ಕಾಲಿವುಡ್, ಟಾಲಿವುಡ್‌ನಲ್ಲಿ ಭೈರತಿ ರಣಗಲ್ ಅಬ್ಬರ ಶುರು, ಶಿವಣ್ಣ ಜೊತೆ ಕೈ ಜೋಡಿಸಿದ ನಾನಿ - ಶಿವ ಕಾರ್ತಿಕೇಯನ್ ..!

ಕೆಲ ಸಿನಿಮಾಗಳ ಪಾತ್ರಗಳೇ ಹಾಗೆ. ಪ್ರೇಕ್ಷಕರನ್ನು ಥೇಟರಿನಾಚೆಗೂ ಕಾಡುತ್ತಾ ಮನಸೊಳಗೇ ಕೂತು ಬಿಡುತ್ತವೆ. ಮಫ್ತಿಯಲ್ಲಿ ಶಿವರಾಜ್ ಕುಮಾರ್ ನಟಿಸಿದ್ದ ಪಾತ್ರವೂ ಅಂಥಾದ್ದೇ.

ಒಂದು ಮಾಸಲು ಲುಂಗಿ, ಕಪ್ಪು ಬಣ್ಣದ ಮುದುರು ಮುದುರಾದ ಅಂಗಿ ಮತ್ತು ತಣ್ಣಗೆ ಅಬ್ಬರಿಸೋ ಶೈಲಿ ... ಇಷ್ಟೆಲ್ಲ ಗುಣಲಕ್ಷಣಗಳೊಂದಿಗೆ ಪ್ರಸಿದ್ಧಿಯಾಗಿದ್ದ ಭೈರತಿ ರಣಗಲ್ ಪಾತ್ರ ಈಗ ಬೆಳ್ಳಿತೆರೆಯಲ್ಲಿ ಧಗಧಗಿಸುತ್ತಿದೆ. ಕರುನಾಡಿನ ಕಲಾ ಪ್ರಿಯರಿಗೆ ಹುಚ್ಚಿಡಿಸಿದೆ. ಬಾಕ್ಸಾಫೀಸ್‌ನಲ್ಲಿ ಕೂಡ ದಾಖಲೆಯನ್ನು ಭೈರತಿ ರಣಗಲ್ ಚಿತ್ರ ಬರೆಯುತ್ತಿದೆ. ಇದರ ನಡುವೆ ಕಾಲಿವುಡ್ ಮತ್ತು ಟಾಲಿವುಡ್‌ನಲ್ಲಿ ಕೂಡ ಭೈರತಿ ರಣಗಲ್ ಹವಾ ಆರಂಭವಾಗಲಿದೆ.

Bhairathi Ranagal to release in Tamil and Telugu on November 29 trailer drops today

ಹೌದು, ನಿಮಗೆ ಗೊತ್ತು.. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗ ಕಂಡ ಅಪರೂಪದ ನಟ. ಕ್ಲಾಸ್, ಮಾಸ್ ಸೇರಿದಂತೆ ಯಾವ ಪಾತ್ರಕ್ಕಾದರೂ ಸೈ ಅನ್ನುವಂಥಾ ಮನಸ್ಥಿತಿ ಇವರದ್ದು.ಬಹುಶಃ ಡಾ.ರಾಜ್‌ಕುಮಾರ್ ಅವರನ್ನು ಹೊರತು ಪಡಿಸಿದರೆ, ವೆರೈಟಿ ಪಾತ್ರಗಳನ್ನು ಮಾಡಿದ, ಹೊಸಾ ಪ್ರಯೋಗಗಳಿಗೂ ಒಗ್ಗಿಕೊಂಡ ಮತ್ತೋರ್ವ ನಟ ಅಂದರೆ ಅದು ಡಾ.ಶಿವರಾಜ್ ಕುಮಾರ್ ಮಾತ್ರ. ಇಂಥಾ ಶಿವಣ್ಣ ಅವರನ್ನು ಅಕ್ಕ ಪಕ್ಕದ ರಾಜ್ಯದಲ್ಲಿ ಕೂಡ ಅಸಂಖ್ಯಾತ ಜನ ಇಷ್ಟ ಪಡುತ್ತಾರೆ. ಜೈಲರ್, ಕ್ಯಾಪ್ಟನ್ ಮಿಲ್ಲರ್, ನಂತರ ಕರುನಾಡ ಚಕ್ರವರ್ತಿಯ ಅಭಿಮಾನಿಯೂ ಆಗಿದ್ದಾರೆ. ಭೈರತಿ ರಣಗಲ್ ಚಿತ್ರವನ್ನು ತಮ್ಮ ತಮ್ಮ ಭಾಷೆಯಲ್ಲಿ ನೋಡುವ ಆಸೆಯನ್ನು ಅಲ್ಲಿನವರು ವ್ಯಕ್ತಪಡಿಸಿದ್ದಾರೆ.

ಹೀಗಾಗಿಯೇ ಈಗ ಭೈರತಿ ರಣಗಲ್ ಚಿತ್ರವನ್ನು ಆಂಧ್ರ ಮತ್ತು ತಮಿಳುನಾಡಿನ ಪ್ರೇಕ್ಷಕರ ಮಡಿಲಿಗೆ ಹಾಕಲು ಶಿವಣ್ಣ ಸಿದ್ಧರಾಗಿದ್ದಾರೆ. ಎರಡು ಭಾಷೆಯಲ್ಲಿ ಚಿತ್ರದ ಟ್ರೇಲರ್‌ನ ಇಂದು ಬಿಡುಗಡೆ ಮಾಡುತ್ತಿದ್ದಾರೆ. ವಿಶೇಷ ಅಂದರೆ ಇಂದು ಬೆಳಗ್ಗೆ 11 ಗಂಟೆ 11 ನಿಮಿಷಕ್ಕೆ ಈ ಚಿತ್ರದ ತೆಲುಗು ಟ್ರೈಲರ್‌ನ ನ್ಯಾಚುರಲ್ ಸ್ಟಾರ್ ನಾನಿ ಬಿಡುಗಡೆ ಮಾಡಲಿದ್ದರೆ, ಶಿವ ಕಾರ್ತಿಕೇಯನ್ ತಮಿಳು ಟ್ರೈಲರ್ ರಿಲೀಸ್ ಮಾಡುತ್ತಿದ್ದಾರೆ.

ಇನ್ನೂ ತಮಿಳಿನಲ್ಲಿ ತಮ್ಮ ಪಾತ್ರಕ್ಕೆ ಖುದ್ದು ಭೈರತಿ ರಣಗಲ್ ಅಲಿಯಾಸ್ ಶಿವಣ್ಣ ಧ್ವನಿಯನ್ನು ನೀಡಿರುವುದು ವಿಶೇಷವಾದರೆ ಚಂದ್ರಮುಖಿ, ಮೇಯಳಗನ್, ಅಮರನ್, ಹೀಗೆ ಹತ್ತು ಹಲವು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ತಮಿಳುನಾಡಿನ ಮೂಲೆ ಮೂಲೆಗೆ ತಲುಪಿಸಿದ ಎಪಿ ಇಂಟರ್‌ನ್ಯಾಷನಲ್ ಸಂಸ್ಥೆ ಭೈರತಿ ರಣಗಲ್ ಚಿತ್ರವನ್ನು ತಮಿಳು ನಾಡಿನಲ್ಲಿ ಬಿಡುಗಡೆ ಮಾಡುತ್ತಿರುವುದು ಮತ್ತೊಂದು ವಿಶೇಷ. ತೆಲುಗಿನಲ್ಲಿ ಮೈರಾ ಕ್ರಿಯೇಷನ್ಸ್ ಈ ಜವಾಬ್ಧಾರಿಯನ್ನು ವಹಿಸಿಕೊಂಡಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಭೈರತಿ ರಣಗಲ್ ಚಿತ್ರವನ್ನು ಇದೇ ನವೆಂಬರ್ 29ರಂದು ಬಿಡುಗಡೆ ಮಾಡುತ್ತಿದೆ.

ಇನ್ನುಳಿದಂತೆ ಭೈರತಿ ರಣಗಲ್ ಚಿತ್ರಕ್ಕೆ ಕರುನಾಡಿನೆಲ್ಲೆಡೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆಯಲ್ಲಿ ಕೂಡ ಏರಿಕೆಯಾಗುತ್ತಿದೆ. ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನವನ್ನು ಕಾಣುತ್ತಿದೆ. ಒಂದು ಲೆಕ್ಕಾಚಾರದ ಪ್ರಕಾರ ಈ 07ದಿನದಲ್ಲಿ ಕರ್ನಾಟಕದಲ್ಲಿ ಭೈರತಿ ರಣಗಲ್ 12.80 ಕೋಟಿ ರೂಪಾಯಿಯನ್ನು ಕಲೆ ಹಾಕಿದೆ. ಕರ್ನಾಟಕದಲ್ಲಿ ಹೆದರಿಸಲು ಬಂದ 'ಕಂಗುವ' ಚಿತ್ರವನ್ನು ಕೂಡ ಔಐರತಿ ರಣಗಲ್ ಹೊಡೆದುರುಳಿಸಿದೆ.

ಇನ್ನುಳಿದಂತೆ ದಮನಿತರ ಕಾಯುವ ಬಂಡೆಗಲ್ಲಾದ ಭೈರತಿ ರಣಗಲ್‌ನ ಮುಂದುವರೆದ ಭಾಗ ಬರಲಿದೆ. ಆದರೆ ಅದಕ್ಕೆ ಮಫ್ತಿ 2 ಎಂದು ಹೆಸರಿಡದ ಚಿತ್ರತಂಡ ಸದ್ಯ ಬೇರೆ ಹೆಸರನ್ನು ಆಲೋಚನೆ ಮಾಡುತ್ತಿದೆ. ಶೀಘ್ರದಲ್ಲಿಯೇ ಹೊಸ ಶೀ‍ರ್ಷಿಕೆಯನ್ನು ಚಿತ್ರತಂಡ ಘೋಷಿಸಲಿದೆ. ಒಟ್ನಲ್ಲಿ ಸದ್ಯ ಕರ್ನಾಟಕದಲ್ಲಿ ಸದ್ದು ಮಾಡುತ್ತಿರುವ ಭೈರತಿ ರಣಗಲ್ ಈ ನವೆಂಬರ್ 29ರಿಂದ ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗಲಿದೆ. ಆಂಧ್ರ, ತೆಲಂಗಾಣ ಮತ್ತು ತಮಿಳಿನಾಡಿನ ಬೆಳ್ಳಿತೆರೆಯಲ್ಲಿ ಧಗಧಗಿಸಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X