For Quick Alerts
  ALLOW NOTIFICATIONS  
  For Daily Alerts

  ಭಜರಂಗಿ 'ರಕ್ತಾಕ್ಷ' ಸೌರವ್ ಲೋಕೇಶ್ ಸಂದರ್ಶನ

  By ಮಲೆನಾಡಿಗ
  |

  ಹೀರೋ ಯಾರು ಎಂದು ಕೇಳಿಕೊಂಡು ವಿಲನ್ ಗಳು ಸಿನಿಮಾ ಒಪ್ಪಿಕೊಳ್ಳೋ ಕಾಲ ಬಂದಿದೆ. ಕೆಲ ಆಮದು ವಿಲನ್ ಗಳು ಹೀರೋ ಯಾರು ಎಂದು ವಿಚಾರಿಸಿ ಚಿತ್ರ ಒಪ್ಪಿಕೊಂಡಿದ್ದು ಗೊತ್ತೇ ಇದೆ. ಆದರೆ, ಈಗ ಕಥೆ ಚೆನ್ನಾಗಿದ್ದು, ಪಾತ್ರ ಪ್ರೇಕ್ಷಕರ ಮನ ಮುಟ್ಟುವಂತಿದ್ದರೆ ಸಾಕು, ಅಂಥ ರೋಲ್ ಮಿಸ್ ಮಾಡಿಕೊಳ್ಳೋ ಹಾಗಿಲ್ಲ ಎನ್ನುತ್ತಾರೆ ಭಜರಂಗಿ ಖ್ಯಾತಿಯ ರಕ್ತಾಕ್ಷ ಪಾತ್ರಧಾರಿ ಸೌರವ್ ಲೋಕೇಶ್.

  ಭಜರಂಗಿ ಚಿತ್ರದ ಯಶಸ್ಸಿಗೆ ಚಿತ್ರ ವಿಲನ್ ಗಳು ಪ್ರಮುಖ ಕಾರಣ ಎಂದು ಶಿವಣ್ಣ ಅವರೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಅಂದ ಹಾಗೆ, ಭಜರಂಗಿ ಸೌರವ್ ಅವರ ಮೊದಲ ಚಿತ್ರವಲ್ಲ. ಸುಮಾರು 15ಕ್ಕೂ ಅಧಿಕ ಚಿತ್ರಗಳಲ್ಲಿ ಸೌರವ್ ಕಾಣಿಸಿಕೊಂಡಿದ್ದಾರೆ. ಈ ಪೈಕಿ, ಸವಾರಿ, ಗೂಗ್ಲಿ, ಮತ್ತೆ ಮುಂಗಾರು, ಕಾಟನ್ ಪೇಟೆ, ಸ್ವೀಟಿ ನನ್ನ ಜೋಡಿ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಫ್ ಕೋರ್ಸ್ ಎಲ್ಲವೂ ನೆಗಟಿವ್ ಶೇಡ್ ಇರುವ ಪಾತ್ರಗಳು..[ನಿಮ್ಮ ನೆಚ್ಚಿನ ಚಿತ್ರವನ್ನು ಆಯ್ಕೆ ಮಾಡಿ]

  ಅಲ್ಲಾ ಸ್ವಲ್ಪ ಸ್ಮಾರ್ಟ್ ಇದ್ದು, ನಿರ್ಮಾಪಕರ ಬೆಂಬಲ ಇದ್ರೆ ಸಾಕು ಎಲ್ಲರೂ ಹೀರೋ ಆಗೋಕೆ ಹಾತೊರೆಯುವ ಕಾಲದಲ್ಲಿ ನೀವ್ಯಾಕೆ ಹೀಗೆ? ಎಂದು ಪ್ರಶ್ನಿಸಿದರೆ : 'ನನಗೆ ಹೀರೋ ಆಗ್ಲೇ ಬೇಕು ಅಂಥಾ ಆಸೆ ಏನಿಲ್ಲ. ಒಂದೇ ಒಂದು ಸೀನ್ ಆದರೂ ಸಾಕು ಚಾಲೆಂಜಿಂಗ್ ಆಗಿರಬೇಕು. ಈ ರೀತಿ ಪಾತ್ರ ಮಾಡೋಕೆ ಸಾಧ್ಯನಾ?ಎಂದು ನನಗೆ ಅನ್ನಿಸಬೇಕು. ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವಂತಿರಬೇಕು' ಎನ್ನುತ್ತಾರೆ ಸೌರವ್.. ಸೌರವ್ ಜತೆ ನಡೆಸಿದ ಮಾತುಕತೆಯ ಮುಂದಿನ ವಿವರ ಮುಂದೆ ಓದಿ...

  ಭಜರಂಗಿ ಚಿತ್ರ ಏಕೆ ಒಪ್ಪಿಕೊಂಡ್ರಿ?

  ಭಜರಂಗಿ ಚಿತ್ರ ಏಕೆ ಒಪ್ಪಿಕೊಂಡ್ರಿ?

  ಭಜರಂಗಿ ಒಪ್ಪಿಕೊಳ್ಳಲು ಹರ್ಷ ಸಾರ್ ಕಾರಣ. 2008ರಲ್ಲಿ ಕೈಲಾಸಂ ಅವರ ಪೋಲಿ ಕಿಟ್ಟಿ ನಾಟಕದಲ್ಲಿ ನನ್ನ ಪಾತ್ರ ನೋಡಿ ಮೆಚ್ಚಿದ ಹರ್ಷ ಅವರು ತಮ್ಮ ಕಚೇರಿಗೆ ಕರೆಸಿಕೊಂಡರು. ಹರ್ಷ ಸುಮಾರು ನಾಲ್ಕು ತಿಂಗಳ ಹಿಂದೆ ಈ ಚಿತ್ರದ ಆಫರ್ ಕೊಟ್ಟರು.

  ಪಾತ್ರ ನನಗೆ ತುಂಬಾ ಇಷ್ಟ ಆಯ್ತು. ಆದರೆ, ಒಂದೇ ಪ್ರಾಬ್ಲಂ ಇದ್ದದ್ದು ತಲೆ ಬೋಳಿಸಿಕೊಳ್ಳಬೇಕಿತ್ತು. ತಲೆ ಬೋಳಿಸಿದರೆ ಕನಿಷ್ಠ 8-10 ಬೇರೆ ಪಾತ್ರ ಒಪ್ಪಿಕೊಳ್ಳುವಂತಿರಲಿಲ್ಲ. ಆದರೆ,ನಾನು ನಾಟಕರಂಗದವನಾದ್ದರಿಂದ ಯಾವುದೇ ಪಾತ್ರಕ್ಕಾದರೂ ನಾನು ರೆಡಿ

  ನಾಟಕ, ಸಿನಿಮಾ ಓಕೆ, ಸೀರಿಯಲ್ ಏಕೆ?

  ನಾಟಕ, ಸಿನಿಮಾ ಓಕೆ, ಸೀರಿಯಲ್ ಏಕೆ?

  ಸಿಐಡಿ ತುಂಬಾ ಹಳೆ ಕಮಿಟ್ಮೆಂಟ್, ಭಜರಂಗಿಗೂ ಮುನ್ನವೇ ಪ್ರಸಾರವಾಗಬೇಕಿತ್ತು. ಸಿಐಡಿ ಸೀರಿಯಲ್ ಅನ್ನೋಕೆ ಆಗಲ್ಲ. ಸಿನ್ಮಾ ರೇಂಜ್ ನಲ್ಲಿದೆ. ಒಂದು ಎಪಿಸೋಡ್ ಗೆ 10-12 ದಿನ ತೆಗೆದುಕೊಂಡು ಶೂಟ್ ಮಾಡಿದ್ದಾರೆ. ಕಥೆಯಲ್ಲಿ ವೇಗವಿದೆ. ಜತೆಗೆ ನನಗೆ ಇಷ್ಟವಾಗೋ ಫೈಟ್ಸ್ ಸೀನ್ಸ್, Action sequence ಇದೆ ಹಾಗಾಗಿ ನಾನು ಸಿಐಡಿ ಪಾತ್ರ ಮೆಚ್ಚಿ ನಟಿಸಿದ್ದೇನೆ.

  ನಿಮ್ಮ ನಾಟಕ ರಂಗದ ಜರ್ನಿ ಬಗ್ಗೆ ಹೇಳಿ

  ನಿಮ್ಮ ನಾಟಕ ರಂಗದ ಜರ್ನಿ ಬಗ್ಗೆ ಹೇಳಿ

  ನಾನು ಬಹುತೇಕ ಎಲ್ಲಾ ಪ್ರಮುಖ ತಂಡಗಳ ಜತೆ ಗುರುತಿಸಿಕೊಂಡಿದ್ದೇನೆ. ರಂಗಶಂಕರದ AHA ತಂಡ, ಹಿರಿಯ ನಟಿ ಸುಂದರ ಶ್ರೀ ಅವರ ಕಲಾ ಕುಂಜ, ದಿವಂಗತ ನಟ ಉದಯ್ ಕುಮಾರ್ ಅವರ ಉದಯ ಕಲಾನಿಕೇತನ, Rap, ಸಂಚಯ, ಪಂಚಮುಖಿ, ವಿಜಯ ರಂಗ, ಕಲಾ ಗಂಗೋತ್ರಿ ಮುಂತಾದ ತಂಡಗಳು ನನಗೆ ಅವಕಾಶ ನೀಡಿವೆ

  ಇಂಗ್ಲೀಷ್ ನಾಟಕ ಅನುಭವ

  ಇಂಗ್ಲೀಷ್ ನಾಟಕ ಅನುಭವ

  ಚೇತನ್ ಭಗತ್ ಅವರ ರೆವಲ್ಯೂಷನ್ 2020ರಲ್ಲಿ ನಟಿಸಿದ್ದು ಹೊಸ ಅನುಭವ. ನನ್ನ ಗೆಳೆಯನೊಬ್ಬ ನಿರ್ದೇಶನ ಮಾಡಿದ ಪಾತ್ರ ಚಾಲೆಂಜಿಂಗ್ ಆಗಿತ್ತು. ಕನ್ನಡ ನಾಟಕಕ್ಕಿಂತ ಹೆಚ್ಚಿನ ರಂಗ ತಾಲೀಮು ಬೇಕಾಗಿತ್ತು. ಚೇತನ್ ಭಗತ್ ಅವರನ್ನು ನಾಟಕಕ್ಕೆ ಆಹ್ವಾನಿಸಿದ್ವಿ. ಆದರೆ, ಅವರು ಬರೋಕೆ ಆಗಲಿಲ್ಲ. ಮುಂದೆ ಒಂದು ದಿನ ಅವರ ಮುಂದೆ ನಟಿಸಬೇಕು ಎಂಬ ಆಸೆಯಿದೆ.

  ನಾಟಕದಲ್ಲಿ ನಿಮ್ಮ ಡ್ರೀಮ್ ರೋಲ್?

  ನಾಟಕದಲ್ಲಿ ನಿಮ್ಮ ಡ್ರೀಮ್ ರೋಲ್?

  ಡ್ರೀಮ್ ರೋಲ್ ಅಂಥ ಇಲ್ಲ. ಹೊಸ ಹೊಸ ಪಾತ್ರಗಳು, ಇಲ್ಲಿ ಯಾರೂ ಮಾಡಿಲ್ಲದ ಪಾತ್ರ ಮಾಡಬೇಕು. ಎಲ್ಲಾ ನಾಟಕ ತಂಡ, ನಿರ್ದೇಶಕರ ಜತೆ ಕೆಲಸ ಮಾಡಬೇಕು ಎಂಬ ಇಚ್ಛೆ ಇದೆ. ಪ್ರತಿಯೊಬ್ಬರಿಂದಲೂ ಏನಾದರೂ ಒಂದು ಕಲಿಯುವುದು ಇದ್ದೇ ಇರುತ್ತದೆ. ಒಟ್ಟಾರೆ ಪಾತ್ರ ಇಂಟರೆಸ್ಟಿಂಗ್, ಚಾಲೆಂಜಿಂಗ್ ಆಗಿರಬೇಕು.

  ಚಿತ್ರಗಳ ಕೃಪೆ : ಸೌರವ್ ಲೋಕೇಶ್ ಅವರ ಫೇಸ್ ಬುಕ್ ಪುಟದಿಂದ

  ನಾಟಕರಂಗಕ್ಕೂ ಸಿನಿಮಾಕ್ಕೂ ವ್ಯತ್ಯಾಸ?

  ನಾಟಕರಂಗಕ್ಕೂ ಸಿನಿಮಾಕ್ಕೂ ವ್ಯತ್ಯಾಸ?

  ನಾಟಕ Actors Media, ಒಂದು ಸಲ ಸ್ಟೇಜ್ ಎಂಟ್ರಿ ಆದ ಮೇಲೆ ಯಾರೂ ಕರೆಕ್ಟ್ ಮಾಡೋಕೆ ಆಗಲ್ಲ. ಸಿನಿಮಾ Directors Media.. ಅವರು ಹೇಳೋದನ್ನು ನಾವು ಹೇಗೆ ಪ್ರತಿಬಿಂಬಿಸುತ್ತೇವೆ ಎಂಬುದು ಮುಖ್ಯ

  ಸ್ಮಾರ್ಟ್ ಆಗಿದ್ದು ವಿಲನ್ ಪಾತ್ರ ಏಕೆ?

  ಸ್ಮಾರ್ಟ್ ಆಗಿದ್ದು ವಿಲನ್ ಪಾತ್ರ ಏಕೆ?

  ನಾನು Experient ಮಾಡಿಕೊಂಡು ಬಂದಿದ್ದೇನೆ. Almost ನೆಗಟಿವ್ ಪಾತ್ರ ಸಿಕ್ತು. ಭಜರಂಗಿಗೂ ಮುನ್ನ ಮೊದಲಿಗೆ ಸವಾರಿಯಿಂದ ಗೂಗ್ಲಿ ತನಕ ಸುಮಾರು 15 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಕಥೆ ಮುಖ್ಯ ಕಥೆ ಪೂರಕವಾಗಿ ನನ್ನ ಪಾತ್ರ ಮುಖ್ಯ. ಒಂದು ಸೀನ್ ಇರಲಿ ಸಾಕು. ನನ್ನ ಅಪಿಯರೆನ್ಸ್ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಹೀರೋ ಆಗಿ ನಟಿಸಬೇಕು ಎಂದು ನಾನು ಬಯಸಿಲ್ಲ. ಒಳ್ಳೆ ಚಾಲೆಂಜಿಂಗ್ ಪಾತ್ರ ಬಯಸುತ್ತೇನೆ ಅಷ್ಟೇ.

  ನಿಮ್ಮ ನೆಚ್ಚಿನ ನಟ, ನಟಿ

  ನಿಮ್ಮ ನೆಚ್ಚಿನ ನಟ, ನಟಿ

  Always ರಾಜ್ ಕುಮಾರ್ ಹಾಗೂ ಶಂಕರ್ ನಾಗ್ ನಟಿಯರಲ್ಲಿ ಲಕ್ಷ್ಮಿ, ಭಾರತಿ ಅವರ ನಟನೆ ಇಷ್ಟ. ಎಲ್ಲಾ ಭಾಷೆಗಳ ಚಿತ್ರಗಳನ್ನು ನೋಡುತ್ತಿರುತ್ತೇನೆ.

  ಮಹೇಶ್ ಮಂಜ್ರೇಕರ್ ನಟನೆ, ಫರ್ಹಾನ್ ಅಖ್ತರ್ ನಿರ್ದೇಶನದ ಕಾರ್ತಿಕ್ ಕಾಲಿಂಗ್ ಕಾಲಿಂಗ್, ಭಾಗ್ ಮಿಲ್ಕಾ ಭಾಗ್ ಪಾತ್ರಗಳು ಇಷ್ಟ ಹೃತಿಕ್ ರೋಷನ್ ಆಲ್ ಟೈಂ ಫೇವರೀಟ್

  ಆಲ್ ಟೈಂ ಫೇವರೀಟ್ ರೋಲ್

  ಆಲ್ ಟೈಂ ಫೇವರೀಟ್ ರೋಲ್

  ನನಗೆ ಚಿಕ್ಕಂದಿನಿಂದ ಹೃತಿಕ್ ರೋಷನ್ ತುಂಬಾ ಇಷ್ಟ. ಅವರೊಬ್ಬ ಒಳ್ಳೆ ಡ್ಯಾನ್ಸರ್ ಆಗಿದ್ರು ಕೂಡಾ ಗುಜಾರೀಷ್ ಚಿತ್ರದಲ್ಲಿ ಇಡೀ ಚಿತ್ರ ಬೆಡ್ ಮೇಲೆ ಮಲಗೋದು ಅಂದ್ರೆ ತುಂಬಾ ಚಾಲೆಂಜಿಂಗ್ ಅದ್ಭುತ.. ಅವರ ರೋಲ್ adaptation ನನಗೆ ತುಂಬಾ ಸ್ಪೂರ್ತಿ ನೀಡುತ್ತದೆ. ಸೂಪರ್ ಮ್ಯಾನ್ ರೀತಿ ಆಗಲಿ, ಕೊಯಿ ಮಿಲ್ ಗಯಾ ರೋಲ್, ಜೋಧಾ ಅಕ್ಬರ್ ನಲ್ಲಿ ಆಗಲಿ ಸೂಪರ್

  ನಿಮ್ಮ ಫಿಟ್ನೆಸ್ ಬಗ್ಗೆ ಹೇಳಿ

  ನಿಮ್ಮ ಫಿಟ್ನೆಸ್ ಬಗ್ಗೆ ಹೇಳಿ

  ಆರ್ಟಿಸ್ಟ್ ಗೆ ಅಪಿರೀಯನ್ಸ್ ಮುಖ್ಯ. ನನಗೆ ಚಿಕ್ಕಂದಿನಿಂದಲೂ ಕ್ರೀಡೆಯಲ್ಲಿ ತುಂಬಾ ಆಸಕ್ತಿ ಇತ್ತು.ಕಾಲೇಜು, ವಿವಿ ಪ್ರತಿನಿಧಿಸಿದ್ದೇನೆ. ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ಸ್ವಲ್ಪ ಜಿಮ್ ಗೆ ಹೋಗೋದು ಹೆಚ್ಚಾಯ್ತು ಅಷ್ಟೆ. ಹೃತಿಕ್ ರೋಷನ್ ನೋಡಿ ಬಾಡಿ ಬಿಲ್ಡಿಂಗ್ ಮಾಡ್ಬೇಕು ಅನ್ನಿಸಲಿಲ್ಲ. ಅದರೆ, ಫಿಟ್ನೆಸ್ ವೈಯಕ್ತಿಕವಾಗಿ ಹಾಗೂ ವೃತ್ತಿಗೂ ಪೂರಕವಾಗಿ ಮುಂದುವರೆದಿದೆ.

  ಜಿಮ್ ಟ್ರೈನರ್ ಇದ್ದಾರಾ?

  ಜಿಮ್ ಟ್ರೈನರ್ ಇದ್ದಾರಾ?

  ನನ್ನ ಫ್ರೆಂಡ್ ವಿನಾಯಕ್, ಪ್ರಕಾಶ್ ಅಂಥ ಅವರು ಕೋರ್ಸ್ ಮಾಡಿದ್ದಾರೆ. ನನಗೆ ತುಂಬಾ ಹೆಲ್ಪ್ ಮಾಡುತ್ತಾರೆ. ಬಿಡುವು ಸಿಕ್ಕಿದ್ದಾಗ ಬಾಡಿ ಬಿಲ್ಡಿಂಗ್ ಬಗ್ಗೆ ಕೋರ್ಸ್ ಮಾಡಿದೆ. ಬಾಡಿ ಬಿಲ್ಡಿಂಗ್ ವರ್ಕ್ ಶಾಪ್ ಗೆ ಭೇಟಿ ನೀಡುತ್ತಿದ್ದೆ. ಮೊದಲೇ ಹೇಳಿದಂತೆ ಫಿಟ್ನೆಸ್ ಇರೋದರಿಂದ ನನಗೆ ಪಾತ್ರಕ್ಕೆ ತಕ್ಕ ಪಾತ್ರಧಾರಿ ಎನಿಸಲು ಸಾಧ್ಯವಾಗುತ್ತಿದೆ.

  ನಿಮ್ಮ ಊರು, ಕುಟುಂಬ

  ನಿಮ್ಮ ಊರು, ಕುಟುಂಬ

  ನಾನು ಹುಟ್ಟಿ ಬೆಳೆದಿದ್ದು, ಬೆಂಗಳೂರಿನಲ್ಲೇ. ನಮ್ಮ ಮನೆಯಲ್ಲಿ ನಾನು, ನನ್ನ ಅಪ್ಪ, ಅಮ್ಮ,ಅಣ್ಣ,ಅತ್ತಿಗೆ ಅವರ ಮಗು ಎಲ್ಲರೂ ಇದ್ದೇವೆ. ನನಗೆ ಮದುವೆಯಾಗಿ ಒಂದು ವರ್ಷ ಆಗಿದೆ. ನನ್ನ ಪತ್ನಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಎಲ್ಲರೂ ನನ್ನ ವೃತ್ತಿ ಬದುಕಿಗೆ ಪೂರಕವಾಗಿದ್ದಾರೆ. ನನ್ನ ಸರಿ ತಪ್ಪುಗಳನ್ನು ತಿದ್ದುತ್ತಾರೆ

  ಬೇರೆ ಭಾಷೆ ಅವಕಾಶ

  ಬೇರೆ ಭಾಷೆ ಅವಕಾಶ

  ನನಗೆ ಕಥೆ, ರೋಲ್ ಇಷ್ಟ ಆದರೆ ನಾನು ಯಾವುದೇ ಭಾಷೆಯಲ್ಲಾಗಲಿ ನಟಿಸಲು ನಾನು ಸಿದ್ಧ. ಫೇಮಸ್ ನಿರ್ದೇಶಕ, ಹೀರೋ ಜತೆ ನಟಿಸಿದೆ ಎನ್ನುವುದಕ್ಕಿಂತ ಇಂಥ ಒಳ್ಳೆ ಪಾತ್ರ ಮಾಡಿದೆ ಎಂಬ ತೃಪ್ತಿ ಕೊಡುವಂತಿರಬೇಕು

  ಕಾಲೇಜ್ ಫ್ರೆಂಡ್ ವಿರಾಮದ ಬಗ್ಗೆ

  ಕಾಲೇಜ್ ಫ್ರೆಂಡ್ ವಿರಾಮದ ಬಗ್ಗೆ

  ನಮ್ಮದೇ ಒಂದು ಗ್ಯಾಂಗ್ ಇದೆ ಜಯನಗರ ನ್ಯಾಷನಲ್ ಕಾಲೇಜ್ ಫ್ರೆಂಡ್ಸ್ ಈಗಲೂ ಎಲ್ಲಾ ಸಿಕ್ತಾ ಇರ್ತೀವಿ.

  ಕಾಲೇಜು ದಿನಗಳಲ್ಲಿ ನಾಟಕ ಎಂದರೆ ದೂರ ಹೋಗುತ್ತಿದ್ದೆ. ಅವಾಗ ಬಾಸ್ಕೆಟ್ ಬಾಲ್, ಅಥ್ಲೆಟಿಕ್ಸ್, ಕ್ರಿಕೆಟ್ ಹೀಗೆ ಎಲ್ಲಾ ಬರೀ ಸ್ಪೋರ್ಟ್ ನಲ್ಲಿದ್ದೆ. ಕಾಲೇಜು, ವಿಶ್ವ ವಿದ್ಯಾಲಯ ಮಟ್ಟದಲ್ಲಿ ಆಡಿದ್ದೇನೆ.

  ಈಗ ಹಳೆ ಫ್ರೆಂಡ್ಸ್ ಸಿಕ್ಕರೆ ಎಲ್ಲರೂ ಬೈಯ್ತಾರೆ. 'ನಮಗೆ ಹೇಳ್ತಾ ಇದ್ದೆ ನಾಟ್ಕ ಮಾಡಿ ಹಾಳ್ತಾಗಿರಾ ಅಂತಾ ಈಗ ನೀನು ಅದನ್ನೇ ವೃತ್ತಿ ಮಾಡಿಕೊಂಡಿದ್ದೀಯಾ' ಎನ್ನುತ್ತಾರೆ. ಒಟ್ಟಾರೆ ಫ್ರೆಂಡ್ ಜತೆ ಕಾಲ ಕಳೆಯುವುದು ತುಂಬಾ ಖುಷಿ ವಿಷಯ.

  ಸದ್ಯಕ್ಕೆ ಸಿಐಡಿ ಸೀರಿಯಲ್ ಅಲ್ಲದೆ ಒಂದು ಚಿತ್ರದ ಮಾತುಕತೆ ನಡೆದಿದೆ. ಭಜರಂಗಿಗೂ ಮುಂಚೆ ಒಪ್ಪಿಕೊಂದ ಪ್ರಾಜೆಕ್ಟ್. ಒಳ್ಳೆ ಆಫರ್ ನಿರೀಕ್ಷೆಯಂತೂ ಇದ್ದೇ ಇದೆ.

  English summary
  Here is Bhajarangi Kannada film villain Saurav Lokesh interview. Saurav Lokesh who gave stand out performance as Rakthaksha a evil Character in Bhajarangi. Saurav a diehard fan of Hrithik Roshan says he chooses roles if the story is appealing to audience.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X