'ಯಜಮಾನ'ನ ಯಶಸ್ಸನ್ನು ಆಚರಿಸಿದ 'ಭರಾಟೆ' ತಂಡ
'ಯಜಮಾನ' ಸಿನಿಮಾದ ಒಂದೇ ಒಂದು ಹಾಡು ಆ ಸಿನಿಮಾದ ಕ್ರೇಜ್ ಅನ್ನು ಸಾರಿ ಹೇಳಿದೆ. 'ಯಜಮಾನ' ಚಿತ್ರದ ಹಾಡು ಕಳೆದ ಒಂದು ದಿನದಿಂದ ಯೂ ಟ್ಯೂಬ್ ನಲ್ಲಿ ನಂಬರ್ 1 ಟ್ರೆಂಡಿಂಗ್ ನಲ್ಲಿದೆ.
ಈ ಚಿತ್ರದ ಖುಷಿಯನ್ನು ಇದೀಗ 'ಭರಾಟೆ' ಚಿತ್ರತಂಡ ಆಚರಣೆ ಮಾಡಿದೆ. ಸಿನಿಮಾದ ಚಿತ್ರೀಕರಣದ ವೇಳೆ ಇಡೀ ತಂಡ ಕೇಕ್ ಕಟ್ ಮಾಡಿ ಸಂತಸದ ಕ್ಷಣಗಳನ್ನು ಕಳೆದಿದೆ. 'ಯಜಮಾನ' ಸಿನಿಮಾದ ಹಾಡು ಗೆಲ್ಲಲು ಪ್ರಮುಖ ಕಾರಣರಾದ ಚೇತನ್ ಕುಮಾರ್ ಗಾಗಿ ಈ ಸಣ್ಣ ಕಾರ್ಯಕ್ರಮವನ್ನು ಮಾಡಲಾಯಿತು.

ನಟ ಶ್ರೀಮುರಳಿ ಇಡೀ ಚಿತ್ರತಂಡವನ್ನು ಕರೆದು ಈ ಸಂಭ್ರಮಾಚರಣೆ ಮಾಡಿದ್ದಾರೆ. 'ಭರಾಟೆ' ಸಿನಿಮಾದ ನಿರ್ದೇಶಕರಾಗಿರುವ ಚೇತನ್ 'ಶಿವನಂದಿ..' ಹಾಡಿನ ಸಾಹಿತ್ಯ ಬರೆದಿದ್ದು, ತಮ್ಮ ನಿರ್ದೇಶಕರ ಗೆಲ್ಲುವನ್ನು ಇಡೀ ತಂಡ ಆಚರಣೆ ಮಾಡಿದ್ದಾರೆ.
ಅಂದಹಾಗೆ, 'ಯಜಮಾನ' ಸಿನಿಮಾದ ಹಾಡು ಸದ್ಯ ಯೂ ಟ್ಯೂಬ್ ನಲ್ಲಿ 3 ಮಿಲಿಯನ್ ಹಿಟ್ಸ್ ಪಡೆದುಕೊಂಡು ಮುನ್ನುಗುತ್ತಿದೆ. ವಿ.ಹರಿಕೃಷ್ಣ ಸಿನಿಮಾಗೆ ಸಂಗೀತ ನೀಡಿದ್ದಾರೆ.
More from Filmibeat
English summary
'Bharaate' kannada movie team celebrated Darshan's 'Yajamana' song success.


Click it and Unblock the Notifications











