ಸುದೀಪ್ ಮೇಲೆ ಭಾರತಿ ವಿಷ್ಣುವರ್ಧನ್ ಅಸಮಾಧಾನಗೊಂಡ್ರಾ?
Recommended Video

ಡಿಸೆಂಬರ್ 30 ರಂದು ಸಾಹಸ ಸಿಂಹ ವಿಷ್ಣುವರ್ಧನ್ ಅವರ ಪುಣ್ಯ ಸ್ಮರಣೆ. ಅದಕ್ಕಾಗಿಯೇ ವಿಷ್ಣು ಸ್ಮಾರಕಕ್ಕೆ ಸಂಬಂಧಪಟ್ಟ ಕೆಲಸಗಳು ಮತ್ತೆ ಜೀವ ಪಡೆದುಕೊಂಡಿದೆ. ಒಂದುಕಡೆ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣಕ್ಕೆ ಒತ್ತಾಯ ಮಾಡುತ್ತಿದ್ರೆ, ಮತ್ತೊಂದೆಡೆ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲು ಕುಟುಂಬದವರು ಆಸೆ ಪಡುತ್ತಿದ್ದಾರೆ.
ಹೀಗಿರುವಾಗ, ಮೊನ್ನೆಯಷ್ಟೇ ನಟ ಸುದೀಪ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ವಿಷ್ಣು ಸ್ಮಾರಕವನ್ನ ಮೈಸೂರಿನಲ್ಲೇ ಮಾಡಿ, ಆದ್ರೆ, ಅಂತ್ಯ ಸಂಸ್ಕಾರವಾದ ಜಾಗವನ್ನ ಅಭಿಮಾನಿಗಳಿಗೆ ಬಿಟ್ಟುಕೊಡಿ ಎಂದು ಮನವಿ ನೀಡಿದ್ದರು.
ಈ ಸಂಗತಿ ಭಾರತಿ ವಿಷ್ಣುವರ್ಧನ್ ಅವರ ಕಿವಿಗೆ ಬಿದ್ದಿದ್ದು, ಸುದೀಪ್ ಅವರ ಮೇಲೆ ವಿಷ್ಣುವರ್ಧನ್ ಮಡದಿ ಅಸಮಾಧಾನಗೊಂಡಿದ್ದಾರಂತೆ. ಹಾಗಿದ್ರೆ, ಕಿಚ್ಚನ ಈ ನಡೆ ಬಗ್ಗೆ ಭಾರತಿ ಅವರು ಏನಂದ್ರು? ಮುಂದೆ ಓದಿ.....

ಸರ್ಕಾರ ಭರವಸೆ ನೀಡಿದೆ
ಸುದೀಪ್ ಅವರು ಮುಖ್ಯಮಂತ್ರಿ ಅವರನ್ನ ಭೇಟಿ ಮಾಡಿರುವುದು ನನಗೆ ಗೊತ್ತಿಲ್ಲ. ಆದ್ರೆ, ಮುಖ್ಯಮಂತ್ರಿ ಅವರು ನಮಗೆ ಭರವಸೆ ನೀಡಿದ್ದಾರೆ. ಸದ್ಯಕ್ಕೆ ನಿಂತಿರುವ ಕೆಲಸ ಆದಷ್ಟೂ ಬೇಗ ಆರಂಭಿಸಿ ಎಂದು ಮನವಿ ಮಾಡಿಕೊಂಡಿದ್ದೇವೆ. ಸಿಎಂ ಕೂಡ ಬೇಗ ಮಾಡೋಣ ಅಂದಿದ್ದಾರೆ ಎಂದು ಭಾರತಿ ಅವರು ತಿಳಿಸಿದ್ದಾರೆ.

ಇದು ಹಣದ ಸಮಸ್ಯೆಯಲ್ಲ
''ಇದು ಹಣದ ಸಮಸ್ಯೆ ಅಲ್ಲ. ಸುದೀಪ್ ಅವರು ವಾಸ್ತವ ಅರಿತುಕೊಳ್ಳಬೇಕು. ಹಣದ ಸಮಸ್ಯೆಯಿದ್ದರೇ ಕುಟುಂಬವೇ ಭರಿಸುತ್ತಿತ್ತು. ಸ್ಮಾರಕದ ಸಮಸ್ಯೆ ಬಗ್ಗೆ ಅವರಿಗೆ ಗೊತ್ತಿಲ್ಲ. ಸುದೀಪ್ ಅವರು ನನ್ನ ಬಳಿ ಯಾವುದೇ ಚರ್ಚೆ ಕೂಡ ಮಾಡಿಲ್ಲ'' ಎಂದು ಭಾರತಿ ಅವರು ಪತ್ರಕರ್ತರ ಬಳಿ ಹೇಳಿಕೊಂಡಿದ್ದಾರೆ.

ಸಿಎಂ ಭೇಟಿ ಮಾಡಿದ್ದ ಸುದೀಪ್
ಇನ್ನು ಮುಖ್ಯಮಂತ್ರಿ ಅವರ ಕಾವೇರಿ ನಿವಾಸದಲ್ಲಿ ಸಿಎಂ ಅವರನ್ನ ಭೇಟಿ ಮಾಡಿದ ಸುದೀಪ್, ''ವಿಷ್ಣು ಸಮಾಧಿ ಇರುವ ಸ್ಥಳವನ್ನ ವಿಷ್ಣು ಪುಣ್ಯ ಭೂಮಿ ಎಂದು ಘೋಷಿಸಿ. ಸ್ಮಾರಕ ಬೇಕಾದರೇ ಮೈಸೂರಿನಲ್ಲೇ ಆಗಲಿ'' ಎಂದು ಮನವಿ ಮಾಡಿಕೊಂಡಿದ್ದರು.

ಸುದೀಪ್ ನಡೆ ಸ್ವಾಗತಿಸಿದ ಅಭಿಮಾನಿಗಳು
ಸುದೀಪ್ ಅವರು, ಮುಖ್ಯಮಂತ್ರಿ ಅವರನ್ನ ಭೇಟಿ ಮಾಡಿ ವಿಷ್ಣು ಸ್ಮಾರಕದ ಬಗ್ಗೆ ಮನವಿ ಮಾಡಿರುವ ಬಗ್ಗೆ ವಿಷ್ಣು ಅಭಿಮಾನಿಗಳು ಸ್ವಾಗತಿಸಿದ್ದಾರೆ. ಆದ್ರೆ, ವಿಷ್ಣು ಕುಟುಂಬದವರು ಮಾತ್ರ ಸುದೀಪ್ ಮೇಲೆ ಅಸಮಾಧಾನಗೊಂಡಂತೆ ಕಾಣುತ್ತಿದೆ. ಅದೇನೆ ಇರಲಿ, ವಿಷ್ಣು ಸ್ಮಾರಕ ಆದಷ್ಟೂ ಬೇಗ ನಿರ್ಮಾಣವಾಗಲಿ ಎನ್ನುವುದು ಸಾವಿರಾರು ಅಭಿಮಾನಿಗಳ ಆಸೆ.


Click it and Unblock the Notifications











