'ಭರಾಟೆ' ಚಿತ್ರದ ಬಿಡುಗಡೆ ದಿನಾಂಕ ಅಧಿಕೃತ ಘೋಷಣೆ
Recommended Video
Bharate Kannada Movie:'ಭರಾಟೆ' ಚಿತ್ರದ ಬಿಡುಗಡೆ ದಿನಾಂಕ ಅಧಿಕೃತ ಘೋಷಣೆ
'ಭರಾಟೆ' ಸಿನಿಮಾದ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಸಪ್ಟೆಂಬರ್ 27 ರಂದು ಸಿನಿಮಾ ರಿಲೀಸ್ ಆಗುತ್ತಿದೆ.
ಶ್ರೀಮುರಳಿ ನಟನೆಯ ಈ ಸಿನಿಮಾದ ಬಿಡುಗಡೆ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಪ್ಟೆಂಬರ್ ನಲ್ಲಿ ಸಿನಿಮಾವನ್ನು ಅಭಿಮಾನಿಗಳು ನೋಡಬಹುದಾಗಿದೆ. ಇಂದಿನಿಂದ 'ಭರಾಟೆ' ಚಿತ್ರದ ಡಬ್ಬಿಂಗ್ ಕೆಲಸ ಶುರು ಆಗಿದೆ.
ಆಗಸ್ಟ್ ನಲ್ಲಿ ದರ್ಶನ್ ಅವರ 'ಕುರುಕ್ಷೇತ್ರ', ಸುದೀಪ್ ನಟನೆ 'ಪೈಲ್ವಾನ್', ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಈ ಸಿನಿಮಾಗಳ ಬಳಿಕ 'ಭರಾಟೆ'ಯ ಅಬ್ಬರ ಶುರು ಆಗಲಿದೆ.

ಚೇತನ್ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸುಪ್ರೀತ್ ನಿರ್ಮಾಣ ಚಿತ್ರಕ್ಕಿದೆ. ಶ್ರೀ ಲೀಲಾ ಸಿನಿಮಾದ ನಾಯಕಿಗಿದ್ದಾರೆ.
ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡಿದ್ದಾರೆ. ಸದ್ಯದಲ್ಲಿಯೇ ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆಯಾಗಿದೆ. ಚೇತನ್ ನಿರ್ದೇಶನದ ಮೂರನೇ ಸಿನಿಮಾ ಇದಾಗಿದೆ.
More from Filmibeat
English summary
Actor Sri Murali's 'Bharate' kannada movie will be releasing on september 27. The movie is directed by Chethan Kumar.
sri murali chethan kumar release sandalwood ಶ್ರೀಮುರಳಿ ಚೇತನ್ ಕುಮಾರ್ ಸ್ಯಾಂಡಲ್ ವುಡ್ ಬಿಡುಗಡೆ ಕನ್ನಡ ಸಿನಿಮಾ


Click it and Unblock the Notifications











