ಶ್ರೀಮುರಳಿಯ ಈ ಚಿತ್ರ ನೋಡಿ ದರ್ಶನ್ ಹೊಟ್ಟೆ ಉರಿದುಕೊಂಡಿದ್ರಂತೆ
ನಟ ಶ್ರೀಮುರಳಿ ಸದ್ಯ ಎರಡು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ವಿಶೇಷ ಅಂದರೆ, ಈ ಎರಡು ಸಿನಿಮಾಗಳ ಕಾರ್ಯಕ್ರಮ ಒಂದೇ ವೇದಿಕೆಯಲ್ಲಿ ನೆರವೇರಿದೆ.
'ಭರಾಟೆ' ಸಿನಿಮಾದ ಟೀಸರ್ ಬಿಡುಗಡೆ ಹಾಗೂ 'ಮದಗಜ' ಸಿನಿಮಾದ ಫಸ್ಟ್ ಲುಕ್ ಲಾಂಚ್ ಕಾರ್ಯಕ್ರಮ ನಿನ್ನೆ ನಡೆಯಿತು. ಈ ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗಿಯಾಗಿದ್ದು, ಇಡೀ ತಂಡಕ್ಕೆ ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ದರ್ಶನ್ ''ಮುರಳಿ ಅವರ 'ಉಗ್ರಂ' ಸಿನಿಮಾ ನೋಡಿ ನನಗೆ ಈ ರೀತಿಯ ಸಿನಿಮಾ ಸಿಗಲಿಲ್ಲವಲ್ಲ ಎಂದು ಹೊಟ್ಟೆ ಉರಿದುಕೊಂಡಿದೆ. ಈಗ ಈ ಸಿನಿಮಾ ಕೂಡ ನಾನು ಹೊಟ್ಟೆ ಉರಿಸುಕೊಳ್ಳುವ ಹಾಗೆ ಚೆನ್ನಾಗಿ ಆಗಲಿ'' ಎಂದು ಹೇಳಿದರು.

''ಮದಗಜ' ಸಿನಿಮಾದ ಟೈಟಲ್ ವಿವಾದ ಏನು ಇಲ್ಲ. ಆ ಟೈಟಲ್ ನಲ್ಲಿ ಯಾರು ಸಿನಿಮಾ ಮಾಡಿದರು ಖುಷಿಯೇ. ಎಲ್ಲ ನಮ್ಮ ಕನ್ನಡ ಸಿನಿಮಾಗಳು'' ಎಂದು ದರ್ಶನ್ 'ಮದಗಜ' ತಂಡಕ್ಕೆ ವಿಶ್ ಮಾಡಿದರು.
ಅಂದಹಾಗೆ, 'ಮದಗಜ' ಸಿನಿಮಾವನ್ನ ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. 'ಭರಾಟೆ' ಸಿನಿಮಾಗೆ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
English summary
Actor Srimurali 'Bharate' movie teaser and 'Madagaja' movie first look released by Darshan.


Click it and Unblock the Notifications