'ಭೈರತಿ ರಣಗಲ್ಲು' ಸಿನಿಮಾದ ಬಗ್ಗೆ ಮೌನ ಮುರಿದ ನರ್ತನ್
Recommended Video
'ಮಫ್ತಿ' ಸಿನಿಮಾದ ಶಿವರಾಜ್ ಕುಮಾರ್ ಪಾತ್ರ ಸಿನಿಮಾ ಆಗುತ್ತಿದೆ. 'ಭೈರತಿ ರಣಗಲ್ಲು' ಸಿನಿಮಾದ ಸುದ್ದಿ ಈಗಾಗಲೇ ಬಂದಿದ್ದು, ಮುಂದಿನ ವರ್ಷ ಚಿತ್ರ ಪ್ರಾರಂಭ ಆಗಲಿದೆ. ಈ ಚಿತ್ರದ ಬಗ್ಗೆ ಕೆಲ ವಿಷಯವನ್ನು ನಿರ್ದೇಶಕ ನರ್ತನ್ ತಿಳಿಸಿದ್ದಾರೆ.
'ಭರಾಟೆ' ಸಿನಿಮಾದ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನರ್ತನ್ ತಮ್ಮ 'ಭೈರತಿ ರಣಗಲ್ಲು' ಚಿತ್ರದ ಪ್ರಶ್ನೆಗಳಿಗೆ ಉತ್ತರ ನೀಡಿದರು. ಈ ಸಿನಿಮಾದ ಕಥೆಯ ಕೆಲಸಗಳು ಸದ್ಯ ನಡೆಯುತ್ತಿದ್ದು, 2020ಕ್ಕೆ ಸಿನಿಮಾ ಲಾಂಚ್ ಆಗಲಿದೆಯಂತೆ.

'ಭೈರತಿ ರಣಗಲ್ಲು' ಪಾತ್ರದ ಪೂರ್ವಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತದೆಯಂತೆ. ಭೈರತಿ ರಣಗಲ್ಲು ಪಾತ್ರದ ಹಿನ್ನಲೆಯೇ ಈ ಚಿತ್ರದ ನಿರೂಪಣೆ ಆಗಲಿದೆ ಎನ್ನುವುದು ನರ್ತನ್ ಮಾತಿನ ಮೂಲಕ ತಿಳಿಯುತ್ತದೆ. ಚಿತ್ರದ ಕೊನೆಯಲ್ಲಿ ಶ್ರೀಮುರಳಿ ಎಂಟ್ರಿ ಆಗುವ ಸಾಧ್ಯತೆ ಇದೆ.
ಅಂದಹಾಗೆ, ಇದು ಶಿವರಾಜ್ ಕುಮಾರ್ ನಟನೆಯ 125ನೇ ಸಿನಿಮಾವಾಗಿದ್ದು, ಶ್ರೀಮುತ್ತು ಬ್ಯಾನರ್ ನಲ್ಲಿ ನಿರ್ಮಾಣ ಆಗಲಿದೆ. ಶಿವಣ್ಣ ಬಂಡವಾಳ ಹಾಕುತ್ತಿರುವ ಮೊದಲ ಸಿನಿಮಾ ಇದಾಗಿದೆ.

ಈ ಸಿನಿಮಾದ ನಂತರ ಶ್ರೀ ಮುರಳಿ ಜೊತೆಗೆ ನರ್ತನ್ ಮತ್ತೊಂದು ಸಿನಿಮಾ ಮಾಡುವ ಯೋಚನೆ ಇದೆ ಎಂದು ತಿಳಿಸಿದ್ದಾರೆ.


Click it and Unblock the Notifications











