50 ದಿನ ಪೂರೈಸಿದ ಶ್ರೀಮುರಳಿ 'ಭರಾಟೆ' ಸಿನಿಮಾ

ಈ ವರ್ಷ ಮೂರೇ ಮೂರು ಸಿನಿಮಾಗಳು 100 ದಿನಗಳನ್ನು ಪೂರೈಸಿದೆ. ಬೆರಳೆಣಿಕೆಯಷ್ಟು ಸಿನಿಮಾ ಮಾತ್ರ ಐವತ್ತು ದಿನಗಳನ್ನು ಪೂರ್ಣ ಮಾಡಿದೆ. ಈಗ ಆ ಸಾಲಿಗೆ 'ಭರಾಟೆ' ಸಿನಿಮಾ ಕೂಡ ಸೇರಿಕೊಂಡಿದೆ.

ಶ್ರೀಮುರಳಿ ನಾಯಕನಾಗಿ ನಟಿಸಿರುವ 'ಭರಾಟೆ' ಸಿನಿಮಾ ಹಾಫ್ ಸೆಂಚುರಿ ಬಾರಿಸಿದೆ. ಕರ್ನಾಟಕದ ಅನೇಕ ಭಾಗಗಳಲ್ಲಿ ಸಿನಿಮಾ ಯಶಸ್ವಿ 50 ದಿನ ಪೂರೈಸಿದೆ. ಗಾಂಧಿನಗರದ ಸ್ವಪ್ನ, ಮೈಸೂರಿನ ಶಾಂತಲ, ಶಿವಮೊಗ್ಗದ ಹೆಚ್ ಪಿ ಸಿ, ಮಂಡ್ಯದ ಗುರುಶ್ರೀ ಹೀಗೆ ಅನೇಕ ಭಾಗಗಳಲ್ಲಿ ಸಿನಿಮಾ ಇನ್ನು ಪ್ರದರ್ಶನ ಕಾಣುತ್ತಿದೆ. ಮಲ್ಟಿಪ್ಲೆಕ್ಸ್ ನಲ್ಲಿಯೂ ಸಿನಿಮಾ ಓಡುತ್ತಿದೆ.

'ಭರಾಟೆ' ಸಿನಿಮಾ ಬಿಡುಗಡೆ ಆದಾಗ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆದರೆ, ಮಾಸ್ ಸಿನಿಮಾವನ್ನು ಅಭಿಮಾನಿಗಳು ಇಷ್ಟ ಪಟ್ಟಿದ್ದಾರೆ. ಲವ್, ಆಕ್ಷನ್, ಕಾಮಿಡಿ, ಫ್ಯಾಮಿಲಿ ಡ್ರಾಮಾ ಹೊಂದಿರುವ ಸಿನಿಮಾ ಕಮರ್ಷಿಯಲ್ ಆಗಿ ಹಿಟ್ ಆಗಿದೆ. ಬಾಕ್ಸ್ ಆಫೀಸ್ ನಲ್ಲಿಯೂ ಒಳ್ಳೆಯ ಗಳಿಕೆ ಮಾಡಿದೆ.

Bharaate Kannada Movie Completes 50 Days

'ಭರಾಟೆ' ಚೇತನ್ ಕುಮಾರ್ ನಿರ್ದೇಶನದ ಸಿನಿಮಾ. ಈ ಸಿನಿಮಾದ ಮೂಲಕ ಚೇತನ್ ಹ್ಯಾಟ್ರಿಕ್ ಬಾರಿಸಿದ್ದಾರೆ. ಸುಪ್ರೀತ್ ಈ ಸಿನಿಮಾದ ನಿರ್ಮಾಣ ಮಾಡಿದ್ದಾರೆ. ಶ್ರೀಲೀಲಾ ಸಿನಿಮಾದ ನಾಯಕಿ ಆಗಿದ್ದಾರೆ.

ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ 25 ಕೋಟಿ ಕಲೆಕ್ಷನ್ ಮಾಡಿತ್ತು. ಈ ಸಿನಿಮಾದಿಂದ ಶ್ರೀಮುರಳಿ ಸಂಭಾವನೆ ಕೂಡ ಹೆಚ್ಚಿಗೆ ಆಗಿದೆ.

More from Filmibeat

English summary
bharaate kannada movie completes 50 days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X