twitter
    For Quick Alerts
    ALLOW NOTIFICATIONS  
    For Daily Alerts

    ರಮ್ಯಾ ವಾಹನಕ್ಕೆ ಬಿಜೆಪಿ ಕಾರ್ಯಕರ್ತರ ಮುತ್ತಿಗೆ

    By Mahesh
    |

    ಬಿಜೆಪಿ ನೇತೃತ್ವದ ಎನ್ ಡಿಎ ಕರೆ ನೀಡಿರುವ ಭಾರತ್ ಬಂದ್ ಬಿಸಿ ಲಕ್ಕಿ ಸ್ಟಾರ್ ರಮ್ಯಾ ಅವರಿಗೆ ತಟ್ಟಿದೆ. ಬಿಜೆಪಿ ಕಾರ್ಯಕರ್ತರು ರಮ್ಯಾ ಅವರಿದ್ದ ಕಾರನ್ನು ಅಡ್ಡಗಟ್ಟಿ ಬಂದ್ ಗೆ ಬೆಂಬಲ ನೀಡುವಂತೆ ಆಗ್ರಹಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

    ಮೈಸೂರಿನ ಲಲಿತ್ ಮಹಲ್ ಅರಮನೆಯ ಬಳಿ ರಮ್ಯಾ ಅವರು ದಿಗಂತ್ ಅಭಿನಯದ ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಈ ಸಂದರ್ಭದಲ್ಲಿ ರಮ್ಯಾ ಅವರು ಚಿತ್ರೀಕರಣಕ್ಕಾಗಿ ಅರಮನೆ ಬಳಿಗೆ ಬರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಅವರನ್ನು ಅಡ್ಡಗಟ್ಟಿದ್ದಾರೆ.

    ಘಟನೆಯಿಂದ ಕೆಲ ಕಾಲ ವಿಚಲಿತರಾದ ರಮ್ಯಾ ನಂತರ ಕಾರಿನಿಂದ ಇಳಿದು ಕಾರ್ಯಕರ್ತರನ್ನು ಸಮರ್ಥವಾಗಿ ಎದುರಿಸಿದ್ದಾರೆ.

    ಏನಾಯ್ತು ಅಲ್ಲಿ? : ಒಂದ್ನಿಮಿಷ..ಒಂದ್ನಿನಿಷ ಇರಿ ಪ್ಲೀಸ್ ಎಂದು ರಮ್ಯಾ ವಾಹನ(caravan)ದ ಬಾಗಿಲಲ್ಲಿ ನಿಂತು ಹಲವು ಬಾರಿ ಮನವಿ ಮಾಡಿದರೂ ಕಾರ್ಯಕರ್ತರು ಓಗೊಡಲಿಲ್ಲ.

    'ಇಂಡಸ್ಟ್ರೀಯಿಂದ ನಮಗೆ ಯಾವುದೇ ಮಾಹಿತಿ ಬಂದಿಲ್ಲ ಶೂಟಿಂಗ್ ಮಾಡಬಾರದು ಅಂತಾ ನಮಗೆ ರೂಲ್ ಹಾಕಿಲ್ಲ. ನೀವು ಇಲ್ಲಿ ಬಂದು ಗಲಾಟೆ ಮಾಡಿ ಇಲ್ಲಿರುವ ಕೆಲಸಗಾರರು ಕೆಲಸ ನಿಲ್ಲಿಸಿದರೆ ಅವರಿಗೆ ಯಾರು ದುಡ್ಡು ಕೊಡುತ್ತಾರೆ' ಎಂದು ರಮ್ಯಾ ಪ್ರಶ್ನಿಸಿದರು.

    'ಇಡೀ ಭಾರತವೇ ಡೀಸೆಲ್ ಬೆಲೆ ಏರಿಕೆ, ಎಫ್ ಡಿಐ, ಅಡುಗೆ ಅನಿಲ ಸಮಸ್ಯೆ ವಿರುದ್ಧ ಹೋರಾಟಕ್ಕೆ ಇಳಿದಿದೆ. ನೀವು ಕೂಡಾ ಬೆಂಬಲ ನೀಡಬೇಕು. ಚಿತ್ರರಂಗದ 150 ಜನ ದಿನದ ಊಟ ಹೋಗುತ್ತದೆ ಎನ್ನುತ್ತೀರಾ.. ಲಕ್ಷಾಂತರ ಜನಕ್ಕೆ ನೋವಾದರೆ ಸ್ಪಂದಿಸಲು ಆಗುವುದಿಲ್ಲವೇ' ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶಭರಿತವಾಗಿ ಆಗ್ರಹಿಸಿದರು.

    ನಾವು ಕಲಾವಿದೆಯಾಗಿ ಅವರು ಬಂದ್ ಗೆ ಬೆಂಬಲ ನೀಡಿ ಎಂದು ಮನವಿ ಮಾಡಲು ಬಂದಿದ್ದೇವು. ಆದರೆ, ಆಕೆ ಇದಕ್ಕೆ ವ್ಯತಿರಿಕ್ತವಾಗಿ ಮಾತನಾಡಿ ಕೆರಳಿಸಿದರು ಎಂದು ಕಾರ್ಯಕರ್ತರು ಹೇಳಿದರು.

    ಮಾತಿನ ಚಕಮಕಿ ಮುಂದುವರೆಯುತ್ತಿದ್ದಂತೆ ಸ್ಥಳದಲ್ಲಿ ಕೆಲ ಪೊಲೀಸರು ಕಾಣಿಸಿಕೊಂಡು ರಮ್ಯಾ ಅವರನ್ನು ಬೇರೊಂದು ವಾಹನಕ್ಕೆ ಸಾಗಿಸಿ ಸ್ಥಳದಿಂದ ಬೇರೆಡೆಗೆ ಕಳುಹಿಸಿದರು.

    ಇಡೀ ಚಿತ್ರತಂಡದವೇ ಅಲ್ಲಿತ್ತು ಆದರೆ, ರಮ್ಯಾ ಅವರನ್ನು ಮಾತ್ರ ಟಾರ್ಗೆಟ್ ಮಾಡಿದ್ದು ಏಕೆ? ಚಿತ್ರರಂಗ ಬಂದ್ ಗೆ ಬೆಂಬಲ ನೀಡುವಂತೆ ಕರೆ ನೀಡದಿರುವಾಗ ಕಲಾವಿದೆಯಾಗಿ ಸ್ವಯಂಪ್ರೇರಿತರಾಗಿ ಹೋರಾಟಕ್ಕೆ ಇಳಿಯಲು ಸಾಧ್ಯವೇ?

    ಕಾಂಗ್ರೆಸ್ ಯುವ ನಾಯಕಿ ರಮ್ಯಾ ಹಾಗೂ ಬಿಜೆಪಿ ಕಾರ್ಯಕರ್ತರ ಹಠಮಾರಿತನಕ್ಕೆ ಇದು ಮತ್ತೊಂದು ನಿದರ್ಶನವಾಗಿತ್ತು.

    English summary
    Bharat Bandh: BJP activists attacked actress Ramya's car and demanded her to support for Bharat bandh. Ramya is currently shooting in Mysore with Diganth in an unnamed movie
    Friday, September 21, 2012, 10:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X