»   » ಓದುಗ ಪ್ರಭುಗಳ ತೀರ್ಪು: 2016ರ 'ಅತ್ಯುತ್ತಮ ನಿರ್ದೇಶಕ' ವಿ.ರವಿಚಂದ್ರನ್.!

ಓದುಗ ಪ್ರಭುಗಳ ತೀರ್ಪು: 2016ರ 'ಅತ್ಯುತ್ತಮ ನಿರ್ದೇಶಕ' ವಿ.ರವಿಚಂದ್ರನ್.!

Posted By:
Subscribe to Filmibeat Kannada

2016ನೇ ಸಾಲಿನ 'ಅತ್ಯುತ್ತಮ ನಿರ್ದೇಶಕ' ಸೇರಿದಂತೆ ಒಟ್ಟು ಒಂಬತ್ತು ವಿಭಾಗಗಳಲ್ಲಿ ನಿಮ್ಮ ಫಿಲ್ಮಿಬೀಟ್ ಕನ್ನಡ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ಆಯೋಜಿಸಿತ್ತು. ಆ ಮೂಲಕ ಆನ್ ಲೈನ್ ಮತಗಟ್ಟೆಯಲ್ಲಿ ತಮ್ಮ ನೆಚ್ಚಿನ ತಾರೆಯರಿಗೆ ಮತ ಹಾಕುವಂತೆ ಓದುಗರಲ್ಲಿ 'ಫಿಲ್ಮಿಬೀಟ್ ಕನ್ನಡ' ಕೋರಿತ್ತು.

ತಮ್ಮ ನೆಚ್ಚಿನ ನಟ-ನಟಿಯರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ತನ್ನ ಕೋಟ್ಯಾಂತರ ಓದುಗ ದೊರೆಗಳಿಗೆ 'ಫಿಲ್ಮಿಬೀಟ್ ಕನ್ನಡ' ನೀಡಿದ್ದರಿಂದ, ಬಹಳ ಬಿರುಸಿನಿಂದ ಈ ಮತದಾನ ಪ್ರಕ್ರಿಯೆ ನಡೆಯಿತು. ಸಾಮಾಜಿಕ ಜಾಲತಾಣಗಳಲ್ಲಿ ತಾರೆಯರು ಹಾಗೂ ತಾರೆಯರ ಫ್ಯಾನ್ ಕ್ಲಬ್ ಸ್ವಯಂ ಪ್ರೇರಿತವಾಗಿ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ಪೇಜ್ ನ ಶೇರ್ ಮಾಡಿಕೊಂಡು ವೋಟಿಂಗ್ ಪ್ರಕ್ರಿಯೆಗೆ ಉತ್ಸಾಹ ತುಂಬಿದರು.[ಸಿನಿಪ್ರಿಯರ ಜಡ್ಜ್ ಮೆಂಟ್: 2016ರ ಅತ್ಯುತ್ತಮ ಕಮರ್ಶಿಯಲ್ ಚಿತ್ರ 'ಜಗ್ಗುದಾದಾ'.!]

ಸುಮಾರು ಒಂದು ತಿಂಗಳ ಕಾಲ ಈ ಮತದಾನ ಪ್ರಕ್ರಿಯೆ ನಡೆದು, ಈಗ ಅಂತಿಮ ಫಲಿತಾಂಶ ಹೊರ ಹಾಕುವ ಸಮಯ ಬಂದಿದೆ. ಓದುಗ ಪ್ರಭುಗಳ ಇಚ್ಛೆ ಪ್ರಕಾರ, 2016ರ 'ಅತ್ಯುತ್ತಮ ನಿರ್ದೇಶಕ' ಆಗಿ ಹೊರಹೊಮ್ಮಿರುವುದು ಕ್ರೇಜಿ ಸ್ಟಾರ್ ವಿ.ರವಿಚಂದ್ರನ್.!

2016ರ ಬೆಸ್ಟ್ ಡೈರೆಕ್ಟರ್ ವಿ.ರವಿಚಂದ್ರನ್.!

'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಓದುಗರ ಆಯ್ಕೆ ಪ್ರಕಾರ, 2016ರ ಅತ್ಯುತ್ತಮ ನಿರ್ದೇಶಕ ಕ್ರೇಜಿ ಸ್ಟಾರ್ ವಿ.ರವಿಚಂದ್ರನ್.[ಓದುಗರ ಆಯ್ಕೆ: 2016 ರ 'ಅತ್ಯುತ್ತಮ ಹಾಸ್ಯನಟ' ಗರಿ ಸಾಧು ಕೋಕಿಲ ಮುಡಿಗೆ]

ವಿ.ರವಿಚಂದ್ರನ್ ರವರಿಗೆ ಅತಿ ಹೆಚ್ಚು ಮತಗಳು ಪ್ರಾಪ್ತಿ.!

ನಾಮ ನಿರ್ದೇಶನಗೊಂಡಿದ್ದ 16 ನಿರ್ದೇಶಕರ ಪೈಕಿ 'ಅಪೂರ್ವ' ಚಿತ್ರದ ನಿರ್ದೇಶನಕ್ಕಾಗಿ ನಿಮ್ಮೆಲ್ಲರ ಪ್ರೀತಿಯ 'ರವಿಮಾಮ' ರವರು 32% ರಷ್ಟು ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.[ಓದುಗರ ನೆಚ್ಚಿನ ಶ್ರದ್ಧಾ ಶ್ರೀನಾಥ್ ಗೆ 'ಉದಯೋನ್ಮುಖ ನಟಿ-2016' ಪ್ರಶಸ್ತಿ]

ವಿ.ರವಿಚಂದ್ರನ್ ರವರಿಗೆ ಸಿಕ್ಕ ಮತಗಳು ಎಷ್ಟು.?

ಬರೋಬ್ಬರಿ 31,578 ಜನರು 'ಅತ್ಯುತ್ತಮ ನಿರ್ದೇಶಕ-2016' ಆಯ್ಕೆ ಮಾಡಲು ಮತ ಚಲಾಯಿಸಿದ್ದಾರೆ. ಇವರ ಪೈಕಿ ಒಟ್ಟು 9999 ಜನರು ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ಪರ ವೋಟ್ ಮಾಡಿದ್ದಾರೆ.[ಓದುಗರ ಅಭಿಮತ: 2016ರ ಉದಯೋನ್ಮುಖ ನಟ 'ಗಡ್ಡಪ್ಪ']

ಎರಡನೇ ಸ್ಥಾನ ಯಾರಿಗೆ?

'ಕರ್ವ' ಚಿತ್ರದ ನಿರ್ದೇಶಕ ನವನೀತ್ 20% ರಷ್ಟು ಮತಗಳನ್ನು ತಮ್ಮದಾಗಿಸಿಕೊಂಡು ಎರಡನೇ ಸ್ಥಾನ ಪಡೆದಿದ್ದಾರೆ. ಒಟ್ಟು 6301 ಜನರು ನವನೀತ್ ಗಾಗಿ ಮತ ಚಲಾವಣೆ ಮಾಡಿದ್ದಾರೆ.[ಓದುಗರು ಮೆಚ್ಚಿದ ಅರ್ಜುನ್ ಜನ್ಯಗೆ 'ಅತ್ಯುತ್ತಮ ಸಂಗೀತ ನಿರ್ದೇಶಕ' ಪ್ರಶಸ್ತಿ.!]

ಮೂರನೇ ಸ್ಥಾನದಲ್ಲಿ ದುನಿಯಾ ಸೂರಿ, ನಾಲ್ಕರಲ್ಲಿ ಪವನ್ ಕುಮಾರ್

3970 ಮತಗಳನ್ನು ಪಡೆದು ನಿರ್ದೇಶಕ ದುನಿಯಾ ಸೂರಿ ಮೂರನೇ ಸ್ಥಾನ ಪಡೆದಿದ್ದಾರೆ. 'ಲೂಸಿಯಾ' ಪವನ್ 2389 ಮತಗಳನ್ನು ಪಡೆದು ನಾಲ್ಕನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ನಂತರದ ಸ್ಥಾನಗಳು....

ಐದನೇ ಸ್ಥಾನ - ನಂದಕಿಶೋರ್ - 1675 ಮತಗಳು
ಆರನೇ ಸ್ಥಾನ - ಪಿ.ವಾಸು - 1510 ಮತಗಳು
ಏಳನೇ ಸ್ಥಾನ - ಯೋಗರಾಜ್ ಭಟ್ - 1301 ಮತಗಳು
ಎಂಟನೇ ಸ್ಥಾನ - ಆರ್.ಚಂದ್ರು - 803 ಮತಗಳು
ಒಂಬತ್ತನೇ ಸ್ಥಾನ - ಲೋಹಿತ್ - 730 ಮತಗಳು
ಹತ್ತನೇ ಸ್ಥಾನ - ರಾಮ್ ರೆಡ್ಡಿ - 703 ಮತಗಳು
ಹನ್ನೊಂದನೇ ಸ್ಥಾನ - ವಿಜಯ್ ಪ್ರಸಾದ್ - 514 ಮತಗಳು
ಹನ್ನೆರಡನೇ ಸ್ಥಾನ - ಶಶಾಂಕ್ - 413 ಮತಗಳು
ಹದಿಮೂರನೇ ಸ್ಥಾನ - ಹರ್ಷ - 395 ಮತಗಳು
ಹದಿನಾಲ್ಕನೇ ಸ್ಥಾನ - ಸುಮನಾ ಕಿತ್ತೂರ್ - 320 ಮತಗಳು
ಹದಿನೈದನೇ ಸ್ಥಾನ - ಪವನ್ ಒಡೆಯರ್ - 303 ಮತಗಳು
ಹದಿನಾರನೇ ಸ್ಥಾನ - ನಾಗತಿಹಳ್ಳಿ ಚಂದ್ರಶೇಕರ್ - 248 ಮತಗಳು

ಮತದಾನ ನಡೆದಿದ್ದು ಯಾವಾಗ?

'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ನಡೆಸಿದ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ಡಿಸೆಂಬರ್ ತಿಂಗಳಿನಲ್ಲಿ ಪ್ರಾರಂಭಗೊಂಡು ಜನವರಿ 15ಕ್ಕೆ ಮುಕ್ತಾಯವಾಗಿದೆ ಎಂಬುದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ.

ಎಲ್ಲರಿಗೂ ಧನ್ಯವಾದಗಳು

ಈ ಆನ್ ಲೈನ್ ಮತದಾನದಲ್ಲಿ ಪಾಲ್ಗೊಂಡ ಎಲ್ಲಾ ಮತದಾರ ಬಂಧುಗಳಿಗೂ 'ಫಿಲ್ಮಿಬೀಟ್ ಕನ್ನಡ' ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತದೆ. ಇವರು ಗೆಲ್ಲಬೇಕಿತ್ತು, ಅವರು ಗೆಲ್ಲಬೇಕಿತ್ತು ಎಂದು ಬೇಸರಗೊಳ್ಳಬೇಡಿ... ಮುಂದೆ ಇದೇ ರೀತಿಯ ಸಾಕಷ್ಟು ಆನ್ ಲೈನ್ ಮತದಾನಗಳನ್ನು ಆಯೋಜಿಸಲಾಗುತ್ತದೆ. ಇದು ಮತದಾರರ ಅಂತಿಮ ತೀರ್ಮಾನವೇ ಹೊರತು 'ಫಿಲ್ಮಿಬೀಟ್ ಕನ್ನಡ'ದ ತೀರ್ಪಲ್ಲ ಎಂಬುದನ್ನು ಗಮನಿಸತಕ್ಕದ್ದು. ಮತದಾರರ ತೀರ್ಪನ್ನು 'ಫಿಲ್ಮಿಬೀಟ್ ಕನ್ನಡ' ಗೌರವಿಸುತ್ತದೆ.

English summary
'Best of Sandalwood-2016' Poll Results are out. Kannada Director V.Ravichandran is selected as 'Best Director-2016'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada