For Quick Alerts
  ALLOW NOTIFICATIONS  
  For Daily Alerts

  'ನನ್ನ ಹಾಡಿಗೆ ಜೀವ ಕೊಡೋದು ಆ ಇಬ್ಬರೇ' ಎಂದಿದ್ದರು ಎಸ್‌ಪಿ ಬಾಲಸುಬ್ರಹ್ಮಣ್ಯಂ

  |

  ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಬಳಿ ಒಂದು ಹಾಡಾದರೂ ಹಾಡಿಸಬೇಕು ಎಂದು ನಿರ್ಮಾಪಕ ಸಾಲುಗಟ್ಟಿ ನಿಲ್ಲುತ್ತಿದ್ದರು. ಎಸ್‌ಪಿಬಿ ಹಾಡಿದ್ರೆ ಕಾಲ್‌ಶೀಟ್ ಕೊಡೋದು ಎನ್ನುತ್ತಿದ್ದ ನಟರು ಸಹ ಇದ್ದರು. ಭಾರತೀಯ ಚಿತ್ರರಂಗದ ಬಹುತೇಕ ಎಲ್ಲ ನಟರಿಗೂ ಎಸ್‌ಪಿಬಿ ಹಾಡಿದ್ದಾರೆ.

  ಆದ್ರೆ, ಕನ್ನಡದ ಪಾಲಿಗೆ ಎಸ್‌ಪಿಬಿ ಬಹಳ ವಿಶೇಷ. ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್, ರವಿಚಂದ್ರನ್, ಪ್ರಭಾಕರ್, ಶಶಿಕುಮಾರ್ ಹೀಗೆ ಎಲ್ಲರಿಗೂ ತಮ್ಮದೇ ಧ್ವನಿ ಎಂಬಂತೆ ಬದಲಾಯಿಸಿಕೊಂಡು ಹಾಡುತ್ತಿದ್ದರು. ನೂರಾರು ಕಲಾವಿದರ ಚಿತ್ರಗಳಿಗೆ ಹಾಡಿರುವ ಎಸ್‌ಪಿಬಿ ಆ ಇಬ್ಬರು ನಟರ ಬಗ್ಗೆ ವಿಶೇಷವಾದ ಗೌರವ ಹೊಂದಿದ್ದರು. ಯಾರದು? ಮುಂದೆ ಓದಿ...

  ನನ್ನ ಸಮಾಧಿಯ ಮೇಲೆ ಹೀಗೆ ಬರೆಯಿರಿ ಎಂದಿದ್ದರು ಎಸ್‌ಪಿ ಬಾಲಸುಬ್ರಹ್ಮಣ್ಯಂನನ್ನ ಸಮಾಧಿಯ ಮೇಲೆ ಹೀಗೆ ಬರೆಯಿರಿ ಎಂದಿದ್ದರು ಎಸ್‌ಪಿ ಬಾಲಸುಬ್ರಹ್ಮಣ್ಯಂ

  ನನ್ನ ಹಾಡಿಗೆ ಜೀವ ಕೊಡೋದು ಆ ಇಬ್ಬರೇ

  ನನ್ನ ಹಾಡಿಗೆ ಜೀವ ಕೊಡೋದು ಆ ಇಬ್ಬರೇ

  ಎಸ್‌ಪಿ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಕುರಿತು ಟಿವಿ ವಾಹಿನಿ ಜೊತೆ ಮಾತನಾಡಿದ ಭಾರತಿ ವಿಷ್ಣುವರ್ಧನ್, ಎಸ್‌ಪಿಬಿ ಬಹಳ ಇಷ್ಟ ಪಡುತ್ತಿದ್ದ ಹಾಗೂ ಗೌರವಿಸುತ್ತಿದ್ದ ಇಬ್ಬರು ನಟರ ಬಗ್ಗೆ ತಿಳಿಸಿದರು. ''ನನ್ನ ಹಾಡಿಗೆ ಜೀವ ಕೊಡೋದು ವಿಷ್ಣುವರ್ಧನ್ ಮತ್ತು ಕಮಲ್ ಹಾಸನ್ ಇಬ್ಬರೇ'' ಎಂದು ಅನೇಕ ಸಲ ಹೇಳುತ್ತಿದ್ದರಂತೆ.

  ವಿಷ್ಣು ಶಾರೀರ ಆಗಿದ್ದ ಎಸ್‌ಪಿಬಿ

  ವಿಷ್ಣು ಶಾರೀರ ಆಗಿದ್ದ ಎಸ್‌ಪಿಬಿ

  ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ಎಸ್‌ಪಿ ಬಾಲಸುಬ್ರಹ್ಮಣ್ಯಂ ಶಾರೀರ ಆಗಿದ್ದರು. ವಿಷ್ಣು ನಟಿಸುತ್ತಿದ್ದ ಬಹುತೇಕ ಎಲ್ಲ ಚಿತ್ರಗಳಿಗೂ ಎಸ್‌ಪಿ ಹಾಡಬೇಕಿತ್ತು. ಎಸ್‌ಪಿಬಿ ಹಾಡಿದರೇ ವಿಷ್ಣುವರ್ಧನ್ ಅವರೇ ಹಾಡಿದಂತೆ ಭಾಸವಾಗುತ್ತಿತ್ತು. ಅಷ್ಟರ ಮಟ್ಟಿಗೆ ಎಸ್‌ಪಿಬಿ ವಿಷ್ಣುವರ್ಧನ್‌ಗೆ ಆಪ್ತರಾಗಿದ್ದರು. (ಚಿತ್ರಕೃಪೆ-ಡಾ ವಿಷ್ಣು ಸೇನಾ ಸಮತಿ)

  ಕನ್ನಡದ 3 ಹಾಡಿಗೆ ರಾಜ್ಯ ಪ್ರಶಸ್ತಿ, 1 ರಾಷ್ಟ್ರಪ್ರಶಸ್ತಿ ಪಡೆದಿರುವ ಎಸ್‌ಪಿಬಿ, ಯಾವುದು ಆ ಹಾಡುಗಳು?ಕನ್ನಡದ 3 ಹಾಡಿಗೆ ರಾಜ್ಯ ಪ್ರಶಸ್ತಿ, 1 ರಾಷ್ಟ್ರಪ್ರಶಸ್ತಿ ಪಡೆದಿರುವ ಎಸ್‌ಪಿಬಿ, ಯಾವುದು ಆ ಹಾಡುಗಳು?

  ವಿಷ್ಣು ಮನೆಗೆ ಬರುತ್ತಿದ್ದ ಗಾಯಕ

  ವಿಷ್ಣು ಮನೆಗೆ ಬರುತ್ತಿದ್ದ ಗಾಯಕ

  ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಆಗಾಗ ವಿಷ್ಣುವರ್ಧನ್ ಅವರ ಮನೆಗೆ ಬರುತ್ತಿದ್ದರಂತೆ. ಎಸ್‌ಪಿಬಿ ಬಂದಾಗ ವಿಷ್ಣು ಮತ್ತು ಅವರಿಬ್ಬರು ಒಟ್ಟಿಗೆ ಕುಳಿತುಕೊಂಡರೆ ಮುಂಜಾನೆವರೆಗೂ ಮಾತಾಡುವುದು, ಹಾಡುವುದು ಮಾಡ್ತಿದ್ದರಂತೆ. ಇಬ್ಬರು ಸಹೋದರರಂತೆ, ಹೋಗೋ-ಬಾರೋ ಎನ್ನುವಂತೆ ಇರುತ್ತಿದ್ದರು ಎಂದು ಭಾರತಿ ತಿಳಿಸಿದ್ದಾರೆ.

  ನನ್ನ ಮಾತು ಕೇಳಲೇ ಇಲ್ಲ ನೀನು ಎಂದ್ರು ಇಳಯರಾಜ | Filmibeat Kannada
  ಆಪ್ತರಕ್ಷಕ ಹಾಡು ಸ್ಮರಿಸಿಕೊಳ್ಳಬಹುದು

  ಆಪ್ತರಕ್ಷಕ ಹಾಡು ಸ್ಮರಿಸಿಕೊಳ್ಳಬಹುದು

  ವಿಷ್ಣುವರ್ಧನ್ ನಟಿಸಿದ್ದ ಕೊನೆಯ ಚಿತ್ರ ಆಪ್ತರಕ್ಷಕ. ಈ ಚಿತ್ರದಲ್ಲಿ ಎಸ್‌ಪಿಬಿ ನಾಲ್ಕು ಹಾಡು ಹಾಡಿದ್ದರು. ''ಚಾಮುಂಡಿ ತಾಯಿ ಆಣೆ...ನಾನೆಂದು ನಿಮ್ಮವನೆ,,,,,,ಇನ್ನೆಲ್ಲ ಜನ್ಮದಲ್ಲೂ ಹುಟ್ಟೋದು ಇಲ್ಲೇನೇ.....'' ಈ ಹಾಡು ವಿಷ್ಣು ಅಭಿಮಾನಿಗಳಿಗೆ ಮರೆಯಲಾಗದ ಹಾಡಾಯಿತು.

  English summary
  Bharathi Vishnuvardhan said that SP Balasubrahmanyam always respected kamal hassan and dr vishnuvardhan for his performence.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X