2018: ಫಿಲ್ಮಿಬೀಟ್ ಯೂಟ್ಯೂಬಿನ ಟಾಪ್ 10 ವಿಡಿಯೋಗಳು
ಸ್ಯಾಂಡಲ್ ವುಡ್ ನ ಸ್ವಾರಸ್ಯಕರ ಸುದ್ದಿಗಳ ಸುದ್ದಿಗಳ ಜತೆಗೆ ವೈವಿಧ್ಯಮಯ ವಿಡಿಯೋಗಳ ಮೂಲಕ ಓದುಗರನ್ನು ತಲುಪುವ ಸಾಧ್ಯತೆಯನ್ನು ಒನ್ಇಂಡಿಯಾ ಕನ್ನಡದ ಭಾಗವಾದ ಫಿಲ್ಮಿಬೀಟ್ ತನ್ನದಾಗಿಸಿಕೊಂಡಿದೆ.
ದೃಶ್ಯ-ಶ್ರವ್ಯ ಪ್ರಪಂಚದಲ್ಲಿ ಇನ್ನೂ ಪುಟ್ಟ ಹೆಜ್ಜೆ ಇಡುತ್ತಿರುವ ಫಿಲ್ಮಿಬೀಟ್ ಯೂಟ್ಯೂಬ್ ಚಾನೆಲ್ ನಲ್ಲಿ ಸದ್ಯ 3 ಲಕ್ಷಕ್ಕೂ ಅಧಿಕ ಚಂದಾದಾರರಿದ್ದು,
2018ರಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಒನ್ಇಂಡಿಯಾ ವಿಡಿಯೋಗಳು
2018ರಲ್ಲಿ ಸ್ಟಾರ್ ನಟ ಹೊಸ ಸಿನಿಮಾಗಳ ಸುದ್ದಿ, ಚಿತ್ರತಂಡ, ತಂತ್ರಜ್ಞರ ಸಂದರ್ಶನಗಳ ಜತೆಗೆ ಹೆಚ್ಚು ಸುದ್ದಿ ಮಾಡಿದ್ದು, ಗಾಸಿಪ್ ಹಾಗೂ ವಿವಾದಗಳ ವಿಡಿಯೋಗಳು ಎಂದರೆ ತಪ್ಪಾಗಲಾರದು. 2018ರಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋಗಳ ಮೆಲುಕು ಇಲ್ಲಿದೆ.
2000 ಇಸವಿಯಿಂದ ಕನ್ನಡ ಭಾಷೆ, ಸಂಸ್ಕೃತಿ, ಅನಿವಾಸಿ, ಹೊರನಾಡು, ಒಳನಾಡು ಕನ್ನಡಿಗರ ಜೊತೆ ನಿರಂತರ ಸಂವಹನ ಹೊಂದಿರುವ ಒನ್ಇಂಡಿಯಾ ಕನ್ನಡ (ಈ ಹಿಂದಿನ ದಟ್ಸ್ ಕನ್ನಡ) ಆಡಿಯೋ ವಿಡಿಯೋ ಸಾಧ್ಯತೆಗಳನ್ನು ತನ್ನದಾಗಿಸಿಕೊಂಡ ಮೇಲೆ ಸಿನಿಮಾ ಸುದ್ದಿ, ಸಮಾಚಾರ, ಸಂದರ್ಶನಗಳಿಗಾಗಿ ಪ್ರತ್ಯೇಕ ಯೂಟ್ಯೂಬ್ ಚಾನೆಲ್ ಹೊಂದಿದೆ.
ಫಿಲ್ಮಿಬೀಟ್ ಕನ್ನಡ ಯೂಟ್ಯೂಬ್ ಚಾನೆಲ್ ಗೆ ಚಂದಾದಾರರಾಗುವುದು ಹೇಗೆ
* ನಿಮ್ಮ ಬ್ರೌಸರ್ ನಲ್ಲಿ(ಡೆಸ್ಕ್ ಟಾಪ್ ಅಥವಾ ಮೊಬೈಲ್) ಗೂಗಲ್ ಸರ್ಚ್ ಓಪನ್ ಮಾಡಿ
* Filmibeat kannada youtube channel ಎಂದು ಟೈಪಿಸಿ
* ಮೊದಲಿಗೆ ಬರುವ Filmibeat Kannada- youtube ಲಿಂಕ್ ಕ್ಲಿಕ್ ಮಾಡಿ
* ನಿಮ್ಮ ಮುಂದೆ ಕಾಣುವ ಪುಟದ ಬಲತುದಿಯಲ್ಲಿರುವ ಕೆಂಪು ಬಣ್ಣದ Subscribe ಬಟನ್ ಒತ್ತಿ.
* ಅಂದ ಹಾಗೆ, ನೀವು ಚಂದಾದಾರರಾಗಲು ಯಾವುದೇ ಒಂದು ಜೀಮೇಲ್ ಐಡಿಯಿಂದ ಲಾಗಿನ್ ಆಗಿದ್ದರೆ ಸಾಕು.
* ಫಿಲ್ಮಿಬೀಟ್ ಕನ್ನಡ ಯೂಟ್ಯೂಬ್ ಚಾನೆಲ್ ನೇರ ಲಿಂಕ್ ಇಲ್ಲಿದೆ

ಅನುಶ್ರೀ-ಚಿಕ್ಕಣ್ಣ ಮದುವೆ ಗಾಸಿಪ್
ಜನಪ್ರಿಯ ನಿರೂಪಕಿ, ನಟಿ ಅನುಶ್ರೀ ಹಾಗೂ ನಟ ಚಿಕ್ಕಣ್ಣ ಅವರ ನಡುವೆ ಪ್ರೇಮಾಂಕುರವಾಗಿದೆ. ಇಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹೆಚ್ಚು ಕಾಲ ಗಾಸಿಪ್ ಆಗಿ ಉಳಿದಿತ್ತು. ಈ ಬಗ್ಗೆ ಬಂದ ವಿಡಿಯೋವು 24,73,175 ಬಾರಿ ವೀಕ್ಷಿಸಲ್ಪಟ್ಟಿದೆ. ನೀವು ಒಮ್ಮೆ ನೋಡಲು ಕ್ಲಿಕ್ ಮಾಡಿ

ದರ್ಶನ್ ಬಳಿ ಇರುವ ಕಾರ್ ಬಗ್ಗೆ ಕುತೂಹಲ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಖರೀದಿಸಿರುವ 'ಲಂಬೋರ್ಗಿನಿ' ಕಾರು ಬಗ್ಗೆ ಮಾಡಿದ ವಿಡಿಯೋವು 11,65,702 ಬಾರಿ ವೀಕ್ಷಣೆ ಪಡೆದುಕೊಂಡಿದೆ.
'ದಾಸ' ಈಗ ಕೊಂಡುಕೊಂಡಿರುವ ಲಂಬೋರ್ಗಿನಿ ಕಾರಿನ ಬೆಲೆ ಸುಮಾರು 5.8 ಕೋಟಿ ರು. ಅಂದ್ಹಾಗೆ, ದರ್ಶನ್ ಗೆ ಸಿಕ್ಕಾಪಟ್ಟೆ ಕಾರ್ ಕ್ರೇಜ್ ಇದೆ. ಮಾರುಕಟ್ಟೆಗೆ ಯಾವುದಾದರೂ ಹೊಸ ಕಾರ್ ಬಂದ್ರೆ, ಅದನ್ನ ತನ್ನದಾಗಿಸಿಕೊಳ್ಳಬೇಕು ಎನ್ನುವ ಛಲ. ಅದಕ್ಕೆ ದಾಸನ ಬಳಿ ಇರುವ ಐಷರಾಮಿ ಕಾರುಗಳೇ ಸಾಕ್ಷಿ.
ಅಷ್ಟಕ್ಕೂ, ದಚ್ಚು ಬಳಿ ಎಷ್ಟು ಕಾರ್ ಗಳಿವೆ ಗೊತ್ತಾ? ವಿಡಿಯೋ ನೋಡಿ

'ಬ್ರಹ್ಮಗಂಟು' ಗುಂಡಮ್ಮನ ಕಣ್ಣೀರ ಕಥೆ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ 'ಗುಂಡಮ್ಮ', 'ಜಂಬೂ ಸವಾರಿ' ಅಂತೆಲ್ಲ ನಾಯಕಿ ಗೀತಾಗೆ ಹೀಯಾಳಿಸುವ ಸನ್ನಿವೇಶಗಳಿವೆ. ಗುಂಡಮ್ಮನಾಗಿ ಎಲ್ಲರಿಂದ ಅವಮಾನಕ್ಕೆ ಒಳಗಾಗಿ ಆಗಾಗ ಕಣ್ಣೀರು ಸುರಿಸುವ ಗೀತಾ ನಿಜ ಜೀವನದಲ್ಲೂ ಅಂಥದ್ದೇ ಪರಿಸ್ಥಿತಿ ಎದುರಿಸಿದ್ದಾರೆ. ನಿಜಜೀವನದಲ್ಲೂ ಅವಮಾನ ಎದುರಿಸಿದ 'ಬ್ರಹ್ಮಗಂಟು' ಗುಂಡಮ್ಮನ ಕಣ್ಣೀರ ಕಥೆ ಕೇಳಲು ಈ ವೀಡಿಯೋ ನೋಡಿ.

ಸರಿಗಮಪ ಸೀಸನ್ 14ರ ಫೈನಲ್ ನಲ್ಲಿ ಅಚ್ಚರಿ
'ಜೀ ಕನ್ನಡ' ವಾಹಿನಿಯ 'ಸರಿಗಮಪ' ಕಾರ್ಯಕ್ರಮ ಮೆಗಾ ಆಡಿಷನ್ ನಲ್ಲಿಯೇ ಮೋಡಿ ಮಾಡಿದೆ. ಎರಡು ವಾರ ಕಾರ್ಯಕ್ರಮದ ಮೆಗಾ ಆಡಿಷನ್ ನಡೆದಿದ್ದು, ಇದರಲ್ಲಿ ಒಟ್ಟು 15 ಸ್ಪರ್ಧಿಗಳು ಆಯ್ಕೆ ಆಗಿದ್ದರು. ಈ ಪೈಕಿ ಬಳ್ಳಾರಿಯ ಜ್ಞಾನೇಶ್ ಎಂಬ 10 ವರ್ಷದ ಈ ಹುಡುಗನ ಹಾಡು ಕೇಳಿ ಕಾರ್ಯಕ್ರಮದ ಮೂರು ತೀರ್ಪುಗಾರಾದ ಹಂಸಲೇಖ, ವಿಜಯ ಪ್ರಕಾಶ್ ಮತ್ತು ಅರ್ಜುನ್ ಜನ್ಯ ಕೈ ಮುಗಿದಿದ್ದಾರೆ. ಈ ಬಗ್ಗೆ ಮಾಡಿದ ವಿಡಿಯೋ 18,03,615 ವೀಕ್ಷಣೆ ಪಡೆದುಕೊಂಡಿದೆ. ನೀವು ವಿಡಿಯೋ ನೋಡಿ

ಕುರಿ ಕಾಯೋ ಹನುಂತಣ್ಣನಿಗೆ ವಿಜಯ್ ಪ್ರಕಾಶ್
ಸರಿಗಮಪ ಸೀಸನ್ 15 ಸ್ಪರ್ಧಿ ಹನುಮಂತ ಅವರ ಮುಗ್ಧತೆಗೆ ಮರುಳಾಗಿರುವ ವಿಜಯ್ ಪ್ರಕಾಶ್ ಅವರಿಗೆ ಸಂಗೀತ ಪಾಠ ಹೇಳಿ ಕೊಡುವುದಾಗಿ ತಿಳಿಸಿದ್ದಾರೆ. ವಿಡಿಯೋ ವೀಕ್ಷಣೆ 11,61,339. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ

ಹೊಟ್ಟೆಕಿಚ್ಚಿನಿಂದ ದುನಿಯಾ ಮೇಲೆ ಕೇಸ್ ಹಾಕಿದ್ರಾ ಕಿಟ್ಟಿ..?
ದುನಿಯಾ ವಿಜಯ್, ಮಾರುತಿ ಗೌಡ, ಪಾನಿಪೂರಿ ಕಿಟ್ಟಿ ವಿಚಾರದಲ್ಲಿ ಈಗ ಒಂದು ಹೊಸ ವಿಚಾರ ಬಂದಿದೆ. ರಫಿ ಎನ್ನುವ ವ್ಯಕ್ತಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಈ ವಿಡಿಯೋ ನೋಡಲು ಕ್ಲಿಕ್ ಮಾಡಿ

ಕನ್ನಡದಲ್ಲಿ ಡೈಲಾಗ್ ಹೊಡೆದ ಸೆಹ್ವಾಗ್
ಸುದೀಪ್ ಅವರು ಬಹಳಷ್ಟು ಶ್ರಮ ಪಟ್ಟು ಈ ಬಾರಿಯ ಚಲನಚಿತ್ರ ಕಪ್ ಗಾಗಿ ಅಂತಾರಾಷ್ಟ್ರೀಯ ಆಟಗಾರರನ್ನು ಕರೆಸಿದ್ದಾರೆ . ಸೆಹ್ವಾಗ್ ಅವರು ಇದೇ ಸಂದರ್ಭದಲ್ಲಿ ಆರುಮುಗಮ್ ಡೈಲಾಗನ್ನು ತನ್ನದೇ ಸ್ಟೈಲ್ ನಲ್ಲಿ ಹೇಳಿದರು. ಸೆಹ್ವಾಗ್ ಮಾತನ್ನು ಕೇಳಲು ಕ್ಲಿಕ್ ಮಾಡಿ

ಅಗ್ನಿಸಾಕ್ಷಿ ಸೀರಿಯಲ್ ಚಂದ್ರಿಕಾ ಬಗ್ಗೆ
ಅಗ್ನಿಸಾಕ್ಷಿ ಸೀರಿಯಲ್ ಚಂದ್ರಿಕಾ ಅವರ ಮೇಕಪ್ ರಹಿತ ಚಿತ್ರಗಳು ಕಳೆದ ಎರಡು ವರ್ಷಗಳಿಂದ ಟ್ರೆಂಡಿಂಗ್ ನಲ್ಲಿವೆ.. ಯಾಕೆ ಟ್ರೆಂಡಿಂಗ್ ನಲ್ಲಿವೆ ವಿಷಯ ತಿಳಿಯಲು ಈ ವಿಡಿಯೋ ನೋಡಿ

ಅಂಬರೀಷ್ ನಿಧನದ ಬಗ್ಗೆ ರವಿಚಂದ್ರನ್ ಮಾತು
ನಟ ಅಂಬರೀಷ್ ಅವರ ಸ್ನೇಹದ ಬಗ್ಗೆ ಅವರಿಲ್ಲದ ಕನ್ನಡ ಚಿತ್ರರಂಗದ ಬಗ್ಗೆ ರವಿಚಂದ್ರನ್ ಅವರು ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ

ದರ್ಶನ್ ಅವರ ಒಂದು ದಿನ ಖರ್ಚು ವೆಚ್ಚ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾರಂಗದಲ್ಲಿ ನಂ ಒನ್ ಸ್ಟಾರ್ ಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ನಟ. ಕಲಾವಿದ ಅಂದ ಮಾತ್ರಕ್ಕೆ ಕೇವಲ ಸಿನಿಮಾಗಳಲ್ಲಿ ಅಭಿನಯಿಸುವುದಷ್ಟೇ ಅಲ್ಲ, ಮನಸ್ಸಿಗೆ ಇಷ್ಟವಾಗುವ ಕೆಲಸಗಳನ್ನೂ ಮಾಡಬೇಕು ಎನ್ನುವ ಮನಸ್ಸಿರುವ ನಟ. ಎಲ್ಲರಿಗೂ ತಿಳಿದಿರುವಂತೆ ದರ್ಶನ್ ಪ್ರಾಣಿ ಪ್ರಿಯ ತಮ್ಮ ಮನೆ ಹಾಗೂ ಫಾರ್ಮ್ ಹೌಸ್ ನಲ್ಲಿ ಸಾಕಷ್ಟು ಪ್ರಾಣಿ ಪಕ್ಷಿಗಳನ್ನ ಸಾಕಿಕೊಂಡಿದ್ದಾರೆ.ಇನ್ನು ದರ್ಶನ್ ದಿನಕ್ಕೆ ಎಷ್ಟು ಮಾಡ್ತಾರೆ ಅನ್ನೋ ಅಂದಾಜು ಕೂಡ ಮಾಡೋಕೆ ಆಗಲ್ಲ. ಈ ವಿಡಿಯೋ ನೋಡಿ ಗೊತ್ತಾಗತ್ತೆ


Click it and Unblock the Notifications











