'ಭಜರಂಗಿ 2' ನಾಯಕಿ ಪೋಸ್ಟರ್ ಬಿಡುಗಡೆ; ಭಾವನಾ ಮೆನನ್ ಲುಕ್ ಸೂಪರ್!

ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ 2' ಸಿನಿಮಾದ ನಾಯಕಿಯ ಪೋಸ್ಟರ್ ಬಿಡುಗಡೆಗೊಂಡಿದ್ದು, ಭಾವನಾ ಮೆನನ್ ಸಖತ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಮೈಕ್ರೊಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ ಕೂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಅನ್ನು ಚಿತ್ರತಂಡ ಹಂಚಿಕೊಂಡಿದೆ. 'ಚಿನಿಮಿನಿಕಿ-ದಿ ಲೇಡಿ ಫೈರ್' ಎಂಬ ಅಡಿಬರಹವನ್ನು ನಾಯಕಿ ಭಾವನಾ ಮೆನನ್ ನ ಪೋಸ್ಟರ್‌ಗೆ ನೀಡಲಾಗಿದೆ.

ನಿರ್ದೇಶಕ ಎ. ಹರ್ಷ ಅವರ ಬತ್ತಳಿಕೆಯಿಂದ ಮೂಡಿ ಬಂದಿರುವ ಈ ಸಿನಿಮಾದ ಟೀಸರ್ ಶಿವರಾಜ್ ಕುಮಾರ್ ಹುಟ್ಟುಹಬ್ಬದಂದು ಬಿಡುಗಡೆಗೊಂಡಿತ್ತು. ಸಿನಿಮಾದ ಟೀಸರ್ ಈಗಾಗಲೇ ವೈರಲ್ ಆಗಿದ್ದು, ಇದೀಗ ಮೊದಲ ಬಾರಿಗೆ ನಾಯಕಿಯ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಕೆಲವು ದಿನಗಳ ಹಿಂದಷ್ಟೆ ಸಿನಿಮಾದ ಮತ್ತೊಬ್ಬ ಪ್ರಮುಖ ಪಾತ್ರಧಾರಿ ಸೌರವ್‌ ಲೋಕೇಶ್ ನಿರ್ವಹಿಸಿರುವ ಪಾತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು.

 Bhajarangi 2 Movie: Bhavana Menons Look Poster Released

ಅದ್ದೂರಿ ಸೆಟ್‌ಗಳು, ಬಹು ತಾರಾಗಣ, ಭರ್ಜರಿ ಆ್ಯಕ್ಷನ್ ದೃಶ್ಯಗಳಿಂದಾಗಿ ಟೀಸರ್‌ ಮೂಲಕವೇ 'ಭಜರಂಗಿ 2' ಎಲ್ಲರ ಮನ ಗೆದ್ದಿತು. 'ಕೆಜಿಎಫ್‌' ರೀತಿಯೇ ಎಲ್ಲ ಭಾಷೆಗೂ ಅನ್ವಯ ಆಗುವಂತಹ ಗುಣಮಟ್ಟದಲ್ಲಿ 'ಭಜರಂಗಿ 2' ಸಿದ್ಧವಾಗಿದೆ ಎಂಬುದಕ್ಕೆ ಟೀಸರ್‌ ಸಾಕ್ಷಿ ನೀಡಿತ್ತು.

ದೊಡ್ಡ ಕ್ಯಾನ್ವಾಸ್‌ನಲ್ಲಿ 'ಭಜರಂಗಿ 2' ಸಿದ್ಧವಾಗಿದ್ದು, ಶಿವರಾಜ್‌ಕುಮಾರ್‌ ಮತ್ತು ಎ. ಹರ್ಷ ಕಾಂಬಿನೇಷನ್‌ನಲ್ಲಿ ಈ ಹಿಂದೆ ಮೂಡಿಬಂದಿದ್ದ 'ಭಜರಂಗಿ' ಚಿತ್ರದ ಸೀಕ್ವೆಲ್‌ ಆಗಿ ಈ ಸಿನಿಮಾ ಸಿದ್ಧವಾಗಿದೆ. ಸಿನಿಮಾದಲ್ಲಿ ಶಿವಣ್ಣ, ಭಾವನಾ ಜೊತೆಗೆ ಸೌರವ್ ಲೋಕೇಶ್, ಶಿವರಾಜ್ ಕೆ.ಆರ್.ಪೇಟೆ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾದ ಪಾತ್ರವರ್ಗದ ಮುಖ್ಯ ಅಂಶವೆಂದರೆ ಹಿರಿಯ ನಟಿ ಶ್ರುತಿ ಬಹಳ ಭಿನ್ನವಾದ ಪಾತ್ರದಲ್ಲಿ ಈ ಸಿನಿಮಾದಲ್ಲಿ ನಟಿಸಿದ್ದಾರೆ.

'ಭಜರಂಗಿ 2' ಚಿತ್ರಕ್ಕೆ ಜಯಣ್ಣ-ಭೋಗೇಂದ್ರ ಬಂಡವಾಳ ಹೂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ 'ಭಜರಂಗಿ 2' ಚಿತ್ರದಲ್ಲಿ ಶ್ರುತಿ, ಸೌರವ್ ಲೋಕೇಶ್, ಶಿವರಾಜ್.ಕೆ.ಆರ್.ಪೇಟೆ ಸೇರಿದಂತೆ ದೊಡ್ಡ ತಾರಾ ಬಳಗವಿದೆ. ಸಿನಿಮಾವು ಅಕ್ಟೋಬರ್ 29ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

More from Filmibeat

English summary
Bhajarangi 2 movie released heroine Bhavana Menon's look poster. Movie is releasing on October 29.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X