Ganesh Chaturthi 2024: ಗಣೇಶ ಹಬ್ಬಕ್ಕೆ ಹೊಚ್ಚ ಹೊಸ ಪೋಸ್ಟರ್‌ಗಳು ರಿಲೀಸ್

ದೇಶ ವಿದೇಶಗಳಲ್ಲಿ ಸಡಗರ ಸಂಭ್ರಮದಿಂದ ಗಣೇಶ ಹಬ್ಬ ಆಚರಿಸಲಾಗುತ್ತಿದೆ. ಮನೆ ಮನಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಬೀದಿ ಬೀದಿಗಳಲ್ಲಿ, ಮನೆಗಳಲ್ಲಿ, ಕಚೇರಿಗಳಲ್ಲಿ ವಿಘ್ನ ವಿನಾಶಕನನ್ನು ಪೂಜಿಸಿ ಭಜಿಸಲಾಗುತ್ತಿದೆ. ವಿಘ್ನಗಳನ್ನು ನಿವಾರಿಸಿ ಸುಖ- ಶಾಂತಿ, ಐಶ್ವರ್ಯ ಕರುಣಿಸುವಂತೆ ಕೇಳಿಕೊಳ್ಳುತ್ತಿದ್ದಾರೆ.

ಸಿನಿಮಾ ತಾರೆಯರ ಮನೆಗಳಲ್ಲಿ ಕೂಡ ಗಜಮುಖನನ್ನು ಸ್ತುತಿಸಲಾಗುತ್ತದೆ. ನಟ, ನಿರ್ದೇಶಕ ಉಪೇಂದ್ರ ಮನೆಯಲ್ಲಿ ಪ್ರತಿವರ್ಷ ಗಣೇಶ ಹಬ್ಬ ಜೋರಾಗಿರುತ್ತದೆ. ಸಿನಿಮಾ ಹೊಚ್ಚ ಹೊಸ ಪೋಸ್ಟರ್‌ಗಳನ್ನು ರಿಲೀಸ್ ಮಾಡಿ ಚಿತ್ರತಂಡಗಳು ಹಬ್ಬದ ಶುಭಾಶಯ ಕೋರುತ್ತಿದ್ದಾರೆ. ಒಂದಷ್ಟು ಹೊಸ ಪೋಸ್ಟರ್‌ಗಳು ಸಿನಿರಸಿಕರ ಗಮನ ಸೆಳೆದಿದೆ.

Bhairathi ranagal to KD Ganesh Chaturthi Wishes From upcoming kannada films Makers

1. ಭೈರತಿ ರಣಗಲ್

ನರ್ತನ್ ನಿರ್ದೇಶನದಲ್ಲಿ ಶಿವರಾಜ್‌ಕುಮಾರ್ ನಟನೆಯ 'ಭೈರತಿ ರಣಗಲ್' ನವೆಂಬರ್ 15ಕ್ಕೆ ತೆರೆಗೆ ಬರಲಿದೆ. ಸೂಪರ್ ಹಿಟ್ 'ಮಫ್ತಿ' ಚಿತ್ರದ ಪ್ರೀಕ್ವೆಲ್ ಇದು. ಮತ್ತೊಮ್ಮೆ ರಣಗಲ್ ಆಗಿ ಶಿವಣ್ಣ ಅಬ್ಬರಿಸಲು ಬರುತ್ತಿದ್ದಾರೆ. ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲೇ ಸಿನಿಮಾ ನಿರ್ಮಾಣವಾಗಿದೆ. ಮಾಫಿಯಾ ಡಾನ್ ಭೈರತಿ ರಣಗಲ್ ಖಡಕ್ ಲುಕ್ ಪೋಸ್ಟರ್ ರಿವೀಲ್ ಆಗಿದೆ.

2. ಸುಬ್ರಮಣ್ಯ

ಖಳನಟ ಆರ್ಮುಗ ರವಿಶಂಕರ್ ಪುತ್ರ ಅದ್ವೈ ಹೀರೊ ಆಗಿ ಚಿತ್ರರಂಗಕ್ಕೆ ಬರ್ತಿದ್ದಾರೆ. 'ಸುಬ್ರಮಣ್ಯ' ಎಂದು ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ಚಿತ್ರದಲ್ಲಿ ನಾಯಕನ ಫಸ್ಟ್‌ ಲುಕ್ ಪೋಸ್ಟರ್ ಗಣೇಶ ಹಬ್ಬದ ಸಂಭ್ರಮದಲ್ಲೇ ರಿವೀಲ್ ಆಗಿದೆ. ಈಗಾಗಲೇ ಚಿತ್ರದ 60ರಷ್ಟು ಚಿತ್ರೀಕರಣ ಮುಗಿದಿದೆ. ಸೋಶಿಯೋ-ಫ್ಯಾಂಟಸಿ ಅಡ್ವೆಂಚರ್ಸ್ ಶೈಲಿ ಸಿನಿಮಾ ಇದಾಗಿದ್ದು ಶೀಘ್ರದಲ್ಲೇ ತೆರೆಗೆ ಬರಲಿದೆ.

Bhairathi ranagal to KD Ganesh Chaturthi Wishes From upcoming kannada films Makers

3. 'ಕೆಡಿ' ಗಣೇಶ ಹಬ್ಬ

ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ' ಚಿತ್ರತಂಡ ಅದ್ಧೂರಿಯಾಗಿ ಗಣೇಶ ಹಬ್ಬ ಆಚರಿಸಿದೆ. ಅದಕ್ಕೆ ಸಂಬಂಧಿಸಿದ ವೀಡಿಯೋವನ್ನು ಚಿತ್ರತಂಡ ಹಂಚಿಕೊಂಡಿದೆ. ನಾಯಕ ನಟ ಧ್ರುವ ಸರ್ಜಾ, ರಮೇಶ್ ಅರವಿಂದ್, ನಿರ್ದೇಶಕ ಪ್ರೇಮ್, ನಿರ್ಮಾಪಕ ವೆಂಕಟ್ ಕೋನಂಕಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಆದರೆ ಚಿತ್ರದ ಫೋಟೊ ಬದಲು ಗಣೇಶನ ಫೋಟೊ ಹಾಕಿ ಚಿತ್ರತಂಡ ಶುಭ ಕೋರಿದೆ.

ಇನ್ನುಳಿದಂತೆ ಹೊಸಬರ 'ಟಾಮಿ', ಶ್ರೀಮಹಾದೇವ್ ಹಾಗೂ ರಂಗಾಯಣ ರಘು ನಟನೆಯ 'ರುಕ್ಮಿಣಿ ವಸಂತ', ಶೈನ್ ಶೆಟ್ಟಿ-ಅಂಕಿತಾ ಅಮರ್ ಜೋಡಿಯ 'ಜಸ್ಟ್ ಮ್ಯಾರೀಡ್', ತೆಲುಗಿನ 'ದೇವರ' ಹೀಗೆ ಹಲವು ಸಿನಿಮಾಗಳ ಪೋಸ್ಟರ್‌ಗಳು ರಿಲೀಸ್ ಆಗಿದೆ. 'ಕಾಂತಾರ-1', 'ಟಾಕ್ಸಿಕ್' ಸೇರಿದಂತೆ ಕೆಲ ದೊಡ್ಡ ಸಿನಿಮಾಗಳ ಪೋಸ್ಟರ್‌ಗಳು ಬರಲೇಯಿಲ್ಲ.

More from Filmibeat

English summary
Many kannada films makers launched new poster on Ganesh Chaturthi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X