For Quick Alerts
  ALLOW NOTIFICATIONS  
  For Daily Alerts

  ಪರೀಕ್ಷೆಗಾಗಿ ಚಿತ್ರೀಕರಣಕ್ಕೆ ರಜೆ ಹಾಕಿದ ಭರಾಟೆ ನಾಯಕಿ

  |

  ಅದ್ಧೂರಿ ಮೇಕಿಂಗ್ ನಿಂದ ಭಾರಿ ಗಮನ ಸೆಳೆಯುತ್ತಿರುವ ಭರಾಟೆ ಸಿನಿಮಾ ಈಗ ಚಿತ್ರೀಕರಣವನ್ನ ಎರಡು ತಿಂಗಳು ತಾತ್ಕಾಲಿಕವಾಗಿ ಮುಂದೂಡಿದೆಯಂತೆ. ಅದಕ್ಕೆ ಕಾರಣ ನಾಯಕಿಯ ಪರೀಕ್ಷೆ ಎನ್ನಲಾಗಿದೆ.

  ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಈ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿದಿದ್ದು, ಅಂತಿಮ ಹಂತಕ್ಕೆ ಬಂದು ತಲುಪಿದೆ. ಈ ಹಂತದಲ್ಲಿ ನಾಯಕಿಗೋಸ್ಕರ ಶೂಟಿಂಗ್ ಗೆ ಬ್ರೇಕ್ ಹಾಕಲು ನಿರ್ಧರಿಸಿದೆ.

  ತುಮಕೂರಿನಲ್ಲಿ 'ಯಜಮಾನ'ನ ಬಗ್ಗೆ ಹಾಡಿ ಹೊಗಳಿದ ಶ್ರೀಮುರಳಿ ತುಮಕೂರಿನಲ್ಲಿ 'ಯಜಮಾನ'ನ ಬಗ್ಗೆ ಹಾಡಿ ಹೊಗಳಿದ ಶ್ರೀಮುರಳಿ

  ಹೌದು, ನಾಯಕಿ ಶ್ರೀಲೀಲಾ ಅವರು ಪರೀಕ್ಷೆ ಬರೆಯುತ್ತಿದ್ದು, ಅದಕ್ಕಾಗಿ ಒಂದೂವರೆ ತಿಂಗಳು ಚಿತ್ರೀಕರಣದಿಂದ ರಜೆ ಪಡೆದುಕೊಂಡಿದ್ದಾರಂತೆ. ಹಾಗಾಗಿ, ಹೀರೋಯಿನ್ ಗೆ ಬ್ರೇಕ್ ಕೊಟ್ಟು, ಉಳಿದ ಕೆಲಸಗಳನ್ನ ಮಾಡಿಕೊಳ್ಳಲಿದೆ.

  'ಭರಾಟೆ'ಯಿಂದ ಬಂತು ಭರ್ಜರಿ ಸುದ್ದಿ: 9 ಕೇಡಿಗಳ ವಿರುದ್ಧ ಸಿಡಿದು ನಿಲ್ತಾರೆ ಶ್ರೀಮುರಳಿ.!'ಭರಾಟೆ'ಯಿಂದ ಬಂತು ಭರ್ಜರಿ ಸುದ್ದಿ: 9 ಕೇಡಿಗಳ ವಿರುದ್ಧ ಸಿಡಿದು ನಿಲ್ತಾರೆ ಶ್ರೀಮುರಳಿ.!

  ಬಹುದ್ಧೂರ್, ಭರ್ಜರಿ ನಂತರ ನಿರ್ದೇಶಕ ಚೇತನ್ ಕುಮಾರ್ ಭರಾಟೆ ಸಿನಿಮಾ ಮಾಡ್ತಿದ್ದು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಈ ಕಡೆ ಮಫ್ತಿ ನಂತರ ಶ್ರೀಮುರಳಿ ಕಾಣಿಸಿಕೊಂಡಿರುವ ಸಿನಿಮಾ ಇದಾಗಿದ್ದು, ಸಹಜವಾಗಿ ಉಗ್ರಂ ವೀರನಿಗೆ ಸ್ಪೆಷಲ್ ಎನಿಸಿದೆ.

  English summary
  Bharaate actress Sreeleela has to appear for her exams, the shoot of the film is on hold. We hear that the shoot has been pushed by as much as two months.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X