For Quick Alerts
  ALLOW NOTIFICATIONS  
  For Daily Alerts

  ಶಿವಣ್ಣ ಅಭಿಮಾನಿಗಳಿಗೆ ಮತ್ತೆ ನಿರಾಸೆ: ಸದ್ಯಕ್ಕಿಲ್ಲ 'ಭಜರಂಗಿ' ದರ್ಶನ

  |

  ಗೌರಿ-ಗಣೇಶ ಹಬ್ಬದ ಸಂಭ್ರಮದ ಜೊತೆ ಭಜರಂಗಿ ದರ್ಶನ ಮಾಡೋಣ ಎಂದು ನಿರೀಕ್ಷೆಯಿಟ್ಟುಕೊಂಡಿದ್ದ ಕನ್ನಡ ಕಲಾರಸಿಕರಿಗೆ ಮತ್ತೊಮ್ಮೆ ನಿರಾಸೆಯಾಗಿದೆ. ನಿಗದಿಯಂತೆ ಸೆಪ್ಟೆಂಬರ್ 10 ರಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ 'ಭಜರಂಗಿ 2' ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದ್ರೀಗ, ಭಜರಂಗಿ 2 ಸದ್ಯಕ್ಕೆ ರಿಲೀಸ್ ಆಗಲ್ಲ ಎಂಬ ಸುದ್ದಿ ಹೊರಬಿದ್ದಿದೆ.

  ಈ ಕುರಿತು ನಟ ಶಿವರಾಜ್ ಕುಮಾರ್ ವಿಡಿಯೋ ಮೂಲಕ ಮಾಹಿತಿ ಸ್ಪಷ್ಟಪಡಿಸಿದ್ದಾರೆ. ''ಹೊರರಾಜ್ಯಗಳಲ್ಲಿ ಕೋವಿಡ್ ಕೇಸ್ ಹೆಚ್ಚಾಗಿದೆ. ವೀಕೆಂಡ್ ಲಾಕ್‌ಡೌನ್, ನೈಟ್ ಕರ್ಫ್ಯೂ ಬೇರೆ ಇದೆ. ಈ ಸಮಯದಲ್ಲಿ ಸಿನಿಮಾ ರಿಲೀಸ್ ಮಾಡುವುದು ನಿರ್ಮಾಪಕರ ದೃಷ್ಟಿಯಿಂದ ಒಳ್ಳೆಯದಲ್ಲ. ಹಾಗಾಗಿ, ಸದ್ಯಕ್ಕೆ ಭಜರಂಗಿ 2 ಆಗುತ್ತಿಲ್ಲ'' ಎಂದು ಅಭಿಮಾನಿಗಳಿಗೆ ತಿಳಿಸಿದರು.

  ಶಿವಣ್ಣನ 125ನೇ ಚಿತ್ರಕ್ಕೆ ಚಾಲನೆ: 'ಗೀತಾ ಪಿಕ್ಚರ್ಸ್' ಸಂಸ್ಥೆಯಲ್ಲಿ ನಿರ್ಮಾಣಶಿವಣ್ಣನ 125ನೇ ಚಿತ್ರಕ್ಕೆ ಚಾಲನೆ: 'ಗೀತಾ ಪಿಕ್ಚರ್ಸ್' ಸಂಸ್ಥೆಯಲ್ಲಿ ನಿರ್ಮಾಣ

  ''ಥಿಯೇಟರ್ ತುಂಬಾ ಜನ ಇದ್ದಾಗ ಆ ಸಿನಿಮಾ ನೋಡೋಕೆ ಒಂದು ಮಜಾ ಇರುತ್ತೆ. ಈಗಿನ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗ್ತಿಲ್ಲ. ದಯವಿಟ್ಟು ಯಾರೂ ಬೇಸರ ಮಾಡಿಕೊಳ್ಳಬೇಡಿ. ಆದಷ್ಟೂ ಬೇಗ ಬಿಡುಗಡೆ ಮಾಡಲು ನಾವು ಪ್ರಯತ್ನ ಪಡ್ತೇವೆ. ತುಂಬಾ ವಿಳಂಬನೂ ಮಾಡಲ್ಲ'' ಎಂದು ಶಿವರಾಜ್ ಕುಮಾರ್ ವಿನಂತಿಸಿದರು. ಮುಂದೆ ಓದಿ...

  ಹೊಸ ದಿನಾಂಕ ಶೀಘ್ರದಲ್ಲಿ ಘೋಷಣೆ

  ಹೊಸ ದಿನಾಂಕ ಶೀಘ್ರದಲ್ಲಿ ಘೋಷಣೆ

  ''ಸೆಪ್ಟೆಂಬರ್ 1ಕ್ಕೆ ಭಜರಂಗಿ 2 ಟ್ರೈಲರ್ ಹಾಗೂ ಸೆಪ್ಟೆಂಬರ್ 10ಕ್ಕೆ ಸಿನಿಮಾ ರಿಲೀಸ್ ಮಾಡುವುದು ಎನ್ನಲಾಗಿತ್ತು. ಆದ್ರೀಗ ಮುಂದೂಡಲಾಗಿದೆ. ಹೊಸ ದಿನಾಂಕವನ್ನು ಶೀಘ್ರದಲ್ಲಿಯೇ ಹೇಳ್ತೇವೆ, ಟ್ರೈಲರ್ ಬಿಡುಗಡೆ ಮಾಡಿದಾಗ ಅದರಲ್ಲೇ ರಿಲೀಸ್ ದಿನಾಂಕ ಪ್ರಕಟಿಸುತ್ತೇವೆ'' ಎಂದು ಹ್ಯಾಟ್ರಿಕ್ ಹೀರೋ ಮಾಹಿತಿ ನೀಡಿದರು.

  ನಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗಲಿದೆ

  ನಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗಲಿದೆ

  ಈ ಚಿತ್ರಕ್ಕಾಗಿ ಎಲ್ಲರೂ ಕಷ್ಟಪಟ್ಟಿದ್ದಾರೆ. ನಿರ್ಮಾಪಕ, ನಿರ್ದೇಶಕ, ಸಂಗೀತ ನಿರ್ದೇಶಕ, ಕಲಾವಿದರು, ತಂತ್ರಜ್ಞರು ಎಲ್ಲರೂ ಶ್ರಮ ಹಾಕಿದ್ದಾರೆ. ಈ ಕೋವಿಡ್ ಸಮಯದಲ್ಲೂ ಅದನ್ನೆಲ್ಲಾ ಮೀರಿ ಸಿನಿಮಾ ಮುಗಿಸಿದ್ದೇವೆ. ಆಂಜನೇಯ ಸ್ವಾಮಿ ಆಶೀರ್ವಾದದಿಂದ ಭಜರಂಗಿ ಮುನ್ನುಗ್ಗಿ ಬಂದಿದೆ. ನಾವು ಪಟ್ಟ ಕಷ್ಟ ನಿಮಗೆ ಆಗಬಾರದು, ನೀವು ಆರಾಮಾಗಿ ಬಂದು ಸಿನಿಮಾ ನೋಡ್ಬೇಕು. ನಮ್ಮ ಕಷ್ಟಕ್ಕೆ ನೀವು ತಕ್ಕ ಪ್ರತಿಫಲ ನೀಡ್ತೀರಾ ಎಂಬ ಭರವಸೆ ಇದೆ'' ಎಂದು ಸೆಂಚುರಿ ಸ್ಟಾರ್ ಹೇಳಿದರು.

  ಮುಂದುವರಿದ ಶಿವಣ್ಣನ ಸಿನಿಮಾ ಪರ್ವ: ಯುವ ನಿರ್ದೇಶಕನ ಜೊತೆ 127ನೇ ಚಿತ್ರಮುಂದುವರಿದ ಶಿವಣ್ಣನ ಸಿನಿಮಾ ಪರ್ವ: ಯುವ ನಿರ್ದೇಶಕನ ಜೊತೆ 127ನೇ ಚಿತ್ರ

  ನಿರೀಕ್ಷೆ ಹೆಚ್ಚಿಸಿರುವ ಭಜರಂಗಿ 2

  ನಿರೀಕ್ಷೆ ಹೆಚ್ಚಿಸಿರುವ ಭಜರಂಗಿ 2

  ಭಜರಂಗಿ 2 ಚಿತ್ರಕ್ಕೆ ಹರ್ಷ ಮಾಸ್ಟರ್ ಆಕ್ಷನ್ ಕಟ್ ಹೇಳಿದ್ದು, ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಈಗಾಗಲೇ ಭಜರಂಗಿ ಹಾಡುಗಳು ಹಿಟ್ ಬಾರಿಸಿದೆ. ಶಿವರಾಜ್ ಕುಮಾರ್‌ಗೆ ನಾಯಕಿಯಾಗಿ 'ಜಾಕಿ' ಭಾವನಾ ನಟಿಸಿದ್ದಾರೆ. ನಟಿ ಶ್ರುತಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಭಜರಂಗಿ' ಸಿನಿಮಾದಲ್ಲಿ ಗಮನ ಸೆಳೆದಿದ್ದ ಸೌರವ್ ಲೋಕೇಶ್ ಈ ಸಿನಿಮಾದಲ್ಲಿಯೂ ಇದ್ದಾರೆ. ಶಿವರಾಜ್ ಕೆ.ಆರ್ ಪೇಟೆ ಸಹ ನಟಿಸಿದ್ದಾರೆ. ಇನ್ನು 'ಭಜರಂಗಿ 2' ಸಿನಿಮಾವು 2013ರಲ್ಲಿ ಬಿಡುಗಡೆ ಆಗಿದ್ದ 'ಭಜರಂಗಿ' ಸಿನಿಮಾದ ಮುಂದುವರೆದ ಭಾಗವಾಗಿದೆ ಎಂದು ಹೇಳಲಾಗಿದೆ. ಆ ಚಿತ್ರವನ್ನು ತಯಾರು ಮಾಡಿದ್ದ ಅದೇ ಕಾಂಬಿನೇಷನ್ ಮತ್ತೊಮ್ಮೆ ಒಟ್ಟಾಗಿ ಮುಂದುವರಿದ ಭಾಗವನ್ನು ತೆರೆಗೆ ತರುತ್ತಿದ್ದಾರೆ.

  ಹರ್ಷ ಜೊತೆ ಇನ್ನೊಂದು ಚಿತ್ರ

  ಹರ್ಷ ಜೊತೆ ಇನ್ನೊಂದು ಚಿತ್ರ

  ಭಜರಂಗಿ, ವಜ್ರಕಾಯ, ಭಜರಂಗಿ 2 ಚಿತ್ರಗಳ ನಂತರ ಹರ್ಷ ಮಾಸ್ಟರ್ ಜೊತೆ ಶಿವಣ್ಣ ಇನ್ನೊಂದು ಚಿತ್ರ ಆರಂಭಿಸಿದ್ದಾರೆ. ಈ ಚಿತ್ರಕ್ಕೆ ವೇದ ಎಂದು ಹೆಸರಿಡಲಾಗಿದೆ. ಗೀತಾ ಪಿಕ್ಚರ್ಸ್ ಅಡಿ ಸ್ವತಃ ಶಿವರಾಜ್ ಕುಮಾರ್ ಪತ್ನಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಅಂದ್ಹಾಗೆ, ಇದು ಶಿವಣ್ಣನ 125ನೇ ಚಿತ್ರ ಎನ್ನುವುದು ವಿಶೇಷ. ಇತ್ತೀಚಿಗಷ್ಟೆ ಚಿತ್ರದ ಸಾಂಗ್ ರೆಕಾರ್ಡಿಂಗ್‌ಗೆ ಚಾಲನೆ ಕೊಡುವುದರ ಮೂಲಕ ಚಿತ್ರದ ಕೆಲಸವನ್ನು ಅಧಿಕೃತವಾಗಿ ಆರಂಭಿಸಲಾಗಿದೆ.

  English summary
  Producer Jayanna and Actor Shivanna confirms Bhajarangi 2 trailer and theatrical release has postponed due to pandemic restrictions.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X