತ್ತಮ ಉದಯೋನ್ಮುಖ ನಟಿ ಶ್ರದ್ಧಾ ಶ್ರೀನಾಥ್

ಅತ್ಯುತ್ತಮ ಉದಯೋನ್ಮುಖ ನಟಿ ಶ್ರದ್ಧಾ ಶ್ರೀನಾಥ್

'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಓದುಗರ ಆಯ್ಕೆ ಪ್ರಕಾರ, 2016ರ 'ಅತ್ಯುತ್ತಮ ಉದಯೋನ್ಮುಖ ನಟಿ' ಶ್ರದ್ಧಾ ಶ್ರೀನಾಥ್.[ಸಿನಿಪ್ರಿಯರ ಜಡ್ಜ್ ಮೆಂಟ್: 2016ರ ಅತ್ಯುತ್ತಮ ಕಮರ್ಶಿಯಲ್ ಚಿತ್ರ 'ಜಗ್ಗುದಾದಾ'.!]

ಅತಿ ಹೆಚ್ಚು ಮತ ಪಡೆದ ಶ್ರದ್ಧಾ ಶ್ರೀನಾಥ್

ಅತಿ ಹೆಚ್ಚು ಮತ ಪಡೆದ ಶ್ರದ್ಧಾ ಶ್ರೀನಾಥ್

ನಾಮನಿರ್ದೇಶನಗೊಂಡಿದ್ದ ಐವರು ಯುವ ನಟಿಯರ ಪೈಕಿ 'ಯು ಟರ್ನ್' ಚಿತ್ರದ ಅಭಿನಯಕ್ಕಾಗಿ ಶ್ರದ್ಧಾ ಶ್ರೀನಾಥ್ 36% ರಷ್ಟು ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಶ್ರದ್ಧಾ ಶ್ರೀನಾಥ್ ಗೆ ಸಿಕ್ಕ ಮತಗಳೆಷ್ಟು.?

ಶ್ರದ್ಧಾ ಶ್ರೀನಾಥ್ ಗೆ ಸಿಕ್ಕ ಮತಗಳೆಷ್ಟು.?

ಬರೋಬ್ಬರಿ 13,211 ಜನರು 'ಅತ್ಯುತ್ತಮ ಉದಯೋನ್ಮುಖ ನಟಿ-2016' ಆಯ್ಕೆ ಮಾಡಲು ಮತ ಚಲಾಯಿಸಿದ್ದಾರೆ. ಇವರ ಪೈಕಿ ಒಟ್ಟು 4814 ಜನರು ನಟಿ ಶ್ರದ್ಧಾ ಶ್ರೀನಾಥ್ ಪರ ವೋಟ್ ಮಾಡಿದ್ದಾರೆ.

ತೀವ್ರ ಪೈಪೋಟಿ ನೀಡಿದ ಪೂಜಾ

ತೀವ್ರ ಪೈಪೋಟಿ ನೀಡಿದ ಪೂಜಾ

'ತಿಥಿ' ಚಿತ್ರದ ಅಭಿನಯಕ್ಕಾಗಿ ನಟಿ ಪೂಜಾ 25% ರಷ್ಟು ಮತಗಳನ್ನು ತಮ್ಮದಾಗಿಸಿಕೊಂಡು, ಎರಡನೇ ಸ್ಥಾನ ಪಡೆದಿದ್ದಾರೆ. ಒಟ್ಟು 3257 ಜನರು ಪೂಜಾ ಪರ ಮತ ಚಲಾವಣೆ ಮಾಡಿದ್ದಾರೆ.

ಮೂರನೇ ಸ್ಥಾನದಲ್ಲಿ ನೇಹಾ ಶೆಟ್ಟಿ

ಮೂರನೇ ಸ್ಥಾನದಲ್ಲಿ ನೇಹಾ ಶೆಟ್ಟಿ

2631 ಮತಗಳನ್ನು ಪಡೆದು 'ಮುಂಗಾರು ಮಳೆ-2' ಚಿತ್ರದ ಬೆಡಗಿ ನೇಹಾ ಶೆಟ್ಟಿ ಮೂರನೇ ಸ್ಥಾನ ಪಡೆದಿದ್ದಾರೆ.

ನಂತರದ ಸ್ಥಾನಗಳು

ನಂತರದ ಸ್ಥಾನಗಳು

ನಾಲ್ಕನೇ ಸ್ಥಾನ - ಅಪೂರ್ವ - 2044 ಮತಗಳು
ಐದನೇ ಸ್ಥಾನ - ಕಾವ್ಯ ಶೆಟ್ಟಿ - 465 ಮತಗಳು

ಮತದಾನ ನಡೆದದ್ದು ಯಾವಾಗ?

ಮತದಾನ ನಡೆದದ್ದು ಯಾವಾಗ?

'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ನಡೆಸಿದ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ಡಿಸೆಂಬರ್ ತಿಂಗಳಿನಲ್ಲಿ ಪ್ರಾರಂಭಗೊಂಡು ಜನವರಿ 15ಕ್ಕೆ ಮುಕ್ತಾಯವಾಗಿದೆ ಎಂಬುದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ.

ಎಲ್ಲರಿಗೂ ಧನ್ಯವಾದಗಳು

ಎಲ್ಲರಿಗೂ ಧನ್ಯವಾದಗಳು

ಈ ಆನ್ ಲೈನ್ ಮತದಾನದಲ್ಲಿ ಪಾಲ್ಗೊಂಡ ಎಲ್ಲಾ ಮತದಾರ ಬಂಧುಗಳಿಗೂ 'ಫಿಲ್ಮಿಬೀಟ್ ಕನ್ನಡ' ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತದೆ. ಇವರು ಗೆಲ್ಲಬೇಕಿತ್ತು, ಅವರು ಗೆಲ್ಲಬೇಕಿತ್ತು ಎಂದು ಬೇಸರಗೊಳ್ಳಬೇಡಿ... ಮುಂದೆ ಇದೇ ರೀತಿಯ ಸಾಕಷ್ಟು ಆನ್ ಲೈನ್ ಮತದಾನಗಳನ್ನು ಆಯೋಜಿಸಲಾಗುತ್ತದೆ. ಇದು ಮತದಾರರ ಅಂತಿಮ ತೀರ್ಮಾನವೇ ಹೊರತು 'ಫಿಲ್ಮಿಬೀಟ್ ಕನ್ನಡ'ದ ತೀರ್ಪಲ್ಲ ಎಂಬುದನ್ನು ಗಮನಿಸತಕ್ಕದ್ದು. ಮತದಾರರ ತೀರ್ಪನ್ನು 'ಫಿಲ್ಮಿಬೀಟ್ ಕನ್ನಡ' ಗೌರವಿಸುತ್ತದೆ.

More from Filmibeat

English summary
'Best of Sandalwood-2016' Poll Results are out. Kannada Actress Shraddha Srinath is selected as 'Best Debutant Female-2016'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X