For Quick Alerts
  ALLOW NOTIFICATIONS  
  For Daily Alerts

  ಭಾರತ್ ಬಂದ್ : ಚಿತ್ರಮಂದಿರಗಳಿಗೂ ತಟ್ಟಿದ ಬಂದ್ ಬಿಸಿ

  By Harshitha
  |

  ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ನೀತಿ ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಇಂದು ಕರೆ ನೀಡಿರುವ ಭಾರತ್ ಬಂದ್ ಗೆ ದೇಶದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಹಲವೆಡೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

  ಕರ್ನಾಟಕದಲ್ಲಿ ಬಂದ್ ಗೆ ಕೆಲವೆಡೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದರೆ, ಇನ್ನೂ ಕೆಲವೆಡೆ ಜನ ಜೀವನ ಎಂದಿನಂತಿದೆ. ಸದಾ ಗಿಜಿಗುಡುತ್ತಿದ್ದ ಮೆಜೆಸ್ಟಿಕ್ ಸೇರಿದಂತೆ ಬೆಂಗಳೂರಿನ ಹಲವು ಪ್ರಮುಖ ರಸ್ತೆಗಳು ಇಂದು ಖಾಲಿ ಖಾಲಿ.

  ಭಾರತ್ ಬಂದ್ ನಿಂದಾಗಿ ಕನ್ನಡ ಚಿತ್ರೋದ್ಯಮಕ್ಕೂ ಬಿಸಿ ತಟ್ಟಿದೆ. ಇಂದು ಬಂದ್ ಇದ್ದರೂ, ಕರ್ನಾಟಕದ ಬಹುತೇಕ ಚಿತ್ರಮಂದಿರಗಳು ತೆರೆದಿದ್ದವು. ಶಾಲಾ-ಕಾಲೇಜುಗಳಿಗೆ ರಜೆ ಇದ್ದ ಪರಿಣಾಮ, ಪ್ರೇಕ್ಷಕರು ಚಿತ್ರಮಂದಿರದತ್ತ ಧಾವಿಸುತ್ತಾರೆ ಅನ್ನುವ ನಿರೀಕ್ಷೆ ಇತ್ತು. [ಭಾರತ್ ಬಂದ್ ಏಕೆ? ಪ್ರತಿಭಟನೆಗೆ ಕಾರಣವೇನು?]

  ಆದ್ರೆ, ಬಹುತೇಕ ಎಲ್ಲಾ ಚಿತ್ರಮಂದಿರಗಳು ಇಂದು ಖಾಲಿ ಹೊಡೆಯುತ್ತಿವೆ. ಮೆಜೆಸ್ಟಿಕ್ ನಲ್ಲಿರುವ ಸಂತೋಷ್, ನರ್ತಕಿ, ಕಪಾಲಿ ಸೇರಿದಂತೆ ಪ್ರಮುಖ ಥಿಯೇಟರ್ ಗಳು ಬಿಕೋ ಎನ್ನುತ್ತಿವೆ.

  'ಉಪ್ಪಿ-2', 'ರಂಗಿತರಂಗ', 'ಬುಗುರಿ', 'ಆಟಗಾರ' ಚಿತ್ರಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿತ್ತು. ಆದ್ರೀಗ, ಬಂದ್ ಪರಿಣಾಮ ಎಲ್ಲಾ ಚಿತ್ರಗಳು ಇಂದು ಕಲೆಕ್ಷನ್ ನಲ್ಲಿ ಡಲ್ ಹೊಡೆದಿವೆ.

  English summary
  Kannada Film Industry is also affected by Bharat Bandh (September 2nd). Almost all theaters in Karnataka are empty without the audience.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X