twitter
    For Quick Alerts
    ALLOW NOTIFICATIONS  
    For Daily Alerts

    ವಿಷ್ಣು ಪ್ರತಿಮೆ ಧ್ವಂಸ: ಸಿಂಹ ಯಾವತ್ತಿದ್ದರೂ ಸಿಂಹವೇ- ವಿಷ್ಣು ಪುತ್ರಿ ತಿರುಗೇಟು

    |

    ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ಬಾಲಗಂಗಾಧರ ಸ್ಮಾಮೀಜಿ ವೃತ್ತದಲ್ಲಿ ಸ್ಥಾಪಿಸಲಾಗಿದ್ದ ವಿಷ್ಣುವರ್ಧನ್ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದರು. ನಂತರ ಅದೇ ವೃತ್ತದಲ್ಲಿ ದಾದಾ ಪುತ್ಥಳಿಯನ್ನು ಮರು ಸ್ಥಾಪನೆ ಮಾಡಲಾಗುತ್ತಿದೆ.

    ಪ್ರತಿಮೆ ಧ್ವಂಸ ಕುರಿತು ವಿಷ್ಣುವರ್ಧನ್ ಪತ್ನಿ ಭಾರತಿ ಹಾಗೂ ಮಗಳು ಕೀರ್ತಿ ಪ್ರತಿಕ್ರಿಯಿಸಿದ್ದಾರೆ. ವಿಷ್ಣು ಅವರ 11ನೇ ವರ್ಷದ ಪುಣ್ಯಸ್ಮರಣೆಯ ವಿಶೇಷವಾಗಿ ಮೈಸೂರಿನ ಹಾಲಾಳು ಗ್ರಾಮದಲ್ಲಿರುವ ವಿಷ್ಣು ಸ್ಮಾರಕ ಸ್ಥಳದಲ್ಲಿ ವಿಷ್ಣು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಹಿರಿಯ ನಟಿ ''ಪುತ್ಥಳಿ ಧ್ವಂಸವನ್ನ ಅವಮಾನ ಅಂದುಕೊಳ್ಳಬಾರದು, ಅದನ್ನ ಆರ್ಶಿವಾದ ಅಂದುಕೊಳ್ಳೋಣ'' ಎಂದಿದ್ದಾರೆ. ಮುಂದೆ ಓದಿ...

    ಸಿಂಹ ಯಾವತ್ತಿದ್ದರೂ ಸಿಂಹವೇ

    ಸಿಂಹ ಯಾವತ್ತಿದ್ದರೂ ಸಿಂಹವೇ

    ''ಸಿಂಹ ಯಾವತ್ತಿದ್ದರೂ ಸಿಂಹವೇ. ತಂದೆ ಸಿಂಹದಂತೆ ಇದ್ದರೂ ಯಾವಾಗಲೂ ಸಿಂಹದಂತೆ ಇರ್ತಾರೆ. ನಾಯಿಗಳು ಬೊಗಳಿದ ತಕ್ಷಣ ದೇವಲೋಕ ಹಾಳಾಗೋಲ್ಲ. ತಂದೆಯ ಪುತ್ಥಳಿ ಧ್ವಂಸ ಮಾಡಿದವರಿಂದ ತಂದೆಯ ಹೆಸರು ಅಳಿಸಲಾಗಲ್ಲ. ಅವರ ಅಸ್ತಿತ್ವಕ್ಕೆ, ಅವರ ಹೆಸರಿಗೆ ಯಾವತ್ತು ಧಕ್ಕೆ ಬರಲ್ಲ'' - ಕೀರ್ತಿ ವಿಷ್ಣುವರ್ಧನ್

    ವಿಷ್ಣುವರ್ಧನ್ ಪ್ರತಿಮೆ ಧ್ವಂಸ: ದರ್ಶನ್ ಪ್ರತಿಕ್ರಿಯಿಸಿದ್ದು ಹೀಗೆವಿಷ್ಣುವರ್ಧನ್ ಪ್ರತಿಮೆ ಧ್ವಂಸ: ದರ್ಶನ್ ಪ್ರತಿಕ್ರಿಯಿಸಿದ್ದು ಹೀಗೆ

    ತಂದೆಯ ಹೆಸರು ಅಭಿಮಾನಿಗಳ ಮನಸ್ಸಲ್ಲಿದೆ

    ತಂದೆಯ ಹೆಸರು ಅಭಿಮಾನಿಗಳ ಮನಸ್ಸಲ್ಲಿದೆ

    ''ತಂದೆಯ ಹೆಸರು ಅವರ ಮೇಲಿನ ಪ್ರೀತಿ ಅಭಿಮಾನಿಗಳ ಮನಸ್ಸಲ್ಲಿ ಇದೆ. ಇನ್ನೊಂದು ವರ್ಷದಲ್ಲಿ ತಂದೆಯ ಸ್ಮಾರಕ ಮೈಸೂರಿನಲ್ಲಿ ನಿರ್ಮಾಣ ಆಗಲಿದೆ. ಒಳ್ಳೆಯ ಕೆಲಸಗಳು ಸ್ವಲ್ಪ ತಡವಾಗಿಯೇ ಆಗೋದು. ತಂದೆ ಎಂದಾಕ್ಷಣ ಅವರ ಪ್ರೀತಿಯೆ ನೆನಪಾಗುತ್ತೆ. ಇಂದು ಅವರ ಸ್ಮರಣೆ ಮಾಡುವ ಎಲ್ಲ ಅಭಿಮಾನಿಗಳಿಗೆ ನಮ್ಮ ಧನ್ಯವಾದ ಹೇಳ್ತಿವಿ'' ಎಂದು ಮೈಸೂರಿನಲ್ಲಿ ವಿಷ್ಣುವರ್ಧನ್ ಪುತ್ರಿ ಕೀರ್ತಿ ಹೇಳಿದ್ದಾರೆ.

    ಎಲ್ಲರ ಮನದಲ್ಲು ವಿಷ್ಣು ಇದ್ದಾರೆ

    ಎಲ್ಲರ ಮನದಲ್ಲು ವಿಷ್ಣು ಇದ್ದಾರೆ

    ಭಾರತಿ ವಿಷ್ಣುವರ್ಧನ್ ಪ್ರತಿಕ್ರಿಯಿಸಿ ''ವಿಷ್ಣುವರ್ಧನ್ ಬಗ್ಗೆ ಮಾತನಾಡುವವರು ಇರಬೇಕು. ಹಾಗಿದ್ದಲ್ಲಿ ಮಾತ್ರ ಅವರ ಇರುವಿಕೆ ಗೊತ್ತಾಗುತ್ತೆ. ಮೊನ್ನೆಯ ಘಟನೆಗೆ ಇಡೀ ಚಿತ್ರರಂಗ ಪ್ರತಿಕ್ರಿಯೆಸಿದೆ. ಘಟನೆಗೆ ಪ್ರತಿಕ್ರಿಯಿಸಿದ ಎಲ್ಲರಿಗು ಧನ್ಯವಾದಗಳು. ಎಲ್ಲರ ಮನದಲ್ಲು ವಿಷ್ಣು ಇದ್ದಾರೆ'' ಎಂದು ಭಾರತಿ ಸಮಾಧಾನವಾಗಿ ತಿರುಗೇಟು ನೀಡಿದ್ದಾರೆ.

    ವಿಷ್ಣುವರ್ಧನ್ ಪ್ರತಿಮೆ ಧ್ವಂಸ; ಹೆಸರು ಬಯಲಾದ ದಿನ ದಯವಿಟ್ಟು ದೇಶ ಬಿಟ್ಟು ಓಡೋಗಿ ಎಂದ ಸುದೀಪ್ವಿಷ್ಣುವರ್ಧನ್ ಪ್ರತಿಮೆ ಧ್ವಂಸ; ಹೆಸರು ಬಯಲಾದ ದಿನ ದಯವಿಟ್ಟು ದೇಶ ಬಿಟ್ಟು ಓಡೋಗಿ ಎಂದ ಸುದೀಪ್

    Recommended Video

    ವಿಷ್ಣುವರ್ಧನ್ ಸ್ಮಾರಕ ಧ್ವಂಸ ಮಾಡಿದ ಕಿಡಿಗೇಡಿಗಳು | Vishnuvardhan Statue | Filmibeat Kannada
    ಪುತ್ಥಳಿ ಧ್ವಂಸವನ್ನ ಅವಮಾನ ಅಲ್ಲ

    ಪುತ್ಥಳಿ ಧ್ವಂಸವನ್ನ ಅವಮಾನ ಅಲ್ಲ

    ''ಯಾರೋ ಕೆಲವರು ಅವರ ಬಗ್ಗೆ ಮಾತನಾಡುತ್ತಾರೆ. ಮಾತನಾಡುವವರು ಇದ್ದಾಗಲೇ ನಮ್ಮವರು ಇದ್ದಾರೆ ಅನಿಸೋದು. ಪುತ್ಥಳಿ ಧ್ವಂಸವನ್ನ ಅವಮಾನ ಅಂದುಕೊಳ್ಳಬಾರದು. ಅದನ್ನ ಆರ್ಶಿವಾದ ಅಂದುಕೊಳ್ಳೋಣ. ಅಂತವರಿಗೆ ನಾನು ಏನು ಹೇಳೋದು ಇಲ್ಲ. ಅಂತವರ ಬಗ್ಗೆ ಏನು ಹೇಳೋದೆ ಇರೋದೆ ಉತ್ತಮ'' ಎಂದು ಭಾರತಿ ತಿಳಿಸಿದ್ದಾರೆ.

    ವಿಷ್ಣುಪುತ್ರಿ ಕಣ್ಣೀರಿಟ್ಟರು, ಇದಕ್ಕೆ ಹೊಣೆ ಯಾರು?ವಿಷ್ಣುಪುತ್ರಿ ಕಣ್ಣೀರಿಟ್ಟರು, ಇದಕ್ಕೆ ಹೊಣೆ ಯಾರು?

    English summary
    Bharathi Vishnuvardhan and her daughter keerthi react about demolition of late actor vishnuvardhan statue in magadi road.
    Wednesday, December 30, 2020, 15:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X