»   » ಕ್ಯಾಸೆಟ್‌ನಲ್ಲಿ ಭಕ್ತಿರಸ

ಕ್ಯಾಸೆಟ್‌ನಲ್ಲಿ ಭಕ್ತಿರಸ

Posted By: Super
Subscribe to Filmibeat Kannada

ರೀ ಮಂಜುನಾಥ ಅಮೃತವಾಣಿ : 35 ರುಪಾಯಿ ಮುಖಬೆಲೆಯ ಈ ಕ್ಯಾಸೆಟ್‌ ಟಿ ಸೀರೀಸ್‌ ಸಂಸ್ಥೆಯ ಕೊಡುಗೆ. ಧರ್ಮಸ್ಥಳ ಮಂಜುನಾಥನ ಭಕ್ತರ ಮನ ಗೆದ್ದಿರುವ ಈ ಧ್ವನಿಸುರುಳಿಗೆ ಸುರಿಂದರ್‌ ಕೊಹ್ಲಿ ಸಂಗೀತ ಸಂಯೋಜಿಸಿದ್ದಾರೆ. ಗೋಟೂರಿ ಅವರ ಸಾಹಿತ್ಯ, ನರಸಿಂಹ ನಾಯಕ್‌ ಕಂಠ ಸಿರಿ ಕ್ಯಾಸೆಟ್‌ನಲ್ಲಿದೆ.

ಶಿವ ಕಥಾಮೃತವಾಣಿ, ಶ್ರೀ ಮಂಜುನಾಥ ನಮೋ, ಶಿವಸ್ತುತಿ ಮತ್ತು ಮಂಜುನಾಥ ಆರತಿಯನ್ನು ಧ್ವನಿಸುರುಳಿ ಒಳಗೊಂಡಿದೆ.

ಜಯಹನುಮ: ಎನ್ಕೆ ಲೈವ್‌ ಕ್ಯಾಸೆಟ್‌ ಸಂಸ್ಥೆ ಜಯ ಹನುಮ ಎಂಬ ಭಕ್ತಿ ಗೀತೆಗಳ ಕ್ಯಾಸೆಟ್‌ ಹೊರತಂದಿದೆ. ಈ ಕ್ಯಾಸೆಟ್‌ನಲ್ಲಿ 9 ಭಕ್ತಿ ಗೀತೆಗಳಿವೆ. ಜಯ ಜಯ ಹನುಮ ಎಂಬುದು ಪ್ರಥಮ ಗೀತೆ. ಈ ಗೀತೆಯನ್ನು ದಾನೇಶ್‌ ಬರುಡಿ ರಚಿಸಿದ್ದಾರೆ. ದೊಡ್ಡ ರಂಗೇಗೌಡರು ಜಯ ಜಯ ಜಯ, ರಾಮನ ಮಾರುತಿ ನೆನೆಯುತಲಿ, ರಾಮ ರೂಪನೇ ಎಂಬ ಹಾಡುಗಳನ್ನು ಬರೆದಿದ್ದಾರೆ. ಶಶಿಧರ ಕೋಟಿ, ಗಂಗೋತ್ರಿ ರಂಗಸ್ವಾಮಿ ಮತ್ತು ರಮೇಶ್ಚಂದ್ರ ಗೀತೆಗಳನ್ನು ಸೊಗಸಾಗಿ ಹಾಡಿದ್ದಾರೆ. ಎಲ್ಲ ಗೀತೆಗಳಿಗೆ ಸಂಗೀತ ನೀಡಿರುವವರು ಪಿ. ಪ್ರಸನ್ನ ಕುಮಾರ್‌. ಕ್ಯಾಸೆಟ್‌ ಬೆಲೆ 30 ರುಪಾಯಿ.

ಸ್ವಾಮಿ ಸರ್ವೇಶ ಶ್ರೀ ಮಂಜೇಶ : ಭೂ ಕೈಲಾಸ ಎಂದೇ ಖ್ಯಾತವಾಗಿರುವ ಧರ್ಮಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥನ ಕುರಿತ ಭಕ್ತಿ ಗೀತೆಗಳ ಧ್ವನಿಸುರುಳಿಯೇ ಶ್ರೀ ಮಂಜೇಶ. ಝೇಂಕಾರ್‌ ಈ ಕ್ಯಾಸೆಟ್‌ ಅನ್ನು ಹೊರತಂದಿದೆ.

ಸ್ವಾಮಿ ಸರ್ವೇಶನೆ, ಕಲಿಯು ಒಳ ಬರಲಿಲ್ಲ, ಶಿವ ತಾನು, ಕೈಲಾಸವ ಕಾಣಬನ್ನಿರೋ, ಮಂಜುನಾಥ ಸ್ವಾಮಿ ಬಾರೋ ಮುಂತಾದ 8 ಭಕ್ತಿಗೀತೆಗಳು ಈ ಕ್ಯಾಸೆಟ್‌ನಲ್ಲಿವೆ. ಕೆ. ಯುವರಾಜ್‌ ಮತ್ತು ಸಂಗಡಿಗರು ಈ ಭಕ್ತಿ ಗೀತೆಗಳನ್ನು ಹಾಡಿದ್ದಾರೆ. ಸಾಮ್ರಾಟ್‌ರ ಸಂಗೀತ ಇರುವ ಕ್ಯಾಸೆಟ್‌ ಬೆಲೆ 25 ರು.

ಪಾಂಡುರಂಗನಾಗಿ ಭಕ್ತಿ ಸಂಗನಾಗಿ : ಗುಲ್ಷನ್‌ ಕುಮಾರ್‌ ಅವರ ಜನಪ್ರಿಯ ಟಿ ಸೀರೀಸ್‌ ಹೊರ ತಂದಿರುವ ಈ ಕ್ಯಾಸೆಟ್‌ ದಾಸಶ್ರೇಷ್ಠರಾದ ಪುರಂದರ ದಾಸರ ಆರಾಧ್ಯ ದೈವ ಪಂಡರಾಪುರದ ಪುರಂದರ ವಿಠಲನ ಕುರಿತಾದ ಭಕ್ತಿ ಗೀತೆಗಳ ಸಂಗಮ. ಇದರಲ್ಲಿ ವಿಠಲನ ಕುರಿತ 6 ಭಕ್ತಿ ಗೀತೆಗಳಿವೆ.

ಜೈ ವಿಠಲಾ ಶ್ರೀ ಹರಿ ವಿಠಲಾ, ಶ್ರೀ ಪಂಡರಾಪುರವಾಸ, ಪಾಂಡುರಂಗ ಹರಿ ವಿಠಲ, ಜೈ ಪುಂಡಲೀಕ ವರದಾ ಮುಂತಾದ ಗೀತೆಗಳಿವೆ. ಗೀತೆಗಳನ್ನು ದಿವ್ಯಾ ರಾಘವನ್‌ ಸುಶ್ರಾವ್ಯವಾಗಿ ಹಾಡಿದ್ದಾರೆ. ಗೋಟೂರಿ ಅವರು ಗೀತೆಗಳನ್ನು ರಚಿಸಿದ್ದು, ಧನಂಜಯ ಮಿಶ್ರಾ ಸಂಗೀತ ನೀಡಿದ್ದಾರೆ. ಬೆಲೆ 30 ರು.

ಛಾಯಾ ನಂದನನಾಗಿ ಸೂರ್ಯ ತನಯನಾಗಿ : ಧನಂಜಯ ಮಿಶ್ರಾ ರಾಗ ಸಂಯೋಜನೆಯಲ್ಲಿ ಬನ್ನಿ ನಗೆ ಮಲ್ಲೆ ಹೂಗಳ, ಛಾಯಾ ನಂದನ ಬಾರಯ್ಯ ಮುಂತಾದ ಆರು ಭಕ್ತಿ ಗೀತೆಗಳಿರುವ ಈ ಕ್ಯಾಸೆಟ್‌ ಅನ್ನು ಟಿ. ಸೀರೀಸ್‌ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಸೂರ್ಯ ಪುತ್ರನಾದ ಶನಿದೇವರ ಸ್ತುತಿಗಳನ್ನು ಒಳಗೊಂಡ ಗೀತೆಗಳನ್ನು ಚಂದ್ರು ರಚಿಸಿದ್ದಾರೆ. ನರಸಿಂಹ ನಾಯಕ್‌ ಹಾಗೂ ಬೆಂಗಳೂರು ಸೋದರಿಯರು ಹಾಡಿದ್ದಾರೆ. ಕ್ಯಾಸೆಟ್‌ ಬೆಲೆ 30 ರುಪಾಯಿ.

English summary
kannada devotional songs cassettes

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada