For Quick Alerts
  ALLOW NOTIFICATIONS  
  For Daily Alerts

  ಹೊಸ ತಂತ್ರಜ್ಞಾನದೊಂದಿಗೆ ಬರುತ್ತಿದೆ ಅಣ್ಣಾವ್ರ 'ಭಾಗ್ಯವಂತರು'

  |

  ಡಾ.ರಾಜ್‌ಕುಮಾರ್, ಸರೋಜಾ ದೇವಿ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ 'ಭಾಗ್ಯವಂತರು' ಹೊಸ ತಂತ್ರಜ್ಞಾನದೊಂದಿಗೆ ಮತ್ತೆ ಪ್ರೇಕ್ಷಕರ ಮುಂದು ಬರುತ್ತಿದೆ.

  ಹೌದು, 1977 ರಲ್ಲಿ ಬಿಡುಗಡೆ ಆಗಿದ್ದ 'ಭಾಗ್ಯವಂತರು' ಸಿನಿಮಾ ಇದೀಗ ಹೊಸ ತಂತ್ರಜ್ಞಾನಗಳಿಗೆ ಒಳಪಟ್ಟು ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ.

  ವಿತರಕರೂ, ಸಿನಿಮಾ ನಿರ್ಮಾಪಕರೂ ಆಗಿರುವ ಮುನಿರಾಜು ಎಂಬುವರು 'ಭಾಗ್ಯಂವತರು' ಸಿನಿಮಾಕ್ಕೆ ಆಧುನಿಕ ತಂತ್ರಜ್ಞಾನದ ಟಚ್ ಕೊಡಿಸಿ ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿಸುತ್ತಿದ್ದಾರೆ.

  ದ್ವಾರಕೀಶ್ ನಿರ್ಮಿಸಿ, ಭಾರ್ಗವ ನಿರ್ದೇಶಿಸಿದ್ದ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ರಾಜ್‌ಕುಮಾರ್ ಅವರ ಅನೇಕ ಐಕಾನಿಕ್ ಸಿನಿಮಾಗಳಲ್ಲಿ ಭಾಗ್ಯವಂತರೂ ಸಹ ಒಂದು.

  'ನನಗೆ ಡಾ.ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ಅವರುಗಳ ಮೇಲೆ ವಿಪರೀತ ಗೌರವ. ಅವರೇ ನನಗೆ ಭಾಗ್ಯವಂತರು, ಹಾಗಾಗಿ ಈ ಸಿನಿಮಾ ಮತ್ತೆ ಬಿಡುಗಡೆ ಮಾಡುತ್ತಿದ್ದೇನೆ' ಎಂದಿದ್ದಾರೆ ಮುನಿರಾಜು.

  ಹೊಸ ತಂತ್ರಜ್ಞಾನದೊಂದಿಗೆ ಕೆಲವು ಮಾಲ್‌ಗಳಲ್ಲಿ ಸೇರಿದಂತೆ ರಾಜ್ಯದ 100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ಬಿಡುಗಡೆ ಗೊಳಿಸುವ ಯೋಜನೆ ಮುನಿರಾಜು ಗೆ ಇದೆ.

  ಮುನಿರಾಜು ಅವರು, 'ಆಪರೇಷನ್ ಡೈಮಂಡ್ ರಾಕೆಟ್', 'ನಾನೊಬ್ಬ ಕಳ್ಳ', 'ರಾಜ ನನ್ನ ರಾಜ', 'ದಾರಿ ತಪ್ಪಿದ ಮಗ' ಇನ್ನೂ ಹಲವು ಸಿನಿಮಾಗಳಿಗೆ ವಿತರಕರಾಗಿ ಕೆಲಸ ಮಾಡಿದ್ದಾರೆ. ತಮ್ಮ ಮುನೇಶ್ವರ ಫಿಲಮ್ಸ್ ಪ್ರೊಡಕ್ಷನ್ ವತಿಯಿಂದ 'ಭಾಗ್ಯವಂತರು' ಸಿನಿಮಾ ಮರುಬಿಡುಗಡೆ ಮಾಡುತ್ತಿದ್ದಾರೆ.

  ರಾಜ್‌ಕುಮಾರ್ ಅವರ ಹಲವು ಸಿನಿಮಾಗಳು ಮರುಬಿಡುಗಡೆ ಆಗಿ ಜನರನ್ನು ಸೆಳೆದಿವೆ. ಸತ್ಯ ಹರಿಶ್ಚಂದ್ರ, ಕಸ್ತೂರಿ ನಿವಾಸ ಸಿನಿಮಾಗಳಿಗೆ ಬಣ್ಣ ತುಂಬಿ ಮರುಬಿಡುಗಡೆ ಮಾಡಲಾಗಿತ್ತು.

  English summary
  Dr Rajkumar's Bhagyavantharu movie is re-releasing with new technology. Distributor Muniraju releasing the movie in more than 100 theaters.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X