ಇಬ್ಬರಲ್ಲಿಯೂ ಪ್ರೀತಿ ಇರಬೇಕು ; ಮಾಜಿ ಪತ್ನಿ ನಿವೇದಿತಾ ಗೌಡ ಮೇಲೆ ಸೈಬರ್ ದಾಳಿ - ಚಂದನ್ ಶೆಟ್ಟಿ ಅಂತರಂಗದ ನುಡಿ

ಒಮ್ಮೊಮ್ಮೆ ಎಲ್ಲರ ಕಣ್ಣಿಗೆ ಕಾಮಿಡಿ ಪೀಸುಗಳಂತೆ ಕಾಣುತ್ತಿದ್ದವರು. ನೋಡ ನೋಡುತ್ತಿದ್ದಂತೇ ಹೇಳಿಮಾಡಿಸಿದಂತಾ ಬದುಕನ್ನು ರೂಪಿಸಿಕೊಂಡು, ಲೇವಡಿ ಮಾಡೋರ ಮುಂದೆ ಗೆದ್ದು ಬೀಗುತ್ತಾರೆ. ಇನ್ನೂ ಕೆಲವೊಮ್ಮೆ ತುಂಬಾನೇ ಇಷ್ಟ ಪಟ್ಟು ಮದುವೆಯಾದವರು, ಒಬ್ಬರನ್ನು ಬಿಟ್ಟು ಒಬ್ಬರು ಉಸಿರಾಡಲೂ ಸಾಧ್ಯವಿಲ್ಲ ಅಂದುಕೊಂಡವರು, ವಿರೋಧಗಳನ್ನು ಧಿಕ್ಕರಿಸಿ ಮದುವೆಯಾದವರು, ಜೊತೆಗೂಡಿದ ಕೆಲವೇ ದಿನಗಳಲ್ಲಿ ದೂರವಾಗುತ್ತಾರೆ. ಇದಕ್ಕೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅತ್ಯುತ್ತಮ ಉದಾಹರಣೆ.

ಇಂಥಾ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದೂರವಾಗಿ ಒಂದೂವರೆ ವರ್ಷವಾಗಿದೆ. ಆದರೆ.. ಇವತ್ತು ಕೂಡ ಇವರ ವಿಚ್ಛೇದನದ ವಿಚಾರದ ಕುರಿತು ಅನೇಕರಲ್ಲಿರುವ ಕುತೂಹಲ ಕಡಿಮೆಯಾಗಿಲ್ಲ. ಇವತ್ತು ಕೂಡ ಇಬ್ಬರು ದೂರವಾಗಿದ್ದೇಕೆ ? ಮನಸ್ತಾಪ ಶುರುವಾಗಿದ್ದು ಎಲ್ಲಿಂದ ? ಎನ್ನುವ ಪ್ರಶ್ನೆ ಹಲವರಲ್ಲಿ ಇದ್ದೇ ಇದೆ.

Better Than a Police Station Chandan Shetty on Expectations and Niveditha Gowda Trolling

ಇದಕ್ಕೆ ಕೈಗನ್ನಡಿ ಎನ್ನುವಂತೆ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ಮದುವೆ ಮತ್ತು ವಿಚ್ಚೇದನದ ಕುರಿತು ಚರ್ಚೆ ಇವತ್ತು ಕೂಡ ನಡೆಯುತ್ತಲೇ ಇವೆ. ಅದರಲ್ಲಿಯೂ ನಿವೇದಿತಾ ಗೌಡ ಅವರ ವಿರುದ್ಧ ಒಂದು ವರ್ಗ ಇದೇ ವಿಚಾರದಲ್ಲಿ ಕಿಡಿ ಕಾರುತ್ತಲೇ ಇದೆ. ನಿರಂತರವಾಗಿ ಟ್ರೋಲ್ ಮಾಡುತ್ತಿದೆ. ನಿವೇದಿತಾ ಗೌಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದೇ ಫೋಟೊ ಅಥವಾ ವಿಡಿಯೋ ಹಾಕಿದರು ಕೂಡ ಕೆಟ್ಟಾ ಕೊಳಕು ಕಾಮೆಂಟ್‌ಗಳನ್ನು ಮಾಡುತ್ತಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಚಂದನ್ ಶೆಟ್ಟಿ ಈಗ ಮಾತನಾಡಿದ್ದಾರೆ. ಪ್ರೀತಿ ಅಂದರೇನು..? ಪ್ರೀತಿಯ ವ್ಯಾಖ್ಯಾನವೇನು..? ಎಂದು ಹೇಳಿದ್ದಾರೆ. ''ವಿಶ್ವವಾಣಿ ಟಿವಿ''ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಚಂದನ್ ಶೆಟ್ಟಿ ಪ್ರೀತಿ ಅಂದರೆ ಎರಡು ಕಡೆ ಇರಬೇಕು ಎಂದು ಹೇಳಿದ್ದಾರೆ.

ಪ್ರೀತಿಯ ವ್ಯಾಖ್ಯಾನವೇನು..? ಎಂದು ಕೇಳಲಾದ ಪ್ರಶ್ನೆಗೆ ಉತ್ತರ ನೀಡಿರುವ ಚಂದನ್ ಶೆಟ್ಟಿ, ಇಬ್ಬರಲ್ಲಿಯೂ ಪ್ರೀತಿ ಇರಬೇಕು ಎನ್ನುವುದು ನನಗೆ ಮನವರಿಕೆಯಾಗಿದೆ ಎಂದು ಹೇಳಿದ್ಧಾರೆ. ಹಲವು ಜೋಡಿಗಳು ಹಲವು ನಿರೀಕ್ಷೆಗಳಿಂದ ಒಂದಾಗಿರುತ್ತಾರೆ. ಆದರೆ ವಾಸ್ತವದಲ್ಲಿ, ಆ ನಿರೀಕ್ಷೆಗಳನ್ನು ಹ್ಯಾಂಡಲ್ ಮಾಡಲು ಆಗದಿದ್ದಾಗ ದೂರ ಆಗ್ತಾರೆ ಎಂದು ಹೇಳಿರುವ ಚಂದನ್ ಶೆಟ್ಟಿ ಇಷ್ಟ ಪಟ್ಟೆ ಜೊತೆಯಾಗಿರ್ತಾರೆ ಆದರೆ, ಒಬ್ಬರಿಗೊಬ್ಬರಿಗೂ ಅಂಡರ್‌ಸ್ಟ್ಯಾಂಡಿಂಗ್‌ ಆಗಿಲ್ಲ ಅಂತಂದಾಗ ದೂರ ಆಗ್ತಾರೆ ಎಂದಿದ್ಧಾರೆ.

ಕೆಲವರು ಅಂಡರ್‌ಸ್ಟ್ಯಾಂಡಿಂಗ್‌ನಿಂದ ದೂರ ಆಗ್ತಾರೆ. ಕೆಲವರು ಹಾದಿ ಬೀದಿ ರಂಪ ಮಾಡ್ಕೊಂಡು ಪೊಲೀಸ್‌ ಸ್ಟೇಷನ್‌ ಮೆಟ್ಟಿಲೇರುತ್ತಾರೆ, ಆ ರೀತಿ ಮಾಡಿಕೊಳ್ಳೋದಕ್ಕಿಂತ, ಅಂಡರ್‌ಸ್ಟ್ಯಾಂಡಿಂಗ್‌ನಲ್ಲಿ ದೂರ ಆಗೋದು ಒಳ್ಳೆಯದು ಎಂದು ಹೇಳಿರುವ ಚಂದನ್ ಶೆಟ್ಟಿ ಇಬ್ಬರ ಕಡೆಯಿಂದಲೂ ಪ್ರೀತಿ ಇದ್ದರೆ, ಆ ಸಂಬಂಧಕ್ಕೆ ಬೆಲೆ ಇರುತ್ತೆ ಎಂದು ಹೇಳಿದ್ದಾರೆ.

Better Than a Police Station Chandan Shetty on Expectations and Niveditha Gowda Trolling

ಇನ್ನು ನಿವೇದಿತಾ ಗೌಡ ಮೇಲೆ ನಡೆಯುತ್ತಿರುವ ಸೈಬರ್ ದಾಲಿಯ ಕುರಿತು ಕೂಡ ಮಾತನಾಡಿರುವ ಚಂದನ್ ಶೆಟ್ಟಿ, ಬಹುಶಃ ಜನ ನೋಡುವ ದೃಷ್ಟಿಕೋನಕ್ಕೂ ಮತ್ತು ಇಮೇಜ್‌ಗೆ ಹೋಲಿಕೆಯಾಗದಿದ್ದಾಗ ಜನ ಅಸಮ್ಮತಿಯನ್ನು ವ್ಯಕ್ತಪಡಿಸಲು ಶುರು ಮಾಡುತ್ತಾರೆ ಎಂದು ಹೇಳಿದ್ದಾರೆ.

ನಾವು ಇವರನ್ನು ಆ ತರಹ ಅಂದುಕೊಂಡಿದ್ವಿ ಆದರೆ ಅವರು ಆ ತರ ಇಲ್ಲ ಎನ್ನುವ ಚಿತ್ರಣವೇನಾದರೂ ಸೃಷ್ಟಿಯಾದರೆ ಕೆಲವರು ಬೇಕಂತಲೆ ಕಾಮೆಂಟ್‌ ಮಾಡಲು ಶುರು ಮಾಡುವ ಸಾಧ್ಯತೆ ಇರುತ್ತೆ ಎಂದು ಹೇಳಿರುವ ಚಂದನ್ ಶೆಟ್ಟಿ, ಮತ್ತೂ ಕೆಲ ಒಮ್ಮೆ ಯಾರೋ ಒಬ್ಬರು ಕಾಮೆಂಟ್‌ ಮಾಡಿದರೆ, ಇನ್ನೂ ಹತ್ತು ಜನ ಅದನ್ನೇ ಫಾಲೋ ಮಾಡ್ತಾರೆ ಎಂದು ಹೇಳಿದ್ದಾರೆ. ಈ ಕಾರಣಕ್ಕೆ ನಾವು ಪಬ್ಲಿಕ್‌ ಲೈಫ್‌ನಲ್ಲಿದ್ದಾಗ, ಸಮಾಜ ನಮ್ಮಿಂದೇನು ಎಕ್ಸ್‌ಪೆಕ್ಟ್‌ ಮಾಡ್ತಿದೆ..? ಅವರಿಗೆ ನಾವು ಏನು ಕೊಡ್ತಾ ಇದ್ದೀವಿ ಅನ್ನೋದನ್ನ ನಾವು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ ಎಂದಿದ್ಧಾರೆ.

ಇದೇ ಸಮಯದಲ್ಲಿ ನಾನು ಮತ್ತು ನಿವೇದಿತಾ ಅವರು ಇವತ್ತಿನವರೆಗೆ ಮತ್ತೆ ಮಾತಾಡಿಲ್ಲ ಎಂದು ಹೇಳಿರುವ ಚಂದನ್ ಶೆಟ್ಟಿ, ಡಿವೋರ್ಸ್ ಆಯ್ತು ಆದರೆ ಬೇಜಾರಿಲ್ಲ. ಬದಲಿಗೆ ಇನ್ನೂ ಸಾಧನೆ ಮಾಡಬೇಕೆಂಬ ಕಿಚ್ಚು ಮನದಲ್ಲಿದೆ ಎಂದು ಹೇಳಿದ್ದಾರೆ. ಅಂದ್ಹಾಗೇ ಚಂದನ್ ಶೆಟ್ಟಿ ಅಭಿನಯದ ಎಲ್ರ ಕಾಲ್ ಎಳೆಯುತ್ತೆ ಕಾಲ'' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಏಪ್ರಿಲ್ 17ರಂದು ಚಿತ್ರ ತೆರೆಗೆ ಬರಲಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಲಾಗಿದ್ದು ಈ ಸಮಯದಲ್ಲಿ ಚಂದನ್ ಶೆಟ್ಟಿ ಮೇಲಿನ ಈ ಮಾತುಗಳನ್ನಾಡಿದ್ಧಾರೆ.

More from Filmibeat

English summary
Chandan Shetty breaks his silence on the Niveditha Gowda trolling. From the "definition of love" to avoiding toxic legal battles, see his powerful reaction here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X