ಸಿನಿಪ್ರಿಯರ ಜಡ್ಜ್ ಮೆಂಟ್: 2016ರ ಅತ್ಯುತ್ತಮ ಕಮರ್ಶಿಯಲ್ ಚಿತ್ರ 'ಜಗ್ಗುದಾದಾ'.!
2016ನೇ ಸಾಲಿನ 'ಅತ್ಯುತ್ತಮ ಚಿತ್ರ' ಸೇರಿದಂತೆ ಒಟ್ಟು ಒಂಬತ್ತು ವಿಭಾಗಗಳಲ್ಲಿ ನಿಮ್ಮ ಫಿಲ್ಮಿಬೀಟ್ ಕನ್ನಡ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ಆಯೋಜಿಸಿತ್ತು. ಆ ಮೂಲಕ ಆನ್ ಲೈನ್ ಮತಗಟ್ಟೆಯಲ್ಲಿ ತಮ್ಮ ನೆಚ್ಚಿನ ತಾರೆಯರಿಗೆ ಹಾಗೂ ಚಿತ್ರಗಳಿಗೆ ಮತ ಹಾಕುವಂತೆ ಓದುಗರಲ್ಲಿ 'ಫಿಲ್ಮಿಬೀಟ್ ಕನ್ನಡ' ಕೋರಿತ್ತು.
ತಮ್ಮ ನೆಚ್ಚಿನ ನಟ-ನಟಿ, ಚಿತ್ರವನ್ನ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ತನ್ನ ಕೋಟ್ಯಾಂತರ ಓದುಗ ದೊರೆಗಳಿಗೆ 'ಫಿಲ್ಮಿಬೀಟ್ ಕನ್ನಡ' ನೀಡಿದ್ದರಿಂದ, ಬಹಳ ಬಿರುಸಿನಿಂದ ಈ ಮತದಾನ ಪ್ರಕ್ರಿಯೆ ನಡೆಯಿತು. ಸಾಮಾಜಿಕ ಜಾಲತಾಣಗಳಲ್ಲಿ ತಾರೆಯರು ಹಾಗೂ ತಾರೆಯರ ಫ್ಯಾನ್ ಕ್ಲಬ್ ಸ್ವಯಂ ಪ್ರೇರಿತವಾಗಿ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ಪೇಜ್ ನ ಶೇರ್ ಮಾಡಿಕೊಂಡು ವೋಟಿಂಗ್ ಪ್ರಕ್ರಿಯೆಗೆ ಉತ್ಸಾಹ ತುಂಬಿದರು.
ಸುಮಾರು ಒಂದು ತಿಂಗಳ ಕಾಲ ಈ ಮತದಾನ ಪ್ರಕ್ರಿಯೆ ನಡೆದು, ಈಗ ಅಂತಿಮ ಫಲಿತಾಂಶ ಹೊರ ಹಾಕುವ ಸಮಯ ಬಂದಿದೆ. ಓದುಗ ಪ್ರಭುಗಳ ಜಡ್ಜ್ ಮೆಂಟ್ ಪ್ರಕಾರ, 2016ರ 'ಅತ್ಯುತ್ತಮ ಕಮರ್ಶಿಯಲ್ ಚಿತ್ರ' ಆಗಿ ಹೊರಹೊಮ್ಮಿರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಜಗ್ಗುದಾದಾ'.!

ಅತ್ಯುತ್ತಮ ಕಮರ್ಶಿಯಲ್ ಚಿತ್ರ 'ಜಗ್ಗುದಾದಾ'
'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಓದುಗರ ಆಯ್ಕೆ ಪ್ರಕಾರ, 2016ರ ಅತ್ಯುತ್ತಮ ಕಮರ್ಶಿಯಲ್ ಸಿನಿಮಾ 'ಜಗ್ಗುದಾದಾ'.[ವಿಮರ್ಶೆ: 'ಜಗ್ಗುದಾದಾ' ಮದುವೆ ಊಟದ ರುಚಿ ಸ್ವಲ್ಪ ಸಿಹಿ, ಸ್ವಲ್ಪ ಸಪ್ಪೆ]

'ಜಗ್ಗುದಾದಾ'ಗೆ ಅತಿ ಹೆಚ್ಚು ವೋಟ್ಸ್ ಪ್ರಾಪ್ತಿ.!
ನಾಮ ನಿರ್ದೇಶನಗೊಂಡಿದ್ದ 14 ಚಿತ್ರಗಳ ಪೈಕಿ 'ಜಗ್ಗುದಾದಾ' ಚಿತ್ರ 45% ರಷ್ಟು ಮತಗಳನ್ನು ತನ್ನದಾಗಿಸಿಕೊಂಡಿದೆ.

'ಜಗ್ಗುದಾದಾ' ಚಿತ್ರಕ್ಕೆ ಸಿಕ್ಕ ಮತಗಳು ಎಷ್ಟು.?
ಬರೋಬ್ಬರಿ 74,835 ಜನರು 'ಅತ್ಯುತ್ತಮ ಚಿತ್ರ-2016' ಆಯ್ಕೆ ಮಾಡಲು ಮತ ಚಲಾಯಿಸಿದ್ದಾರೆ. ಇವರ ಪೈಕಿ ಒಟ್ಟು 34,048 ಜನರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಜಗ್ಗುದಾದಾ' ಚಿತ್ರದ ಪರ ವೋಟ್ ಮಾಡಿದ್ದಾರೆ.

ತೀವ್ರ ಪೈಪೋಟಿ ನೀಡಿದ 'ದೊಡ್ಮನೆ ಹುಡ್ಗ'
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ದೊಡ್ಮನೆ ಹುಡ್ಗ' ಚಿತ್ರ 25% ರಷ್ಟು ಮತಗಳನ್ನು ತನ್ನದಾಗಿಸಿಕೊಂಡು, ಎರಡನೇ ಸ್ಥಾನ ಪಡೆದಿದೆ. ಒಟ್ಟು 19,063 ಜನರು 'ದೊಡ್ಮನೆ ಹುಡ್ಗ' ಚಿತ್ರಕ್ಕಾಗಿ ಮತ ಚಲಾವಣೆ ಮಾಡಿದ್ದಾರೆ.

ಮೂರನೇ ಸ್ಥಾನದಲ್ಲಿ 'ಕೋಟಿಗೊಬ್ಬ-2'
6323 ಮತಗಳನ್ನು ಪಡೆದು ಸುದೀಪ್ ಅಭಿನಯದ 'ಕೋಟಿಗೊಬ್ಬ-2' ಚಿತ್ರ ಮೂರನೇ ಸ್ಥಾನ ಪಡೆದಿದೆ. ಇನ್ನೂ ಪುನೀತ್ ರಾಜ್ ಕುಮಾರ್ ಅಭಿನಯದ ಮತ್ತೊಂದು ಚಿತ್ರ 'ಚಕ್ರವ್ಯೂಹ' 4056 ಮತಗಳನ್ನು ಪಡೆದು ನಾಲ್ಕನೇ ಸ್ಥಾನ ಕಾಯ್ದುಕೊಂಡಿದೆ.

ಐದರಲ್ಲಿ ಯಶ್ ಚಿತ್ರ, ಆರರಲ್ಲಿ ಶಿವಣ್ಣ ಸಿನಿಮಾ.!
3458 ಮತಗಳನ್ನು ಪಡೆದು ಯಶ್ ಅಭಿನಯದ 'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನಿಮಾ ಐದನೇ ಸ್ಥಾನದಲ್ಲಿದೆ. ಇನ್ನೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಶಿವಲಿಂಗ' ಚಿತ್ರ 2088 ಮತಗಳನ್ನು ಪಡೆದು ಆರನೇ ಸ್ಥಾನದಲ್ಲಿದೆ.

ನಂತರದ ಸ್ಥಾನಗಳು....
ಏಳನೇ ಸ್ಥಾನ - ಕಲ್ಪನಾ 2 - 1461 ಮತಗಳು
ಎಂಟನೇ ಸ್ಥಾನ - ನೀರ್ ದೋಸೆ - 865 ಮತಗಳು
ಒಂಬತ್ತನೇ ಸ್ಥಾನ - ಮುಕುಂದ ಮುರಾರಿ - 803 ಮತಗಳು
ಹತ್ತನೇ ಸ್ಥಾನ - ಮಮ್ಮಿ ಸೇವ್ ಮಿ - 725 ಮತಗಳು
ಹನ್ನೊಂದನೇ ಸ್ಥಾನ - ಕಿಲ್ಲಿಂಗ್ ವೀರಪ್ಪನ್ - 718 ಮತಗಳು
ಹನ್ನೆರಡನೇ ಸ್ಥಾನ - ಜಾಗ್ವಾರ್ - 589 ಮತಗಳು
ಹದಿಮೂರನೇ ಸ್ಥಾನ - ದನ ಕಾಯೋನು - 430 ಮತಗಳು
ಹದಿನಾಲ್ಕನೇ ಸ್ಥಾನ - ಜೆಸ್ಸಿ - 208 ಮತಗಳು

ಮತದಾನ ನಡೆದಿದ್ದು ಯಾವಾಗ?
'ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ' ನಡೆಸಿದ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ಡಿಸೆಂಬರ್ ತಿಂಗಳಿನಲ್ಲಿ ಪ್ರಾರಂಭಗೊಂಡು ಜನವರಿ 15ಕ್ಕೆ ಮುಕ್ತಾಯವಾಗಿದೆ ಎಂಬುದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ.

ಎಲ್ಲರಿಗೂ ಧನ್ಯವಾದಗಳು
ಈ ಆನ್ ಲೈನ್ ಮತದಾನದಲ್ಲಿ ಪಾಲ್ಗೊಂಡ ಎಲ್ಲಾ ಮತದಾರ ಬಂಧುಗಳಿಗೂ 'ಫಿಲ್ಮಿಬೀಟ್ ಕನ್ನಡ' ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತದೆ. ಈ ಚಿತ್ರ ಗೆಲ್ಲಬೇಕಿತ್ತು, ಆ ಚಿತ್ರ ಗೆಲ್ಲಬೇಕಿತ್ತು ಎಂದು ಬೇಸರಗೊಳ್ಳಬೇಡಿ... ಮುಂದೆ ಇದೇ ರೀತಿಯ ಸಾಕಷ್ಟು ಆನ್ ಲೈನ್ ಮತದಾನಗಳನ್ನು ಆಯೋಜಿಸಲಾಗುತ್ತದೆ. ಇದು ಮತದಾರರ ಅಂತಿಮ ತೀರ್ಮಾನವೇ ಹೊರತು 'ಫಿಲ್ಮಿಬೀಟ್ ಕನ್ನಡ'ದ ತೀರ್ಪಲ್ಲ ಎಂಬುದನ್ನು ಗಮನಿಸತಕ್ಕದ್ದು. ಮತದಾರರ ತೀರ್ಪನ್ನು 'ಫಿಲ್ಮಿಬೀಟ್ ಕನ್ನಡ' ಗೌರವಿಸುತ್ತದೆ.


Click it and Unblock the Notifications











