twitter
    For Quick Alerts
    ALLOW NOTIFICATIONS  
    For Daily Alerts

    ಕರ್ನಾಟಕ ಫಿಲ್ಮ್ ಚೇಂಬರ್ ನೂತನ ಅಧ್ಯಕ್ಷರಾಗಿ ಭಾಮಾ ಹರೀಶ್ ಆಯ್ಕೆ: ಸಾ ರಾ ಗೋವಿಂದುಗೆ ಸೋಲು!

    |

    ಕರ್ನಾಟಕ ಚಲನಚಿತ್ರ ವಾಣಿಜ್ಯ ಚುನಾವಣೆ ಹಲವು ದಿನಗಳಿಂದ ಕುತೂಹಲ ಕೆರಳಿಸಿತ್ತು. ಫಿಲ್ಮ್ ಚೇಂಬರ್‌ನಲ್ಲಿ ಕಳೆದ ಹಲವು ದಿನಗಳಿಂದ ಚುನಾವಣೆ ನಡೆದಿರಲಿಲ್ಲ. ಈ ಕಾರಣಕ್ಕೆ ನಿರ್ಮಾಪಕರಾಗಿದ್ದ ಭಾ ಮಾ ಹರೀಶ್ ಆಕ್ರೋಶ ವ್ಯಕ್ತಪಡಿಸಿದ್ದರು. ಕೊರೊನಾ ಕಾರಣದಿಂದ ಚುನಾವಣೆ ನಡೆಯದಿದ್ದರೂ, ಆ ಬಳಿಕ ಚುನಾವಣೆಯನ್ನು ನಡೆಸಲು ಮುಂದಾಗಿಲ್ಲ ಎಂದು ಕಿಡಿಕಾರಿದ್ದರು. ಜೊತೆಗೆ ಇನ್ನೂ ಕೆಲವು ಸದಸ್ಯರ ಒತ್ತಡದಿಂದ ಮೇ 28ರಂದು ಚುನಾವಣೆ ನಡೆಸಲು ಫಿಲ್ಮ್ ಚೇಂಬರ್ ಮುಂದಾಗಿದ್ದಾಗಿತ್ತು.

    ಮೇ 28ರ ಬೆಳಗ್ಗೆಯಿಂದಲೇ ಫಿಲ್ಮ್ ಚೇಂಬರ್‌ನಲ್ಲಿ ಚುನಾವಣೆ ಕಾವು ಜೋರಾಗಿತ್ತು. ಭಾ ಮಾ ಹರೀಶ್ ಹಾಗೂ ಸಾರಾ ಗೋವಿಂದು ಚುನಾವಣೆಯ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದರು. ಇಬ್ಬರ ಬಣಗಳು ಕೂಡ ಕಳೆದ ಕೆಲವು ದಿನಗಳಿಂದ ಸದಸ್ಯರನ್ನು ಮನವೊಲಿಸಲು ಮುಂದಾಗಿದ್ದರು. ಅದರಂತೆ ಭಾ ಮಾ ಹರೀಶ್ ಹೆಚ್ಚು ಮತಗಳನ್ನು ಪಡೆದು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

    ಅವಧಿ ಮುಗಿದು ವರ್ಷವಾದರೂ ಫಿಲ್ಮ್ ಚೇಂಬರ್‌ಗೆ ಚುನಾವಣೆ ನಡೆದಿಲ್ಲ: ರೊಚ್ಚಿಗೆದ್ದ ಸದಸ್ಯರು ಅವಧಿ ಮುಗಿದು ವರ್ಷವಾದರೂ ಫಿಲ್ಮ್ ಚೇಂಬರ್‌ಗೆ ಚುನಾವಣೆ ನಡೆದಿಲ್ಲ: ರೊಚ್ಚಿಗೆದ್ದ ಸದಸ್ಯರು

    ಭಾ ಮಾ ಹರೀಶ್ ಪಡೆದ ಮತಗಳೆಷ್ಟು?

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಭಾ ಮಾ ಹರೀಶ್ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ದರ್ಶನ್ ಅಭಿನಯದ 'ಮೆಜೆಸ್ಟಿಕ್' ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಇವರ ಬೆಂಬಲಕ್ಕೆ ಹಿರಿಯ ನಟಿ ಜಯಮಾಲಾ, ಹಿರಿಯ ನಿರ್ದೇಶಕ ಎಸ್‌ ವಿ ರಾಜೇಂದ್ರ ಸಿಂಗ್ ಬಾಬು, ಸುಂದರ್ ರಾಜ್, ಪ್ರಮಿಳಾ ಜೋಷಾಯ್ ಸೇರಿದಂತೆ ಹಲವು ಮಂದಿ ಚಿತ್ರರಂಗದ ಗಣ್ಯರು ಬೆಂಬಲ ಸೂಚಿಸಿದ್ದರು.

    Bha Ma Harish Is The New President Of Karnataka Film Chamber Of Commerce

    ಮೇ 28ರ ಮಧ್ಯಾಹ್ನ 2 ಗಂಟೆಯಿಂದ ಆರಂಭವಾಗಿದ್ದ ಚುನಾವಣೆಗೆ ಫಿಲ್ಮ್ ಚೇಂಬರ್‌ನ ಸದಸ್ಯರು ಬಂದು ಮತಚಲಾಯಿಸಿದ್ದರು. ಶೇ.62ರಷ್ಟು ಮತಗಳು ಚಲಾವಣೆಗೊಂಡಿದ್ದವು. 796 ನಿರ್ಮಾಪಕರು, 301 ಮಂದಿ ವಿತರಕರು ಹಾಗೂ 679 ಮಂದಿ ಪ್ರದರ್ಶನಕರು ಪಾಲ್ಗೊಂಡಿದ್ದರು. ಇವರಲ್ಲಿ ಭಾ. ಮಾ ಹರೀಶ್‌ಗೆ 781 ಮತಗಳು ಪಡೆದುಕೊಳ್ಳುವ ಮೂಲಕ ಫಿಲ್ಮ್ ಚೇಂಬರ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

    ಚಿತ್ರರಂಗದಲ್ಲಿ ಸುದೀಪ್, ದರ್ಶನ್, ಅಪ್ಪು, ಯಶ್ ಮಾತ್ರ ಹೀರೋಗಳಲ್ಲ: ಶಿವರಾಜ್ ಕುಮಾರ್ಚಿತ್ರರಂಗದಲ್ಲಿ ಸುದೀಪ್, ದರ್ಶನ್, ಅಪ್ಪು, ಯಶ್ ಮಾತ್ರ ಹೀರೋಗಳಲ್ಲ: ಶಿವರಾಜ್ ಕುಮಾರ್

    ಮಾಜಿ ಅಧ್ಯಕ್ಷ ಸಾ ರಾ ಗೋವಿಂದುಗೆ ಸೋಲು

    ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾ ರಾ ಗೋವಿಂದು ಚುನಾವಣೆಯಲ್ಲಿ ಸೋಲುಂಡಿದ್ದಾರೆ. ಈ ಬಾರಿ ಹೊಸಬರಿಗೆ ಅವಕಾಶ ಕೊಡಬೇಕು ಎಂಬ ಕೂಗು ಕೇಳಿಬಂದಿತ್ತು. ಅಲ್ಲದೆ, ಫಿಲ್ಮ್ ಚಂಬರ್‌ನಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಕಾರಣಕ್ಕೆ ಈ ಬಾರಿ ಸಾ ರಾ ಗೋವಿಂದು ಬೆಂಬಲಕ್ಕೆ ಫಿಲ್ಮ್ ಚೇಂಬರ್ ಸದಸ್ಯರು ನಿಂತಿಲ್ಲ ಎನ್ನಲಾಗಿದೆ.

    Bha Ma Harish Is The New President Of Karnataka Film Chamber Of Commerce

    ಸಾ ರಾ ಗೋವಿಂದುಗೆ ಈ ಬಾರಿಯ ಚುನಾವಣೆಯಲ್ಲಿ ಕೇವಲ 378 ಮತಗಳು ಮಾತ್ರ ಸಿಕ್ಕಿದ್ದು, ಇವರ ಬಣದಿಂದ ಕಣಕ್ಕಿಳಿದವರೂ ಸೋಲುಂಡಿದ್ದಾರೆ. ಅಂದ್ಹಾಗೆ ನಿರ್ಮಾಪಕರ ವಲಯದಿಂದ ಉಪಾಧ್ಯಕ್ಷರಾಗಿ ಜೈ ಜಗದೀಶ್ ಆಯ್ಕೆಯಾಗಿದ್ದು, 673 ಮತಗಳನ್ನು ಪಡೆದುಕೊಂಡಿದ್ದಾರೆ. ವಿತರಕರ ವಲಯದಿಂದ ಉಪಾಧ್ಯಕ್ಷರ ಸ್ಥಾನಕ್ಕೆ ಶಿಲ್ಪ ಶ್ರೀನಿವಾಸ್ ಆಯ್ಕೆಯಾಗಿದ್ದಾರೆ. ನಿರ್ಮಾಪಕರ ವಲಯದಿಂದ ಗೌರವ ಕಾರ್ಯದರ್ಶಿಯಾಗಿ ಹಿರಿಯ ನಟ ಸುಂದರ್ ರಾಜ್, ವಿತರಕರ ವಲಯದಿಂದ ಕುಮಾರ್ ಎಂ ಎನ್, ಪ್ರದರ್ಶಕರ ವಲಯದಿಂದ ಕುಶಾಲ್ ಎಲ್‌ ಸಿ ಆಯ್ಕೆಯಾಗಿದ್ದಾರೆ.

    English summary
    Bha Ma Harish Is The New President Of Karnataka Film Chamber Of Commerce, Know More.
    Monday, May 30, 2022, 9:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X