'ಭರಾಟೆ' ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು?
Recommended Video
ಕನ್ನಡ ಸಿನಿಮಾಗಳು ಚಿತ್ರದ ಕಲೆಕ್ಷನ್ ಅನ್ನು ಅಷ್ಟು ಸುಲಭವಾಗಿ ಬಿಟ್ಟು ಕೊಡುವುದಿಲ್ಲ. ಆದರೆ, ಇತ್ತೀಚಿಗೆ ಇಲ್ಲಿಯೂ ನಿರ್ಮಾಪಕರು ತಮ್ಮ ಸಿನಿಮಾದ ಗಳಿಕೆ ಬಗ್ಗೆ ಮಾತನಾಡುತ್ತಿದ್ದಾರೆ. ಇದೀಗ 'ಭರಾಟೆ' ಸಿನಿಮಾದ ಕಲೆಕ್ಷನ್ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿದೆ.
ನಿನ್ನೆ (ಅಕ್ಟೋಬರ್ 18) 'ಭರಾಟೆ' ಸಿನಿಮಾ ಬಿಡುಗಡೆಯಾಗಿದೆ. ಪಕ್ಕಾ ಮಾಸ್ ಸಿನಿಮಾ ಆಗಿರುವ 'ಭರಾಟೆ' ಪ್ರೇಕ್ಷರಿಗೆ ಇಷ್ಟ ಆಗಿದೆ. ರಾಜ್ಯಾದ್ಯಂತ ಮೊದಲ ದಿನ ಸಿನಿಮಾಗೆ ದೊಡ್ಡ ಓಪನಿಂಗ್ ಸಿಕ್ಕಿದೆ. ಬಹುತೇಕ ಎಲ್ಲ ಚಿತ್ರಮಂದಿರಗಳು ಹೌಸ್ ಫುಲ್ ಆಗಿವೆ. ಶ್ರೀಮುರಳಿ ಮೊದಲ ಬಾರಿಗೆ ಡಬಲ್ ರೋಲ್ ನಲ್ಲಿ ನಟಿಸಿದ್ದು, ಅವರ ಪಾತ್ರ ನಿರ್ವಹಣೆ ಸಿನಿಮಾದ ಹೈಲೈಟ್ ಆಗಿದೆ.
ಬೆಂಗಳೂರು, ಕೋಲಾರ, ಶಿವಮೊಗ್ಗ, ಹುಬ್ಬಳ್ಳಿ, ದಾವಣಗೆರೆ, ಮಂಗಳೂರು, ಮಂಡ್ಯ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಸಿನಿಮಾಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಈ ಭಾಗಗಳಲ್ಲಿ 'ಭರಾಟೆ' ಅಬ್ಬರ ಜೋರಾಗಿ ಮುಂದುವರೆದಿದೆ.
ಅಂದಹಾಗೆ, 'ಭರಾಟೆ' ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ವಿವರ ಹೀಗಿದೆ.

ಮೊದಲ ದಿನ 8.36 ಕೋಟಿ ಕಲೆಕ್ಷನ್
'ಭರಾಟೆ' ಸಿನಿಮಾದ ಮೊದಲ ದಿನ 8.36 ಕೋಟಿ ಕಲೆಕ್ಷನ್ ಮಾಡಿದೆ. ಸಿನಿಮಾದ ಹಾಡುಗಳು, ಟ್ರೇಲರ್ ದೊಡ್ಡ ಮಟ್ಟದ ಹಿಟ್ ಆಗಿತ್ತು. ಹೀಗಾಗಿ, ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಇತ್ತು. ಅದೇ ರೀತಿ ಸಿನಿಮಾ ಮೊದಲ ದಿನ ದೊಡ್ಡ ಬೆಂಬಲ ಪಡೆದಿದೆ. ಇತ್ತೀಚಿಗೆ ಬಂದ ಕನ್ನಡ ಸಿನಿಮಾಗಳ ಪೈಕಿ ಮೊದಲ ದಿನ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಸಾಲಿಗೆ 'ಭರಾಟೆ' ಕೂಡ ಸೇರಿದೆ.

ಬೆಂಗಳೂರು ಮತ್ತು ಕೋಲಾರದಲ್ಲಿ 3.81 ಕೋಟಿ
ಪ್ರಮುಖವಾಗಿ 'ಭರಾಟೆ' ಸಿನಿಮಾಗೆ ಬೆಂಗಳೂರು ಹಾಗೂ ಕೋಲಾರದಲ್ಲಿ ಹೆಚ್ಚು ಬೆಂಬಲ ಸಿಕ್ಕಿದೆ. ಈ ಎರಡು ಭಾಗದಲ್ಲಿ 3.81 ಕೋಟಿ ಗಳಿಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಸಿಂಗಲ್ ಸ್ಕೀನ್ ಹಾಗೂ ಮಲ್ಟಿಪ್ಲೆಕ್ಸ್ ಎರಡೂ ಕಡೆ ಪ್ರೇಕ್ಷಕ ವರ್ಗ ಹೆಚ್ಚಿಗೆ ಆಗಿದೆ. ಗಾಂಧಿನಗರದ ನರ್ತಕಿ ಚಿತ್ರಮಂದಿರದಲ್ಲಿ 'ಭರಾಟೆ' ಸೌಂಡು ಸಿಕ್ಕಾಪಟ್ಟೆ ಜೋರಾಗಿದೆ.

ಉಳಿದ ಜಿಲ್ಲೆಗಳ ಲೆಕ್ಕಾಚಾರ
ಬೆಂಗಳೂರು ಹಾಗೂ ಕೋಲಾರ ಬಿಟ್ಟರೆ ಹುಬ್ಬಳ್ಳಿ, ದಾವಣಗೆರೆ, ಶಿವಮೊಗ್ಗ, ಮಂಗಳೂರು ಹೈದರಾಬಾದ್ ಕರ್ನಾಟಕ ಭಾಗಗಳಲ್ಲಿ ಸಿನಿಮಾದ ಕಲೆಕ್ಷನ್ ಚೆನ್ನಾಗಿದೆ. ಇಲ್ಲಿ 2.38 ಕೋಟಿ ಗಳಿಕೆ ಆಗಿದೆ. ಮಂಡ್ಯ, ಮೈಸೂರು ಹಾಗೂ ತುಮಕೂರು ದಿಂದ 2.17 ಕೋಟಿ ಕಲೆಕ್ಷನ್ ಮಾಡಿದೆ. ರಾಜ್ಯದ ಎಲ್ಲ ಭಾಗದಲ್ಲಿಯೂ ಸಿನಿಮಾಗೆ ಒಳ್ಳೆಯ ಮಾತುಗಳು ಕೇಳಿ ಬಂದಿವೆ.

ಆಕ್ಷನ್ ಪ್ರಿಯರಿಗೆ ಹಬ್ಬ
'ಭರಾಟೆ' ಸಿನಿಮಾ ಆಕ್ಷನ್ ಪ್ರಿಯರಿಗೆ ಬಹಳ ಇಷ್ಟ ಆಗುತ್ತದೆ. ಇದರ ಜೊತೆಗೆ ಆಯುರ್ವೇದದ ಮಹತ್ವ ಕಥೆಯಲ್ಲಿ ಹೇಳಲಾಗಿದೆ. ಶ್ರೀಮುರಳಿ ಎರಡು ರೀತಿಯ ಪಾತ್ರದಲ್ಲಿ ನಟಿಸಿದ್ದಾರೆ. ಶ್ರೀಲೀಲಾ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಬಲ್ಲಾಳ ಸಾಯಿ ಕುಮಾರ್, ಪಲ್ಲವ ರವಿಶಂಕರ್, ತಾರ, ಸುಮನ್, ರಂಗಾಯಣ ರಘು ನಟನೆ ಸಿನಿಮಾಗೆ ಪ್ಲಾಸ್ ಆಗಿದೆ.


Click it and Unblock the Notifications











