ಸೂರ್ಯ ಹುಟ್ಟೋಕು ಮುಂಚೆ ಶುರುವಾಗಲಿದೆ ಭಜರಂಗಿ ಅಬ್ಬರ!

ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಭಜರಂಗಿ 2 ಕೂಡ ಒಂದು. ಭಜರಂಗಿ ನಾನಾ ಕಾರಣಕ್ಕೆ ಈಗಾಗಲೇ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿರುವ ಸಿನಿಮಾ. ಭಜರಂಗಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಲಿದ್ದಾರೆ. ಈ ದಿನ ಕಳೆದು ಅದ್ಯಾವಾಗ ತೆರೆಯ ಮೇಲೆ ಭಜರಂಗಿಯನ್ನು ಕಣ್ತುಂಬಿ ಕೊಳ್ಳುತ್ತೇವೊ ಅಂತ ಜಪಿಸುತ್ತಿದ್ದಾರೆ. ಹಾಗಾಗಿ ಅದಾಗಲೇ ಅಭಿಮಾನಿಗಳು ಅಭಿಮಾನಿಗಳು ಸಂಭ್ರಮವನ್ನು ಶುರು ಮಾಡಿ ಬಿಟ್ಟಿದ್ದಾರೆ. ಭಜರಂಗಿಯನ್ನು ಅದ್ದೂರಿಯಾಗಿ ಬರ ಮಾಡಿಕೊಳ್ಳಲು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕ ವರ್ಷ ಸಜ್ಜಾಗಿದೆ.

ಶಿವರಾಜ್‌ಕುಮಾರ್ ಸ್ಟಾರ್ ಡಮ್‌ಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಶಿವರಾಜ್‌ಕುಮಾರ್ ಸಿನಿಮಾವೊಂದು ರಿಲೀಸ್ ಆಗುತ್ತಿದೆ ಅಂದ್ರೆ ಸಾಕು ಅಭಿಮಾನಿಗಳು ಕಾದು ಕುಳಿತು ಬಿಡುತ್ತಾರೆ. ಅಂತೆಯೇ ಇದೀಗ ಭಜರಂಗಿಯನ್ನು ನೋಡುವ ಕಾತರ ಶಿವಣ್ಣನ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಹಾಗಾಗಿಯೇ ನಾಳೆ ಅಂದರೆ ಅಕ್ಟೋಬರ್ 29ರಂದು ಸೂರ್ಯ ಹುಟ್ಟುವುದಕ್ಕೆ ಮುಂಚೆಯೇ ಭಜರಂಗಿ ತೆರೆಯ ಮೇಲೆ ಅಪ್ಪಳಿಸಲಿದ್ದಾನೆ. ಶಿವರಾಜ್‌ಕುಮಾರ್‌ ಅಭಿಮಾನಿಗಳಿಗಾಗಿ ಭಜರಂಗಿ 2 ಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದೆ. ಬೆಂಗಳೂರಿನ ಹಲವೆಡೆ ಬೆಳ್ಳಂಬೆಳಗ್ಗೆ 5 ಗಂಟೆಗೆ ಭಜರಂಗಿ ಬಿಗ್ ಸ್ಕ್ರೀನ್‌ನಲ್ಲಿ ರಿಲೀಸ್‌ ಆಗುತ್ತಿದೆ. ಬೆಂಗಳೂರಿನ ಸಿದ್ದೇಶ್ವರ, ಶ್ರೀನಿವಾಸ ಚಿತ್ರಮಂದಿರದ ಜೊತೆಗೆ ರಾಕ್‌ಲೈನ್ ಮಾಲ್‌ನಲ್ಲಿ ಸಿನಿಮಾ ಬೆಳ್ಳಂಬೆಳಗ್ಗೆ ರಿಲೀಸ್ ಆಗುತ್ತಾ ಇದೆ. ಈ ಮುಂಜಾನೆಯ ಪ್ರದರ್ಶನಕ್ಕೆ ಅಭಿಮಾನಿ ಬಳಗ ಸಜ್ಜಾಗಿದೆ.

ಭಜರಂಗಿಯ ಕಟೌಟ್‌ನಿಂದ ಅಲಂಕಾರಗೊಂಡು ಚಿತ್ರಮಂದಿರಗಳು ಕಂಗೊಳಿಸುತ್ತಿವೆ. ಬೆಂಗಳೂರು ಸೇರಿದಂತೆ ದೇಶದ ನಾನಾ ಚಿತ್ರಮಂದಿರಗಳು ಭಜರಂಗಿಯ ಕಟೌಟ್‌ ತೊಟ್ಟು ಮಿಂಚುತ್ತಿವೆ. ಅಭಿಮಾನಿಗಳು ಕೂಡ ವಿಶೇಷವಾಗಿ ಸಂಭ್ರಮಿಸಲು ಸಿದ್ಧವಾಗಿದ್ದಾರೆ. ಕೊರೊನಾದಿಂದಾಗಿ ಸಿನಿಮಾ ರಿಲೀಸ್‌ ಸಂಭ್ರಮವನ್ನು ಮಿಸ್ ಮಾಡಿಕೊಳ್ಳುತ್ತಾ ಇದ್ದವರು ಇದೀಗ ಮತ್ತೆ ಸಂಭ್ರಮಿಸಲು ಶುರು ಮಾಡಿದ್ದಾರೆ. ಅದರಲ್ಲು ಲಾಕ್‌ಡೌನ್‌ ಬಳಿಕ ತೆರೆಗೆ ಬರುತ್ತಿರುವ ಶಿವರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾ ಇದು. ಹಾಗಾಗಿ ಅವರ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ.

Bhajarangi 2 Early Morning Show Arranged for Shivarajkumar Fans

ಇನ್ನು ಅಭಿಮಾನಿಗಳ ಸಂಭ್ರಮ ಇಂದಿನಿಂದಲೇ ಶುರುವಾಗಿಬಿಟ್ಟಿದೆ. ಬೆಂಗಳೂರಿನ ಅನುಪಮಾ ಚಿತ್ರಮಂದಿರದಲ್ಲಿ ಬರೋಬ್ಬರಿ 122 ನಕ್ಷತ್ರಗಳನ್ನು ಹಾಕುವುದರ ಮೂಲಕ ಹೊಸ ದಾಖಲೆಯನ್ನು ಬರೆಯೋದಕ್ಕೆ ಅಭಿಮಾನಿಗಳು ಮುಂದಾಗಿದ್ದಾರೆ. ಇಲ್ಲಿಯ ತನಕ ಕನ್ನಡದ ಯಾವ ಚಿತ್ರಕ್ಕೂ 122 ನಕ್ಷತ್ರಗಳನ್ನು ಹಾಕಿರಲಿಲ್ಲ. ಇದೇ ಮೊದಲ ಬಾರಿಗೆ ಭಜರಂಗಿಗೆ ಇಷ್ಟೊಂದು ನಕ್ಷತ್ರಗಳನ್ನು ಅರ್ಪಿಸುವುದರ ಮೂಲಕ ಅಭಿಮಾನಿಗಳು ಹೊಸ ದಾಖಲೆ ನಿರ್ಮಿಸಿದ್ದಾರೆ. ಭಜರಂಗಿ ಕನ್ನಡ ಮತ್ತು ತೆಲುಗಿನಲ್ಲಿ ಒಟ್ಟಿಗೆ ತೆರೆಗೆ ಬರ್ತಾ ಇದೆ. ದೇಶಾದ್ಯಂತ 1000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಭಜರಂಗಿ ರಿಲೀಸ್‌ ಆಗುತ್ತಿದೆ.

ಒಟ್ಟಾರೆ ಅಭಿಮಾನಿಗಳಿಗೆ ಭಜರಂಗಿ ಭರ್ಜರಿ ಮನೋರಂಜನೆಯ ರಸದೌತಣ ಉಣಬಡಿಸುಲು ರೆಡಿಯಾಗಿದೆ. ಕೊರೊನಾ ಕಾರಣಕ್ಕೆ ಕೆಲ ಕಾಲ ಬಿಗ್ ಸ್ಕ್ರೀನ್ ಮೇಲೆ ಸಿನಿಮಾ ನೋಡುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದವರು, ಈಗ ಯಾವುದೇ ಭಜರಂಗಿಗೆ ಹಾಜರಾಗಲು ಸಿದ್ಧವಾಗಿದ್ದಾರೆ. ಶಿವರಾಜ್ ಕುಮಾರ್ ಜೊತೆಗೆ ನಟಿ ಭಾವನಾ ಮೆನನ್, ಹಿರಿಯ ನಟಿ ಶ್ರುತಿ, ಭಜರಂಗಿ ಲೋಕಿ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಶಿವರಾಜ್‌ ಕುಮಾರ್ ಮತ್ತು ಎ.ಹರ್ಷ ಕಾಂಬಿನೇಷನ್‌ನಲ್ಲಿ ಬರುತ್ತಿರೋ ಮೂರನೇ ಚಿತ್ರ.

Bhajarangi 2 Early Morning Show Arranged for Shivarajkumar Fans

ಭಜರಂಗಿ ಕೇವಲ ಮಾಸ್‌ ಸಿನಿಮಾ ಅಲ್ಲ. ಪ್ರೇಕ್ಷಕರನ್ನ ಬೇರೊಂದು ಲೋಕಕ್ಕೆ ಕರೆದುಕೊಂಡು ಹೋಗುವ ಶಕ್ತಿ ಭಜರಂಗಿಗಿದೆ. ಭಜರಂಗಿ ಭಾಗ ಒಂದರ ರೀತಿಯೇ ಈ ಚಿತ್ರವೂ ಕೂಡ ಪ್ರೇಕ್ಷಕರನ್ನ ಆಕರ್ಷಿಸುತ್ತಿದೆ. ಚಿತ್ರದ ಟೀಸರ್, ಟ್ರೈಲರ್, ಹಾಡುಗಳ ಮೂಲಕ ಜನರನ್ನು ರಂಜಿಸಿದ ಭಜರಂಗಿ ಈಗ ಬೆಳ್ಳಿಪರದೆ ಮೇಲೆ ಜಾದು ಮಾಡೋದು ಮಾತ್ರ ಬಾಕಿ ಇದೆ. ಈ ಚಿತ್ರದಲ್ಲಿ ನಟ ಶಿವರಾಜ್ ಕುಮಾರ್ ಅವರಿಂದ ಹಿಡಿದು ಪ್ರತಿಯೊಂದು ಪಾತ್ರಕ್ಕೂ ವಿಶೇಷ ಲುಕ್‌ ಜೊತೆಗೆ ಆದ್ಯತೆಯನ್ನೂ ನೀಡಲಾಗಿದೆ.

More from Filmibeat

English summary
Shivarajkumar Starrer Bhajarangi 2 Movie Special Early Morning Show Arranged For Fans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X