ವಿಷ್ಣುವರ್ಧನ್ ಸ್ಮಾರಕ ಶೀಘ್ರವೇ ಪೂರ್ಣಗೊಳ್ಳಲಿದೆ: ಭಾರತಿ ವಿಷ್ಣುವರ್ಧನ್

By ಮೈಸೂರು ಪ್ರತಿನಿಧಿ

ಮುಂದಿನ ವರ್ಷದ ಸೆಪ್ಟೆಂಬರ್ ವೇಳೆಗೆ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ನಟಿ ಭಾರತಿ ವಿಷ್ಣುವರ್ಧನ್ ಹೇಳಿದರು.

ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದಲೂ ಯಾವ ಕೆಲಸಗಳು ಸಾಗುತ್ತಿಲ್ಲ. ಆದರೆ ಮುಂದಿನ ವರ್ಷ ವಿಷ್ಣು ಸ್ಮಾರಕ ನಿರ್ಮಾಣವಾಗಲಿದ್ದು, ಈಗಾಗಲೇ ಸ್ಮಾರಕದ ಶೇ.60 ಕಾಮಗಾರಿ ಮುಗಿದಿದೆ. ನಿಮ್ಮ ಆಸೆಯಂತೆ ಸ್ಮಾರಕ ನಿರ್ಮಾಣ ಆಗುತ್ತಿದೆ. ಜನರ ಹಾಗೂ ಅಭಿಮಾನಿಗಳ ಆರೋಗ್ಯ ಮುಖ್ಯವಾಗಿದ್ದು, ಕೊರೊನ ನಿಮಿತ್ತ ನಿಮ್ಮ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಹೇಳಿದರು.

ನಟ ಅನಿರುದ್ಧ್ ಮಾತನಾಡಿ, ವಿಷ್ಣು ದಾದಾ ಅವರ ಸ್ಮಾರಕ ಮುಂದಿನ ಸೆಪ್ಟೆಂಬರ್ ಒಳಗೆ ಪೂರ್ಣಗೊಳ್ಳಲಿದೆ. ಈಗಾಗಲೇ ಕಾಮಗಾರಿ ಕೆಲಸ ಪ್ರಾರಂಭವಾಗಿದ್ದು, ಸರ್ಕಾರದಿಂದ ಸಂಪೂರ್ಣ ಬೆಂಬಲ ದೊರೆಯುತ್ತಿದೆ. ಸ್ಮಾರಕದಲ್ಲಿ ವಿಷ್ಣು ದಾದಾ ಅವರ 700ಕ್ಕೂ ಅಧಿಕ ಪೊಟೋ ಬಳಸಿ ಗ್ಯಾಲರಿ ನಿರ್ಮಾಣ. ಇನ್ನೂ ಅನೇಕ ಆಶ್ಚರ್ಯಕರ ವಿಚಾರಗಳು ಇರಲಿವೆ. ಅದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಜೊತೆಗೆ ರಂಗಭೂಮಿ ಶಿಬಿರಗಳು ಸಹ ಇಲ್ಲಿ ನಡೆಯಲಿದ್ದು, ಇಂಡಿಯನ್ ಫಿಲಂ ಟೆಲಿವಿಷನ್ ಇನ್ಸ್ಟಿಟ್ಯೂಟ್‌ನ ಶಾಖೆಯನ್ನು ಇಲ್ಲಿ ಪ್ರಾರಂಭಿಸುವ ಪ್ರಯತ್ನ ಇದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಆ ಕಾರ್ಯ ನಡೆಯಲಿದ್ದು, ಇದರ ಪ್ರಯತ್ನಗಳು ನಡೆಯುತ್ತಿದೆ ಎಂದರು.

Bharathi Vishnuvardhan Said Vishnuvardhan Monument Will Finish by Next Year
ಇದೇ ವೇಳೆ ಕನ್ನಡ ಚಿತ್ರರಂಗದಲ್ಲಿ ನಾಯಕತ್ವದ ಕೊರತೆ ಇದೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ನಟ ಅನಿರುದ್ಧ್, ಪ್ರಸ್ತುತ ಬಹಿರಂಗ ಹೋರಾಟ ಮಾಡುವ ಅವಕಾಶ ಇಲ್ಲ. ಒಂದೆಡೆ ಕೋವಿಡ್ ಮತ್ತೊಂದೆಡೆ ಕರ್ಪ್ಯೂ ಇದೆ. ಇಂತಹ ವಾತಾವರಣದಲ್ಲಿ ಒಂದೇ ವೇದಿಕೆಯಲ್ಲಿ ಹೋರಾಟದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ. ಅದಕ್ಕಾಗಿ ಅವರವರ ಅನಿಸಿಕೆಗಳನ್ನು ನಟರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗ ಯಾವಾಗಲೂ ಒಂದೇ. ಕನ್ನಡ ಚಿತ್ರರಂಗದ ನಾಯಕತ್ವಕ್ಕೆ ಶಿವಣ್ಣ ಇದ್ದಾರೆ. ಚಿತ್ರರಂಗದ ಪ್ರಮುಖರು ಅವರ ಜೊತೆ ಕೂತು ಮಾತನಾಡಿದರೆ ಸೂಕ್ತ ಎಂದು ಹೇಳಿದರು.

ಅಲ್ಲದೇ ನಾಳೆ ಕರೆ ನೀಡಲಾಗಿರುವ ಕರ್ನಾಟಕ ಬಂದ್ ವಿಚಾರವಾಗಿಯೂ ಮಾತನಾಡಿದ ಅವರು, ಬಂದ್ ಎಲ್ಲದಕ್ಕೂ ಪರಿಹಾರ ಅಲ್ಲ, ಬಂದ್ ನಿಂದ ನಮ್ಮ ಹೋರಾಟ ಎಲ್ಲರಿಗೂ ತಿಳಿಯುತ್ತೆ. ಆದರೆ ಅದರಿಂದ ತುಂಬಾ ಜನರಿಗೆ ನಷ್ಟವಾಗುತ್ತೆ. ಯಾವುದೇ ಹೋರಾಟಕ್ಕೂ ಬಂದ್ ಉತ್ತರವಲ್ಲ. ಬೇರೆ ರೀತಿಯಲ್ಲಿ ಹೋರಾಟ ಮಾಡಬೇಕು ಈ ರೀತಿ ಬಂದ್ ಬೇಡ ಎಂದು ನಟ ಅನಿರುದ್ಧ್ ಹೇಳಿದರು.

ಇನ್ನೂ ಇದಕ್ಕೂ ಮುನ್ನ ಇಂದು ನಟ ದಿ.ವಿಷ್ಣುವರ್ಧನ್ ಅವರ 12ನೇ ವರ್ಷದ ಪುಣ್ಯ‌ಸ್ಮರಣೆ ಹಿನ್ನೆಲೆಯಲ್ಲಿ ಮೈಸೂರಿನ ಉದ್ಬುರಿನಲ್ಲಿ ವಿಷ್ಣು ಸಮಾಧಿ ಬಳಿ ವಿಷ್ಣುವರ್ಧನ್ ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿದರು. ನಟಿ ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ್ ಅಪಾರ ಸಂಖ್ಯೆಯ ಅಭಿಮಾನಿಗಳ ಜೊತೆಗೂಡಿ ಪೂಜೆ ಸಲ್ಲಿಸಿದರು. ಇದೇ ವೇಳೆ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ಸಾಮಗ್ರಿಗಳನ್ನ ವಿತರಿಸಲಾಯಿತು.

More from Filmibeat

English summary
Bharathi Vishnuvardhan said in Mysore, Vishnuvardhan's monument will finish next year. She said almost work finished, just few left.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X