For Quick Alerts
  ALLOW NOTIFICATIONS  
  For Daily Alerts

  2016: ಫಿಲ್ಮಿಬೀಟ್ ಫೇಸ್ಬುಕ್ ಟಾಪ್ ಸುದ್ದಿಗಳು

  By Mahesh
  |

  2000 ಇಸವಿಯಿಂದ ಕನ್ನಡ ಭಾಷೆ, ಸಂಸ್ಕೃತಿ, ಅನಿವಾಸಿ, ಹೊರನಾಡು, ಒಳನಾಡು ಕನ್ನಡಿಗರ ಜೊತೆ ನಿರಂತರ ಸಂವಹನ ಹೊಂದಿರುವ ಒನ್ಇಂಡಿಯಾ ಕನ್ನಡ (ಈ ಹಿಂದಿನ ದಟ್ಸ್ ಕನ್ನಡ) ದ ಭಾಗವಾದ ಫಿಲ್ಮಿಬೀಟ್ ಕನ್ನಡ ಸಾಮಾಜಿಕ ಜಾಲ ತಾಣಗಳಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸುತ್ತಾ ಬಂದಿದೆ. 2016ರಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಫೇಸ್ ಬುಕ್ ಪೋಸ್ಟ್ ಗಳ ಪಟ್ಟಿ ಇಲ್ಲಿದೆ.

  2016ರಲ್ಲಿ ಫೇಸ್ ಬುಕ್ ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ, ಓದುಗರಿಂದ ಹೆಚ್ಚು ಕಾಮೆಂಟ್ ಪಡೆದ ಪೋಸ್ಟ್ ಗಳ ಪೈಕಿ ವೈವಿಧ್ಯಮಯ ಸುದ್ದಿ, ಸಮಾಚಾರ, ಗಾಸಿಪ್, ಯಾವ ಸಿನಿಮಾ ಶೂಟಿಂಗ್ ಹಂತದಲ್ಲಿದೆ? ಯಾವ ನಟ, ನಟಿಯರ ಮದುವೆ ಈ ವರ್ಷ ಜರುಗಿದೆ? ಯಾರೆಲ್ಲ ನಮ್ಮನ್ನು ಅಗಲಿದರು, ಸಿನಿಮಾದ ಮೊದಲ ದಿನ ಮೊದಲ ಪ್ರದರ್ಶನ ವರದಿ, ಚಿತ್ರವಿಮರ್ಶೆ ಸೇರಿದಂತೆ ಸೆಲೆಬ್ರಿಟಿಗಳ ಸಂದರ್ಶನ ಕೂಡಾ ಇವೆ.

  ಕನ್ನಡದ ಅಗ್ರ ಅಂತರ್ಜಾಲ ತಾಣವಾಗಿರುವ ದಟ್ಸ್ ಕನ್ನಡ (ಒನ್ಇಂಡಿಯಾ ಕನ್ನಡ) 2000ರಿಂದ ಕಾರ್ಯನಿರ್ವಹಿಸುತ್ತಿದೆ. ವಿಳಾಸ : http://kannada.oneindia.com/

  /

  ನಮ್ಮ ಫೇಸ್ ಬುಕ್ ವಿಳಾಸ: https://www.facebook.com/KannadaFilmibeat/

  ಆಡಿಯೋ ವಿಡಿಯೋ ಸಾಧ್ಯತೆಗಳನ್ನು ತನ್ನದಾಗಿಸಿಕೊಂಡ ಮೇಲೆ ಸಿನಿಮಾ ಸುದ್ದಿ, ಸಮಾಚಾರ, ಸಂದರ್ಶನಗಳಿಗಾಗಿ ಪ್ರತ್ಯೇಕ ಯೂಟ್ಯೂಬ್ ಚಾನೆಲ್ ಕೂಡಾ ಹೊಂದಿದೆ.

  ನಿರ್ದೇಶಕ ಆರ್ ಚಂದ್ರು ವಿರುದ್ಧ ವಿಷ್ಣು ಫ್ಯಾನ್ಸ್

  ನಿರ್ದೇಶಕ ಆರ್ ಚಂದ್ರು ವಿರುದ್ಧ ವಿಷ್ಣು ಫ್ಯಾನ್ಸ್

  ನಿರ್ದೇಶಕ ಆರ್.ಚಂದ್ರು ವಿರುದ್ಧ ಘರ್ಜಿಸಿದ ಸಾಹಸ'ಸಿಂಹ' ಡಾ. ವಿಷ್ಣುವರ್ಧನ್ ಅವರ ಅಭಿಮಾನಿಗಳು.. ಆರ್ ಚಂದ್ರ ನೀಡಿದ ಉತ್ತರವೇನು? ಏನಿದು ಹೊಸ ವಿವಾದ.? ಇಲ್ಲಿ ಓದಿ.. ಪೋಸ್ಟ್ ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ

   'ಯಶೋರಾಧೆ' ಮದುವೆಯ ಸಂಭ್ರಮ

  'ಯಶೋರಾಧೆ' ಮದುವೆಯ ಸಂಭ್ರಮ

  ಕೊಂಕಣಿ ಹಾಗೂ ಒಕ್ಕಲಿಗ ಶೈಲಿಯ 'ಯಶೋರಾಧೆ' ಮದುವೆಯ ಭಕ್ಷ್ಯ ಭೋಜನದ ಕಂಪ್ಲೀಟ್ ಮೆನು ವಿವರ ಇರುವ ಸುದ್ದಿಯ ಪೋಸ್ಟ್ ಕ್ಲಿಕ್ ಮಾಡಿ

  'ಬಿಗ್ ಬಾಸ್' ಕಾರ್ಯಕ್ರಮ ಫಿಕ್ಸ್ ಆಗಿದೆ?

  'ಬಿಗ್ ಬಾಸ್' ಕಾರ್ಯಕ್ರಮ ಫಿಕ್ಸ್ ಆಗಿದೆ?

  'ಬಿಗ್ ಬಾಸ್' ಕಾರ್ಯಕ್ರಮ ಫಿಕ್ಸ್ ಆಗಿದೆ. ಕೀರ್ತಿಯನ್ನ ಗೆಲ್ಲಿಸಲು 'ಬಿಗ್ ಬಾಸ್' ಗೇಮ್ ಪ್ಲಾನ್ ರೂಪಿಸಿದ್ದಾರೆ. 'ಬಿಗ್ ಬಾಸ್' ಚೀಟಿಂಗ್ ಮಾಡುತ್ತಿದ್ದಾರೆ. ಫಿಕ್ಸಿಂಗ್ ಶೋ 'ಬಿಗ್ ಬಾಸ್'ಗೆ ಡೌನ್ ಡೌನ್.!'' - ಇದನ್ನೆಲ್ಲ ನಾವು ಹೇಳ್ತಿಲ್ಲ...'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮವನ್ನ ಪ್ರತಿದಿನ ತಪ್ಪದೇ ವೀಕ್ಷಿಸುತ್ತಿರುವ ಜನರು ಬೇಸರದಿಂದ ಆಡಿರುವ ಮಾತುಗಳಿವು.! ಹೆಚ್ಚಿನ ವಿವರಗಳನ್ನು ಓದಲು ಕ್ಲಿಕ್ ಮಾಡಿ'

  ಯಶ್ ರಾಧಿಕಾ ಮದ್ವೆ- ದರ್ಶನ್ ಗೆ ಆಹ್ವಾನ ಇಲ್ವಾ?

  ಯಶ್ ರಾಧಿಕಾ ಮದ್ವೆ- ದರ್ಶನ್ ಗೆ ಆಹ್ವಾನ ಇಲ್ವಾ?

  ಸ್ಯಾಂಡಲ್ ವುಡ್ ನ ತಾರೆಯರು, ರಾಜಕೀಯ ನಾಯಕರು ಸೇರಿದಂತೆ ಅನೇಕರಿಗೆ ತಮ್ಮ ಮದುವೆಯ ಮಮತೆಯ ಕರೆಯೋಲೆ ನೀಡಿದ್ದ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೂ ಆಹ್ವಾನ ನೀಡಿದ್ರಾ.? ಪೂರ್ಣ ವಿವರ ಇಲ್ಲಿ ಓದಿ

  ದರ್ಶನ್ ಚಿತ್ರದ ಮುಂದಿನ ನಾಯಕಿ ಯಾರು?

  ದರ್ಶನ್ ಚಿತ್ರದ ಮುಂದಿನ ನಾಯಕಿ ಯಾರು?

  ದರ್ಶನ್ ಅವರ 49ನೇ ಚಿತ್ರವನ್ನ ಮಿಲನ ಪ್ರಕಾಶ್ ನಿರ್ದೇಶನ ಮಾಡಲಿದ್ದು, ಈಗಾಗಲೇ ಚಿತ್ರದ ತಯಾರಿ ನಡೆಯುತ್ತಿದೆ. ಅಂದ್ಹಾಗೆ, ಈ ಚಿತ್ರದಲ್ಲಿ ದರ್ಶನ್ ಗೆ ಇಬ್ಬರು ನಾಯಕಿಯರಿದ್ದು, 'ಜಗ್ಗುದಾದ' ಜೊತೆಯಲ್ಲಿ ಡುಯೆಟ್ ಹಾಡಲಿರುವ ನಾಯಕಿಯರಿಗಾಗಿ ಡೈರೆಕ್ಟರ್ ಪ್ರಕಾಶ್ ಹುಡುಕಾಟದಲ್ಲಿದ್ದಾರೆ. ಮುಂದೆ ಓದಿ...

  ಮಾಸ್ತಿಗುಡಿ ದುರಂತದ ಬಗ್ಗೆ ಸ್ಫೋಟಕ ಮಾಹಿತಿ

  ಮಾಸ್ತಿಗುಡಿ ದುರಂತದ ಬಗ್ಗೆ ಸ್ಫೋಟಕ ಮಾಹಿತಿ

  ತಿಪ್ಪಗೊಂಡನಹಳ್ಳಿ ಕೆರೆಯ ಮಧ್ಯೆ ಚಿತ್ರೀಕರಣ ನಡೆಸಬೇಕು ಅಂತ ಐಡಿಯಾ ಕೊಟ್ಟಿದ್ದು ಯಾರು? ಡ್ಯೂಪ್ ಹಾಕದೇ 'ಎಲ್ಲವನ್ನೂ ನ್ಯಾಚುರಲ್ ಆಗಿ ಶೂಟಿಂಗ್ ಮಾಡಬೇಕು' ಎಂಬ ಒತ್ತಾಯ ಶುರು ಆಗಿದ್ದು ಯಾರಿಂದ? ಎಂಬ ಸ್ಫೋಟಕ ಮಾಹಿತಿ ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ ಓದಿರಿ...

  ಚಿತ್ರಾಲಿ ಹಾಗೂ ಕಿಚ್ಚ ಸುದೀಪ್ ಹೊಸ ಸಾಹಸ?

  ಚಿತ್ರಾಲಿ ಹಾಗೂ ಕಿಚ್ಚ ಸುದೀಪ್ ಹೊಸ ಸಾಹಸ?

  ಡ್ರಾಮಾ ಜ್ಯೂನಿಯರ್ಸ್ ನ ಚಿತ್ರಾಲಿ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್ ನಲ್ಲಿ ಶುರುವಾಗಲಿರುವ ಆ ಹೊಸ ಪ್ರಾಜೆಕ್ಟ್ ಯಾವುದು ಅಂತ ಮುಂದೆ ಓದಿ....

  ಲೂಸ್ ಮಾದ ಯೋಗಿ ಅಸಲಿ ಲವ್ ಸ್ಟೋರಿ

  ಲೂಸ್ ಮಾದ ಯೋಗಿ ಅಸಲಿ ಲವ್ ಸ್ಟೋರಿ

  ಪ್ರೇಮದ ಅಮಲಿನಲ್ಲಿ ತೇಲುತ್ತಿರುವ ನಟ ಲೂಸ್ ಮಾದ ಯೋಗಿ 'ಗರ್ಲ್ ಫ್ರೆಂಡ್' ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಿಮಗೆ ಇದ್ದರೆ, ಸಂಪೂರ್ಣ ವಿವರ ಇಲ್ಲಿದೆ ಓದಿರಿ....

  ಬಿಟಿವಿ ನಿರೂಪಕ ಚಂದನ್ ಶರ್ಮ ಎಲ್ಲಿದ್ದೀರಿ?

  ಬಿಟಿವಿ ನಿರೂಪಕ ಚಂದನ್ ಶರ್ಮ ಎಲ್ಲಿದ್ದೀರಿ?

  ಕನ್ನಡ ಸುದ್ದಿ ವಾಹಿನಿಗಳನ್ನ ತಪ್ಪದೇ ನೋಡುವವರಿಗೆ ನಿರೂಪಕ ಚಂದನ್ ಶರ್ಮಾ ಪರಿಚಿತ. ಬಿಟಿವಿ ವಾಹಿನಿಯಲ್ಲಿ ನ್ಯೂಸ್ ಆಂಕರ್ ಆಗಿ ಗುರುತಿಸಿಕೊಂಡಿರುವ ಚಂದನ್ ಶರ್ಮಾ, ಕಳೆದ ಕೆಲ ದಿನಗಳಿಂದ ಟಿವಿ ಪರದೆ ಮೇಲೆ ಪತ್ತೆ ಆಗಿಲ್ಲ. ಮುಂದೆ ಓದಿ...

  ಉಪೇಂದ್ರ ಕೊಟ್ಟಿರುವ ಸೂಪರ್ ಸುಪ್ರೀಂ ಐಡಿಯಾ ಏನು?

  ಉಪೇಂದ್ರ ಕೊಟ್ಟಿರುವ ಸೂಪರ್ ಸುಪ್ರೀಂ ಐಡಿಯಾ ಏನು?

  ಉಪೇಂದ್ರ ಕೊಟ್ಟಿರುವ ಸೂಪರ್ ಸುಪ್ರೀಂ ಐಡಿಯಾಗೆ ಕನ್ನಡ ಮಾಧ್ಯಮಗಳು ಸಹಕಾರ ನೀಡಿದರೆ, ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸಿದರೆ, ನೀರಿಗಾಗಿ ರೈತರು ಬೀದಿಗೆ ಇಳಿಯುವ ಪರಿಸ್ಥಿತಿ ಬರುವುದೇ ಇಲ್ಲ. ಅಷ್ಟಕ್ಕೂ ಉಪೇಂದ್ರ ರವರ ಪ್ಲಾನ್ ಏನು ಅಂತ ಅವರ ಮಾತುಗಳಲ್ಲೇ ಓದಿರಿ..

  ಪುನೀತ್ ರಾಜ್ ಅವರ ಹೊಸ ಮನೆ ಹೇಗಿದೆ?

  ಪುನೀತ್ ರಾಜ್ ಅವರ ಹೊಸ ಮನೆ ಹೇಗಿದೆ?

  ಬಿಡುವಿಲ್ಲದ ಶೂಟಿಂಗ್ ನಡುವೆಯೂ ಕುಟುಂಬ ಸದಸ್ಯರ ಜೊತೆ ಜೀವನ ಕಳೆಯಲು ಬಯಸಿರುವ ಪುನೀತ್ ರಾಜ್ ಕುಮಾರ್ ಹೊಸ ಮನೆ ಮಾಡಿದ್ದಾರೆ. ಪುನೀತ್ ರವರ ಎರಡನೇ ಮನೆಯ ಒಳಾಂಗಣ ವಿನ್ಯಾಸ ನೋಡಿದ್ರೆ, ನೀವು ಬಾಯಿ ಮೇಲೆ ಬೆರಳಿಡುತ್ತೀರಾ...ಮುಂದೆ ಓದಿ....

  ಶಿವಣ್ಣನಿಗೆ ಅಭಿಮಾನಿಯೊಬ್ಬರ ಪತ್ರ

  ಶಿವಣ್ಣನಿಗೆ ಅಭಿಮಾನಿಯೊಬ್ಬರ ಪತ್ರ

  'ಓಂ' ಹಿಟ್ ಆಗಿದ್ದಕ್ಕೆ ಇಷ್ಟೆಲ್ಲಾ ಸಹಿಸಿಕೊಳ್ಬೇಕಾ? ಶಿವಣ್ಣನಿಗೆ ಅಭಿಮಾನಿಯ ಪತ್ರ ಇಲ್ಲಿದೆ ಓದಿ

  ಫೇಸ್ಬುಕ್ -ಅತಿ ಹೆಚ್ಚು ಓದಲ್ಪಟ್ಟ ಪೋಸ್ಟ್

  ಫೇಸ್ಬುಕ್ -ಅತಿ ಹೆಚ್ಚು ಓದಲ್ಪಟ್ಟ ಪೋಸ್ಟ್

  ಬೆಳಗಾವಿಯಲ್ಲಿ ಹುಟ್ಟಿ, ಗೋವಾದಲ್ಲಿ ಜೀವನದಿಯಾಗಿ ಹರಿಯುತ್ತಿರುವ 'ಮಹದಾಯಿ' ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕಕ್ಕೆ ಹಿನ್ನಡೆಯಾದ ಹಿನ್ನಲೆಯಲ್ಲಿ, ಜುಲೈ 30 ರಂದು ಇಡೀ ಕರ್ನಾಟಕ ಬಂದ್ ಗೆ ಕನ್ನಡ ಚಿತ್ರರಂಗ ಕರೆ ನೀಡಿದ ಸುದ್ದಿ ಬಗ್ಗೆ ಪೋಸ್ಟ್

  English summary
  Best of 2016: Filmibeat Kannada Top viewed Facebook posts list is here. Facebook post varies from Cinema news, gossips, film reviews, FDFS twitter reviews and Interviews of celebrities. Filmibeat Kannada part of Oneindia is a leading Kannada portal. We have been in this space since 2000.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X