»   » ಬೆಳ್ಳಿತೆರೆ ಮೇಲೆ ಅಬ್ಬರಿಸಲಿದ್ದಾನೆ 'ಭೈರತಿ ರಣಗಲ್ಲು'

ಬೆಳ್ಳಿತೆರೆ ಮೇಲೆ ಅಬ್ಬರಿಸಲಿದ್ದಾನೆ 'ಭೈರತಿ ರಣಗಲ್ಲು'

Posted By:
Subscribe to Filmibeat Kannada

ಭೈರತಿ ರಣಗಲ್ಲು.... ಸದ್ಯ ಸ್ಯಾಂಡಲ್ ವುಡ್ ನಲ್ಲಿ ಭಾರಿ ಹವಾ ಕ್ರಿಯೇಟ್ ಮಾಡಿರುವ ಪಾತ್ರ. ಡಿಸೆಂಬರ್ 1 ರಿಂದ ಭೈರತಿ ರಣಗಲ್ಲು ಕ್ಯಾರೆಕ್ಟರ್ ಗೆ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಇಷ್ಟು ವರ್ಷ ಶಿವಣ್ಣನಿಗಿದ್ದ ಫ್ಯಾನ್ಸ್ ಫಾಲೋವರ್ಸ್ ದುಪ್ಪಟ್ಟಾಗಿದೆ.

ಕೆಲ ಪಾತ್ರಗಳೇ ಹಾಗೇ ಪ್ರೇಕ್ಷಕರ ಮೇಲೆ ವೇಗವಾಗಿ ಪರಿಣಾಮ ಬೀರುತ್ತವೆ. ಭೈರತಿ ರಣಗಲ್ಲು ಪಾತ್ರವನ್ನ ಕನ್ನಡ ಸಿನಿಮಾ ಪ್ರೇಕ್ಷಕರ ಜೊತೆಯಲ್ಲಿ ಪರಭಾಷೆಯ ಆಡಿಯನ್ಸ್ ಕೂಡ ಭೈರತಿ ನೋಡಲು ಥಿಯೇಟರ್ ಗೆ ಬರ್ತಿದ್ದಾರೆ.

ಸಾಮಾನ್ಯ ಜನರು ಹಾಗೂ ಸಿನಿಮಾರಂಗದವರನ್ನ ಆಕರ್ಷಣೆ ಮಾಡಿದ್ದ ಭೈರತಿ ರಣಗಲ್ಲು ಶಿವರಾಜ್ ಕುಮಾರ್ ಅವರನ್ನೂ ಬಿಟ್ಟಿಲ್ಲ. ಎಷ್ಟರ ಮಟ್ಟಿಗೆ ಈ ಪಾತ್ರ ಶಿವಣ್ಣನ ಮೇಲೆ ಪ್ರಭಾವ ಬೀರಿದೆ ಅನ್ನೋದನ್ನ ಕೇಳಿದ್ರೆ ನೀವು ಆಶ್ಚರ್ಯ ಪಡುತ್ತೀರಾ. ಇದೇ ಕಾರಣಕ್ಕೆ ಭೈರತಿ ಮತ್ತೆ ತೆರೆ ಮೇಲೆ ಅಬ್ಬರಿಸಲು ತಯಾರಾಗಿದ್ದಾನೆ. ಅದು ಹೇಗೆ ? ಮುಂದೆ ಓದಿ....

ಭೈರತಿ ರಣಗಲ್ಲು ಹೆಸರಿನಲ್ಲಿ ಸಿನಿಮಾ

ಭೈರತಿ ರಣಗಲ್ಲು ಮಫ್ತಿ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಿರ್ವಹಿಸಿದ್ದ ಪಾತ್ರ. ಚಿತ್ರ ನೋಡಿದ ಪ್ರೇಕ್ಷಕರು ಭೈರತಿ ರಣಗಲ್ಲು ಅಭಿನಯ ಹಾಗೂ ಪಾತ್ರವನ್ನ ನಿರ್ವಹಿಸಿರುವ ರೀತಿಯನ್ನ ನೋಡಿ ತುಂಬಾ ಇಷ್ಟ ಪಟ್ಟಿದ್ದರು. ಈಗ ಅದೇ ಹೆಸರಿನಲ್ಲಿ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.

'ಮಫ್ತಿ' ನಿರ್ದೇಶಕನ ಮುಂದಿನ ಸಿನಿಮಾಗೆ 'ಯಶ್' ನಾಯಕ

ರಿಜಿಸ್ಟರ್ ಆಯ್ತು ಟೈಟಲ್

ಭೈರತಿ ರಣಗಲ್ಲು ಪಾತ್ರ ಪ್ರೇಕ್ಷಕರ ಮೇಲಷ್ಟೇ ಅಲ್ಲದೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮೇಲಿಯೂ ಅಷ್ಟೇ ಪ್ರಭಾವ ಬೀರಿದ್ದಾನೆ. ಇದೇ ಕಾರಣಕ್ಕೆ ಶಿವಣ್ಣ ತಮ್ಮ ಬ್ಯಾನರ್ ನಲ್ಲಿ ಟೈಟಲ್ ರಿಜಿಸ್ಟರ್ ಮಾಡಿಸಿದ್ದಾರೆ.

'ಮಫ್ತಿ' ನಂತರ ಮತ್ತೊಂದು ಚಿತ್ರದಲ್ಲಿ ಒಂದಾಗಲಿದೆ ಯಶಸ್ವಿ ಜೋಡಿ!

ನರ್ತನ್ ಡೈರೆಕ್ಷನ್ ನಲ್ಲಿ ಭರತಿ ರಣಗಲ್ಲು

ಭೈರತಿ ರಣಗಲ್ಲು ಪಾತ್ರವನ್ನ ಸೃಷ್ಠಿ ಮಾಡಿರುವ ನಿರ್ದೇಶಕ ನರ್ತನ್ ಈ ಚಿತ್ರವನ್ನ ಡೈರೆಕ್ಟ್ ಮಾಡಲಿದ್ದಾರೆ. ಶಿವರಾಜ್ ಕುಮಾರ್ ಅವರ ನಿರ್ಮಾಣ ಸಂಸ್ಥೆಯಲ್ಲಿ ಚಿತ್ರ ನಿರ್ಮಾಣವಾಗಲಿದೆ.

'ಮಫ್ತಿ'ಯ ಭೈರತಿ ರಣಗಲ್ಲು ವೇ‍ಷದಲ್ಲಿ ಡಾ.ರಾಜ್ ಕುಮಾರ್ !

ಬೈರತಿ ಪಾತ್ರದಲ್ಲಿ ಶಿವರಾಜ್ ಕುಮಾರ್

ಮಫ್ತಿ ಸಿನಿಮಾದ ಯಶಸ್ಸಿನಲ್ಲಿರೋ ನಿರ್ದೇಶಕ ನರ್ತನ್ ತಮ್ಮ ಮುಂದಿನ ಚಿತ್ರದ ಕೆಲಸವನ್ನ ಹೊಸ ವರ್ಷದಿಂದ ಪ್ರಾರಂಭ ಮಾಡಲು ನಿರ್ಧರಿಸಿದ್ದಾರೆ.ಎರಡನೇ ಸಿನಿಮಾದ ನಂತರ ಶಿವಣ್ಣ ಅಭಿನಯದ ಭೈರತಿ ರಣಗಲ್ಲು ಸಿನಿಮಾವನ್ನ ಡೈರೆಕ್ಟ್ ಮಾಡಲಿದ್ದಾರೆ.

English summary
'Bhairathi Ranagallu' (character of 'Mufti' film) title registered in KFCC. Shivaraj Kumar to produce and Nartan to direct this film, in which Shiva Rajkumar to play the role of Bhairathi Ranagallu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X