''ಕಲಿಯುಗ ಇರುವವರೆಗೆ ನಾಗರಹಾವು ಸಿನಿಮಾ ಇರುತ್ತದೆ'' - ಭಾರತಿ ವಿಷ್ಣುವರ್ಧನ್
Recommended Video

''ಕಲಿಯುವ ಇರುವವರೆಗೆ 'ನಾಗರಹಾವು' ಸಿನಿಮಾದ ಹೆಸರು ಇರುತ್ತದೆ. ನಮ್ಮ ಯಜಮಾನ್ರು ಎಲ್ಲಿಯೂ ಹೋಗಿಲ್ಲ ಅವರು ಇಲ್ಲೇ ಇದ್ದಾರೆ.'' ಹೀಗೆ ಹೇಳುತ್ತಾ ತಮ್ಮ ಮಾತು ಆರಂಭಿಸಿದರು ಭಾರತಿ ವಿಷ್ಣುವರ್ಧನ್.
ಡಾ. ವಿಷ್ಣುವರ್ಧನ್ ನಟನೆಯ 'ನಾಗರಹಾವು' ಸಿನಿಮಾ ಇದೇ ತಿಂಗಳ 20ಕ್ಕೆ ಮರು ಬಿಡುಗಡೆಯಾಗುತ್ತಿದೆ. ನಿನ್ನೆ ಸಿನಿಮಾದ ಸುದ್ದಿಗೋಷ್ಟಿ ನಡೆದಿದ್ದು, ಈ ಸಿನಿಮಾದ ಬಗ್ಗೆ ಹಿರಿಯ ನಟಿ ಹಾಗೂ ನಟ ವಿಷ್ಣುವರ್ಧನ್ ಅವರ ಪತ್ನಿ ಭಾರತಿ ವಿಷ್ಣುವರ್ಧನ್ ಮಾತನಾಡಿದ್ದಾರೆ.

''ಡಿಜಿಟಲ್ ತಂತ್ರಜ್ಙಾನದಲ್ಲಿ 'ನಾಗರಹಾವು' ಸಿನಿಮಾ ತುಂಬ ಚೆನ್ನಾಗಿ ಮೂಡಿ ಬಂದಿದೆ. ಇದು ಅಭಿಮಾನಿಗಳಿಗೆ ಹಬ್ಬ ಅಂತ ನಾನು ಅಂದುಕೊಂಡಿದ್ದೇನೆ. ಈ ಸಿನಿಮಾ 25 ವಾರ ಓಡುತ್ತದೆ ಎಂಬ ನಂಬಿಕೆ ನನಗೆ ಇದೆ. ಈ ಚಿತ್ರದಲ್ಲಿ ಇರುವ ಯಾರನ್ನು ನಾನು ಮರೆಯಲು ಆಗಲ್ಲ.'' ಎಂದು ಹೇಳಿ ಸಿನಿಮಾಗೆ ಶುಭ ಕೋರಿದರು.

ಉಳಿದಂತೆ, ಕಾರ್ಯಕ್ರಮದಲ್ಲಿ ಹಿರಿಯ ನಟಿ ಜಯಂತಿ, ಲೀಲಾವತಿ, ನಟ ಅಂಬರೀಶ್, ರವಿಚಂದ್ರನ್, ಹಿರಿಯ ನಟ ಶಿವರಾಂ, ದೊಡ್ಡಣ್ಣ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.


Click it and Unblock the Notifications











