»   » ಅಂ.ರಾ. ಚಿತ್ರೋತ್ಸವ ಸಮಿತಿಯಲ್ಲಿ ಕಾರಂತ್‌, ಕಾಸರವಳ್ಳಿ, ನಾಗಾಭರಣ

ಅಂ.ರಾ. ಚಿತ್ರೋತ್ಸವ ಸಮಿತಿಯಲ್ಲಿ ಕಾರಂತ್‌, ಕಾಸರವಳ್ಳಿ, ನಾಗಾಭರಣ

Posted By: Staff
Subscribe to Filmibeat Kannada

ಬೆಂಗಳೂರು : ಅಕ್ಟೋಬರ್‌ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಅಂತಾ ರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭಕ್ಕಾಗಿ ವ್ಯವಸ್ಥಾಪಕ ಸಮಿತಿಯನ್ನು ರಚಿಸಲಾಗಿದ್ದು, ಸದಸ್ಯರನ್ನು ನೇಮಕ ಮಾಡಲಾಗಿದೆ.

ಈ ಸಮಿತಿಯಲ್ಲಿ ಕನ್ನಡದ ಹೆಸರಾಂತ ನಿರ್ದೇಶಕರುಗಳಾದ ಬಿ.ವಿ. ಕಾರಂತ್‌, ಗಿರೀಶ್‌ ಕಾಸರವಳ್ಳಿ ಹಾಗೂ ಟಿ.ಎಸ್‌. ನಾಗಾಭರಣ ಅವರುಗಳು ಸ್ಥಾನ ಪಡೆದಿದ್ದಾರೆ. ಕೇಂದ್ರ ವಾರ್ತಾ ಸಚಿವೆ ಸುಷ್ಮಾ ಸ್ವರಾಜ್‌ ಅವರು ಕರ್ನಾಟಕದ ವಾರ್ತಾ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್‌ ಅವರಿಗೆ ಬರೆದಿರುವ ಪತ್ರದಲ್ಲಿ ಈ ವಿಷಯ ತಿಳಿಸಿದ್ದಾರೆ.

ವಿಧಾನಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹ್ಮದ್‌ ಅವರನ್ನು ಸಂಘಟನಾ ಸಮಿತಿ ಸದಸ್ಯರನ್ನಾಗಿಯೂ ನೇಮಕ ಮಾಡಲಾಗಿದೆ.

English summary
karnataka council chief whip salim ahamad has been appointed as member of film festival committee

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada