ಜಗ್ಗೇಶ್ ಮಲ್ಲೇಶ್ವರದಲ್ಲಿ ಮನೆ ಕಟ್ಟಲು ಕಾರಣವಾಗಿದ್ದು ಇದೇ ಸಿನಿಮಾ

Recommended Video

ಜಗ್ಗೇಶ್ ಮನೆ ಕಟ್ಟಿದ್ದರ ಹಿಂದಿದೆ ರೋಚಕ ಕಥೆ | FILMIBEAT KANNADA

ನವರಸನಾಯಕ ಜಗ್ಗೇಶ್ ಸ್ಯಾಂಡಲ್ ವುಡ್ ನ ಖ್ಯಾತ ನಟ. ನೂರಕ್ಕು ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಚಿತ್ರಾಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿರುವ ಜಗ್ಗೇಶ್ ತನ್ನ ಜೀವನದ ಬಹುಮುಖ್ಯವಾದ ಚಿತ್ರದ ಬಗ್ಗೆ ಹೇಳಿಕೊಂಡಿದ್ದಾರೆ. ಜಗ್ಗೇಶ್ ಸಿನಿಮಾಗಳೆಂದ್ರೆನೆ ಹಾಸ್ಯ. ವಿಭಿನ್ನವಾದ ಸಿನಿಮಾಗಳ ಮೂಲಕವೆ ಗುರುತಿಸಿಕೊಂಡಿದ್ದಾರೆ ಜಗ್ಗೇಶ್.

ಇಂದು ಜಗ್ಗೇಶ್ ದೊಡ್ಡ ನಟನಾಗಿ ಬೆಳೆದುನಿಂತಿದ್ದಾರೆ ಅಂದ್ರೆ ಅವ್ರ ಶ್ರಮ ಮತ್ತು ಅವರು ಮಾಡಿದ ಸಿನಿಮಾಗಳೆ ಕಾರಣ. ಜಗ್ಗೇಶ್ ಬಗ್ಗೆ ಯಾಕಿಷ್ಟು ಪೀಠಿಕೆ ಅಂತ ಅಚ್ಚರಿ ಪಡಬೇಡಿ. ಯಾಕಂದ್ರೆ ಜಗ್ಗೇಶ್ ಬದುಕಿಗೆ ದೊಡ್ಡ ತಿರುವು ಕೊಟ್ಟ ಸಿನಿಮಾದ ಬಗ್ಗೆ ಜಗ್ಗಣ್ಣ ಹೇಳಿಕೊಂಡಿದ್ದಾರೆ.

ಪ್ರತಿಯೊಬ್ಬ ನಟರಿಗೂ ತನ್ನ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಎನ್ನುವುದು ಇರುತ್ತೆ. ಹಾಗೆ ಜಗ್ಗೇಶ್ ಜೀವನಕ್ಕೆ ತಿರುವು ನೀಡಿದ ಸಿನಿಮಾ ಅಂದ್ರೆ 'ಬೇವು ಬೆಲ್ಲ'. ಈ ಸಿನಿಮಾದಿಂದ ಜಗ್ಗೇಶ್ ಇಂದು ಸ್ವಂತ ಮನೆ ಮಾಡಿಕೊಂಡು ಬೆಂಗಳೂರಿನಲ್ಲಿ ನೆಮ್ಮದಿಂದ ಜೀವನ ನಡೆಸುವಂತಾಗಿದೆ. ಈ ಬಗ್ಗೆ ಜಗ್ಗೇಶ್ ಹೇಳಿದ್ದೇನು? ಮುಂದೆ ಓದಿ..

ಜಗ್ಗೇಶ್ ಮನೆ ಕಟ್ಟಲು ಸಾಧ್ಯವಾಯ್ತು 'ಬೇವು ಬೆಲ್ಲ' ಸಿನಿಮಾ

ಜಗ್ಗೇಶ್ ಮನೆ ಕಟ್ಟಲು ಸಾಧ್ಯವಾಯ್ತು 'ಬೇವು ಬೆಲ್ಲ' ಸಿನಿಮಾ

ನವರಸ ನಾಯಕ ಜಗ್ಗೇಶ್ ಅಭಿನಯದ ಸಿನಿಮಾಗಳಲ್ಲಿ ಬೇವು ಬೆಲ್ಲ ಚಿತ್ರ ಜಗ್ಗೇಶ್ ಜೀವನಕ್ಕೆ ತುಂಬಾ ವಿಶೇಷವಾದ ಚಿತ್ರವಾಗಿದೆ. ಕಾರಣ 'ಬೇವು ಬೆಲ್ಲ' ಸಿನಿಮಾದಲ್ಲಿ ಅಭಿನಯಿಸಿದ ಕಾರಣ ಜಗ್ಗೇಶ್ ಮನೆಕಟ್ಟಲು ಸಾಧ್ಯವಾಯಿತಂತೆ. ಈ ಚಿತ್ರ ಜಗ್ಗೇಶ್ ಬದುಕನ್ನೆ ಬದಲಾಯಿಸಿದ ಸಿನಿಮಾವಾಗಿದೆ. ಅತೀ ಹೆಚ್ಚು ಸಂಭಾವನೆ ಪಡೆದು ಅದೇ ಹಣದಲ್ಲಿ ದೊಡ್ಡ ನಗರಿ ಬೆಂಗಳೂರಿನಲ್ಲಿ ಮನೆ ಖರೀದಿಸಿದ್ದಾರೆ ಜಗ್ಗಣ್ಣ. ಈ ಸಿನಿಮಾದ ಬಗ್ಗೆ ನವರಸ ನಾಯಕ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಹಳ್ಳಿ ಹುಡುಗನ ಬದುಕಿನ ಸುವರ್ಣಕಾಲ ಸೃಷ್ಟಿಸಿದ ಸಿನಿಮಾ

ಜಗ್ಗೇಶ್ ಇಂದು ಬೆಂಗಳೂರಿನಲ್ಲಿ ಮನೆ ಕಟ್ಟಿಕೊಂಡು ನೆಮ್ಮದಿಯಾಗಿ ಜೀವನ ಮಾಡುತ್ತಿದ್ದಾರೆ ಅಂದ್ರೆ ಅದಕ್ಕೆ ಕಾರಣವಾಗಿದ್ದು 'ಬೇವು ಬೆಲ್ಲ' ಸಿನಿಮಾ ಅಂತೆ. ಈ ಬಗ್ಗೆ ಜಗ್ಗೇಶ್ ಹೇಳಿಕೊಂಡಿದ್ದು ಹೀಗೆ. "ಅಂದು ಈ ಚಿತ್ರದಲ್ಲಿ ನಟನೆಗೆ ನನಗೆ ಸಿಕ್ಕ ಪ್ರತಿಪಲ ನನ್ನ ಮಲ್ಲೇಶ್ವರದ ಮನೆ ಕಟ್ಟಲು 32/58 ಜಾಗ. ಇಂದು ಇದರ ಮಾರ್ಕೆಟ್ ದರ 6ಕೋಟಿ. ಅಂದಿನ ಸಂಭಾವನೆ, ಘನತೆ, ನಡೆದು ಬಂದ ದಾರಿ, ಕನ್ನಡಿಗರ ಚಪ್ಪಾಳೆ ಹೆಮ್ಮೆ ಅನ್ನಿಸುತ್ತಿದೆ. ಹಳ್ಳಿ ಹುಡುಗನ ಬದುಕಿನ ಸುವರ್ಣಕಾಲ ಸೃಷ್ಟಿಸಿದ ಚಿತ್ರಗಳು ಅಂದು ಇಂದು ಮುಂದು"

1993ರಲ್ಲಿ ರಿಲೀಸ್ ಆದ ಬೇವು ಬೆಲ್ಲ

1993ರಲ್ಲಿ ರಿಲೀಸ್ ಆದ ಬೇವು ಬೆಲ್ಲ

ಬೇವು ಬೆಲ್ಲ 1993ರಲ್ಲಿ ತೆರೆಗೆ ಬಂದ ಸಿನಿಮಾ. ಎಸ್ ನಾರಾಯಣ್ ಅವರ ನಿರ್ದೇಶನ, ಸ್ಕ್ರೀನ್ ಪ್ಲೇ ಮತ್ತು ಸಂಭಾಷಣೆ ಈ ಚಿತ್ರಕ್ಕಿತ್ತು. ಜಗ್ಗೇಶ್ ಗೆ ನಾಯಕಿಯಾಗಿ ರಾಗಿಣಿ ಕಾಣಿಸಿಕೊಂಡಿದ್ದರು. ಇನ್ನು ಚಿತ್ರದಲ್ಲಿ ಹಿರಿಯ ನಟ ಲೋಕೇಶ್, ಎಸ್ ನಾರಾಯಣ್ ಸೇರಿದಂತೆ ದೊಡ್ಡ ಕಲಾವಿದರ ದಂಡೆ ಇತ್ತು. ವಿಶೇಷ ಅಂದ್ರೆ ಈ ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್ ಅಂದ್ರೆ ನಾದಬ್ರಹ್ಮ ಹಂಸಲೇಖ ಅವರ ಸಂಗೀತ. ಅದ್ಭುತ ಹಾಡುಗಳು ಚಿತ್ರದ ಸಕ್ಸಸ್ ಗೆ ಮತ್ತೊಂದು ಕಾರಣವಾಗಿತ್ತು.

ಹಂಸಲೇಖ ಸಂಗೀತ ಸೂಪರ್ ಹಿಟ್

ಹಂಸಲೇಖ ಸಂಗೀತ ಸೂಪರ್ ಹಿಟ್

ಕನ್ನಡದ ಸೂಪರ್ ಹಿಟ್ ಹಾಡುಗಳ ಸಾಲಿನಲ್ಲಿ ಬೇವು ಬೆಲ್ಲ ಚಿತ್ರದ ಹಾಡುಗಳು ಇವೆ. ಅದರಲ್ಲೂ "ಜನ್ಮ ನೀಡುತ್ತಾಳೆ ನಮ್ಮ ತಾಯಿ, ಅನ್ನ ನೀಡುತ್ತಾಳೆ ಭೂಮಿ ತಾಯಿ" ಹಾಡು ಇಂದಿಗೂ ಎವರ್ ಗ್ರೀನ್ ಹಾಡಾಗಿ ಗಾನಪ್ರಿಯರ ಮನದಲ್ಲಿ ಮನೆ ಮಾಡಿದೆ. ಈ ಅದ್ಭುತವಾದ ಹಾಡಿಗೆ ಹಂಸಲೇಖ ಅವರ ಹಾಹಿತ್ಯ ಮತ್ತು ಸಂಗೀತವಿದೆ. ಜೊತೆಗೆ ರಾಜೇಶ್ ಕೃಷ್ಣನ್, ಎಸ್ ಪಿ ಬಾಲಸುಭ್ರಮಣ್ಯಂ, ಕೆ.ಎಸ್ ಚಿತ್ರ ಮತ್ತು ಲತಾ ಹಂಸಲೇಖ ಅವರ ದ್ವನಿ ಈ ಹಾಡು ಮತ್ತಷ್ಟು ಇಂಪಾಗಿ ಮೂಡಿ ಬರುವಂತೆ ಮಾಡಿದೆ.

More from Filmibeat

English summary
'Bevu Bella' is the most important movie in Navarasanayaka Jaggesh life. This movie helps a Jaggesh purchase house in Malleshwaram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X