ಹುಬ್ಬಳ್ಳಿ ಮಂದಿಗೆ ಶ್ರೀ ಮುರಳಿ ಕಡೆಯಿಂದ ಸಿಗಲಿದೆ ಒಂದು ಗಿಫ್ಟ್
Recommended Video

ನಟ ಶ್ರೀ ಮುರಳಿ ಈಗ ತಮ್ಮ 'ಭರಾಟೆ' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. 'ಮಫ್ತಿ' ನಂತರ ಶ್ರೀ ಮುರಳಿ ಈ ಸಿನಿಮಾವನ್ನು ಶುರು ಮಾಡಿದ್ದು, ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಇದೆ. ಈಗಾಗಲೇ 'ಭರಾಟೆ'ಯ ಸದ್ದು ಜೋರಾಗಿದೆ.
ಸದ್ಯ ಚಿತ್ರದ ಪೋಸ್ಟರ್ ಗಳು ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಶ್ರೀ ಮುರಳಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಿನಿಮಾದ ಪೋಸ್ಟರ್ ಗಳನ್ನು ಹಂಚಿಕೊಂಡಿದ್ದಾರೆ. ಮಹಾರಾಜನ ಗೆಟಪ್ ನಲ್ಲಿ ಶ್ರೀ ಮುರಳಿ ಹಾಗೂ ರಾಣಿಯಾಗಿ ನಟಿ ಶ್ರೀ ಲೀಲಾ ಮಿಂಚುತ್ತಿದ್ದಾರೆ. ಇಬ್ಬರ ಲುಕ್ ತುಂಬನೇ ಚೆನ್ನಾಗಿ ಕಾಣುತ್ತಿದೆ.

ವಿಶೇಷ ಅಂದರೆ, 'ಭರಾಟೆ' ಸಿನಿಮಾದ ಮೋಷನ್ ಪೋಸ್ಟರ್ ಅನ್ನು ಸ್ವಾತಂತ್ಯ ದಿನಾಚಾರಣೆಯ ವಿಶೇಷವಾಗಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಲಿದೆ.
ಅಂದಹಾಗೆ, 'ಭರಾಟೆ' ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. 'ಬಹದ್ದೂರ್', 'ಭರ್ಜರಿ' ಚಿತ್ರಗಳ ನಂತರ ಚೇತನ್ ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದು, ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿದ್ದಾರೆ. ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.


Click it and Unblock the Notifications











