For Quick Alerts
  ALLOW NOTIFICATIONS  
  For Daily Alerts

  'ಬೆತ್ತನಗೆರೆ' ಚಿತ್ರಕ್ಕೆ ಎದುರಾಗಿದೆ ಹೊಸ ಸಂಕಷ್ಟ

  By Harshitha
  |

  ರಿಯಲಿಸ್ಟಿಕ್ ಸಿನಿಮಾಗಳ ಹಣೆಬರಹವೇ ಇಷ್ಟು. ನೈಜಕಥೆ ಆಧಾರಿತ ಸಿನಿಮಾಗಳನ್ನು ನಿರ್ಮಾಣ ಮಾಡುವಾಗ ತುಂಬಾ ಜಾಗರೂಕರಾಗಿರಬೇಕು. ಅದ್ರಲ್ಲೂ ರೌಡಿಸಂ ಬೇಸ್ಡ್ ಸಿನಿಮಾಗಳನ್ನ ರೆಡಿ ಮಾಡೋದು ಅಂದ್ರೆ ಕತ್ತಿ ಮೇಲೆ ನಡೆದಂತೆಯೇ ಸರಿ.

  ಇಂತಹ ಪರಿಸ್ಥಿತಿಯನ್ನ ಈಗ ಎದುರಿಸುತ್ತಿರುವುದು 'ಬೆತ್ತನಗೆರೆ' ಚಿತ್ರತಂಡ. ರಿಯಲ್ ರೌಡಿ 'ಬೆತ್ತನಗೆರೆ' ಸೀನನ ರಕ್ತಚರಿತ್ರೆ ಆಧಾರಿತ ಈ ಚಿತ್ರ ಸೆಟ್ಟೇರಿದಾಗಿನಿಂದಲೂ ಒಂದಲ್ಲಾ ಒಂದು ತಂಟೆ-ತಕರಾರು ಎದುರಿಸುತ್ತಲೇ ಇದೆ. ['ಬೆತ್ತನಗೆರೆ' ಸೀನನ್ನ ಕೊಚ್ಚಿ ಹಾಕಿದ ಸೆನ್ಸಾರ್ ಮಂಡಳಿ]

  ಸೆನ್ಸಾರ್ ಅಂಗಳದಿಂದ ದಾಖಲೆ ಪ್ರಮಾಣದ ಕಟ್ಸ್ ಪಡೆದಿರುವ 'ಬೆತ್ತನಗೆರೆ' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಬೆಳ್ಳಿಪರದೆ ಮೇಲೆ ಸಿನಿಮಾ ರಾರಾಜಿಸುವ ಮುನ್ನ 'ಮೊದಲು ನಮಗೆ ಸಿನಿಮಾ ತೋರ್ಸಿ' ಅಂತ ರಿಯಲ್ 'ಬೆತ್ತನಗೆರೆ' ಹುಡುಗ್ರು ಚಿತ್ರತಂಡದವರಿಗೆ ತಾಕೀತು ಮಾಡಿದ್ದಾರಂತೆ. ಮುಂದೆ ಓದಿ....

  ''ಮೊದ್ಲು ನಾವ್ ಸಿನಿಮಾ ನೋಡ್ಬೇಕ್.!''

  ''ಮೊದ್ಲು ನಾವ್ ಸಿನಿಮಾ ನೋಡ್ಬೇಕ್.!''

  ''ಬೆತ್ತನಗೆರೆ' ಚಿತ್ರವನ್ನ ಮೊದಲು ನಮಗೆ ತೋರ್ಸಿ, ನಾವ್ ಅದನ್ನ ಮೊದಲು ನೋಡ್ಬೇಕ್.!'' ಹೀಗಂತ 'ಬೆತ್ತನಗೆರೆ' ಚಿತ್ರತಂಡಕ್ಕೆ ತಾಕೀತು ಮಾಡಿದ್ದಾರೆ ಬೆತ್ತನಗೆರೆ ಸೀನನ ಸಹೋದರ ಅಂಡ್ ಗ್ಯಾಂಗ್.

  ಸಿನಿಮಾದಲ್ಲಿ ಏನಿದೆ ಅನ್ನುವ ಅನುಮಾನ?

  ಸಿನಿಮಾದಲ್ಲಿ ಏನಿದೆ ಅನ್ನುವ ಅನುಮಾನ?

  'ಬೆತ್ತನಗೆರೆ' ಸಿನಿಮಾದಲ್ಲಿ ಸೀನನನ್ನ ಹೇಗೆ ತೋರಿಸಲಾಗಿದೆ. ಸೀನ ಮತ್ತು ಶಂಕ್ರನ ನಡುವಿನ ಅನುಬಂಧದ ಚಿತ್ರಣ ಹೇಗೆ ಮೂಡಿಬಂದಿದೆ. ಯಾರ ಬಗ್ಗೆ ಚಿತ್ರದಲ್ಲಿ ಅವಹೇಳನ ಮಾಡಲಾಗಿದೆ ಅನ್ನುವ ಬಗ್ಗೆ ಬೆತ್ತನಗೆರೆ ಸೀನನ ಸಹೋದರನಿಗೆ ಅನುಮಾನ ಮೂಡಿದೆ. ಹೀಗಾಗಿ ''ಮೊದಲು ಸಿನಿಮಾ ನಮಗೆ ತೋರ್ಸಿ, ನಮಗೆ ಅಭ್ಯಂತರ ಇಲ್ಲವಾದರೆ ಬಿಡುಗಡೆ ಮಾಡಿಕೊಳ್ಳಿ'' ಅಂತ 'ಬೆತ್ತನಗೆರೆ' ಚಿತ್ರದ ನಿರ್ದೇಶಕ ಮೋಹನ್ ಗೆ ಬೆತ್ತನಗೆರೆ ಸೀನನ ಸಹೋದರ ಹೇಳಿದ್ದಾರಂತೆ.

  ಆಪೋಸಿಟ್ ಗ್ಯಾಂಗ್ ನಿಂದಲೂ ಫೋನ್ ಕಾಲ್

  ಆಪೋಸಿಟ್ ಗ್ಯಾಂಗ್ ನಿಂದಲೂ ಫೋನ್ ಕಾಲ್

  ಬೆತ್ತನಗೆರೆ ಸೀನನ ವಿರುದ್ಧ ಕತ್ತಿ ಮಸೆಯುತ್ತಿದ್ದ ಆಪೋಸಿಟ್ ಗ್ಯಾಂಗ್ ನವರೂ ಕೂಡ 'ನಮಗೆ ಸಿನಿಮಾ ತೋರ್ಸಿ' ಅಂತ 'ಬೆತ್ತನಗೆರೆ' ನಿರ್ಮಾಪಕ-ನಿರ್ದೇಶಕರ ಬೆನ್ನುಬಿದ್ದು ಫೋನ್ ಕಾಲ್ ಮಾಡುತ್ತಿದ್ದಾರಂತೆ.

  ವಾರದೊಳಗೆ ಸ್ಕ್ರೀನಿಂಗ್

  ವಾರದೊಳಗೆ ಸ್ಕ್ರೀನಿಂಗ್

  ಎರಡು ಗ್ಯಾಂಗ್ ನವರಿಗೆ 'ಬೆತ್ತನಗೆರೆ' ಸಿನಿಮಾ ತೋರಿಸೋಕೆ ನಿರ್ದೇಶಕರು ಸಜ್ಜಾಗುತ್ತಿದ್ದಾರೆ. ಇನ್ನೊಂದು ವಾರದೊಳಗೆ ಸ್ಕ್ರೀನಿಂಗ್ ಅರೇಂಜ್ ಮಾಡ್ತೀವಿ ಅಂತ 'ಫಿಲ್ಮಿಬೀಟ್ ಕನ್ನಡ'ಗೆ ನಿರ್ದೇಶಕ ಮೋಹನ್ ತಿಳಿಸಿದ್ದಾರೆ.

  ಇಬ್ಬರೂ ಒಪ್ಪಿದರೆ ಸಿನಿಮಾ ರಿಲೀಸ್?

  ಇಬ್ಬರೂ ಒಪ್ಪಿದರೆ ಸಿನಿಮಾ ರಿಲೀಸ್?

  ''ಬೆತ್ತನಗೆರೆ' ಸಿನಿಮಾ ರಿಲೀಸ್ ಮಾಡುವುದಕ್ಕೆ ಯಾವುದೇ ತಕರಾರು ಇಲ್ಲ. ಎರಡು ಗ್ಯಾಂಗ್ ನವರು ಸಿನಿಮಾ ನೋಡಬೇಕು ಅಂತ ಕೂತಿದ್ದಾರೆ. ಸಿನಿಮಾ ನೋಡಿದ್ಮೇಲೆನೇ ರಿಲೀಸ್ ಸಾಧ್ಯ. ಎರಡು ಗ್ಯಾಂಗ್ ನವರು ಸಿನಿಮಾ ನೋಡಿ ಎನ್ ಹೇಳ್ತಾರೋ, ನೋಡೋಣ'' ಅಂತಾರೆ 'ಬೆತ್ತನಗೆರೆ' ಚಿತ್ರದ ನಿರ್ದೇಶಕ ಮೋಹನ್.

  'ಬೆತ್ತನಗೆರೆ' ಚಿತ್ರದಲ್ಲೇನಿದೆ?

  'ಬೆತ್ತನಗೆರೆ' ಚಿತ್ರದಲ್ಲೇನಿದೆ?

  ಬೆತ್ತನಗೆರೆ ಸೀನನ ರಕ್ತಸಿಕ್ತ ಅಧ್ಯಾಯವೇ 'ಬೆತ್ತನಗೆರೆ' ಸಿನಿಮಾ. ಬೆತ್ತನಗೆರೆ ಸೀನ ಪಾತ್ರದಲ್ಲಿ ಸುಮಂತ್ ಶೈಲೇಂದ್ರ ಬಾಬು ಕಾಣಿಸಿಕೊಂಡಿದ್ದರೆ, ಬೆತ್ತನಗೆರೆ ಶಂಕ್ರ ಪಾತ್ರದಲ್ಲಿ 'ಸಿಲ್ಕ್' ಖ್ಯಾತಿಯ ಅಕ್ಷಯ್ ಇದ್ದಾರೆ. ವಿಶೇಷ ಪಾತ್ರದಲ್ಲಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಕೂಡ ಅಭಿನಯಿಸಿದ್ದಾರೆ.

  English summary
  Rowdysheeter Bettanagere Seena's brother is compelling Mahesh, Director of Kannada Movie 'Bettanagere' to screen him a special show before the release of the film. This has created a panic in 'Bettanagere' movie team.
  Monday, August 10, 2015, 13:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X