ದಕ್ಷಿಣದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟನೊಟ್ಟಿಗೆ ಶಿವಣ್ಣ ನಟನೆ

ನಟ ಶಿವರಾಜ್‌ಕುಮಾರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅನಾರೋಗ್ಯದ ನಡುವೆಯೂ 'ಭೈರತಿ ರಣಗಲ್' ಪ್ರಚಾರದಲ್ಲಿ ಭಾಗಿ ಆಗಿದ್ದಾರೆ. ಶೀಘ್ರದಲ್ಲೇ '45' ಸಿನಿಮಾ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ. ತಮಿಳು ಸಿನಿಮಾಗಳಲ್ಲಿ ಕೂಡ ಸೆಂಚುರಿ ಸ್ಟಾರ್ ಬ್ಯುಸಿ ಆಗುತ್ತಿದ್ದಾರೆ.

'ಜೈಲರ್' ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಶಿವಣ್ಣ ಅಬ್ಬರಿಸಿದ್ದರು. ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಆ ಯಶಸ್ಸಿನಲ್ಲಿ ನರಸಿಂಹ ಆಗಿ ಸೆಂಚುರಿ ಸ್ಟಾರ್ ಪಾಲೂ ಇದೆ. ಕೇವಲ ಎರಡೇ ಎರಡು ಸೀನ್‌ಗಳಲ್ಲಿ ಶಿವಣ್ಣನ ನಟನೆಗೆ ಸಿನಿರಸಿಕರು ಫಿದಾ ಆಗಿದ್ದರು. ಸದ್ಯ 'ಜೈಲರ್' ಪ್ರೀಕ್ವೆಲ್ ಪ್ಲ್ಯಾನ್ ನಡೀತಿದೆ. ಮತ್ತೆ ಶಿವಣ್ಣ ನಟಿಸೋ ಸಾಧ್ಯತೆಯಿದೆ.

Bhairathi ranagal ator Shiva Rajkumar to play an important role in Vijay s Thalapathy69

ನರಸಿಂಹ ಪಾತ್ರಕ್ಕೆ ತಮಿಳು, ತೆಲುಗು, ಮಲಯಾಳಂ ಪ್ರೇಕ್ಷಕರಿಂದಲೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಇನ್ನು ಇದೀಗ ಟಾಲಿವುಡ್, ಕಾಲಿವುಡ್ ನಿರ್ದೇಶಕರು ಶಿವಣ್ಣನಿಗೆ ಕಥೆ ಹೇಳುತ್ತಿದ್ದಾರೆ. ಅದರಲ್ಲಿ ಕೆಲವು ಚಿತ್ರಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ತೆಲುಗಿನಲ್ಲಿ ರಾಮ್‌ಚರಣ್ ಕಾಂಬಿನೇಷನ್‌ನಲ್ಲಿ ಒಂದು ಸಿನಿಮಾ ಪಕ್ಕಾ ಆಗಿದೆ. ತಮಿಳಿನಲ್ಲಿ ಯೋಗಿ ಬಾಬು ಜೊತೆ ನಟಿಸುತ್ತಿರುವುದಾಗಿ ಹೇಳಿದ್ದಾರೆ. ಹೀರೊ ಆಗಿ ಒಂದು ತಮಿಳು ಚಿತ್ರ ಕೂಡ ಮೂಡಿ ಬರಲಿದೆ.

ಸದ್ಯ ತಮಿಳು ನಟನ ದಳಪತಿ ವಿಜಯ್ ನಟನೆಯ ಕೊನೆ ಚಿತ್ರಕ್ಕೂ ಶಿವಣ್ಣ ಆಯ್ಕೆ ಆಗಿದ್ದಾರೆ. ಹೆಚ್. ವಿನೋದ್ ನಿರ್ದೇಶನದ 'ದಳಪತಿ69' ಚಿತ್ರದಲ್ಲಿ ಸೆಂಚುರಿ ಸ್ಟಾರ್ ಅಬ್ಬರಿಸುವುದು ಪಕ್ಕಾ ಆಗಿದೆ. ಸಂದರ್ಶನವೊಂದರಲ್ಲಿ ಸ್ವತಃ ಶಿವರಾಜ್‌ಕುಮಾರ್ ಈ ವಿಚಾರ ಬಹಿರಂಗ ಪಡಿಸಿದ್ದಾರೆ. ಅಂದಹಾಗೆ 'ದಳಪತಿ69' ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ.

Bhairathi ranagal ator Shiva Rajkumar to play an important role in Vijay s Thalapathy69

ತಮಿಳಗ ವೆಟ್ರಿ ಕಳಗಂ ಎಂಬ ಪಕ್ಷ ಸ್ಥಾಪಿಸಿ ನಟ ವಿಜಯ್ ತಮಿಳುನಾಡು ರಾಜಕೀಯರಂಗ ಪ್ರವೇಶ ಮಾಡಿದ್ದಾರೆ. 2026ರ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಹೊಸ ಸರ್ಕಾರ ರಚಿಸಿ ಜನಸೇವೆ ಮಾಡಲು ಮುಂದಾಗಿದ್ದಾರೆ. ಇತ್ತೀಚೆಗೆ ನಡೆದ ಪಕ್ಷದ ಸಮಾವೇಶ ಅಭೂತಪೂರ್ವ ಯಶಸ್ಸು ಕಂಡಿತ್ತು. ಲಕ್ಷಾಂತರ ಜನ ಭಾಗಿ ಆಗಿದ್ದರು.

ಸಕ್ರಿಯ ರಾಜಕಾರಣಕ್ಕೆ ಮುಂದಾಗಿರುವ ದಳಪತಿ ವಿಜಯ್ ಮುಂದೆ ಸಿನಿಮಾಗಳಲ್ಲಿ ನಟಿಸದಿರಲು ನಿರ್ಧರಿಸಿದ್ದಾರೆ. ಕೊನೆಯದಾಗಿ ಒಂದು ಚಿತ್ರದಲ್ಲಿ ಬಣ್ಣ ಹಚ್ಚಲು ತೀರ್ಮಾನಿಸಿದ್ದಾರೆ. ಆ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. 'ದಳಪತಿ69' ಎನ್ನುವ ವರ್ಕಿಂಗ್ ಟೈಟಲ್‌ನಲ್ಲಿ ಸಿನಿಮಾ ಆರಂಭವಾಗಿದೆ. ಈ ಚಿತ್ರಕ್ಕಾಗಿ ವಿಜಯ್ ಬರೋಬ್ಬರಿ 250 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗ್ತಿದೆ.

'ದಳಪತಿ69' ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಮಿಂಚಲಿದ್ದಾರೆ. ಇನ್ನುಳಿದಂತೆ ಪ್ರಕಾಶ್ ರಾಜ್, ಗೌತಮ್ ವಾಸುದೇವ್‌ ಮೆನನ್, ಬಾಬಿ ಡಿಯೋಲ್, ಪ್ರಿಯಾಮಣಿ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ. ಇದೀಗ ಶಿವಣ್ಣ ಕೂಡ ಪಾತ್ರವೊಂದರಲ್ಲಿ ನಟಿಸುವುದು ಪಕ್ಕಾ ಆಗಿದೆ.

ವಿಜಯ್ ಮುಂದಿನ ಸಿನಿಮಾದಲ್ಲಿ ಒಂದು ಪಾತ್ರ ಮಾಡುವಂತೆ ಕೇಳಿದ್ದಾರೆ. ಒಂದೊಳ್ಳೆ ಪಾತ್ರ ಅದು. ಹೇಗೆ ಬರುತ್ತದೆ ಎಂದು ನೋಡಬೇಕು. ಇದು ವಿಜಯ್ ಕೊನೆ ಸಿನಿಮಾ ಎಂದು ಹೇಳಲಾಗುತ್ತಿದೆ. ವಿಜಯ್ ರೀತಿಯ ನಟರು ಕೊನೆ ಸಿನಿಮಾ ಎನ್ನಬಾರದು. ವಿಜಯ್ ಅದ್ಭುತ ನಟ. ಒಳ್ಳೆ ವ್ಯಕ್ತಿ. ಅವರ ರಾಜಕೀಯ ಧ್ಯೇಯ ಕೂಡ ಇಷ್ಟವಾಯಿತು" ಎಂದು ಶಿವಣ್ಣ ಹೇಳಿಕೊಂಡಿದ್ದಾರೆ.

ಇನ್ನು ಶಿವಣ್ಣ ನಟನೆಯ 'ಭೈರತಿ ರಣಗಲ್' ಈ ವಾರ ತೆರೆಗೆ ಬರ್ತಿದೆ. ಸೂಪರ್ ಹಿಟ್ 'ಮಫ್ತಿ' ಪ್ರೀಕ್ವೆಲ್ ಇದು. ನರ್ತನ್ ಆಕ್ಷನ್ ಕಟ್ ಹೇಳಿದ್ದು ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ.

More from Filmibeat

English summary
Kannada Actor Shiva Rajkumar confirmed one more Tamil movie in latest interview.
Read more about: vijay shivarajkumar kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X