ಹೊಸ ದಾಖಲೆ ಬರೆಯಲು ಊರುಬಿಟ್ಟ ಶ್ರೀ ಮುರಳಿ

By Pavithra

Recommended Video

ಒಂದು ಶ್ರೀ ಮುರಳಿ ಏನು ಬೇಕಾದರೂ ಮಾಡ್ತಾರೆ ಅನ್ನೋದಕ್ಕೆ ಇದೇ ಸಾಕ್ಷಿ..! | Filmibeat Kannada

ರೋರಿಂಗ್ ಸ್ಟಾರ್ ಶ್ರೀ ಮುರಳಿ ಹೊಸ ದಾಖಲೆ ಬರೆಯೋದಕ್ಕೆ ಸಿದ್ದತೆ ಮಾಡಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ಊರು ಬಿಟ್ಟು ಬೇರೆ ಊರಿಗೆ ಪ್ರಯಾಣ ಬೆಳೆಸಿದ್ದಾರೆ. ಅರೆ ಇದೆನಾಯ್ತು ಅಂತ ಯೋಚನೆ ಮಾಡಬೇಡಿ. ನಾವು ಹೇಳುತ್ತಿರುವುದು ಶ್ರೀ ಮುರಳಿ ಅಭಿನಯದ ಮುಂದಿನ ಸಿನಿಮಾ 'ಭರಾಟೆ' ಬಗ್ಗೆ.

'ಭರಾಟೆ' ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ ಚಿತ್ರ. 'ಬಹದ್ದೂರ್' ಚೇತನ್ ಕುಮಾರ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಶ್ರೀಮುರಳಿ ಅವರ ಸ್ನೇಹಿತರಾದ ಸುಪ್ರಿತ್ ನಿರ್ಮಾಣ ಮಾಡುತ್ತಿದ್ದಾರೆ.

ಇಷ್ಟು ದಿನಗಳು ಕನ್ನಡ ಸಿನಿಮಾರಂಗದಲ್ಲಿ ಯಾರು ಮಾಡಿರದ ಸಾಹಸಕ್ಕೆ ಶ್ರೀ ಮುರಳಿ ಮತ್ತು ತಂಡ ಮುಂದಾಗಿದೆ. ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಲ್ಲಿ ಇಂಥದೊಂದು ಪ್ರಯೋಗ ನಡೆಯುತ್ತಿದೆ. ಹಾಗಾದರೆ 'ಭರಾಟೆ' ಟೀಂ ಮಾಡುತ್ತಿರುವ ದಾಖಲೆಯಾದ್ರು ಏನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.

ಫೋಟೋಶೂಟ್ ಗಾಗಿ ಊರು ಬಿಟ್ಟ ತಂಡ

ಫೋಟೋಶೂಟ್ ಗಾಗಿ ಊರು ಬಿಟ್ಟ ತಂಡ

ಶ್ರೀ ಮುರಳಿ ಅಭಿನಯದ 'ಭರಾಟೆ' ಚಿತ್ರದ ಫೋಟೋಶೂಟ್ ಗಾಗಿ ಚಿತ್ರತಂಡ ರಾಜಸ್ಥಾನಕ್ಕೆ ಪ್ರಯಾಣ ಬೆಳೆಸಿದೆ. ನಟ ಶ್ರೀ ಮುರಳಿ, ನಟಿ ಶ್ರೀ ಲೀಲಾ ನಿರ್ದೇಶಕ ಚೇತನ್ ಕ್ಯಾಮೆರಾ ಮ್ಯಾನ್ ಭುವನ್ ಗೌಡ ಹಾಗೂ ನಿರ್ಮಾಪಕ ಸುಪ್ರಿತ್ ಈಗಾಗಲೇ ಬೆಂಗಳೂರಿನಿಂದ ರಾಜಸ್ಥಾನಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಹೊಸ ಪ್ರಯೋಗಕ್ಕೆ ಮುಂದಾದ ಚೇತನ್

ಹೊಸ ಪ್ರಯೋಗಕ್ಕೆ ಮುಂದಾದ ಚೇತನ್

ಸಾಮಾನ್ಯವಾಗಿ ಹಾಡುಗಳ ಚಿತ್ರೀಕರಣ ಹಾಗೂ ದೃಶ್ಯ ಗಳ ಚಿತ್ರೀಕರಣಕ್ಕೆ ಬೇರೆ ಊರುಗಳಿಗೆ ಹೋದಾಗ ಚಿತ್ರದ ಫೋಟೋ ಶೂಟ್ ಮಾಡಿಸುವುದು ಸರ್ವೇ ಸಾಮಾನ್ಯ. ಆದರೆ ಇದೇ ಮೊದಲ ಬಾರಿಗೆ ಫೋಟೋ ಶೂಟ್ ಗಾಗಿಯೇ ರಾಜಸ್ಥಾನಕ್ಕೆ ಹೋಗಿದೆ 'ಭರಾಟೆ' ಟೀಂ.

ಹೊಸತನದ ಭರಾಟೆ

ಹೊಸತನದ ಭರಾಟೆ

ನಿರ್ದೇಶಕ ಚೇತನ್ ಕುಮಾರ್ ತಮ್ಮ ಪ್ರತಿ ಸಿನಿಮಾದಲ್ಲಿಯೂ ಫೋಟೋ ಶೂಟ್ ಅನ್ನು ಕಲರ್ ಫುಲ್ ಆಗಿ ಮತ್ತು ವಿಭಿನ್ನವಾಗಿ ಮಾಡಿಸುತ್ತಾರೆ. ಈ ಹಿಂದೆ 'ಬಹದ್ದೂರ್' ಚಿತ್ರದ ಫೋಟೋ ಶೂಟ್ ಅನ್ನು ಮಾವಳ್ಳಿಯ ಗಲ್ಲಿ ಗಲ್ಲಿಯಲ್ಲಿ ಮಾಡಿದ್ದರು. ನಂತರ 'ಭರ್ಜರಿ' ಸಿನಿಮಾದ ಶೂಟ್ ಅನ್ನು ಅದ್ದೂರಿ ಸೆಟ್ ಹಾಕಿ ಮಾಡಿದ್ದರು. ಮೂರನೇ ಚಿತ್ರದ ಫೋಟೋಶೂಟ್ ಅನ್ನು ರಾಜಸ್ಥಾನದಲ್ಲಿ ಮಾಡಿಸುತ್ತಿದ್ದಾರೆ.

ಹೊಸ ಕಾಂಬಿನೇಶನ್

ಹೊಸ ಕಾಂಬಿನೇಶನ್

ಸದ್ಯ ಚಿತ್ರರಂಗದಲ್ಲಿ ಸಕ್ಸಸ್ ಕಂಡಿರುವ ಎಲ್ಲರೂ 'ಭರಾಟೆ' ಸಿನಿಮಾದಲ್ಲಿ ಒಂದಾಗಿದ್ದಾರೆ. ಶ್ರೀ ಮುರಳಿ ನಿರ್ದೇಶಕ ಚೇತನ್ , ಕ್ಯಾಮೆರಾ ಮ್ಯಾನ್ ಭುವನ್ ಗೌಡ ಹೊಸ ನಟಿ ಶ್ರೀಲೀಲಾ ಇವರೆಲ್ಲರ ಶ್ರಮ ಚಿತ್ರ ನೋಡುವ ಪ್ರೇಕ್ಷಕರಿಗೆ ಹಬ್ಬದ ಸಂಭ್ರಮ ನೀಡುವುದು ಖಂಡಿತ.

More from Filmibeat

English summary
Kannada movie Bharaate photoshoot is taking place in Rajasthan, Director Chetan Kumar, actor Sri Murali, actress Mr Leela have already traveled to Rajasthan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X