ವಿಡಿಯೋ: ಪ್ರೇಮಕ್ಕಾಗಿ 'ರಕ್ತಚರಿತ್ರೆ' ಸೃಷ್ಟಿಸುವ ಧನಂಜಯ್

By Bharath Kumar

''ಒಬ್ಬರನ್ನ ಬಿಡಬಾರದು, ಎಲ್ಲರನ್ನ ಅಳಿಸೋಣ, ಮಕ್ಕಳ ತರ ಅಳಬೇಕು. ಅವರ ರಕ್ತದಿಂದ ಈ ಸೀಮೆಗೆ ಅಭಿಷೇಕ ಮಾಡೋಣ.....'' ಎಂದು ಭಾವೋದ್ವೇಗದಿಂದ ತೆಲುಗಿನಲ್ಲಿ ಡೈಲಾಗ್ ಹೇಳುವ ಧನಂಜಯ್ ಅವರ ಈ ಲುಕ್ ನೋಡಿದ್ರೆ, ಈ ಸಿನಿಮಾ ಎಷ್ಟರ ಮಟ್ಟಿಗೆ ಕ್ರೂರ, ಭಯಾನಕವಾಗಿರುತ್ತೆ ಎಂಬುದನ್ನ ಊಹೆ ಮಾಡಬಹುದು.

ಹೌದು, ಸ್ಪೆಷಲ್ ಸ್ಟಾರ್ ಧನಂಜಯ್ ಅಭಿನಯಿಸುತ್ತಿರುವ 'ಭೈರವ ಗೀತಾ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಸಿನಿಮಾದ ತೆಲುಗು ವರ್ಷನ್ ಈಗ ರಿಲೀಸ್ ಆಗಿದೆ.

Bhairava Geetha trailer release

ನಿರೀಕ್ಷೆಯಂತೆ ಧನಂಜಯ್ ಟ್ರೈಲರ್ ನಲ್ಲಿ ಅಬ್ಬರಿಸಿದ್ದಾರೆ. ಕೈಯಲ್ಲಿ ಮಚ್ಚು ಹಿಡಿದು ಘರ್ಜಿಸಿದ್ದಾರೆ. ಅಂದ್ಹಾಗೆ, ಭೈರವಗೀತಾ ಲವ್ ಸ್ಟೋರಿ. ನೈಜವಾದ ಕಥೆಯಿಂದ ಸ್ಫೂರ್ತಿ ಪಡೆದು ಮಾಡಿರುವ ಚಿತ್ರಕಥೆ.

ಕನ್ನಡ ವರ್ಷನ್ ಟ್ರೈಲರ್ ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಡುಗಡೆ ಮಾಡಲಿದ್ದಾರೆ ಎಂಬ ಮಾತಿದೆ. ಆದ್ರೆ, ಯಾವಾಗ ಮತ್ತು ಎಲ್ಲಿ ಎಂಬುದರ ಬಗ್ಗೆ ಮಾಹಿತಿ ಇಲ್ಲ.

ಇನ್ನು ಸಿದ್ಧಾರ್ಥ್ ಎಂಬ ಯುವ ನಿರ್ದೇಶಕ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಐರಾ ನಾಯಕಿಯಾಗಿ ಅಭಿನಯಿಸಿದ್ದಾರೆ. ರಾಮ್ ಗೋಪಾಲ್ ವರ್ಮಾ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

More from Filmibeat

English summary
Telugu and kannada bilingual movie 'Bhairava Geetha' trailer has released today (september 1st). the movie directed by Siddhartha‘s and lead actors are Dhananjay and Irra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X